Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 24.05.2023
Share:

By Village Missionary Movement

Wednesday, 24-May-2023

ಧೈನಂದಿನ ಧ್ಯಾನ(Kannada) – 24.05.2023

 

ಕ್ರಿಸ್ತನ ಸ್ವಾರೂಪ್ಯ

 

"…ತಾನು ಹೀಗಿದ್ದೇನೆಂಬದನ್ನು ಆ ಕ್ಷಣವೇ ಮರೆತುಬಿಡುವನು" - ಯಾಕೋಬ 1:24

 

ಯೌವನಸ್ಥರ ನಡುವೆ ಅರೆಕಾಲಿಕ ಸೇವೆ ಮಾಡುವ ಒಬ್ಬ ಸಹೋದರನು ಇತರರೊಂದಿಗೆ ವ್ಯವಹರಿಸುವಾಗ ಕ್ರಿಸ್ತನ ಸ್ವಾರೂಪ್ಯವನ್ನು ಪ್ರತಿಬಿಂಬಿಸಲು ಶ್ರಮಿಸುತ್ತಿದ್ದರು. ಒಮ್ಮೆ ಅವರ ಕಾರನ್ನು ರಿಪೇರಿ ಮಾಡಬೇಕಿತ್ತು. ಸಾಮಾನ್ಯವಾಗಿ ಹೋಗುವ ಅಂಗಡಿಯ ಮೆಕ್ಯಾನಿಕ್ ಊರಿಂದ ಹೊರಗಿದ್ದ ಕಾರಣ ಹೊಸ ಅಂಗಡಿಗೆ ಹೋಗಿ, ಕಾರು ರಿಪೇರಿ ಮಾಡಿ ಕೊಡುವಂತೆ ಮೆಕ್ಯಾನಿಕ್ ಬಳಿ ಹೇಳಿದರು. ಅವರು ತಲೆ ಎತ್ತಿ ಸಹ ನೋಡದೆ ಅಲಕ್ಷ್ಯವಾಗಿ ಕೀ ತೆಗೆದುಕೊಂಡು, "ಸರಿ, ಸರಿ, ತಕ್ಷಣ ಆಗೋದಿಲ್ಲ, ನಾಳೆ ನೋಡೋಣ" ಎಂದು ಹೇಳಿದನು. ಮರುದಿನ ಹೋದಾಗ ಸರಿಯಾದ ಉತ್ತರ ಕೊಡದೆ ಮರುದಿನ ಬರಲು ಹೇಳಿದರು. ಆ ಸೇವಕರು ತನ್ನ ಸ್ನೇಹಿತನಿಗೆ ಮೆಕ್ಯಾನಿಕ್ ವರ್ತನೆಯ ಬಗ್ಗೆ ಹೇಳಿದರು. ಅದಕ್ಕೆ ಅವರ ಗೆಳೆಯ, “ಹೀಗೆ ಸುಮ್ಮನಿದ್ದರೆ ಅವನು ಹಾಗೆಯೇ ಮಾತಾಡುತ್ತಾನೆ, ಕಠಿಣವಾಗಿ ಮಾತಾಡಿದರೆ ಬೇಗ ಕೆಲಸ ಮುಗಿಸಿಕೊಡುತ್ತಾನೆ” ಎಂದು ಹೇಳಿದರು.

 

ಮರುದಿನ ಇಬ್ಬರೂ ಮೆಕ್ಯಾನಿಕ್ ನನ್ನು ಬೈಯಲು ನಿರ್ಧರಿಸಿ ಹೋದರು. ಆದರೆ ಅವನನ್ನು ನೋಡಿದ ಮೆಕ್ಯಾನಿಕ್ ಮುಗುಳ್ನಗುತ್ತಾ ಕೀಯನ್ನು ಕೊಟ್ಟು, "ಕಾರು ತೆಗೆದುಕೊಂಡು ಹೋಗಬಹುದು ಸಾರ್" ಎಂದನು. ಅಲ್ಲದೆ ಮೆಕ್ಯಾನಿಕ್, ನನ್ನ ಪತ್ನಿ ಕೆಲ ದಿನಗಳ ಹಿಂದೆಯೇ ಕ್ರೈಸ್ತಳಾಗಿ ಮಾರ್ಪಟ್ಟಳು. ಆಲಯಕ್ಕೆ ಬರುವಂತೆ ನನ್ನನ್ನೂ ಕರೆಯುತ್ತಿದ್ದಾಳೆ. ನಿಮ್ಮ ಕಾರಿನ ಮೇಲಿರುವ ವಾಕ್ಯವನ್ನು ನೋಡಿದಾಗ ನೀವು ಸಹ ಕ್ರೈಸ್ತರು ಎಂದು ನನಗೆ ಗೊತ್ತಾಯಿತು. ಹೌದು, ನನ್ನ ಹೆಂಡತಿ ಹೇಳಿದ ತಾಳ್ಮೆಯನ್ನು ನಿಜವಾಗಿ ನಾನು ನಿಮ್ಮಲ್ಲಿ ನೋಡಿದೆ, ನಾನು ಸಹ ಒಬ್ಬ ಕ್ರೈಸ್ತನಾಗಿ ಬದುಕಲು ಬಯಸುತ್ತೇನೆ ಎಂದರು. ಕಾರಿನಲ್ಲಿ ಕುಳಿತ ಆ ದೇವರ ಮನುಷ್ಯನು "ಕರ್ತನೇ, ನನ್ನನ್ನು ಕ್ಷಮಿಸಿ! ನಾನು ನನ್ನ ಕೋಪ ಮತ್ತು ಕಟುವಾದ ಮಾತುಗಳನ್ನು ಅವನಿಗೆ ವ್ಯಕ್ತಪಡಿಸಿದ್ದರೆ, ಅವನು ನಿಮ್ಮ ಬಳಿಗೆ ಬರಲು ಅಡ್ಡಿಯಾಗುತ್ತಿತ್ತಲ್ಲಾ ಯಾವುದೇ ಪರಿಸ್ಥಿತಿಯಲ್ಲೂ ನಿಮ್ಮನ್ನು ಪ್ರತಿಬಿಂಬಿಸಲು ನನಗೆ ಸಹಾಯ ಮಾಡಿ" ಎಂದು ಪ್ರಾರ್ಥಿಸಿ ಹೊರಟುಹೋದರು.

 

ಹೌದು, ಪ್ರಿಯರೇ! ನಮ್ಮಲ್ಲಿ ಪ್ರತಿಯೊಬ್ಬರೂ ಕ್ರಿಸ್ತನ ಸ್ವಾರೂಪ್ಯದಲ್ಲಿ ಮಾಡಲ್ಪಟ್ಟಿದ್ದೇವೆ. ಆದ್ದರಿಂದಲೇ ಕ್ರಿಸ್ತನ ಸ್ವಾರೂಪ್ಯವು ನಮ್ಮಲ್ಲಿ ಪ್ರಕಟವಾಗಬೇಕು. ನಾವು ಅದನ್ನು ಜಗತ್ತಿಗೆ ಸಾಬೀತುಪಡಿಸಬೇಕು. ನಮ್ಮನ್ನು ನೋಡುವವರು ನಮ್ಮಲ್ಲಿ ಯೇಸುವನ್ನು ಕಾಣಬೇಕು. ನಮ್ಮ ಜೀವನವು ಕ್ರಿಸ್ತನನ್ನು ಪ್ರತಿಬಿಂಬಿಸುವ ಸದ್ಗುಣಶೀಲ ಜೀವನವಾಗಿರಬೇಕು. ನಮ್ಮ ಕಾರ್ಯಗಳು ಯೇಸುವನ್ನು ಬಹಿರಂಗಪಡಿಸಲು ಮತ್ತು ಇತರರನ್ನು ದೇವರ ಕಡೆಗೆ ಕರೆದೊಯ್ಯಲು ಸಾಧ್ಯವಾಗುತ್ತದೆ. ಇಂದೇ ಯೋಚಿಸೋಣ! ಯೇಸುವನ್ನು ಪ್ರತಿಬಿಂಬಿಸೋಣ.

- Mrs. ಶಕ್ತಿ ಶಂಕರ್ ರಾಜ್

 

ಪ್ರಾರ್ಥನಾ ಅಂಶ:

ಪ್ರತಿ ಸೋಮವಾರ ನಡೆಯುವ ಪೂರ್ಣರಾತ್ರಿ ಪ್ರಾರ್ಥನೆಯಲ್ಲಿ ದೇವರು ತನ್ನ ಶಕ್ತಿಯನ್ನು ಪ್ರಕಟಪಡಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking perabet casibom holiganbet galabet casibom grandpashabet perabet perabet giriş padişahbet padişahbet giriş grandpashabet kalitebet kalitebet giris betsmove betsmove giris gonebet gonebet giris betnano betnano giriş jojobet jojobet betplay jojobet esbet sonbahis tambet grandpashabet betgit mercurecasino matbet