Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 28.04.2023
Share:

By Village Missionary Movement

Friday, 28-Apr-2023

ಧೈನಂದಿನ ಧ್ಯಾನ(Kannada) – 28.04.2023

 

ಕ್ರಿಸ್ತನ ಪ್ರೀತಿ

 

"...ನಮ್ಮನ್ನು ಪ್ರೀತಿಸಿದಾತನ ಮೂಲಕವಾಗಿ ನಾವು ಈ ಎಲ್ಲಾ ವಿಷಯಗಳಲ್ಲಿ ಪೂರ್ಣ ಜಯಶಾಲಿಗಳಾಗುತ್ತೇವೆ." - ರೋಮಾ 8:37

 

'ದುಃಖದ ಮನುಷ್ಯ' ಎಂದು ಕರೆಯಲ್ಪಟ್ಟವರೇ - "ವಾಚ್ ಮನ್ ನೀ" ಇವರು ಚೀನಾದ ಒಬ್ಬ ಮಹಾನ್ ದೈವಿಕ ವ್ಯಕ್ತಿ. ಅವರು ತಮ್ಮ ಜೀವನದ ಕೊನೆಯ 20 ವರ್ಷಗಳನ್ನು ಜೈಲಿನಲ್ಲಿ ಕಳೆದರು. ಚೀನೀ ಸರ್ಕಾರವು ಕ್ರಿಸ್ತನನ್ನು ನಿರಾಕರಿಸುವಂತೆ ಒತ್ತಾಯಿಸಿತು ಮತ್ತು ಅವರನ್ನು ಸೆರೆಮನೆಗೆ ಹಾಕಿತು ಮತ್ತು ಅವರನ್ನು ಹಿಂಸಿಸಿತು. ಅವರು ಪ್ರತಿದಿನ 8 ಗಂಟೆಗಳ ಕಾಲ ಕಷ್ಟಪಟ್ಟು ಕೆಲಸ ಮಾಡಿದರು. ಮುಂದಿನ 8 ಗಂಟೆಗಳ ಕಾಲ ಅವರಿಗೆ ಕಮ್ಯುನಿಸ್ಟ್ ಹಾಡುಗಳನ್ನು ಕಲಿಸಲಾಯಿತು. ಉಳಿದ 8 ಗಂಟೆಗಳ ಕಾಲ ಅವರು ಮಲಗಲು ಬಿಡದೇ ಕಮ್ಯುನಿಸ್ಟ್ ಆದರ್ಶಗಳನ್ನು ಒಳಗೊಂಡಿರುವ ಹಾಡುಗಳು ಮತ್ತು ಧರ್ಮೋಪದೇಶಗಳು ಅವರ ಕಿವಿಯಲ್ಲಿ ಜೋರಾಗಿ ಕೇಳುವಂತೆ ಯಾವಾಗಲೂ ಅವರ ಜೈಲು ಕೋಣೆಯ ಬಳಿ ಪ್ರಸಾರ ಮಾಡಲಾಗುತ್ತಿತ್ತು. ಆದರೆ ಅವರು ಯಾವುದಕ್ಕೂ ಜಗ್ಗಲಿಲ್ಲ. ಅವರು ಕೊನೆಯವರೆಗೂ ಕ್ರಿಸ್ತನನ್ನು ಬಿಟ್ಟು ಕೊಡದೇ ತನ್ನ ನಂಬಿಕೆಯಲ್ಲಿ ದೃಢವಾಗಿದ್ದು ಜೈಲಿನಲ್ಲೇ ತನ್ನ ಓಟವನ್ನು ಕೊನೆಗೊಳಿಸಿ ತನ್ನ ಪರಮ ಯಜಮಾನನ ಸಂತೋಷದೊಳಗೆ ಪ್ರವೇಶಿಸಿದರು. ಒಂದು ಸರ್ಕಾರವೇ ಸೋತಿತು ಒಂದು ಸರಳವಾದ ದೇವಮನುಷ್ಯನ ಬಳಿ. ಅವರು ಬರೆದ Normal Christian life, The spiritual man, ಇದರಂತಹ ಅದ್ಭುತವಾದ ಪುಸ್ತಕಗಳು ಇನ್ನೂ ಅನೇಕರನ್ನು ನಂಬಿಕೆಯ ಯೋಧರನ್ನಾಗಿಯೂ ವೇದ ಬೋಧಕರನ್ನಾಗಿಯೂ ಮಾರ್ಪಡಿಸುತ್ತಲೇ ಇದೆ.

 

ಸತ್ಯವೇದದಲ್ಲಿ ಅಪೊಸ್ತಲನಾದ ಪೌಲನು ಕ್ರಿಸ್ತನ ಪ್ರೀತಿಗಾಗಿ ಅನೇಕ ಸಂಕಟಗಳನ್ನು ಮತ್ತು ಉಪದ್ರವಗಳನ್ನು ಸಹಿಸಿಕೊಂಡರು. ಹೊಸ ಒಡಂಬಡಿಕೆಯಲ್ಲಿ ಅನೇಕ ಪತ್ರಗಳನ್ನು ಬರೆದ ಪೌಲನು 2 ಕೊರಿಂಥದ 11 ನೇ ಅಧ್ಯಾಯದಲ್ಲಿ ಕ್ರಿಸ್ತನ ನಿಮಿತ್ತ ಮತ್ತು ಯೇಸುವಿನ ಮೇಲಿರುವ ಪ್ರೀತಿಯ ನಿಮಿತ್ತವಾಗಿಯೂ ತಾನು ಯಾವ ರೀತಿಯ ಯಾತನೆಗಳನ್ನು ಅನುಭವಿಸಿದರು ಎಂದು ಪಟ್ಟಿ ಮಾಡಿದ್ದಾರೆ. ಒಮ್ಮೆ, ಅವರು ಯೆಹೂದ್ಯರಿಂದ 40 ಏಟುಗಳಂತೆ ಐದು ಬಾರಿ ಹೊಡೆಸಿಕೊಂಡೆ ಎಂದು ಹೇಳಿದರು. ಇದೆಲ್ಲ ಏಕೆ ಎಂದು ನಾವು ಯೋಚಿಸಿದರೆ ಪೌಲನಿಗೆ ಕ್ರಿಸ್ತನ ಮೇಲಿನ ಪ್ರೀತಿಯೇ ಕಾರಣ! ಉನ್ನತವಾಗಲಿ ಅಗಾಧವಾಗಲಿ ಬೇರೆ ಯಾವ ಸೃಷ್ಟಿಯಾಗಲಿ ನಮ್ಮನ್ನು ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿರುವ ದೇವರ ಪ್ರೀತಿಯಿಂದ ಅಗಲಿಸಲಾರವೆಂದು ನನಗೆ ನಿಶ್ಚಯ ಉಂಟು (ರೋಮಾ 8:39) ಎಂದು ಬರೆದಿದ್ದಾರೆ.

 

ಹೌದು! ಪ್ರಿಯರೇ! ಯಾರೇ ಆಗಲಿ ಅಥವಾ ಏನೇ ಆಗಲಿ ಅವರ ಪ್ರೀತಿಯಿಂದ ಬೇರ್ಪಡಿಸಲು ಸಾಧ್ಯವೇ? ನಾವು ಮಾಡುವ ಒಳ್ಳೆಯ ಕೆಲಸಗಳಿಂದ ಅಥವಾ ಆತನಿಗಾಗಿ ನಾವು ಅನುಭವಿಸುವ ಕಷ್ಟಗಳಿಂದಲ್ಲ, ನಾವು ಆತನ ಮಕ್ಕಳಾಗಿರುವುದರಿಂದಲೇ ಆತನು ಶಿಲುಬೆಯಲ್ಲಿ ನಮಗಾಗಿ ತನ್ನ ಪ್ರೀತಿಯನ್ನು ತೋರಿಸಿದರು. ಸಾಮಾನ್ಯ ಜಗತ್ತಿನಲ್ಲಿ ಬದುಕುತ್ತಿರುವ ನಾವು ಯಾವುದೇ ರೀತಿಯ ಪ್ರೀತಿಗೂ ಅಥವಾ ಯಾರ ಪ್ರೀತಿಗೂ ವ್ಯಸನಿಯಾಗಬಾರದು. ನಮ್ಮಲ್ಲಿ ಕ್ರಿಸ್ತನ ಪ್ರೀತಿ ನಮ್ಮಲ್ಲಿದ್ದರೆ, ನಾವು ಸುಮ್ಮನಿರಲು ಸಾಧ್ಯವೇ ಇಲ್ಲ. ಅವರಿಗಾಗಿ ಏನಾದರೂ ಸಾಧಿಸಬೇಕು ಎಂದೇ ತೋಚುತ್ತದೆ. ಕ್ರಿಸ್ತನ ಪ್ರೀತಿಯನ್ನು ವ್ಯಕ್ತಪಡಿಸುವವರಾಗಿ ನಾವು ಅನೇಕರಿಗೆ ಉಪಯುಕ್ತರಾಗುತ್ತೇವೆ.

- Mrs. ಶಕ್ತಿ ಶಂಕರರಾಜ್

 

ಪ್ರಾರ್ಥನಾ ಅಂಶ:

ಯೌವನಸ್ಥರ ಕೂಟಕ್ಕೆ ಅಗತ್ಯವಾದಷ್ಟು ನೀರಿನ ಲಭ್ಯತೆ. ಸ್ನಾನಗೃಹದ ಸೌಲಭ್ಯಗಳು ಮತ್ತು ಮೈದಾನ ಎಲ್ಲವೂ ಸರಿಯಾಗಿ ಇರಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al deneme bonusu deneme bonusu veren siteler online casino online casino perabet perabet giriş perabet güncel giriş jojobet jojobet giriş jojobet güncel giriş Holiganbet Holiganbet Giriş Holiganbet Güncel Giriş Superbetin Superbetin Giriş Superbetin Güncel Giriş pashagaming pashagaming giriş pashagaming güncel giriş betcio Betcio Giriş betcio güncel giriş atlasbet atlasbet giriş atlasbet güncel giriş Piabet Piabet Giriş Ngsbahis Ngsbahis Giriş İnterbahis İnterbahis Giriş Klasbahis Klasbahis Giriş Coinbar Coinbar Giriş Limanbet Limanbet Giriş İmajbet İmajbet Giriş Restbet Restbet Giriş Matbet Matbet Giriş Jasminbet Jasminbet Giriş Belugabahis Belugabahis Giriş Online casino nz Best payout online casino nz jojobet jojobet giriş jojobet güncel giriş meritking meritking giriş meritking güncel giriş perabet perabet giriş perabet güncel giriş holiganbet holiganbet giriş holiganbet güncel giriş Meritking Perabet Holiganbet jojobet jojobet giriş jojobet güncel giriş bahsegel bahsegel bahsegel bahsegel bahsegel perabet perabet giriş perabet perabet giriş holiganbet holiganbet giriş holiganbet holiganbet giriş belugabahis matbet romabet