Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 26.03.2023 (Kids Special)
Share:

By Village Missionary Movement

Sunday, 26-Mar-2023

ಧೈನಂದಿನ ಧ್ಯಾನ(Kannada) – 26.03.2023 (Kids Special)

 

DON'T ADDICT

 

 "...ಆದದರಿಂದ ಮಗನು (ಯೇಸು) ನಿಮ್ಮನ್ನು ಬಿಡುಗಡೆಮಾಡಿದರೆ ನಿಜವಾಗಿ ನಿಮಗೆ ಬಿಡುಗಡೆಯಾಗುವದು” - ಯೋಹಾನ 8:36

 

 ಒಬ್ಬ ಸಾಧು ಕಾಡಿನ ಗುಡಿಸಲಿನಲ್ಲಿ ವಾಸಿಸುತ್ತಿದ್ದನು. ಸಾಧು ಎಂದರೆ ಯಾರು ಅಂತ ತಾನೇ ಕೇಳ್ತಿದೀರಾ. ಲೌಕಿಕ ಜೀವನವನ್ನು ದ್ವೇಷಿಸಿ, ಮದುವೆಯಾಗದೆ ದೇವರ ಸೇವೆ ಮಾಡುವವರು. ಹಾಗೆಯೇ, ಈ ಸಾಧು ತನ್ನ ಸ್ಥಳವನ್ನು ಮತ್ತು ತನ್ನನ್ನು ಸ್ವಚ್ಛವಾಗಿಟ್ಟುಕೊಂಡು, ಕಾಡಿನ ಹಣ್ಣುಗಳನ್ನು ಮತ್ತು ಗೆಣಸುಗಳನ್ನು ತನ್ನ ಆಹಾರವಾಗಿಟ್ಟುಕೊಂಡು ದೇವರನ್ನು ಮಾತ್ರ ಧ್ಯಾನಿಸುತ್ತಾ ಬಂದರು. ತನ್ನನ್ನು ನೋಡಲು ಬಂದವರಿಗೆ ಒಳ್ಳೆಯ ಸಲಹೆ ನೀಡಿ ಪ್ರಾರ್ಥಿಸುತ್ತಾ ಬಂದರು. ಇದನ್ನು ತಿಳಿದ ನಂತರ ಅನೇಕರು ಬರಲು ಪ್ರಾರಂಭಿಸಿದರು. ಬಂದವರೆಲ್ಲ ಹಣ್ಣು, ಗೋಡಂಬಿ, ಬಾದಾಮಿ ಮುಂತಾದ ಒಳ್ಳೆ ತಿನಿಸುಗಳನ್ನು ತಂದು ಕೊಟ್ಟರು. ತನಗೆ ಬೇಕಾದುದನ್ನು ಮಾತ್ರ ತೆಗೆದುಕೊಂಡು ಬೇರೆಯವರಿಗೆ ಕೊಡದೆ ಮನೆಯಲ್ಲೆಲ್ಲ ಶೇಖರಿಸಿ ಇಟ್ಟರು. ಸ್ವಚ್ಛವಾಗಿದ್ದ ಮನೆಯಲ್ಲಿ ಇಲಿಗಳು ಬರಲು ಪ್ರಾರಂಭಿಸಿದವು. ಸಾಧುವನ್ನು ನೋಡಲು ಬಂದ ಗೆಳೆಯರಿಗೆ ಇಲಿಗಳ ಕಾಟ ತಡೆಯಲಾಗುತ್ತಿಲ್ಲ ಎಂದರು. ತಕ್ಷಣ ಬೆಕ್ಕೊಂದನ್ನು ತಂದು ಬಿಟ್ಟರು. ಇಲಿಗಳ ಕಾಟ ದೂರವಾದಾಗ ಬೆಕ್ಕಿಗೆ ಆಹಾರವಿಲ್ಲದ್ದನ್ನು ಕಂಡ ಸ್ನೇಹಿತನು ಹಸುವೊಂದನ್ನು ಖರೀದಿಸಿ ಕೊಂಡು ಬಂದರು. ಹಸು ಏನು ಕೊಡುತ್ತದೆ? ಹೌದು ಹಾಲು ಕೊಡುತ್ತದೆ. ಇದು ಬೆಕ್ಕಿಗೂ ಸನ್ಯಾಸಿಗೂ ಧಾರಾಳವಾಗಿತ್ತು. ಆದರೆ ಹಸುವಿನ ಸಗಣಿ ದುರ್ವಾಸನೆ ಬೀರುತ್ತಿತ್ತು. ಅದರಿಂದ ಸೊಳ್ಳೆ, ಕ್ರಿಮಿಕೀಟಗಳ ಕಾಟ ಹೆಚ್ಚಿದ್ದರಿಂದ ಸಾಧುವಿಗೆ ನೆಮ್ಮದಿಯಿಲ್ಲದೆ ನಿದ್ದೆಯೂ ಬರಲಿಲ್ಲ. ಹಸುಗಳು ಮತ್ತು ಬೆಕ್ಕುಗಳನ್ನು ನೋಡಿಕೊಳ್ಳುವುದೇ ದೊಡ್ಡ ಪಾಡಾಗಿಬಿಟ್ಟಿತು.

 

ದೇವರ ಧ್ಯಾನವಿಲ್ಲದೇ ಹೋಯಿತು. ಇವರನ್ನು ನೋಡಲು ಬರುವ ಜನಸಂದಣಿಯೂ ಕಡಿಮೆಯಾಯಿತು. ಸನ್ಯಾಸಿ ಯೋಚಿಸತೊಡಗಿದ. ನಾನು ಮಿತವಾಗಿ ತಿನ್ನುವಾಗ ನಾನು ಚೆನ್ನಾಗಿದ್ದೆ! ನಾನು ದುರಾಸೆಗೆ ದಾರಿ ಮಾಡಿಕೊಟ್ಟೆ ಮತ್ತು ಆಹಾರದ ವ್ಯಸನಿಯಾಗಿಬಿಟ್ಟೆ! ಹೀಗಾಗಿ ಈ ಸ್ಥಳ, ದೇಹ ಮತ್ತು ಆತ್ಮವು ಅಶುದ್ಧವಾಗಿಬಿಟ್ಟಿತಲ್ಲಾ ಎಂಬುದನ್ನು ಗ್ರಹಿಸಿದರು. ಹಸು ಮತ್ತು ಬೆಕ್ಕು ಎರಡನ್ನೂ ಗೆಳೆಯನಿಗೆ ಒಪ್ಪಿಸಿ, ಮನೆಯನ್ನು ಶುಚಿಗೊಳಿಸಿ ಅನಗತ್ಯ ವಸ್ತುಗಳನ್ನು ತೊಲಗಿಸಿ ನಾನು ಇನ್ನು ಮುಂದೆ ನಾನು ದೇವರಿಗೆ ಹೊರತು ಬೇರೆ ಯಾವುದಕ್ಕೂ ದಾಸನಲ್ಲ ಎಂದು ಧ್ಯಾನಿಸತೊಡಗಿದ. ಅವರ ಸಲಹೆಗಾಗಿ ಅನೇಕ ಜನರು ಕಾಯುತ್ತಿದ್ದರು.

 

ಏನು ಮುದ್ದು ಪುಟಾಣಿಗಳೇ! ಕಥೆ ಕೇಳುದ್ರಾ? ನಿಮಗೆ ಸೆಲ್ ಫೋನ್, ಟಿವಿ, ಲ್ಯಾಪ್ ಟಾಪ್ ಮತ್ತು ಕಂಪ್ಯೂಟರ್ ಇವುಗಳನ್ನು ಧಾರಾಳವಾಗಿ ಬಳಸಲು ದೊರೆತರೂ, ಒಂದು ಮಿತಿ ಇರಬೇಕು. ಅದನ್ನೇ ನೋಡುತ್ತಲೇ ಇದ್ದರೆ ನಿಮ್ಮ ಕಣ್ಣುಗಳು ಬಾಧಿಸುತ್ತವೆ, ನಿಮ್ಮ ಮನಸ್ಥಿತಿಗೆ ಧಕ್ಕೆಯಾಗುತ್ತದೆ ಮತ್ತು ನಿಮ್ಮ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಸನ್ಯಾಸಿಯು ತನ್ನ ವ್ಯಸನವನ್ನು ಅರಿತು ಅದನ್ನು ಸರಿಪಡಿಸಿಕೊಂಡಂತೆಯೇ, ನೀವು ಯಾವುದಕ್ಕೆ ವ್ಯಸನಿಯಾಗಿದ್ದೀರೋ ಅದನ್ನು ತ್ಯಜಿಸಲು ಪ್ರಯತ್ನಿಸಬೇಕು. ದೇವರು ನಿಮಗೆ ಸಹಾಯ ಮಾಡುತ್ತಾರೆ. ಅವರ ಕೈಗಳಲ್ಲಿ ನಿಮ್ಮನ್ನು ಕೊಟ್ಟರೆ, ಖಂಡಿತವಾಗಿಯೂ ವಿಮೋಚನೆ ಉಂಟು. ರೆಡಿ ಅಲ್ವಾ. 

- Mrs. ಅನ್ಬು ಜ್ಯೋತಿ ಸ್ಟಾಲಿನ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet holiganbet sahabet onwin bets10 bets10 giriş bets10 güncel giriş betcio atlasbet casibom meritking perabet casibom holiganbet galabet casibom padişahbet padişahbet giriş grandpashabet jojobet tambet grandpashabet jojobet nesinecasino betbey betgit grandpashabet betpuan cashwin matbet meritking perabet perabet giriş instagram ban service betsilin betsilin giris pashagaming pashagaming giris gorabet gorabet giris kralbet holiganbet grandpashabet grandpashabet giriş holiganbet giriş çarkbet çarkbet giriş