By Village Missionary Movement
Friday, 26-May-2023ಧೈನಂದಿನ ಧ್ಯಾನ(Kannada) – 27.05.2023
ಯಾರು ಪವಿತ್ರಾತ್ಮಭರಿತರು?
"...ಪವಿತ್ರಾತ್ಮನನ್ನು ಅನುಸರಿಸಿ ನಡೆದುಕೊಳ್ಳಿರಿ; ಆಗ ನೀವು ಶರೀರಭಾವದ ಅಭಿಲಾಷೆಗಳನ್ನು ಎಷ್ಟು ಮಾತ್ರಕ್ಕೂ ನೆರವೇರಿಸುವದಿಲ್ಲ" - ಗಲಾತ್ಯ 5:16
ಆಧ್ಯಾತ್ಮಿಕ ಕ್ರೈಸ್ತನು ಯಾರು ಎಂಬ ಪ್ರಶ್ನೆಗೆ ಪ್ರತಿ ಕ್ರೈಸ್ತ ಸಮುದಾಯದಲ್ಲಿ ವಿಭಿನ್ನ ಅಭಿಪ್ರಾಯಗಳಿವೆ. ಕೆಲವು ಸಭೆಗಳಲ್ಲಿ, ಉತ್ಸಾಹದಿಂದ ಹಾಡುವ ಮತ್ತು ಹಲ್ಲೇಲೂಯ ಕೂಗುವವರನ್ನು ಪವಿತ್ರಾತ್ಮಭರಿತರು ಎಂದು ನೆನೆಸುತ್ತಾರೆ. ಕೆಲವೊಮ್ಮೆ ದೀರ್ಘ ಪ್ರಾರ್ಥನೆ ಮಾಡುವವರನ್ನು ಪವಿತ್ರಾತ್ಮಭರಿತರು ಎಂದು ನೆನೆಸುತ್ತಾರೆ.
ಮೇಲಿನ ವಿಷಯಗಳು ಆಧ್ಯಾತ್ಮಿಕ ಮನುಷ್ಯನ ಚಿಹ್ನೆಗಳಾಗಿದ್ದರೂ, ಇವುಗಳು ಬಹಿರಂಗವಾದ ಕಾರ್ಯಗಳಾಗಿರುವುದರಿಂದ ಒಬ್ಬ ಮನುಷ್ಯನನ್ನು ಪವಿತ್ರಾತ್ಮಭರಿತನು ಎಂದು ಹೇಳಲಾಗುವುದಿಲ್ಲ. ನಿಜವಾದ ಆಧ್ಯಾತ್ಮಿಕ ವ್ಯಕ್ತಿಯು ಕೆಲವು ಆಳವಾದ ಆಸೆಗಳನ್ನು ಹೊಂದಿರುತ್ತಾನೆ. ಅವು ಅವನ ಸಂಪೂರ್ಣ ಜೀವನವನ್ನು ಆಕ್ರಮಿಸಿಕೊಳ್ಳುತ್ತದೆ. ಅವುಗಳನ್ನು ಕೆಳಗೆ ನೋಡೋಣ.
1. ಆಧ್ಯಾತ್ಮಿಕ ಮನುಷ್ಯನು ಸಂತೋಷಕ್ಕಿಂತ ಪರಿಶುದ್ಧವಾಗಿರಲು ಬಯಸುತ್ತಾನೆ. ಆದರೆ ಇಂದಿನ ಕ್ರೈಸ್ತ ಸಮುದಾಯವು ಪರಿಶುದ್ಧತೆಯ ಬದಲು ಪರವಶವನ್ನೇ ಬಯಸುತ್ತಿದೆ.
2. ಆಧ್ಯಾತ್ಮಿಕ ಮನುಷ್ಯ ಶಿಲುಬೆಗೇರಿಸುವಿಕೆಯನ್ನು ಪ್ರೀತಿಸುತ್ತಾನೆ. ಅನೇಕ ಕ್ರೈಸ್ತರು ತಮ್ಮ ದೈನಂದಿನ ಜೀವನದಲ್ಲಿ ಬರುವ ನೋವು ಮತ್ತು ಸಂಕಟವನ್ನು ಶಿಲುಬೆ ಎಂದು ಭಾವಿಸುತ್ತಾರೆ. ಈ ವಿಷಯಗಳು ಕ್ರೈಸ್ತರಲ್ಲದವರಿಗೆ ಸಂಭವಿಸುತ್ತವೆ, ಹಾಗಾದರೆ ಶಿಲುಬೆ ಎಂದರೇನು? ಯೇಸುಕ್ರಿಸ್ತನ ಆಜ್ಞೆಗಳಿಗೆ ವಿಧೇಯರಾಗುವುದರಿಂದ ಬರುವ ಹೆಚ್ಚುವರಿ ಸಮಸ್ಯೆಗಳನ್ನು ಶಿಲುಬೆ ಎಂದು ದೇವರು ಉಲ್ಲೇಖಿಸಿದ್ದಾರೆ. ದೇವರು ಈ ಶಿಲುಬೆಯನ್ನು ನಮ್ಮ ಮೇಲೆ ಹೇರುವುದಿಲ್ಲ, ಬದಲಿಗೆ ಆಧ್ಯಾತ್ಮಿಕ ವ್ಯಕ್ತಿಯು ಅದರ ಪರಿಣಾಮಗಳನ್ನು ತಿಳಿದುಕೊಂಡು ತಾನೇ ಅದನ್ನು ಸ್ವಯಂ ಎತ್ತಿಕೊಂಡು ಹೋಗುತ್ತಾನೆ.
3. ಆಧ್ಯಾತ್ಮಿಕ ಮನುಷ್ಯನು ಇತರರ ಹೊಗಳಿಕೆಯನ್ನು ಬಯಸಿ ಒಳ್ಳೆಯದನ್ನು ಮಾಡದೆ ಏನು ಮಾಡಿದರೂ, ಅದನ್ನು ಕರ್ತನಿಗಾಗಿ ಎಂದು ಮನಃಪೂರ್ವಕವಾಗಿ ಮಾಡುತ್ತಾನೆ.
4. ಆಧ್ಯಾತ್ಮಿಕ ಕ್ರೈಸ್ತನು ಮತ್ತೊಬ್ಬರು ಉನ್ನತಿಗೆ ಬರುವಾಗ ಸಂತೋಷಪಡುತ್ತಾನೆ. ಅವನು ಅಸೂಯೆಪಡುವುದಿಲ್ಲ. ತಾನು ಸನ್ಮಾನಿಸಲ್ಪಡದೇ ಬೇರೆಯವರು ಸನ್ಮಾನಿಸಲ್ಪಟ್ಟಾಗ ಹತಾಶನಾಗುವುದಿಲ್ಲ.
5. ಒಬ್ಬ ಆಧ್ಯಾತ್ಮಿಕ ವ್ಯಕ್ತಿಯು ಜಗತ್ತು ಮೆಚ್ಚುವ ಗುರಿಯೊಂದಿಗೆ ಬದುಕುವುದಕ್ಕಿಂತ ದೇವರಿಗೆ ಉಪಯುಕ್ತವಾದ ಜೀವನವನ್ನು ನಡೆಸಲು ಶ್ರಮಿಸುತ್ತಾನೆ.
ಮೇಲಿನದು ಒಬ್ಬ ಆಧ್ಯಾತ್ಮಿಕ ಕ್ರೈಸ್ತನು ತನ್ನ ಸ್ವಂತ ಶಕ್ತಿಯಿಂದ ಮಾಡಲು ಪ್ರಯತ್ನಿಸುವ ವಿಷಯವಲ್ಲ, ಆದರೆ ಅವನೊಳಗೆ ಪವಿತ್ರಾತ್ಮನು ನಡೆಸುವ ಕ್ರಿಯೆಯಾಗಿದೆ.
- A. W ಡೋಜರ್
ಪ್ರಾರ್ಥನಾ ಅಂಶ:
ನಮ್ಮ ಕ್ಯಾಂಪಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬರುವ ವ್ಯಕ್ತಿಗಳು ದೇವರ ಪ್ರೀತಿಯನ್ನು ರುಚಿ ನೋಡುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482