Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 16.05.2023
Share:

By Village Missionary Movement

Tuesday, 16-May-2023

ಧೈನಂದಿನ ಧ್ಯಾನ(Kannada) – 16.05.2023

 

ದೇವರ ಹಂಬಲ

 

"ನಾನು ಸುವಾರ್ತೆಯನ್ನು ಸಾರದಿದ್ದರೆ ನನಗೆ ಅಯ್ಯೋ!." - 1 ಕೊರಿಂ 9:16

 

ಬೈಬಲ್ ಕಾಲೇಜಿನಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ ವ್ಯಕ್ತಿಯೊಬ್ಬರು ಕರ್ನಾಟಕದಲ್ಲಿ ಸೇವೆ ಮಾಡುತ್ತಿದ್ದರು. ಒಂದು ಸಂಜೆ, ಅವರು ಸಭೆಯಲ್ಲಿರುವ ಒಂದು ತಾಯಿಯೊಂದಿಗೆ ಹಸ್ತಪ್ರತಿ ಸೇವೆಯನ್ನು ಮಾಡಿಬಟ್ಟು ಮನೆಗೆ ಮರಳುತ್ತಿದ್ದರು. ಆಗ ಶಿಕ್ಷಕನ ಹೃದಯದಲ್ಲಿ ದೇವರು ಒಂದು ಪ್ರೇರಣೆಯನ್ನು ಕೊಟ್ಟರು. “ಈ ಮನೆಗೆ ಹೋಗಿ ಸುವಾರ್ತೆಯನ್ನು ಸಾರು” ಎಂದು. "ದೇವರೇ! ನಾನು ತುಂಬಾ ಸುಸ್ತಾಗಿದ್ದೇನೆ. ನಾಳೆ ಖಂಡಿತ ಹೋಗಿ ಹೇಳುತ್ತೇನೆ" ಎಂದು ಹೇಳಿ ಮನೆಗೆ ಬಂದರು. ಮತ್ತೆ ದೇವರು ಆ ಮನೆಗೆ ಹೋಗುವಂತೆ ಹೇಳಿದರು. ಶಿಕ್ಷಕನು ಅದೇ ಉತ್ತರ ಕೊಟ್ಟು ನಿದ್ದೆಗೆ ಜಾರಿದರು.

 

ಮರುದಿನ ಬೆಳಗ್ಗೆ ಆ ಮನೆಗೆ ಹೋದಾಗ ಮನೆ ನಿಶ್ಶಬ್ದವಾಗಿತ್ತು! ಪಕ್ಕದಲ್ಲಿದ್ದವರ ಮುಖ ದುಃಖಮಯವಾಗಿತ್ತು. ವ್ಯಕ್ತಿಯೊಬ್ಬರನ್ನು ವಿಚಾರಿಸಿದಾಗ ಈ ಮನೆಯ ನಿವಾಸಿ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದರು. ಅದನ್ನು ಕೇಳಿದ ಕೂಡಲೇ ಮನಸ್ಸು ಒಡೆದು ಹೋಯಿತು. ದೈಹಿಕ ಆಯಾಸವನ್ನು ಲೆಕ್ಕಿಸದೆ ಕಾರ್ಯ ಮಾಡಿದ್ದರೆ ಈ ವ್ಯಕ್ತಿಯನ್ನು ಆದಾಯಮಾಡಬಹುದಿತ್ತಲ್ಲಾ! ಎಂದು ಪ್ರಲಾಪಿಸಿದರು. ಇದನ್ನು ನಮ್ಮ ಬೈಬಲ್ ಕಾಲೇಜಿನಲ್ಲಿ ಹೇಳಿದಾಗ ಎಲ್ಲರ ಕಣ್ಣಲ್ಲೂ ಕಣ್ಣೀರು.

 

ಈ ಘಟನೆಯಿಂದ ನಾವು ನಮ್ಮ ಕರ್ತನ ಹೃದಯದ ಹಂಬಲವನ್ನು ಮತ್ತು ಕ್ರಿಸ್ತನಿಗಾಗಿ ಕ್ರಯ ಸಲ್ಲಿಸಲು ಇಷ್ಟವಿಲ್ಲದ ನಮ್ಮ ಹೃದಯವನ್ನು ನೋಡಬಹುದು. ಪ್ರತಿಯೊಂದು ವ್ಯಕ್ತಿಯ ಮೇಲೂ ದೇವರ ಕಾಳಜಿಯನ್ನು ನೋಡಿ. ಒಬ್ಬರಾದರೂ ನಾಶವಾಗುವುದು ಅವರ ಇಚ್ಛೆಯಲ್ಲ. ಬಹುಶಃ ನಾವು ಯೋಚಿಸಬಹುದು, "ಈ ಪ್ರಪಂಚದ ಕೋಟ್ಯಂತರ ಜನರ ನಡುವೆ, ದೇವರು ನನ್ನನ್ನು ಎಲ್ಲೋ ಮೂಲೆಯಲ್ಲಿ ನೋಡುತ್ತಾರಾ? ನನ್ನ ಪ್ರಾರ್ಥನೆಯನ್ನು ಕೇಳುತ್ತಾರಾ?" ಎಂದು! ಆದರೆ ದೇವರ ಹೃದಯವನ್ನು ನೋಡಿ. ಒಂದು ತಾಯಿ ಮಗು ತಿನ್ನಲಿಲ್ಲ ಎಂದರೆ ಪದೇ ಪದೇ ಕೇಳುವಂತೆ, ದೇವರು ಆ ವ್ಯಕ್ತಿಗಾಗಿ ಶಿಕ್ಷಕರನ್ನು ಪದೇ ಪದೇ ಕೇಳಿದರು. ದೇವರ ಹೃದಯದ ಹಂಬಲವೆಷ್ಟಿದೆ?

 

ಪ್ರಿಯರೇ! ಕ್ರಿಸ್ತನಿಗಾಗಿ ಚಿಕ್ಕ ಚಿಕ್ಕ ಕಾರ್ಯಗಳನ್ನು ಸಹ ತ್ಯಾಗ ಮಾಡಲು ಹಿಂಜರಿಕೆಯಿಲ್ಲದವರಾಗಿ ಬದುಕಲು ಪ್ರಯತ್ನಿಸೋಣ. ಮನೆಗೆ ಬರುವ ಹಾಲಿನವನಿಗೆ, ಬಾಗಿಲಿಗೆ ಬರುವ ತರಕಾರಿ ಅಜ್ಜಿಗೆ, ಕಸ ಎತ್ತಲು ಬರುವ ಅಮ್ಮನಿಗೆ, ಬಟ್ಟೆ ಇಸ್ತ್ರೀ ಮಾಡಲು ಬರುವ ಅಣ್ಣನಿಗೆ, ಪಾತ್ರೆ ತೊಳೆಯಲು ಬರುವ ತಂಗಿಗೆ ಒಮ್ಮೆಯಾದರೂ ದೇವರ ಬಗ್ಗೆ ಹೇಳಿದ್ದೇವೆಯೇ? ಅವರಲ್ಲಿ ಪ್ರತಿಯೊಬ್ಬರೂ ರಕ್ಷಣೆ ಹೊಂದಬೇಕೆಂದು ದೇವರು ಹಂಬಲಿಸುತ್ತಿದ್ದಾರೆ ಎಂಬುದು 100% ಖಚಿತವಾಗಿದೆ. ಅವರ ಹಂಬಲವನ್ನು ನಿಮ್ಮ ಹೊರೆಯಾಗಿ ಸ್ವೀಕರಿಸಿ ಕಾರ್ಯ ಮಾಡುತ್ತೀರಾ? ಅದಕ್ಕಾಗಿ ಏನು ಬೇಕಾದರೂ ಕ್ರಯವಾಗಿ ಸಲ್ಲಿಸಲು ಮುಂದೆ ಬರುತ್ತೀರಾ?

- Mrs. ರೂತ್ ಹನೀಸ್

 

ಪ್ರಾರ್ಥನಾ ಅಂಶ:

ನಮ್ಮ ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ನಿರ್ಮಾಣ ಕೆಲಸ ಮತ್ತು ಕಚೇರಿ ಕೆಲಸಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet perabet perabet giriş padişahbet padişahbet giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş jojobet jojobet betplay jojobet esbet sonbahis tambet grandpashabet betgit mercurecasino matbet