Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 28.06.2023
Share:

By Village Missionary Movement

Tuesday, 27-Jun-2023

ಧೈನಂದಿನ ಧ್ಯಾನ(Kannada) – 28.06.2023

 

ಫಲ ಕೊಡುವ ವೃಕ್ಷ

 

"ಯೋಸೇಫನು ಬಹುಫಲವನ್ನು ಬಿಡುವ ವೃಕ್ಷಕ್ಕೆ ಸಮಾನನಾಗಿದ್ದಾನೆ, ಒರತೆಯ ಬಳಿಯಲ್ಲಿ ಬೆಳೆದು ರೆಂಬೆಗಳನ್ನು ಗೋಡೆಯ ಆಚೆಗೆ ಚಾಚಿರುವ ಫಲವೃಕ್ಷದಂತಿದ್ದಾನೆ." - ಆದಿ. 49:22

 

1. ಒಂದಾ, ಎರಡಾ! ಕರ್ತನಿಗೆ ಭಯಪಟ್ಟು ಜೀವಿಸಿದ ಯೋಸೇಫನ ಪ್ರತಿಯೊಂದು ಚಲನೆಯಿಂದ ನಾವು ಕಲಿಯಬೇಕಾದ ಪಾಠ ಅನೇಕವಿದೆ. ತೆರೆದ ಪುಸ್ತಕವಾಗಿರುವ ಅವರ ಜೀವನವನ್ನು ವಾಕ್ಯದ ಆಧಾರಗಳೊಂದಿಗೆ ನೋಡೋಣವಾ?

 

2. ಬಾಲ್ಯದಿಂದಲೂ ತಂದೆಗೆ ವಿಧೇಯನಾಗಿ ಅವರ ಪ್ರೀತಿಯನ್ನು ಪಡೆದ ಪ್ರೀತಿಯ ಮಗ ಯೋಸೇಫನು! (ಆದಿ. 37:3)

 

3. ತನ್ನ ಅಣ್ಣಂದಿರೊಂದಿಗೆ ಕೆಟ್ಟ ಕಾರ್ಯಗಳಿಗೆ ಒಳಗಾಗದೆ, ದೂರವಾಗಿದ್ದ ಪುಟ್ಟ ತಮ್ಮ! (ಆದಿಕಾಂಡ 37:2)

 

4. ದೇವರು ಕೊಟ್ಟ ಕನಸುಗಳನ್ನು ಎಲ್ಲರಿಗೂ ಹೇಳುವ ಸ್ವಚ್ಛವಾದ ಹೃದಯವುಳ್ಳವನು. (ಆದಿಕಾಂಡ 37:5)

 

5. ಗುಲಾಮನಾಗಿದ್ದರೂ, ತನ್ನ ಕೆಲಸವನ್ನು ಸರಿಯಾಗಿ, ಸತ್ಯವಾಗಿ ಮತ್ತು ಪರಿಪೂರ್ಣವಾಗಿ, ಸರಿಯಾದ ಸಮಯದಲ್ಲಿ ಪೂರ್ಣಗೊಳಿಸಲು ಸಮರ್ಥನು. (ಆದಿಕಾಂಡ 39:2,3)

 

6. ದಿನ ದಿನವೂ ಬಂದ ಶಾರೀರಿಕ ಇಚ್ಛೆಗಳ ವಿರುದ್ಧವಾಗಿ ಹೋರಾಡಿ ಗೆದ್ದ ಹೀರೋ! (ಆದಿ. 39:10)

 

7. ಸುಳ್ಳು ಆರೋಪ ಹೊರಿಸಿ ಜೈಲಿಗೆ ಹಾಕಿದಾಗಲೂ ಗುಣುಗುಟ್ಟದವನು. (ಆದಿ. 39:21-23)

 

8. ಸೆರೆಯಲ್ಲಿಯೂ ಪರರ ಯೋಗಕ್ಷೇಮದ ಬಗ್ಗೆ ಅಕ್ಕರೆಯುಳ್ಳವನಾಗಿ, ಅವರಿಗೆ ಸಹಾಯ ಮಾಡಿ ದೇವರ ಬಗ್ಗೆ ಹೇಳಿದ ಸೇವಕ. (ಆದಿ. 40:8)

 

9. ದೇವರು ತನಗೆ ಕೊಟ್ಟ ವಿವೇಕವನ್ನು ಉಪಯೋಗಿಸಿದಾಗ ತನಗಲ್ಲ ದೇವರಿಗೇ ಮಹಿಮೆ ಸಲ್ಲಿಸಿದವನು. (ಆದಿ. 41:16)

 

10. ಕೊಟ್ಟ ಅಧಿಕಾರವನ್ನು ಇಷ್ಟಬಂದಂತೆ ಉಪಯೋಗಿಸದೆ ನಿಧಾನವಾಗಿ ಯೋಚಿಸಿ ಜ್ಞಾನವಾಗಿಯೂ ಪರಿಶುದ್ಧವಾಗಿಯೂ ಆಳ್ವಿಕೆ ಮಾಡಿದವನು. (ಆದಿ. 41:43,55)

 

11. ತನಗೆ ಅನ್ಯಾಯ ಮಾಡಿದ ತನ್ನ ಸಹೋದರರನ್ನು ಸೇಡು ತೀರಿಸಿಕೊಳ್ಳಬೇಕೆಂದು ನೆನೆಸದೆ ಮನಸಾರೆ ಕ್ಷಮಿಸಿದವನು. (ಆದಿ. 45:15)

 

12. ಇಡೀ ಕುಟುಂಬವನ್ನು ಬೆಂಬಲಿಸಿದವನು. (ಆದಿ. 46:5,6)

 

13. ವಯಸ್ಸಾದ ತಂದೆಯನ್ನು ಬಹಳ ಗೌರವವಾಗಿ ನಡೆಸಿದವರು. (ಆದಿ. 46:29)

 

14. ಕರ್ತನ ವಾಗ್ದಾನವನ್ನು ನಂಬಿ, ಅವನ ಎಲುಬುಗಳನ್ನು ಕಾನಾನಿನಲ್ಲಿ ಸಮಾಧಿ ಮಾಡಲು ಆದೇಶಿಸಿದವರು. (ಆದಿ. 50:25)

 

ಯೌವನಸ್ಥರೇ! ನಿಮ್ಮಂತೆಯೇ ಯೋಸೇಫನು ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ಬೆಳೆದ ಸಾಮಾನ್ಯ ಹುಡುಗ. ಆದರೆ ಅವರಲ್ಲಿ ಇಷ್ಟು ಒಳ್ಳೆಯ ಗುಣಗಳು ಹೇಗೆ ಕಂಡು ಬಂದವು? ಅವರಲ್ಲಿ ಕರ್ತನಿಗೆ ಭಯಪಡುವ ಭಯ ಕಾಣಲ್ಪಟ್ಟಿತು. ಇದೇ ಎಲ್ಲಾದಕ್ಕೂ ಬೇರು. ನೀನು ಸಹ ಕರ್ತನಿಗೆ ಭಯಪಟ್ಟು ಜೀವಿಸುವುದಾದರೆ ನಿನ್ನ ಜೀವನವೂ ಸಹ ಮತ್ತೊಬ್ಬರು ಅನುಸರಿಸುವಂತಹ ಮೂಲ ಮಾದರಿಯಾದ ಜೀವನವಾಗಿರುತ್ತದೆ.

- Mrs. ತವಮಣಿ ವೈರವೇಲ್

 

ಪ್ರಾರ್ಥನಾ ಅಂಶ:

ನಮ್ಮ ಎಲ್ಲಾ ಮಿಷನರಿ ಕುಟುಂಬಗಳಿಗಾಗಿಯೂ, ತರಬೇತಿಯಲ್ಲಿ ಇರುವವರಿಗಾಗಿಯೂ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet matbet giriş holiganbet holiganbet güncel holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet grandpashabet holiganbet grandpashabet grandpashabet grandpashabet perabet perabet giriş padişahbet padişahbet giriş grandpashabet grandpashabet grandpashabet grandpashabet grandpashabet meritking meritking giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş