By Village Missionary Movement
Wednesday, 31-May-2023ಧೈನಂದಿನ ಧ್ಯಾನ(Kannada) – 31.05.2023
ಹಿರಿಯರು
"ತಲೆನರೆತ ವೃದ್ಧರ ಮುಂದೆ ಎದ್ದು ನಿಂತು ಅವರನ್ನು ಸನ್ಮಾನಿಸಬೇಕು. ನಿಮ್ಮ ದೇವರಲ್ಲಿ ಭಯಭಕ್ತಿಯುಳ್ಳವರಾಗಿರಬೇಕು” – ಯಾಜಕ 19:32
ಸೇಂಟ್ ಜೋಸೆಫ್ ಆಸ್ಪತ್ರೆಗೆ ಇದ್ದಕ್ಕಿದ್ದಂತೆ ಫೋನ್ ಕರೆ ಬಂತು. ದೂರವಾಣಿ ಆಪರೇಟರ್ ಮತ್ತು ಕರೆ ಮಾಡಿದವರ ನಡುವಿನ ಸಂಭಾಷಣೆ:-
ಆಪರೇಟರ್ : ಹಲೋ, ಯಾರು ಮಾತನಾಡುತ್ತಿದ್ದೀರ?
ಕರೆ ಮಾಡಿದವರು : ಶ್ರೀಮತಿ. ನಾರ್ಮಾ ಬಿನ್ಲೆ ಎಂಬ ಒಳರೋಗಿಯ ಆರೋಗ್ಯದ ಬಗ್ಗೆ ತಿಳಿಯಬೇಕು. ಅವರಿಗೆ ಸಹಾಯ ಮಾಡವ ಒಬ್ಬರನ್ನು ಕರೆಯಿರಿ.
ಆಪರೇಟರ್ : ಒಳ್ಳೇದು ಅಮ್ಮ. ನಾನು ನಿಮಗೆ ಸಹಾಯ ಮಾಡುತ್ತೇನೆ. ರೋಗಿಯ ಹೆಸರು ಹಾಗೂ ಕೊಠಡಿ ಸಂಖ್ಯೆಯನ್ನು ಹೇಳಿ.
ಕರೆ ಮಾಡಿದವರು : (ನಡುಗುವ ಧ್ವನಿಯಲ್ಲಿ) ನಾರ್ಮಾ ಬಿನ್ಲೆ, ಕೊಠಡಿ ಸಂಖ್ಯೆ 302.
ಆಪರೇಟರ್ : ನರ್ಸ್ ಬಳಿಗೆ ಹೋಗಿ ಸುದ್ದಿ ತಿಳಿದು ಬರುತ್ತೇನೆ, ಕಾಯುತ್ತಿರಿ. (ಕೆಲವೇ ನಿಮಿಷಗಳಲ್ಲಿ ಬಂದು) ಅಮ್ಮಾ ನಿಮಗೊಂದು ಒಳ್ಳೆಯ ಸುದ್ದಿ. ಯಾವುದೇ ಸಮಸ್ಯೆ ಇಲ್ಲ, ರಕ್ತ ಪರೀಕ್ಷೆಯಲ್ಲಿ ರಕ್ತದೊತ್ತಡ ನಾರ್ಮಲ್ಲಾಗಿದೆ ಎಂದು ತಿಳಿಸಿದರು. ನಾಳೆ ಮನೆಗೆ ಕಳುಹಿಸಬಹುದು ಎಂದು ವೈದ್ಯರು ಹೇಳಿದ್ದಾರೆ ಎಂದರು.
ಕರೆ ಮಾಡಿದವರು : ತುಂಬಾ ಧನ್ಯವಾದಗಳು, ನಾನು ತುಂಬಾ ಚಿಂತಿತನಾಗಿದ್ದೆ, ಒಳ್ಳೆಯ ಸುದ್ದಿಯನ್ನು ಹೇಳಿದ ನಿಮ್ಮನ್ನು ದೇವರು ಆಶೀರ್ವದಿಸಲಿ.
ಆಪರೇಟರ್ : ಹೌದು, ನಾರ್ಮಾ ನಿಮ್ಮ ತಾಯಿನಾ?
ಕರೆ ಮಾಡಿದವರು : ಇಲ್ಲ, ನಾನೇ 302 ರಲ್ಲಿರುವ ನಾರ್ಮಾ ಬಿನ್ಲೇ. ವಯಸ್ಸಾದ ನನಗೆ ಯಾರೂ ಮಾಹಿತಿ ನೀಡದ ಕಾರಣ ನಾನೇ ಕರೆ ಮಾಡಿ ಕೇಳಿದೆ ಎಂದು ಹೇಳಿದರು.
ಸಮಾಜದಲ್ಲಿ ಮತ್ತು ಕುಟುಂಬಗಳಲ್ಲಿ ಹಿರಿಯರನ್ನು ನಿರ್ಲಕ್ಷ್ಯ ಮಾಡುವುದನ್ನು ನಾವು ನೋಡುತ್ತೇವೆ. ಅವರ ಮಾತುಗಳಿಗೆ ಕಿವಿಗೊಡದಿರುವುದನ್ನು, ಅವರ ಭಾವನೆಗಳಿಗೆ ಮರ್ಯಾದೆ ನೀಡದಿರುವುದನ್ನು ಕಾಣಬಹುದು. ಆದರೆ ಸತ್ಯವೇದವು ಹಿರಿಯರನ್ನು ಗೌರವಿಸಬೇಕೆಂದು ನಮಗೆ ಆಜ್ಞಾಪಿಸುತ್ತದೆ. ಸತ್ಯವೇದದಲ್ಲಿ ಇದಕ್ಕೆ ಅನೇಕ ಉದಾಹರಣೆಗಳಿವೆ. ತನ್ನ ವಯಸ್ಸಾದ ತಂದೆ ಯಾಕೋಬನನ್ನು ಗೌರವಿಸಿದ ಯೋಸೇಫನು, ತನ್ನ ಅತ್ತೆಯ ಮಾತನ್ನು ಕೇಳಿ ನಡೆದ ರೂತಳು, ಮತ್ತು ಬರ್ಜಿಲ್ಲೈ ಎಂಬ ವಯಸ್ಸಾದವರನ್ನು ಆದರಿಸಲು ಬಯಸಿದ ದಾವೀದನು. ಹೌದು, ಹಿರಿಯರನ್ನು ಗೌರವಿಸಿದ ಇವರನ್ನು ದೇವರು ಗೌರವಿಸಿದ್ದನ್ನು ನಾವು ಸತ್ಯವೇದದಲ್ಲಿ ನೋಡಬಹುದು. ನಾವು ಸಹ ನಮ್ಮ ಮನೆಯಲ್ಲಿರುವ ನಮ್ಮ ತಂದೆ-ತಾಯಿಯನ್ನು ಗೌರವಿಸೋಣ. ಅವರೊಂದಿಗೆ ಮಾತನಾಡಲು ಸಮಯ ನೀಡೋಣ. ಅವರಿಗೆ ಬೇಕಾದ ಸಹಾಯವನ್ನು ಮಾಡಿ ದೇವರ ಪ್ರಮಾಣವನ್ನು ಪೂರೈಸೋಣ.
- Mrs. ಜಾಸ್ಮಿನ್ ಪಾಲ್
ಪ್ರಾರ್ಥನಾ ಅಂಶ:
ನಮ್ಮಲ್ಲಿರುವ ಮಿಷಿನರಿಗಳಿಗೆ ಸಹಾಯ ಮಾಡುವ ಕುಟುಂಬಗಳನ್ನು ದೇವರು ಆಶೀರ್ವದಿಸುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482