Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 30.05.2023
Share:

By Village Missionary Movement

Monday, 29-May-2023

ಧೈನಂದಿನ ಧ್ಯಾನ(Kannada) – 30.05.2023

 

ಹೊಗಳಿಕೆ

 

"ನಾವು ವ್ಯರ್ಥವಾದ ಹೊಗಳಿಕೆಯನ್ನು ಅಪೇಕ್ಷಿಸದೆಯೂ ಒಬ್ಬರನ್ನೊಬ್ಬರು ಕೆಣಕದೆಯೂ ಒಬ್ಬರ ಮೇಲೊಬ್ಬರು ಹೊಟ್ಟೇಕಿಚ್ಚು ಪಡದೆಯೂ ಇರೋಣ" - ಗಲಾತ್ಯ. 5:26

 

ಕೆಲವು ವರ್ಷಗಳ ಹಿಂದೆ, ಮಿಷನರಿ ಜೀವನಚರಿತ್ರೆ ಅಡಗಿರುವ ಮಾಸ ಪತ್ರಿಕೆಯಲ್ಲಿ ಈ ರೀತಿ ಒಂದು ವಾರ್ತೆಯನ್ನು ಪ್ರಕಟಿಸಲಾಗಿತ್ತು. ಲಂಡನ್ ಮಿಷನರಿ ಸೊಸೈಟಿಯು ದಕ್ಷಿಣ ಆಫ್ರಿಕಾದಲ್ಲಿರುವ ತನ್ನ ಸೇವಾ ಕ್ಷೇತ್ರದ ವರ್ಗಾವಣೆಯ ನಿಮಿತ್ತವಾಗಿ ಒಂದು ಹೊಸ ಮಿಷನರಿಯನ್ನು ನೇಮಿಸಿತು. ಆ ಮಿಷನರಿ ಕುಟುಂಬವು ಹಡಗಿನ ಮೂಲಕ ದಕ್ಷಿಣ ಆಫ್ರಿಕಕ್ಕೆ ಆಗಮಿಸಿದಾಗ, ಸೇವಾ ಕ್ಷೇತ್ರದ ವಿಶ್ವಾಸಿಗಳು ಸಮುದ್ರತೀರದಲ್ಲಿ ಅವರನ್ನು ಪ್ರೀತಿಯಿಂದ ಸ್ವಾಗತಿಸಿದರು. ಡೊಳ್ಳು ಬಾರಿಸುತ್ತಾ, ಹೂ ಎಸೆದು ಕುಣಿದು ಕುಪ್ಪಳಿಸಿದರು. ಇದನ್ನು ಕಂಡ ಮಾಜಿ ಮಿಷನರಿಯು ತುಂಬಾ ನೊಂದುಕೊಂಡರು. ಅವರ ಹೃದಯವು ಅಳಲು ಪ್ರಾರಂಭಿಸಿತು. ಈ ಸೇವಾ ಕ್ಷೇತ್ರವನ್ನು ಪ್ರಾರಂಭಿಸಿದವನೇ ನಾನು, ಕಾಡು, ಪರ್ವತಕ್ಕೆ ಅಲೆದಾಡಿ ಈ ಜನರನ್ನು ರಕ್ಷಣೆಯೊಳಗೆ ನಡೆಸಿದ್ದೇನೆ. ಇಷ್ಟೆಲ್ಲಾ ಮಾಡಿದ ನನಗೆ ಸನ್ಮಾನವೆಲ್ಲಿ? ಎಂದು ಅಂಗಲಾಚಿದರು. ಈ ಆಲೋಚನೆಗಳು ಇವರನ್ನು ಸೇವೆಯಿಂದ ಹಿಂಜರಿಯುವಂತೆ ಮಾಡಿತು.

 

ಪ್ರಿಯರೇ! ಮನುಷ್ಯರು ಸನ್ಮಾನಿಸಬೇಕು. ಸಮಾಜದಲ್ಲಿ ನನಗೊಂದು ಸ್ಥಾನಮಾನ ಬೇಕು ಎಂಬ ಆಲೋಚನೆ ನಮ್ಮಲ್ಲಿ ಕಂಡುಬಂದರೆ, ಸತ್ಯವೇದವು ನಮಗೆ ಪ್ರೀತಿಯಿಂದ ಒಂದು ಸಲಹೆ ನೀಡುತ್ತಿದೆ. “ಮನುಷ್ಯರು ಸ್ವಂತ ಗೌರವವನ್ನು ಹುಡುಕುವದು ಗೌರವವಲ್ಲ" (ಜ್ಞಾನೋಕ್ತಿ. 25:27) "ಯಾರೂ ನನ್ನನ್ನು ನೋಡಿ ಹೊಗಳುತ್ತಿಲ್ಲವೆ ನಾನು ಈ ಕಾರ್ಯಕ್ಕಾಗಿ ಎಷ್ಟು ಪಾಡು ಪಟ್ಟೆ ಇವರಿಗೆ ಕೃತಜ್ಞತೆಯೇ ಇಲ್ಲ" ಎಂದು ಅಂಗಲಾಚುವ ಹೃದಯ ದೇವರು ಮುಂದೆ ಸರಿಯಲ್ಲ. ನಾನು ಮಾಡಿದ ಸತ್ಕಾರ್ಯಗಳಿಗೆ ಎಲ್ಲರೂ ನನ್ನನ್ನು ಹೊಗಳಬೇಕು ಅಂದುಕೊಂಡು ನಿರೀಕ್ಷಿಸಿದಾಗ, ನೀವು ಮಾಡಿದ ಸತ್ಕಾರ್ಯಗಳ ಪ್ರತಿಫಲವನ್ನು ಜನರಿಂದಲೇ ಪಡೆದುಬಿಟ್ಟಿದ್ದೀರ. ಆ ಕಾರ್ಯದ ನಿಮಿತ್ತ ದೇವರು ನಿಮ್ಮನ್ನು ಆಶೀರ್ವದಿಸಲು ಸ್ಥಳವನ್ನು ಕೊಡಲಿಲ್ಲ. ಹಾಗೆಯೇ ಮತ್ತೊಬ್ಬರು ಹೊಗಳಲ್ಪಡುವಾಗ ನಿಮ್ಮ ಹೃದಯ ಉರಿಯಬಾರದು. ಅಸೂಯೆಯ ಫಲವಾದ ಈ ಕ್ರಿಯೆಯೂ ಪಾಪವೇ. ಹಾಗಾಗಿ ಕೀರ್ತಿಯನ್ನು ನಿರೀಕ್ಷಿಸಿ ಏನನ್ನೂ ಮಾಡಬೇಡಿ. ನಿಮ್ಮ ಮನಸ್ಸು ಖ್ಯಾತಿಯ ಕಡೆಗೆ ಒಲವು ತೋರದಿದ್ದಾಗ, ದೇವರು ಖಂಡಿತವಾಗಿಯೂ ಅದರ ಪ್ರತಿಫಲವನ್ನು ಇಹದಲ್ಲಿಯೂ ಮತ್ತು ಪರದಲ್ಲಿಯೂ ನಿಮಗೆ ನೀಡುತ್ತಾರೆ.

- Bro. ಜೇಕಬ್ ಶಂಕರ್

 

ಪ್ರಾರ್ಥನಾ ಅಂಶ:

ಉತ್ತರದ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ಒಡಿಶಾ ಮತ್ತು ಛತ್ತೀಸ್‌ಗಢದಲ್ಲಿನ ಸೇವೆಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al Elexbet matbet giriş matbet instagram unban x unban twitter unban holiganbet setrabet marsbahis giriş vaycasino giriş