By Village Missionary Movement
Sunday, 25-Jun-2023ಧೈನಂದಿನ ಧ್ಯಾನ(Kannada) – 25.06.2023 (Kids Special)
ನಂಬಿಗಸ್ತಿಕೆಗೆ ದೊರೆತ ಉಡುಗೊರೆ
"…ಸ್ವಲ್ಪ ಕೆಲಸದಲ್ಲಿ ನಂಬಿಗಸ್ತನಾಗಿದ್ದಿ, ದೊಡ್ಡ ಕೆಲಸದಲ್ಲಿ ನಿನ್ನನ್ನು ಇಡುತ್ತೇನೆ;…" - ಮತ್ತಾಯ 25:21
ಪ್ರೀತಿಯ ಮುದ್ದು ಪುಟಾಣಿಗಳೇ! ಪುಟ್ಟ ಕಣ್ಮಣಿಗಳೇ! ಹೇಗಿದ್ದೀರ? ರಜೆಯ ದಿನಗಳಲ್ಲಿ VBS ಗೆ ಹೋಗಿ ಹಾಡುಗಳು, ಕಥೆಗಳು, ಆಟಗಳು ಮತ್ತು ಇನ್ನೂ ಅನೇಕ ಒಳ್ಳೆಯ ವಿಷಯಗಳನ್ನು ಕಲಿತುಕೊಂಡಿರುತ್ತೀರ. ಹಾಗೆ ಅಲ್ವಾ ಪುಟಾಣಿಗಳೇ! ಮುಂದಿನ ಹೊಸ ತರಗತಿಗೆ ಹೋಗಿ ಚೆನ್ನಾಗಿ ಓದಿ ಸಾಧಿಸಬೇಕು ಎಂದು ನಾನು ಶುಭ ಹಾರೈಸುತ್ತೇನೆ.
ಒಂದು ದೇಶವನ್ನು ಆಳುವ ಒಬ್ಬ ರಾಜನಿದ್ದನು. ರಾಜ ಎಂದರೇನೆ ಅರಮನೆ ಅವನ ಸುತ್ತಲಿನ ಸೈನಿಕರು ಹೀಗೆ ಯಾವಾಗಲೂ ಬಿಜಿಯಾಗಿಯೇ ಇರುತ್ತಾರೆ. ಅಲ್ವಾ. ಅರಮನೆಯಿಂದ ಆಸ್ಥಾನಕ್ಕೆ ಹೋಗಲು ರಾಜ ಆನೆಗಳ ಮೇಲೆ ಪ್ರಯಾಣಿಸುವಾಗ ಅಂಗರಕ್ಷಕರು ಬೆಂಗಾವಲಾಗಿದ್ದು ಅವರನ್ನು ಭದ್ರವಾಗಿ ಕರೆದೊಯ್ಯುತ್ತಿದ್ದರು. ಆ ಕಾಲದಲ್ಲಿ ಕಾರುಗಳು ಮತ್ತು ವಿಮಾನಗಳು ಇರಲಿಲ್ಲ ಅಲ್ವಾ ಮತ್ತು ಈಗಿನಂತೆ "ಜಮ್" ಎಂದು ಹೋಗುವ A. C ಕಾರ್ ಗಳು ಸಹ ಆ ದಿನಗಳಲ್ಲಿ ಇರಲಿಲ್ಲ ಕುಲುಕಿ ಕುಲುಕಿ ಚಲಿಸುವ ಆನೆತಾನೆ ಇತ್ತು! ಇದ್ದಕ್ಕಿದ್ದಂತೆ ಆನೆ ಒಂದು ಕುಲುಕು ಕುಲುಕಿತು ನೋಡಿ, ರಾಜನ ಮುಂದೆ ಇಟ್ಟಿದ್ದ ಪೆಟ್ಟಿಗೆ ಕೆಳಗೆ ಬಿದ್ದು ಹೋಯ್ತು. ಅದರಲ್ಲಿ ಚಿನ್ನದ ನಾಣ್ಯಗಳು, ಬೆಳ್ಳಿಯ ನಾಣ್ಯಗಳು ಮತ್ತು ವಜ್ರಗಳು ಹೊರಹೊಮ್ಮಿದವು. ಎಲ್ಲರೂ ಓಡಿಹೋಗಿ ನನಗೆ ಚಿನ್ನ, ನನಗೆ ವಜ್ರ, ನನಗೆ ಬೆಳ್ಳಿ ಎಂದು ತೆಗೆದುಕೊಂಡರು. ರಾಜನಿಗೆ ತುಂಬಾ ಆಸ್ತಿ ಇದೆ ಅಲ್ವಾ? ಹಾಗಾಗಿ ಬಿದ್ದ ನಾಣ್ಯಗಳನ್ನೆಲ್ಲ ನೀವೇ ಇಟ್ಟುಕೊಳ್ಳಬಹುದು ಎಂದು ಹೇಳಿದ ಕೂಡಲೇ ಎಲ್ಲರಿಗೂ ತುಂಬಾ ಖುಷಿಯಾಯಿತು. ಒಬ್ಬ ಅಂಗರಕ್ಷಕ ಮಾತ್ರ ಈಟಿಯನ್ನು ಹಿಡಿದು ರಾಜನನ್ನೇ ನೋಡುತ್ತಿದ್ದನು. ರಾಜನಿಗೆ ಯಾವ ಹಾನಿಯೂ ಸಂಭವಿಸದಂತೆ ಎಚ್ಚರ ವಹಿಸುತ್ತಿದ್ದ, ಅವನನ್ನು ನೋಡಿ ಎಲ್ಲರೂ ನಕ್ಕರು. ಪಾಪ ಅವನಿಗೆ ಒಂದು ಪೈಸೆಯೂ ಸಿಗಲಿಲ್ಲ ಎಂದರು.ರಾಜನು ಆಸ್ಥಾನಕ್ಕೆ ಬಂದ ಕೂಡಲೇ, ತನ್ನ ಕೆಲಸದಲ್ಲಿ ನಿಷ್ಠಾವಂತ ನಾಗಿದ್ದು ತನ್ನನ್ನು ರಕ್ಷಿಸಿದ ಆ ವ್ಯಕ್ತಿಗೆ ಬಹಳಷ್ಟು ಚಿನ್ನದ ನಾಣ್ಯಗಳು, ಆಸ್ತಿ ಮತ್ತು ಸ್ಥಾನಮಾನ ನೀಡಿ ಹೆಚ್ಚಿನ ಗೌರವ ಮತ್ತು ಮರ್ಯಾದೆಯನ್ನು ನೀಡಿದರು. ಕೆಳಗೆ ಬಿದ್ದ ನಾಣ್ಯ ಕೈಗೆತ್ತಿಕೊಂಡವರೆಲ್ಲರಿಗೂ ಅಚ್ಚರಿ. ಇದು ಆತನ ನಂಬಿಗಸ್ತಿಕೆಗೆ ದೊರೆತ ಉಡುಗೊರೆ ಎಂದು ಎಲ್ಲರೂ ತಿಳಿದುಕೊಂಡರು. ಆಸ್ಥಾನದಲ್ಲಿದ್ದವರೆಲ್ಲರೂ ಸಂತೋಷದ ಸಾಗರದಲ್ಲಿ ಮುಳುಗಿದರು.
ಪ್ರೀತಿಯ ಮುದ್ದು ಪುಟಾಣಿಗಳೇ! ರಾಜನು ತನಗೆ ನಂಬಿಗಸ್ತನಾಗಿದ್ದ ಮನುಷ್ಯನನ್ನು ಈ ರೀತಿಯಲ್ಲಿ ಉನ್ನತೀಕರಿಸಲು ಸಾಧ್ಯವಾದರೆ, ನಮ್ಮನ್ನು ಸೃಷ್ಟಿಸಿದ ರಾಜಾಧಿರಾಜನಾದ ಯೇಸು ಕ್ರಿಸ್ತನು ಸಹ ನಂಬಿಗಸ್ತರನ್ನು ಪರಿಪೂರ್ಣ ಒಳ್ಳೆಯತನದಿಂದ ತುಂಬುತ್ತಾರೆ. ನಿನಗೆ ನೀಡಿದ ಯಾವುದೇ ಕಾರ್ಯದಲ್ಲಿ ನೀನು ನಂಬಿಗಸ್ತನಾಗಿದ್ದರೆ, ಮರ್ಯಾದೆ ಮತ್ತು ಗೌರವವು ನಿನ್ನನ್ನು ಹುಡುಕಿಬರುತ್ತದೆ ಪುಟಾಣಿಗಳೇ. Ok ತಾನೇ!
- Sis. ಬ್ಯೂಲ
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482