Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 05.03.2021
Share:

By Village Missionary Movement

Friday, 05-Mar-2021

ಧೈನಂದಿನ ಧ್ಯಾನ(Kannada) – 05.03.2021

ಇರುವುದನ್ನು ಇರುವ ಹಾಗೆ ಹೇಳಿರಿ

"ನೀತಿವಂತನಿಗಿರುವ ಸ್ವಲ್ಪ ವಾದದ್ದು... ಶ್ರೇಷ್ಠ ವಾಗಿದೆ." - ಕೀರ್ತನೆಗಳು 37:16

ನನ್ನ ಮಗಳ ವಿವಾಹಕ್ಕಾಗಿ ಮದುಮಗನು ನೋಡುವುದಕ್ಕಾಗಿ ಬಯೋಡೇಟಾವನ್ನು ರೆಡಿ ಮಾಡಿದೆವು. ನಮಗೆ ತಿಳಿದ ವ್ಯಕ್ತಿಯ ಬಳಿ ಅದನ್ನು ಕೊಟ್ಟಾಗ ಅವರು ಎಷ್ಟು ಒಡವೆ ಹಾಕುತ್ತೀರ ಎಷ್ಟು ಹಣ ಕೊಡುತ್ತೀರ ಎಂದು ಕೇಳಿದರು. ನಮಗೆ ಉತ್ತರ ಹೇಳಲಾಗಲಿಲ್ಲ. ಏಕೆಂದರೆ ಸೇವೆ ಮಾಡುತ್ತಿರುವ ನನ್ನ ಬಳಿ ಹೇಳಿಕೊಳ್ಳುವ ಮಟ್ಟಿಗೆ  ಹಣವೇನೂ ಇಲ್ಲ, ಏನು ಮಾಡುವುದೆಂದು ದಿಗ್ಬ್ರಮೆಗೊಂಡೆವು. ಅಂದು ನಮ್ಮ ಆಲಯಕ್ಕೆ ಹೋಗಿ ಪ್ರಾರ್ಥಿಸಲು ಪ್ರಾರಂಭಿಸಿದೆನು. ನನ್ನ ಬಳಿ ಇರುವ ವಸ್ತುಗಳನ್ನು ದೇವರ ಬಳಿ ಹೇಳಿದೆನು. ಇಷ್ಟು ಕಡಿಮೆ ವಸ್ತುಗಳನ್ನು ಇಟ್ಟುಕೊಂಡು ನಾನು ಹೇಗೆ ವಿವಾಹ ನಡೆಸುತ್ತೇನೆ ಎಂದು ದುಃಖಿಸುತ್ತಾ ಕಣ್ಣೀರು ಬಿಟ್ಟೆನು. ಅಂದು ನಾನು ಕ್ರಮವಾಗಿ ಓದುತ್ತಿದ್ದ ಸತ್ಯವೇದದ ಭಾಗವನ್ನು ಮುಂದುವರಿಸಿ ಓದಿದೆನು.  "ನೀತಿವಂತನಿಗಿರುವ ಸ್ವಲ್ಪ ವಾದದ್ದು ಅನೇಕ ದುಷ್ಟರ ಐಶ್ವರ್ಯಕ್ಕಿಂತಲೂ ಶ್ರೇಷ್ಠ ವಾಗಿದೆ." ಎಂಬ ವಾಕ್ಯವನ್ನು ( ಕೀರ್ತನೆಗಳು 37:16) ದೇವರು ತೋರಿಸಿ ನನ್ನನ್ನು ಸಂತೈಸಿದರು. ದೇವರನ್ನು ನಂಬಿ ಕಾಯುತ್ತಿದ್ದೆನು. ಆಗ ದೇವರಿಗೆ ಭಯಪಟ್ಟು, ಕೆಲಸದೊಂದಿಗೆ ದೇವರ ಸೇವೆಯನ್ನೂ ಮಾಡುತ್ತಿರುವ ಅಳಿಯನನ್ನು ಕರ್ತನು ಕೊಟ್ಟರು.

ಸತ್ಯವೇದದಲ್ಲಿ 2 ಅರಸುಗಳು 4 ನೇ ಅಧ್ಯಾಯದಲ್ಲಿ, ಸಾಲ ಮಾಡಿಕೊಂಡಿದ್ದ ಪ್ರವಾದಿಯ ಕುಟುಂಬವನ್ನು ನೋಡುತ್ತೇವೆ. ಅವರ ಹೆಂಡತಿ ಎಲೀಷನ ಬಳಿಗೆ ಹೋದಾಗ ಎಲೀಷನು ನಿನ್ನ ಮನೆಯಲ್ಲಿ ಏನಿದೆ ಎಂದು ಆಕೆಯನ್ನು ಕೇಳಿದಾಗ  "ಒಂದು ಮೊಗೆ ಎಣ್ಣೆ ಅಲ್ಲದೆ ಮನೆಯಲ್ಲಿ ಮತ್ತೊಂದಿಲ್ಲ" ಅಂದಳು. ಪ್ರವಾದಿಯ ಹೆಂಡತಿ ತನ್ನ ಪರಿಸ್ಥಿತಿಯನ್ನು ಪ್ರವಾದಿಯ ಮುಂದೆ ಇರುವುದನ್ನು ಇರುವ ಹಾಗೆ ಹೇಳಿದಳು. ಅಲ್ಲಿ ಅವರ ಕೊರತೆಯು ಪರಿಪೂರ್ಣವಾಗುತ್ತದೆ.

ಇದನ್ನು ಓದುತ್ತಿರುವ ನನ್ನ ಪ್ರೀತಿಯ ಸಹೋದರ-ಸಹೋದರಿಯೇ! ನಿಮ್ಮೊಂದಿಗೆ ದೇವರು ಮಾತನಾಡುತ್ತಿದ್ದಾರೆ. ಈ ಕಾರ್ಯಕ್ಕೆ ನಾನೇನು ಮಾಡಲಿ? ನನ್ನ ಮಗಳ ವಿವಾಹ, ಮಗನ ಕಾಲೇಜ್ ಫೀಸ್, ಕಟ್ಟುತ್ತಿರುವ ಮನೆಗೆ  ಬೇಕಾದ ಅವಶ್ಯಕತೆಗಳು... ಎಂದು ಹಲವು ಕಾರ್ಯಗಳ ಬಗ್ಗೆ ಚಿಂತಿಸುತ್ತಿದ್ದೀರಾ?ಅನೇಕರ ಬಳಿ ನಿಮ್ಮ ಅಗತ್ಯವನ್ನು ಹೇಳಿ ಸಹಾಯ ಸಿಗದೇ ಕೈಬಿಡಲ್ಪಟ್ಟ ಸ್ಥಿತಿಯಲ್ಲಿ ಕಣ್ಣೀರು ಸುರಿಸುತ್ತಿದ್ದೀರಾ? ನಿಮ್ಮನ್ನು ನೋಡಿಯೇ ಈ ಮಾತು ಹೊರಟು ಬರುತ್ತಿದೆ. ಪ್ರವಾದಿಯ ಹೆಂಡತಿ ಪ್ರವಾದಿಯ ಬಳಿ ತನ್ನ ಕಾರ್ಯವನ್ನು ತಿಳಿಸಿದಂತೆ, ನೀವು ನಿಮ್ಮ ಕಾರ್ಯಗಳನ್ನು ಆಕಾಶವನ್ನು, ಭೂಮಿಯನ್ನು ಉಂಟುಮಾಡಿದ ದೇವರ ಬಳಿ ಹೇಳಿರಿ. ನಿಮ್ಮ ಬಳಿ ಇರುವ ವಸ್ತುಗಳೋ, ಹಣವೋ, ಸ್ವಲ್ಪ ವಾಗಿದ್ದರು ದೇವರು ಅದನ್ನು ಹೆಚ್ಚಿಸಿ ನಿಮ್ಮ ಕಾರ್ಯಗಳನ್ನು ಪರಿಪೂರ್ಣ ಮಾಡಲು ಆಶೀರ್ವಾದವಾಗಿ ಮಾರ್ಪಡಿಸಲು ಅವರು ಸರ್ವಶಕ್ತನಾದ ದೇವರಾಗಿದ್ದಾರೆ.
-    Mrs.V. ಕ್ರಿಸ್ಟಿ

ಪ್ರಾರ್ಥನಾ ಅಂಶ:-
ಪ್ರಾರ್ಥನಾ ಗುಡಾರದ ಅತ್ಯಗತ್ಯ ಅವಶ್ಯಕತೆಯಾದ PA System ತೆಗೆದುಕೊಳ್ಳಲ್ಪಡುವಂತೆ ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking perabet casibom holiganbet galabet casibom grandpashabet perabet perabet giriş padişahbet padişahbet giriş grandpashabet kalitebet kalitebet giris betsmove betsmove giris gonebet gonebet giris betnano betnano giriş jojobet jojobet betplay jojobet esbet sonbahis tambet grandpashabet betgit mercurecasino matbet