By Village Missionary Movement
Saturday, 17-Jun-2023ಧೈನಂದಿನ ಧ್ಯಾನ(Kannada) – 18.06.2023 (Kids Special)
ತಮ್ಮನಿಗಾಗಿ ಜೀವ ಬಿಟ್ಟ ಅಣ್ಣ
"…ನಮ್ಮ ಪಾಪಗಳ ದೆಸೆಯಿಂದ ತನ್ನನ್ನು ಮರಣಕ್ಕೆ ಒಪ್ಪಿಸಿದನು" – ಗಲಾತ್ಯ 1:4
ರಾಮು, ಸೋಮು ಎಂಬಿಬ್ಬರು ಮಕ್ಕಳನ್ನೂ ತುಂಬಾ ಮುದ್ದಾಗಿ ಬೆಳೆಸುತ್ತಿದ್ದರು ಅವರ ತಂದೆ ದೊರೈ. ಚಿಕ್ಕವಯಸ್ಸಿನಲ್ಲಿ ತಂದೆ ತಾಯಿಯರ ಕೈಹಿಡಿದು ಬೆಳೆದು ಬಂದ ಮಕ್ಕಳು ಯೌವನಸ್ಥರಾಗಿ ಮಾರ್ಪಟ್ಟ ನಂತರ ತಮ್ಮ ಇಷ್ಟದಂತೆ ಬದುಕತೊಡಗಿದರು. ಹಿರಿಯಮಗನು ರಾಮು ತನ್ನ ತಂದೆಗೆ ವಿಧೇನಾಗುತ್ತಿದ್ದನು. ಕಿರಿಯವನೋ ಕೆಟ್ಟ ಗೆಳೆಯರ ಜೊತೆಯಲ್ಲಿ ಸಂಪರ್ಕವಿಟ್ಟುಕೊಂಡು ಅವರ ಜೊತೆ ಅಲೆದಾಡುತ್ತಿದ್ದ. ಇದು ಅವರ ತಂದೆಯವರಿಗೆ ತುಂಬಾ ವೇದನೆಯಾಗಿತ್ತು. ಒಂದು ದಿನ ಎಂದಿನಂತೆ ಕಾಲೇಜ್ ಗೆ ಹೋದ ಸೋಮು ತನ್ನೊಂದಿಗೆ ಓದುವ ಸಹ ವಿದ್ಯಾರ್ಥಿಯೊಂದಿಗೆ ಜಗಳ ಕಾದಾಟವನ್ನು ಇಟ್ಟುಕೊಂಡು ಅವನ ಬುರಡೆಯನ್ನು ಒಡೆದು ಹಾಕಿದನು. ಈ ಸುದ್ದಿ ಅವನ ಅಪ್ಪಾ ದೊರೈಯ ಕಿವಿಗಳಿಗೆ ಬಿದ್ದ ಕೂಡಲೇ ಅವರಿಗೆ ಸೋಮು ಮೇಲೆ ಇನ್ನೂ ಹೆಚ್ಚು ಕೋಪ ಮತ್ತು ಅಸಹ್ಯ ಉಂಟಾಯಿತು. ಕಾಲೇಜ್ ಮುಗಿಸಿ ಮನೆಗೆ ಬಂದ ಸೋಮುವನ್ನು ಬೈದು ಬಿಟ್ಟು, "ನೀನು ನನ್ನ ಮಗನೇ ಅಲ್ಲ, ಮನೆ ಬಿಟ್ಟು ಹೋಗು" ಎಂದು ಹೇಳಿದರು. ಇವನು ಸಂತೋಷವಾಗಿ ನಾನು ಹೋಗುತ್ತೇನೆ ಎಂದು ಹೊರಟು ತನ್ನ ಗೆಳೆಯರೊಂದಿಗೆ ಸೇರಿ ದಾರಿ ತಪ್ಪಿಹೋಗಿ ಕೊಳ್ಳೆಹೊಡೆಯುವವನಾಗಿ ಮಾರ್ಪಟ್ಟನು. ದಿನಗಳು ಕಳೆದವು. ತಂದೆ ಸೋಮುವಿನ ಬಗ್ಗೆ ಹೆಚ್ಚಾಗಿ ನೆನಪಿಸಿಕೊಂಡು ತುಂಬಾ ಚಿಂತೆಗೀಡಾದರು. ತಂದೆ ಚಿಂತೆಯೊಂದಿಗೆ ಇರುವುದನ್ನು ಕಂಡ ಹಿರಿಯ ಮಗ ರಾಮು ತಂದೆಯ ಬಳಿಗೆ ಹೋಗಿ ಅಪ್ಪಾ, ತಮ್ಮ ಹಿಂತಿರುಗಿ ಮನೆಗೆ ಬಂದರೆ ಅವನನ್ನು ಸ್ವೀಕರಿಸುತ್ತೀರಾ? ಎಂದನು. ತಂದೆ ಖಂಡಿತವಾಗಿ ಸ್ವೀಕರಿಸುತ್ತೇನೆ. ಅದಕ್ಕಾಗಿಯೇ ಕಾಯುತ್ತಿದ್ದೇನೆ ಎಂದರು. ನಂತರ ಅವರು ತನ್ನ ಕೆಲಸಗಾರರ ಬಳಿ ಹೋಗಿ ನೀವು ನನಗಿಂತ ಸೋಮುವಿನ ಬಳಿ ಹೆಚ್ಚು ಪ್ರೀತಿಯಿಂದ ಇದ್ದಿರಲ್ಲಾ, ಈಗ ನಾನು ಅವನನ್ನು ಕ್ಷಮಿಸಿ ಅಂಗೀಕರಿಸಲು ಮನಸ್ಸುಳ್ಳವನಾಗಿದ್ದೇನೆ ಎಂದು ಅವನ ಬಳಿ ಹೇಳಿ ಬರುತ್ತೀರಾ? ಎಂದರು. ತಕ್ಷಣ ಕೆಲಸಗಾರರು ಸೋಮು ಇರುವುದು ಕಳ್ಳರ ಬಳಿ, ಅವನನ್ನು ನೋಡಲು ರಾತ್ರಿ ಹೊತ್ತಿನಲ್ಲೇ ಹೋಗಬೇಕು.
ಹಾಗೆ ಅಲ್ಲಿಗೆ ಹೋದರೂ ಜೀವಂತವಾಗಿ ಹಿಂತಿರುಗಿ ಬರುವುದು ಕಷ್ಟ ಎಂದು ಹೇಳಿ ನಿರಾಕರಿಸಿದರು. ತಕ್ಷಣ ರಾಮು ನಾನು ಹೋಗುತ್ತೇನೆ ಅಪ್ಪಾ ಎಂದು ಹೇಳಿ ರಾತ್ರಿ ಹೊರಟನು. ಆಗ ಸೋಮು ಇವನನ್ನೂ ಹೊಡೆದು ಇವನ ಕೈಯಲ್ಲಿದ್ದ ಚೀಲವನ್ನು ಕಿತ್ತುಕೊಂಡನು. ಆಗ ರಾಮು ತನ್ನ ತಮ್ಮನ ಬಳಿ, "ಅಪ್ಪಾ ನಿನ್ನನ್ನು ಸ್ವೀಕರಿಸಲು ಆಸೆಯಿಂದಿದ್ದಾರೆ. ನೀನು ಮನಸ್ಸು ಬದಲಾಯಿಸಿಕೊಂಡು ಹಿಂತಿರುಗಿ ಮನೆಗೆ ಹೋಗು" ಎಂದು ಹೇಳಿಬಿಟ್ಟು ಸತ್ತು ಹೋದನು. ತಕ್ಷಣ ಸೋಮು ಹೀಗೆ ಅನ್ಯಾಯವಾಗಿ ಅಣ್ಣನನ್ನು ಹೊಡೆದು ಕೊಂದುಬಿಟ್ಟೆನಲ್ಲಾ ಎಂದು ನೆನೆಸಿ ಮನಮುರಿದು ತನ್ನ ತಪ್ಪನ್ನು ಅರಿತುಕೊಂಡು ಮನಸ್ಸು ಬದಲಾಯಿಸಿಕೊಂಡು ತನ್ನ ಮನೆಗೆ ಹೋದನು. ತಂದೆಯು ಸಹ ಸಂತೋಷದಿಂದ ತನ್ನ ಮಗನನ್ನು ಸ್ವೀಕರಿಸಿದರು.
ಪ್ರೀತಿಯ ತಮ್ಮ ತಂಗಿ, ಅದರಂತೆಯೇ ಯೇಸಪ್ಪ ಕೂಡ ನಮ್ಮ ಪಾಪಗಳಿಗಾಗಿ ಈ ಭೂಮಿಗೆ ಬಂದು ತನ್ನ ಜೀವವನ್ನು ಕೊಟ್ಟು ನಮ್ಮನ್ನು ವಿಮೋಚಿಸಿದರು.
- Mrs. ಸಾರಾಳ್ ಸುಭಾಷ್
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482