Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 22.04.2023
Share:

By Village Missionary Movement

Saturday, 22-Apr-2023

ಧೈನಂದಿನ ಧ್ಯಾನ(Kannada) – 22.04.2023

 

ಯೇಸುವಿನ ಕಣ್ಣೀರು

 

“...ಆತನು...ಅತ್ತು - ನೀನಾದರೂ ಸಮಾಧಾನಕ್ಕೆ ಬೇಕಾದದ್ದನ್ನು ಇದೇ ದಿನದಲ್ಲಿ ತಿಳಿದುಕೊಂಡರೆ ಎಷ್ಟೋ ಒಳ್ಳೇದು..." - ಲೂಕ 19:41-42

 

ಯೇಸು ಕ್ರಿಸ್ತನು ಹಬ್ಬಕ್ಕಾಗಿ ಕತ್ತೆ ಮರಿಯ ಮೇಲೆ ಹತ್ತಿ ಯೆರೂಸಲೇಮಿಗೆ ಬರುತ್ತಾರೆ. ಅಲ್ಲಿ ಶಿಷ್ಯರು ಮತ್ತು ದೊಡ್ಡ ಜನರ ಗುಂಪು ಅವರೊಂದಿಗೆ ಆರ್ಭಟದೊಂದಿಗೆ ಬರುತ್ತದೆ. “ಕರ್ತನ ಹೆಸರಿನಲ್ಲಿ ಬರುವ ಅರ ಸನು ಸ್ತುತಿಹೊಂದಲಿ” ಎಂದು ದೇವರನ್ನು ಸ್ತುತಿಸಿದರು. ಅವರು ಯೆರೂಸಲೇಮ್ ಪಟ್ಟಣವನ್ನು ಸಮೀಪಿಸಿದ ಕೂಡಲೇ, ಆ ಪಟ್ಟಣಕ್ಕೆ ಸಂಭವಿಸುವುದನ್ನು ತಿಳಿದಿದ್ದರಿಂದ, ಪಟ್ಟಣವನ್ನು ನೋಡಿ ಕಣ್ಣೀರಿಟ್ಟರು.

 

ಯೇಸು ಕಣ್ಣೀರಿಟ್ಟದ್ದು ಎರಡು ಬಾರಿ, ಒಮ್ಮೆ ಲಾಜರನು ಸತ್ತಾಗ, ಮತ್ತೊಮ್ಮೆ ಯೆರೂಸಲೇಮ್ ಪಟ್ಟಣವನ್ನು ನೋಡಿದಾಗ! ಅವರು ಶಿಲುಬೆಯನ್ನು ಹೊತ್ತುಕೊಂಡು ಹೋಗುತ್ತಿದ್ದಾಗ, ತನ್ನ ಹಿಂದೆ ಅಳುತ್ತಿದ್ದ ಮಹಿಳೆಯರನ್ನು ನೋಡಿ, "ಯೆರೂಸಲೇಮಿನ ಕುಮಾರ್ತೆಯರೇ, ನನ ಗಾಗಿ ಅಳಬೇಡಿರಿ; ಆದರೆ ನಿಮಗಾಗಿಯೂ ನಿಮ್ಮ ಮಕ್ಕಳಿಗಾಗಿಯೂ ಅಳಿರಿ. ಯೇಸುವೋ, ಯೆರೂಸಲೇಮಿನ ಪಟ್ಟಣಕ್ಕೂ, ಜನರೆಲ್ಲರಿಗಾಗಿಯೂ, ದೇವಾಲಯಕ್ಕೂ ಸಂಭವಿಸಲಿರುವ ನಾಶನದ ಕುರಿತು ಯೋಚಿಸಿ ಕಣ್ಣೀರಿಟ್ಟರು. ಸಮಾಧಾನ ಕಾರಣರಾದ ತನ್ನನ್ನು ಅರಿಯದೇ ನಿರ್ಲಕ್ಷಿಸುತ್ತಿದ್ದಾರಲ್ಲಾ ಎಂದು ನೆನೆಸಿ ಪರಿತಪಿಸಿದರು. ಆತನು ಅವರಿಗಾಗಿ ಮಾತ್ರವಲ್ಲದೆ ಯೇಸುಕ್ರಿಸ್ತನ ಅಮೂಲ್ಯವಾದ ರಕ್ತವನ್ನು, ರಕ್ಷಣೆಯನ್ನು ಅಸಡ್ಡೆ ಮಾಡುವ ನಮ್ಮೊಬ್ಬೊಬ್ಬರಿಗಾಗಿಗೂ ಕಣ್ಣೀರು ಸುರಿಸುತ್ತಿದ್ದಾರೆ.

 

ಇದನ್ನು ಓದುತ್ತಿರುವ ಪ್ರೀತಿಯ ಸಹೋದರ ಸಹೋದರಿಯರೇ! ಅವರು ನಿಮಗಾಗಿ ಕಣ್ಣೀರು ಸುರಿಸುತ್ತಿದ್ದಾರಾ? ಅಥವಾ ನಿಮ್ಮ ಬಗ್ಗೆ ಸಂತೋಷಪಡುತ್ತಿದ್ದಾರಾ? ಎಂದು ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಿ. "ನಿನಗೆ ದೊರೆತಿರುವ ಈ ದಿನದಲ್ಲಾದರೂ ನಿನ್ನ ಸಮಾಧಾನಕ್ಕೆ ಅನುಕೂಲವಾದದ್ದನ್ನು ಅರಿತುಕೋ" ಎಂದು ಹೇಳುವ ಆತನ ಪ್ರೀತಿಯನ್ನು ನೋಡಿರಿ ಅವರು ಶಿಲುಬೆಯನ್ನು ಹೊತ್ತುಕೊಂಡು, ಕೊರಡೆಗಳಿಂದ ಹೊಡೆಸಿಕೊಂಡದ್ದು, ಮುಳ್ಳಿನ ಕಿರೀಟವನ್ನು ಧರಿಸಿಕೊಂಡದ್ದು ಶಿಲುಬೆಗೇರಿಸಲ್ಪಟ್ಟದ್ದು ಯಾರಿಗಾಗಿ? ಅವರಿಗಾಗಿಯಾ? ಇಲ್ಲ, ನಿನಗಾಗಿಯೇ! ಅವರ ಕಣ್ಣೀರನ್ನು ಒರೆಸಬೇಕೆಂದು ನೀನು ಬಯಸಿದರೆ, ಅವರನ್ನು ರಕ್ಷಕನಾಗಿ ಸ್ವೀಕರಿಸು! ಆಗ ನಿನ್ನ ಸಮಾಧಾನವನ್ನು ಪಡೆದುಕೊಳ್ಳುತ್ತೀಯ! ಶಿಲುಬೆಗೇರಿಸಿದವರಂತೆ ಅಲ್ಲ, ಪುನರುತ್ಥಾನನಾದ ಕ್ರಿಸ್ತನಂತೆ ಪರಲೋಕ ರಾಜನಾದ ಆತನನ್ನು ಭೇಟಿಯಾಗುವ ಸಮಯ ಸಮೀಪಿಸುತ್ತಿದೆ. ನಾವು ಸಿದ್ಧರಾಗೋಣ! ಆಮೆನ್.

- Mrs. ಭುವನಾ ಧನಪಾಲನ್

 

ಪ್ರಾರ್ಥನಾ ಅಂಶ:

ಯೌವನಸ್ಥರ ಕೂಟದಲ್ಲಿ ಸಂದೇಶವನ್ನು ನೀಡುವ ಸೇವಕರನ್ನು ದೇವರು ಬಲವಾಗಿ ಉಪಯೋಗಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al Elexbet instagram unban service tiktok unban instagram unban x unban twitter unban palacebet