Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 25.04.2023
Share:

By Village Missionary Movement

Tuesday, 25-Apr-2023

ಧೈನಂದಿನ ಧ್ಯಾನ(Kannada) – 25.04.2023

 

ಪ್ರಮಾಣಪತ್ರ

 

"...ದಾವೀದನನ್ನು ಕಂಡುಕೊಂಡೆನು, ಅವನು ನನ್ನ ಹೃದಯವು ಒಪ್ಪುವ ಮನುಷ್ಯನು..." - ಅಪೊಸ್ತಲ. 13:22

 

ಶಾಲಾ-ಕಾಲೇಜುಗಳಲ್ಲಿ ನಡೆಸುವ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಮಾಣ ಪತ್ರ ಹಾಗೂ ಬಹುಮಾನ ನೀಡಲಾಗುವುದು. ಈ ಪ್ರಮಾಣಪತ್ರವನ್ನು ಜೋಪಾನವಾಗಿ ಇಟ್ಟುಕೊಳ್ಳುತ್ತಾರೆ. ಈ ಪ್ರಮಾಣಪತ್ರದ ಹಕ್ಕುದಾರರು ಇತರರಿಂದ ಹೆಚ್ಚು ಪ್ರಶಂಸಿಸಲ್ಪಡುತ್ತಾರೆ. ಮತ್ತು ಕಾಲೇಜಿನ ಕೊನೆಯಲ್ಲಿ ನೀಡುವ ಪ್ರಮಾಣಪತ್ರವು ತುಂಬಾ ವಿಶೇಷವಾದ ರೀತಿಯಲ್ಲಿ ಉತ್ತಮ ನಡತೆಗಾಗಿ ನೀಡಲಾಗುತ್ತದೆ.

 

ಸತ್ಯವೇದದಲ್ಲಿ, ಕರ್ತನಾದ ಯೇಸು, ಅನೇಕ ದೇವ-ಮನುಷ್ಯರ ಬಗ್ಗೆ ಪ್ರಮಾಣಪತ್ರ ನೀಡಿದ್ದಾರೆ. ಮೋಶೆಯ ಬಗ್ಗೆ, ಮೋಶೆಯು ದೇವರ ಮನೆಯಲ್ಲೆಲ್ಲಾ ನಂಬಿಗಸ್ತನು ಎಂದು ಹೇಳಿದ್ದಾರೆ. (ಇಬ್ರಿಯ 3:2) ನೋಹನ ಬಗ್ಗೆ ನೀತಿವಂತನು, ಉತ್ತಮನು ಎಂದು ಹೇಳಿ ಪ್ರಮಾಣಪತ್ರ ನೀಡಿದರು. ದಾವೀದನ ಬಗ್ಗೆ ಪ್ರಮಾಣಪತ್ರವನ್ನು ನೀಡುವಾಗ, ನನ್ನ ಹೃದಯಕ್ಕೆ ಒಪ್ಪುವವನು ಎಂದು ಹೇಳಿದರು. ಆದರೆ ಕರ್ತನು ಸೌಲನ ಬಗ್ಗೆ ಪ್ರಮಾಣಪತ್ರವನ್ನು ನೀಡುವಾಗ ಸೌಲನನ್ನು ಅರಸನನ್ನಾಗಿ ಮಾಡಿದ್ದಕ್ಕೆ ಈಗ ಪಶ್ಚಾತ್ತಾಪಪಡುತ್ತೇನೆ. (1 ಸಮುವೇಲ 15: 11) ಎಂದು ಹೇಳಿದರು. ಸೌಲನನ್ನು ಅರಸನನ್ನಾಗಿ ಮಾಡಿದ್ದೂ ಕರ್ತನೇ. ಈ ರೀತಿಯಾಗಿ ಸಾಕ್ಷಿ ಹಂಚಿಕೊಳ್ಳುವುದೂ ಕರ್ತನೇ. ಆದ್ದರಿಂದಲೇ ಸೌಲನು ದೇವರಿಂದ ಬಹಳ ದುಃಖದ ಪ್ರಮಾಣಪತ್ರವನ್ನು ಪಡೆದುಕೊಂಡರು.

 

ಇದನ್ನು ಓದುತ್ತಿರುವ ಪ್ರಿಯರೇ! ನಮ್ಮಲ್ಲಿ ಪ್ರತಿಯೊಬ್ಬರೂ ದೇವರ ರಕ್ತದಿಂದ ತೊಳೆಯಲ್ಪಟ್ಟು ಆತನಿಂದ ಆರಿಸಲ್ಪಟ್ಟಿದ್ದೇವೆ. ಆದ್ದರಿಂದ ನಾವು ಪ್ರತಿಯೊಬ್ಬರೂ ಅವರಿಂದ ಪಡೆಯುವ ಪ್ರಮಾಣಪತ್ರವು ಬಹಳ ಮುಖ್ಯವಾಗಿದೆ. ನಮ್ಮ ಮನೆಗಳಲ್ಲಿ, ನಾವು ಕೆಲಸ ಮಾಡುವ ಸ್ಥಳಗಳಲ್ಲಿ ನಮ್ಮ ಬಗ್ಗೆ ಎಂಥಹ ಸರ್ಟಿಫಿಕೇಟ್ ಕೊಟ್ಟಿದ್ದಾರೆಂದು ಸ್ವಲ್ಪ ಯೋಚಿಸೋಣ! ರಕ್ಷಕನಾದ ಯೇಸುವಿನಿಂದ ನಾವು ಪಡೆಯಲಿರುವ ಪ್ರಮಾಣಪತ್ರವು ಹೇಗಿರಲಿದೆ? ಅವರು ದಾವೀದನ ಹಾಗೆ ದೇವರ ಹೃದಯಕ್ಕೆ ಒಪ್ಪುವವರಾ? ಇಲ್ಲದಿದ್ದರೆ, ಸೌಲನಂತೆ ಕರ್ತನಿಗೆ ದುಃಖವನ್ನು ಉಂಟುಮಾಡುವವರಾ? ಇಂದು ನಮ್ಮನ್ನು ನಾವು ಸರಿಪಡಿಸಿಕೊಳ್ಳೋಣ! ಖಂಡಿತವಾಗಿಯೂ ಯೇಸು ನಮ್ಮನ್ನು ಸರಿಪಡಿಸಿಕೊಳ್ಳಲು ಸಹಾಯ ಮಾಡುತ್ತಾರೆ! ಪರಲೋಕ ರಾಜನಿಂದ ನಾವು ಪಡೆಯುವ ಪ್ರಮಾಣಪತ್ರವೇ ನಮ್ಮನ್ನು ನೇರವಾಗಿ ನಿತ್ಯಜೀವದ ಕಡೆಗೆ ನಡೆಸುತ್ತದೆ.

- T. ಶಂಕರ್ ರಾಜ್

 

ಪ್ರಾರ್ಥನಾ ಅಂಶ:

ಕೂಟಕ್ಕೆ ಅಗತ್ಯವಾಗಿರುವ 1 ಕೋಟಿ 20 ಲಕ್ಷ ಹಣದ ಅವಶ್ಯಕತೆಗಳು ಪೂರೈಸಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet matbet giriş holiganbet holiganbet güncel holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet grandpashabet holiganbet grandpashabet grandpashabet grandpashabet perabet perabet giriş padişahbet padişahbet giriş grandpashabet grandpashabet grandpashabet casinolevant grandpashabet meritking meritking giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş