Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 23.04.2023
Share:

By Village Missionary Movement

Sunday, 23-Apr-2023

ಧೈನಂದಿನ ಧ್ಯಾನ(Kannada) – 23.04.2023

 

ಯೇಸು ಇದ್ದರೆ ಸಾಕು

 

“ಯಾವನಲ್ಲಿ (ದೇವರ) ಮಗನು ಇದ್ದಾನೋ ಅವನಿಗೆ ಜೀವ ಉಂಟು; ಯಾವನಲ್ಲಿ ದೇವರ ಮಗನು ಇರುವ ದಿಲ್ಲವೋ ಅವನಿಗೆ ಜೀವವಿಲ್ಲ" - 1 ಯೋಹಾನ 5:12

 

ಒಂದು ಸುಂದರವಾದ ಹಳ್ಳಿಯಲ್ಲಿ ರಾಜು ಎಂಬ ಒಬ್ಬ ಚಿಕ್ಕ ಸಹೋದರನಿದ್ದನು. ಅವರ ತಂದೆ ಸೇನಾ ಯೋಧರಾಗಿ ಸೇವೆ ಸಲ್ಲಿಸುತ್ತಿದ್ದರು. ಊರಿನಲ್ಲಿ ಅವರಿಗೆ ಬಹಳ ಗೌರವ. ದೇಶವನ್ನು ರಕ್ಷಿಸುವ ಸೈನಿಕನಲ್ಲವೇ? ಎಲ್ಲರೂ ಅವರನ್ನು ನೋಡುವಾಗಲೆಲ್ಲ ಸೆಲ್ಯೂಟ್ ಹೊಡೆಯುತ್ತಿದ್ದರು. ರಾಜು ತಂದೆಯ ಬಳಿ ಒಂದು ಗನ್ ಇರುತ್ತದೆ. ರಾಜು ಗನ್ ತೆಗೆದುಕೊಳ್ಳಲು ಪ್ರಯತ್ನಿಸಿದಾಗಲೆಲ್ಲಾ ಅಪ್ಪ ಹೇಳುತ್ತಿದ್ದರು, “ತಮ್ಮಾ, ಅದರಲ್ಲಿರುವ ಬುಲೆಟ್ ತುಂಬಾ ಶಕ್ತಿಶಾಲಿ. ಇದು ದೊಡ್ಡ ಆನೆಯನ್ನು ಎಷ್ಟು ದೂರದಲ್ಲಿದ್ದರೂ ಉರುಳಿಸಬಲ್ಲದು. ಆದ್ದರಿಂದ ನೀನು ಮುಟ್ಟಬಾರದು ಎನ್ನುತ್ತಿದ್ದರು.

 

ಒಂದು ದಿನ, ತಂದೆಗೆ ಸಿಕ್ಕ ರಜೆಯ ದಿನಗಳಲ್ಲಿ, ಅವರು ತಮ್ಮ ಕುಟುಂಬದೊಂದಿಗೆ ಪ್ರವಾಸಕ್ಕೆ ತೆರಳಿದರು. ರಾಜು ತುಂಬಾ ಖುಷಿಯಾಗಿ ಹೊರಟನು. ಏನು ಪುಟಾಣಿಗಳೇ ನಿಮ್ಗೂ ಟ್ರಿಪ್ ಎಂದ ಕೂಡಲೇ ಆಸೆಯಾಗ್ತಿದೆಯಾ... ರಾಜು ಮೊದಲನೇ ವ್ಯಕ್ತಿಯಾಗಿ ಹೋಗಿ ಕಾರಿನಲ್ಲಿ ಕುಳಿತ. ಆಗ ತಂದೆ ರಾಜುವನ್ನು ಕರೆದುಕೊಂಡು ಹೋಗಿ ಪ್ರಾರ್ಥಿಸಿ ಹೊರಡಬೇಕು ಎಂದರು. ನೀವು ಎಲ್ಲಿಗೆ ಹೋದರೂ, ಪ್ರಾರ್ಥನೆಯೊಂದಿಗೆ ಹೊರಡಬೇಕು. ಓಕೇನಾ. ಅವರು ಹೋಗಬೇಕಿದ್ದ ಸ್ಥಳವನ್ನು ತಲುಪಿದಾಗ, ತಂದೆ ಪ್ರಾರ್ಥಿಸಿದರು. ಅಪ್ಪನ ಕೈ ಹಿಡಿದು ನಡೆಯತೊಡಗಿದ. ಸುಂದರವಾದ ಬಣ್ಣಬಣ್ಣದ ಹೂಗಳನ್ನು ನೋಡಿ ಆನಂದಿಸುತ್ತಾ ಹೂವುಗಳ ಹೆಸರುಗಳನ್ನು ಕೇಳುತ್ತಾ ನಡೆದುಕೊಂಡು ಹೋದರು. ರಾಜು ಕೇಳಿದ, "ಅಪ್ಪಾ, ನೀವು ಬಲಶಾಲಿ, ಧೈರ್ಯಶಾಲಿ, ಎಲ್ಲರೂ ನಿಮ್ಮನ್ನು ಗೌರವಿಸುತ್ತಾರೆ, ಹಾಗಾದರೆ ನೀವು ಯಾವಾಗಲೂ ಏಕೆ ಪ್ರಾರ್ಥಿಸುತ್ತೀರಿ? "ಅಪ್ಪ ನಗುತ್ತಾ ತಮ್ಮ ಬಂದೂಕನ್ನು ಎತ್ತಿಕೊಂಡು ಅದರೊಳಗಿಂದ ಗುಂಡು ತೆಗೆದು ಇದನ್ನು ಆ ಹೂತೋಟದಲ್ಲಿ ಹಾಕು ಎಂದರು. ರಾಜು ಕೂಡ ಸರಿ ಎಂದು ಹೇಳಿ ಹಾಗೆಯೇ ಮಾಡಿದ ಏನೂ ಆಗಲಿಲ್ಲ. ಈ ಗುಂಡು ಬಂದೂಕಿನೊಳಗಿದ್ದರೇನೆ ಅದಕ್ಕೆ ಶಕ್ತಿ ಹೆಚ್ಚು ಎಂಬುದು ನಿನಗೆ ಗೊತ್ತಲ್ಲಾ. ನಾನು ಪ್ರಾರ್ಥಿಸುವಾಗ, ಯೇಸು ನನ್ನೊಳಗೆ ಬಂದು ಬಿಡುತ್ತಾರೆ. ಅವರು ನನಗೆ ಸಹಾಯ ಮಾಡುತ್ತಾರೆ, ನಾನು ಏನು ಮಾಡಬೇಕೆಂದು ನನಗೆ ಕಲಿಸುತ್ತಾರೆ. ಬಂದೂಕಿನೊಳಗಿದ್ದರೇನೆ ಗುಂಡಿಗೆ ಹೆಚ್ಚಿನ ಶಕ್ತಿ. ಅದರಂತೆಯೇ ಪ್ರಾರ್ಥನೆಯು ನಮ್ಮನ್ನು ಯೇಸುವಿನೊಂದಿಗೆ ಬೆರೆಸಿ ನಮ್ಮನ್ನು ಪವರ್ ಫುಲ್ ಮ್ಯಾನ್ ಆಗಿ ನಮ್ಮನ್ನು ಮಾರ್ಪಡಿಸುತ್ತದೆ ಎಂದು ತಂದೆ ಹೇಳಿದ ಕೂಡಲೇ, ಇಂದಿನಿಂದ ನಾನು ಕೂಡ ಪವರ್ ಫುಲ್ ಸೂಪರ್ ಮ್ಯಾನ್ ಎಂದು ಹೇಳಿ ಕುಣಿದಾಡಿದನು. ಪ್ರಾರ್ಥನೆಯ ರಹಸ್ಯವನ್ನು ತಿಳಿದುಕೊಂಡನು.

 

ಪ್ರೀತಿಯ ಮುದ್ದು ಪುಟಾಣಿಗಳೇ! ನೀವು ಎಷ್ಟು ಬೆಲೆಬಾಳುವವರಾಗಿದ್ದರೂ ಅಥವಾ ಶ್ರೀಮಂತರಾಗಿದ್ದರೂ, ಯೇಸಪ್ಪ ನಿಮ್ಮೊಳಗೆ ಇಲ್ಲದಿದ್ದರೆ ನೀವು ಏನೂ ಅಲ್ಲ. ಏನೂ ಇಲ್ಲದಿದ್ದರೂ ಜೀಸಸ್ ಮಾತ್ರ ಇದ್ದರೆ ಸಾಕು, ಏನು ಬೇಕಾದರೂ ಸಾಧಿಸಿಬಿಡಬಹುದು. ಅದಕ್ಕೆ ನೀನು ಯೇಸುವಿನ ಜೊತೆ ಮಾತನಾಡಬೇಕು ಓಕೇನಾ.

- Mrs. ಅನ್ಬು ಜ್ಯೋತಿ ಸ್ಟಾಲಿನ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking perabet casibom holiganbet galabet casibom perabet perabet giriş padişahbet padişahbet giriş grandpashabet kalitebet kalitebet giris betsmove betsmove giris gonebet gonebet giris betnano betnano giriş jojobet jojobet casinomilyon jojobet palacebet sonbahis tambet grandpashabet betgit mercurecasino matbet