Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 04.07.2023
Share:

By Village Missionary Movement

Tuesday, 04-Jul-2023

ಧೈನಂದಿನ ಧ್ಯಾನ(Kannada) – 04.07.2023

 

ಐರನ್ ಡೂಮ್

 

"ಯೆಹೋವನು ನಿನ್ನನ್ನು ಎಲ್ಲಾ ಕೇಡಿನಿಂದ ತಪ್ಪಿಸುವನು; ನಿನ್ನ ಪ್ರಾಣವನ್ನು ಕಾಯುವನು" - ಕೀರ್ತನೆ 121:7

 

"ಐಯನ್ ಡುಮ್" ಎಂಬುದು ಇಸ್ರಾಯೇಲ್ ರಕ್ಷಣಾ ಪಡೆಗಳಿಂದ ರೂಪಿಸಲ್ಪಟ್ಟ ನಡೆದಾಡುವ ಸುಮಾರು 90 ಕೆಜಿ ಭಾರವುಳ್ಳ, ವಾಯು ರಕ್ಷಣಾ ನಿರ್ವಹಣೆಯಾಗಿದೆ. ಇದರ ಮೂಲಕ ಅಲ್ಪ-ಶ್ರೇಣಿಯ ರಾಕೆಟ್‌ಗಳು, ಕ್ಷಿಪಣಿಗಳು ಮತ್ತು ಫಿರಂಗಿ ಶೆಲ್‌ಗಳನ್ನು ಪ್ರತಿಬಂಧಿಸುತ್ತದೆ ಮತ್ತು ನಾಶಪಡಿಸುತ್ತದೆ. ಏಪ್ರಿಲ್ 2011 ರಲ್ಲಿ ಗಾಜಾ-ಇಸ್ರಾಯೇಲ್ ಯುದ್ಧದ ಸಮಯದಲ್ಲಿ, ಸಾಧನವು ಹಲವಾರು ಕ್ಷಿಪಣಿಗಳು ಮತ್ತು ರಾಕೆಟ್‌ಗಳನ್ನು ಹೊಡೆದುರುಳಿಸಿತು. ಒಂದು ಸಂಜೆ, ಇಸ್ರಾಯೇಲ್ ಗಾಜಾದ ಮೇಲೆ ನೆಲದ ದಾಳಿಯನ್ನು ಪ್ರಾರಂಭಿಸಿದಾಗ "ಮರಳಿನ ಬಿರುಗಾಳಿ" ಪಡೆಗಳಾದ್ಯಂತ ಬೀಸಿತು. ಅವರ ಮುಂದೆ ಏನೂ ಗೋಚರಿಸದೆ, ದೊಡ್ಡ ಗೊಂದಲ ಮತ್ತು ಸೋಲಿನ ಭಯದಲ್ಲಿ, ಎಲ್ಲಾ ಇಸ್ರಾಯೇಲ್ ಸೈನಿಕರು ಮರಳಿನಲ್ಲಿ ಮೊಣಕಾಲುಗಳ ಮೇಲೆ ಬಿದ್ದು ತಮ್ಮ ಸೈನ್ಯದ ಕಮಾಂಡರ್ನ ಆಜ್ಞೆಯ ಮೇರೆಗೆ ದೇವರಿಗೆ ಮೊರೆಯಿಟ್ಟರು.

 

ಅಯ್ಯೋ! ಮರಳಿನ ಬಿರುಗಾಳಿ ಕಡಿಮೆಯಾಗುವ ಬದಲು ತೀವ್ರಗೊಳ್ಳತೊಡಗಿತು. "ದೇವರು ನಮಗೆ ಸಹಾಯ ಮಾಡಲಿಲ್ಲ" ಎಂದು ಯೋಚಿಸುತ್ತಾ, ಇಡೀ ಸೈನ್ಯವು ಹಾಗೆ ಮರಳಿನ ಮೇಲೆ ಮಲಗಿತು. ರಾತ್ರಿ ಕಳೆದು ಬೆಳಗಾಗಲು ಪ್ರಾರಂಭಿಸಿದಾಗ 'ಚಂಡಮಾರುತ' ಕಡಿಮೆಯಾಗಿ, ಸ್ಪಷ್ಟವಾದ ಮಾರ್ಗವು ಕಾಣಲು ಪ್ರಾರಂಭಿಸಿತು. ಆಗಲೇ ದೇವರು ತಮ್ಮನ್ನು ದೊಡ್ಡ ಅಪಾಯದಿಂದ ಪಾರು ಮಾಡಿದನೆಂದು ಅರಿತು ಕೃತಜ್ಞತೆ ಸಲ್ಲಿಸಿದರು. ಏಕೆಂದರೆ ಅವರು ಹಾದು ಬಂದ ಮಾರ್ಗದಲ್ಲಿ ಭಾರೀ ಪ್ರಮಾಣದ ನೆಲಬಾಂಬ್‌ಗಳನ್ನು ಮರಳಿನಲ್ಲಿ ಹೂತಿಟ್ಟು, ಅವುಗಳನ್ನು ಸ್ಫೋಟಿಸಲು ಬಳಸುವ ತಂತಿಗಳು ಮರಳಿನಲ್ಲಿ ಬಿದ್ದಿರುವುದನ್ನು ಕಂಡರು. ಯಾರಾದರೂ ಒಬ್ಬರು ಅದರ ಮೇಲೆ ಕಾಲಿಟ್ಟಿದ್ದರೇನೆ ಸಾಕು, ಇಡೀ ಸೈನ್ಯವೇ ನಾಶವಾಗುತ್ತಿತ್ತು ಎಂಬುದನ್ನು ಗ್ರಹಿಸಿ ಕರ್ತನಿಗೆ ಮತ್ತೊಮ್ಮೆ ಕೃತಜ್ಞತೆ ಸಲ್ಲಿಸಿದರು.

 

ಕೆಲವೊಮ್ಮೆ ಕರ್ತನು ತನ್ನ ಮಕ್ಕಳಿಗೆ ಮಾಡುತ್ತಿರುವುದು ವಿರುದ್ಧವಾಗಿರುವಂತೆ ಕಂಡರೂ, ಅವರು ಎಂದಿಗೂ ಕೆಟ್ಟ ಕಾರ್ಯವನ್ನು ಮಾಡುವುದಿಲ್ಲ. ಕಣ್ಣಿನ ರೆಪ್ಪೆಯು ಕಣ್ಣಿನ ಗುಡ್ಡೆಯನ್ನು ಕಾಪಾಡುವಂತೆ ನಮ್ಮನ್ನು ರಕ್ಷಿಸಲು ಒಳ್ಳೆಯ ದೇವರು ನಮಗಿದ್ದಾರೆ. ಆತನು ನಮ್ಮನ್ನು ಕ್ರೋಧದ ಬಲೆಯಿಂದ, ನಾಶನ ಮತ್ತು ಪಿಡುಗುಗಳಿಂದ ಬಿಡುಗಡೆ ಮಾಡುತ್ತಾರೆ. ಆದ್ದರಿಂದ ನಾವು ಬಯಸಿದಕ್ಕೆ ಮತ್ತು ನಿರೀಕ್ಷಿಸಿದ್ದಕ್ಕೆ ವಿರುದ್ಧವಾಗಿ ಏನೇ ಸಂಭವಿಸಿದರೂ ಚಿಂತಿಸಬೇಡಿ. ಅವರು ಎಲ್ಲವನ್ನೂ ಒಳ್ಳೆಯದಕ್ಕಾಗಿಯೇ ಮಾಡುತ್ತಾರೆ.

- Mrs. ಜಯಂತಿ ಭಾಕ್ಯನಾಥನ್

 

ಪ್ರಾರ್ಥನಾ ಅಂಶ:

ಆಮೆನ್ ಗ್ರಾಮೀಯ ಟಿವಿಯ ಆರ್ಥಿಕ ಅಗತ್ಯಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al Elexbet matbet giriş matbet instagram unban x unban twitter unban palacebet setrabet