Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 17.04.2023
Share:

By Village Missionary Movement

Monday, 17-Apr-2023

ಧೈನಂದಿನ ಧ್ಯಾನ(Kannada) – 17.04.2023

 

ಯಾವುದು ತೃಪ್ತಿಯನ್ನು ನೀಡುತ್ತದೆ?

 

"ನಾನು ಕೊಡುವ ನೀರನ್ನು ಕುಡಿದವನಿಗೆ ಎಂದಿಗೂ ನೀರಡಿಕೆಯಾಗುವದಿಲ್ಲ;..." - ಯೋಹಾನ 4:14

 

ಐಟಿ ಇಂಡಸ್ಟ್ರಿಯಲ್ಲಿ ಕೆಲಸ ಮಾಡಿ ಕೈತುಂಬಾ ಸಂಬಳ ಪಡೆಯುತ್ತಿದ್ದ ಜಯಕರ್, ಕೆಲವೊಮ್ಮೆ ಕಛೇರಿಯಲ್ಲಿ ತೀರಾ ಸಮಾಧಾನವಿಲ್ಲದ ಮನಸ್ಥಿತಿಯಲ್ಲಿ ಕಾಣುತ್ತಿದ್ದನು. ಅವನ ಕೆಲವು ಹತ್ತಿರದ ಸ್ನೇಹಿತರು ಅವನು ಸಂತೋಷವನ್ನು ಕಳೆದುಕೊಂಡು ಖಿನ್ನತೆಗೊಳಗಾಗಲು ಕಾರಣವೇನೆಂದು ಅರ್ಥಮಾಡಿಕೊಳ್ಳುತ್ತಿದ್ದರು. ಹಿಂದಿನ ದಿನ ರಾತ್ರಿಯಲ್ಲಿ ಅವನು ತಪ್ಪಾದ ಸುಖಗಳನ್ನು ಹುಡುಕಿಕೊಂಡು ಹೋಗಿದ್ದ ಎಂದು.

 

ಅರಸನಾದ ಸೊಲೊಮೋನನು "ಅನುಭವಿಸು ರಾಜ ಅನುಭವಿಸು" ಎಂದು ಹೇಳುವ ಪ್ರಕಾರ ಜೀವನದ ಸಂತೋಷವನ್ನೆಲ್ಲಾ ಆನಂದಿಸಲು ಉತ್ಸುಕನಾಗಿದ್ದನು. ಆದರೆ ಸೊಲೊಮೋನನು ನಮಗೆ ನೀಡುವ ಸಂದೇಶವೇನು ಗೊತ್ತಾ? ಯಾವುದರಲ್ಲಿಯೂ ನಿಜವಾದ ತೃಪ್ತಿ ಮತ್ತು ಪರಿಪೂರ್ಣತೆ ಇಲ್ಲ ಎಂಬುದೇ. ವ್ಯರ್ಥವೇ ವ್ಯರ್ಥ ಸಮಸ್ತವೂ ವ್ಯರ್ಥ ಎಂದು.

 

ಈ ಲೋಕದಲ್ಲಿ ಮನಸ್ಸಿಗೆ ಕ್ಷಣಿಕವಾದ ಸಂತೋಷ ಮತ್ತು ಕುತೂಹಲವನ್ನು ನೀಡಲು ಸಾಕಷ್ಟು ವಿಷಯಗಳಿವೆ. ಅದರ ಮೂಲಕ ಒಬ್ಬ ಮನುಷ್ಯನು ತನ್ನ ಜೀವನವೆಂಬ ಪ್ರಯಾಣದಲ್ಲಿ ವಿವಿಧ ರೀತಿಯಲ್ಲಿ ತನ್ನನ್ನು ತಾನು ಸಂತೋಷಪಡಿಸಿಕೊಳ್ಳಬಹುದು. ಅವುಗಳನ್ನು ಅನುಭವಿಸುತ್ತಾ ಅನುಭವಿಸುತ್ತಾ ಏನಾಗುತ್ತದೆ ಗೊತ್ತಾ? ಅತೃಪ್ತಿ, ಶೂನ್ಯತೆ ಮತ್ತು ಹೆಚ್ಚಾದ ಬಯಕೆ ಉಂಟಾಗುತ್ತದೆ. ನೀವು ಈ ಪ್ರಾಪಂಚಿಕ ಸುಖಗಳನ್ನು ಎಷ್ಟು ಹೆಚ್ಚು ಹುಡುಕುತ್ತೀರೋ, ಅಷ್ಟೊಂದು ಮಟ್ಟಿಗೆ ಅದು ಇನ್ನೂ ಬೇಕು, ಇನ್ನೂ ಬೇಕು ಎಂಬ ದಾಹವನ್ನು ಸೃಷ್ಟಿಸುತ್ತಿರುತ್ತದೆ. ಆದ್ದರಿಂದ ಪ್ರಾಪಂಚಿಕ ಸುಖಗಳನ್ನು ಹುಡುಕುವುದು ನಿಮಗೆ ಎಂದಿಗೂ ತೃಪ್ತಿಯ ಮನಸ್ಥಿತಿಯನ್ನು ನೀಡುವುದಿಲ್ಲ. ಅದು ಹಣವಾಗಲಿ, ಭೌತಿಕ ಆಸ್ತಿಯಾಗಲಿ, ಸ್ಥಾನಮಾನವಾಗಲಿ ಅಥವಾ ಭಾವನಾತ್ಮಕ ಸಂತೋಷವಾಗಲಿ ಇದೇ ನಿಜ.

 

ಆದುದರಿಂದಲೇ ಕರ್ತನಾದ ಯೇಸು ಕ್ರಿಸ್ತನು ಹೇಳಿದರು, "ಈ ನೀರನ್ನು ಕುಡಿಯುವವರೆಲ್ಲರಿಗೆ ತಿರಿಗಿ ನೀರಡಿಕೆಯಾಗುವದು" ಆದರೆ ದೇವರು ನಮಗೆ ನೀಡುವ ಸಂತೋಷ, ಶಾಂತಿ ಮತ್ತು ನೆಮ್ಮದಿ ಎಂದೆಂದಿಗೂ ನಮ್ಮ ಹೃದಯದಲ್ಲಿ ಹರಿಯುತ್ತಲೇ ಇರುತ್ತದೆ. ನಾವು ಬದುಕುವ ವಿಧಾನವು ನಮಗೆ ಸಂತೋಷ ಕೊಡುತ್ತಿದೆಯಾ ಅಥವಾ ದುಃಖವನ್ನು ಕೊಡುತ್ತಿದೆಯಾ ಎಂದು ನೋಡಬೇಕು. ಆ ಯೌವನಸ್ಥನಾದ ಜಯಕರ್ ಸಂತೋಷವನ್ನು ಅನುಭವಿಸಿದ ಕಾರ್ಯಗಳು ಅವನ ಮನದ ತೆರೆಗೆ ಬರುತ್ತಿದ್ದಂತೆ ಅವು ಅವನನ್ನು ದುಃಖಪಡಿಸುತ್ತಿತ್ತು. ಒಬ್ಬನ ಸಂತೋಷದ ಶತ್ರು ಹೆಚ್ಚಾಗಿ ಹೊರಗೆ ಅಲ್ಲ, ಅವನ ಒಳಗೇ ಇದೆ.

- S. ಬೆರ್ಲಿನ್ ಸೆಲ್ಬಾಯ್

 

ಪ್ರಾರ್ಥನಾ ಅಂಶ:

ಸ್ವಸ್ಥತೆ ನೀಡುವ ಆರಾಧನೆಗಳಲ್ಲಿ ಶಾರೀರಿಕ ಬಲಹೀನತೆಯೊಂದಿಗೆ ಭಾಗವಹಿಸುವ ಪ್ರತಿಯೊಬ್ಬರೂ ಪರಿಪೂರ್ಣವಾದ ಸ್ವಸ್ಥತೆಯನ್ನು ಪಡೆದುಕೊಳ್ಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al Elexbet instagram unban service tiktok unban instagram unban x unban twitter unban palacebet