Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 20.07.2023
Share:

By Village Missionary Movement

Thursday, 20-Jul-2023

ಧೈನಂದಿನ ಧ್ಯಾನ(Kannada) – 20.07.2023

 

ಯೇಸುವಿಗಾಗಿ..

 

"ಬಲವಿಲ್ಲದವರನ್ನು ಸಂಪಾದಿಸುವದಕ್ಕೆ ಅವರಿಗೆ ಬಲವಿಲ್ಲದವನಾದೆನು. ಯಾವ ವಿಧದಲ್ಲಿಯಾದರೂ ಕೆಲವರನ್ನು ರಕ್ಷಿಸಬೇಕೆಂದು ಯಾರಾರಿಗೆ ಎಂಥೆಂಥವನಾಗಬೇಕೋ ಅಂಥಂಥವನಾಗಿದ್ದೇನೆ" - 1 ಕೊರಿಂಥ 9:22

 

ಬೋಧಕರಾದ ರಾಬರ್ಟ್ ಸ್ಮಿತ್ ಸದರ್ನ್ ಬ್ಯಾಕ್ಟರ್ ಸೆಮಿನರಿಯಲ್ಲಿ ಉಪನ್ಯಾಸಕರಾಗಿದ್ದರು. ಅವರ ತರಗತಿಯಲ್ಲಿ ಒಬ್ಬ ದೈವಶಾಸ್ತ್ರದ ವಿದ್ಯಾರ್ಥಿಯು ಮಿಷಿನರಿಯಾಗಿ ಉತ್ತಮ ಸಂಬಂಧವನ್ನು ಬಲಪಡಿಸಲು ಆಫ್ರಿಕನ್ ದೇಶಕ್ಕೆ ಹೋದಳು. ಅವಳು ಅಲ್ಲಿಗೆ ಹೋಗಿದ್ದಾಗ ಒಂದು ದಿನ ಊಟದ ಸಮಯ ಬಂತು. ಅಲ್ಲಿರುವವರು ತನಗೆ ಪ್ರತ್ಯೇಕವಾದ ತಟ್ಟೆ ಕೊಡುತ್ತಾರೆ ಎಂದುಕೊಂಡಳು. ಆದರೆ ಹಾಗೆ ಕೊಡಲಿಲ್ಲ. ಅವರು ಮೇಜಿನ ಮೇಲೆ ಒಂದು ದೊಡ್ಡ ಪಾತ್ರೆಯನ್ನು ತಂದರು. ಅದಕ್ಕೆ ಕಮ್ಯುನಿಟಿ ಪಾತ್ರೆ ಎಂದು ಹೆಸರು. ಎಲ್ಲರೂ ಆ ಪಾತ್ರೆಯೊಳಗೆ ಕೈಹಾಕಿ ಎತ್ತಿ ತಿಂದರು. ಈ ಮಿಷಿನರಿ ಬಹಳ ಸುಸಂಸ್ಕೃತ ಸಂಸ್ಕೃತಿಯಿಂದ ಬಂದಿದ್ದದರಿಂದ ಆ ಪಾತ್ರೆಯಲ್ಲಿ ಕೈಹಾಕಿ ತಿನ್ನಲು ಹೆದರಿದಳು. ಮತ್ತು ಅದನ್ನು ತಿಂದವರು ಯಾರೂ ಕೈ ತೊಳೆಯಲಿಲ್ಲ. ಆ ಮಿಷಿನರಿಗೆ ಆ ಪಾತ್ರೆಯಲ್ಲಿ ಯಾವ ಆಹಾರವಿದೆ ಎಂದು ಸಹ ತಿಳಿದಿರಲಿಲ್ಲ. ಆದರೆ ಅವಳಿಗೆ ಅರ್ಥವಾದದ್ದು ಆಫ್ರಿಕನ್ ಜನರಿಗೆ ಬೋಧಿಸಿ ಅವರಿಗೆ ಯೇಸುವಿನ ಪ್ರೀತಿಯನ್ನು ತಿಳಿಸಬೇಕಾದರೆ, ತಾನು ಖಂಡಿತವಾಗಿಯೂ ಈ ಪಾತ್ರೆಯಲ್ಲಿ ಕೈಹಾಕಿ ತಿನ್ನಲೇಬೇಕು ಎಂದು ಅರ್ಥಮಾಡಿಕೊಂಡಳು.

 

ಯೆಶಾಯ 43:4 ರಲ್ಲಿ ನಾನು ನಿನಗೆ ಬದಲಾಗಿ ಮನುಷ್ಯರನ್ನೂ ನಿನ್ನ ಪ್ರಾಣಕ್ಕೆ ಪ್ರತಿಯಾಗಿ ಜನಾಂಗಗಳನ್ನೂ ಕೊಡುವೆನು ಎಂದು ಓದುತ್ತೇವೆ. ಗೋದಿಯ ಕಾಳು ಭೂವಿುಯಲ್ಲಿ ಬಿದ್ದು ಸಾಯದಿದ್ದರೆ ಒಂದೇಯಾಗಿ ಉಳಿಯುವದು; ಸತ್ತರೆ ಬಹಳ ಫಲಕೊಡುವದು ಎಂದು ಯೇಸು ಹೇಳಿದರು. (ಯೋಹಾನ 12:24) ಸುವಾರ್ತಾ ಸೇವೆಯಲ್ಲಿ, ನಾವು ಜೀವವನ್ನು ನೀಡುವ ಮಟ್ಟಿಗೆ ಸೇವೆ ಮಾಡುತ್ತಿದ್ದೇವಾ ಅಥವಾ ಇಲ್ಲವಾ? ಆದರೆ ನಾವು ಸಣ್ಣಸಣ್ಣ ತ್ಯಾಗಗಳನ್ನು ಖಂಡಿತವಾಗಿಯೂ ಮಾಡಲೇಬೇಕು. ಇದನ್ನು ನಾವು ಇಷ್ಟಪಡದ ಅಥವಾ ಸಹಿಸದ ಸಂಗತಿಯಾಗಿ ನೋಡಬಹುದು. ಆದರೆ ಸುವಾರ್ತೆಯ ಸಲುವಾಗಿ ಕೆಲವು ವಿಷಯಗಳನ್ನು ಬಿಟ್ಟುಕೊಡುವುದು ಅವಶ್ಯಕ.

 

ಆತ್ಮಗಳ ಆದಾಯ ಎಂಬುದು ಸ್ವಲ್ಪ ಸುಲಭವಾದ ಮಾರ್ಗವಾಗಿದೆ. ಆದರೆ ಇದು ಕಠಿಣ ಪರಿಶ್ರಮವನ್ನೂ ಒಳಗೊಂಡಿರುತ್ತದೆ. ಒಬ್ಬ ವ್ಯಕ್ತಿಯನ್ನು ಕ್ರಿಸ್ತನ ಬಳಿಗೆ ತರಲು ಸಾಕಷ್ಟು ಪ್ರಯತ್ನವನ್ನು ತೆಗೆದುಕೊಂಡರೆ ಫಲವನ್ನು ನೋಡುವ ಏಕೈಕ ಮಾರ್ಗವಾಗಿದೆ. ಯೇಸುಕ್ರಿಸ್ತನು ಸಮಾರ್ಯ ಸ್ತ್ರೀಗೆ ಸುವಾರ್ತೆಯನ್ನು ಹೇಳುವಾಗ ಅವರು ತನಗಿರುವ ಬಾಯಾರಿಕೆ ಮತ್ತು ಹಸಿವನ್ನು ಸಹಿಸಿಕೊಂಡು ಸುವಾರ್ತೆಯನ್ನು ಪ್ರಕಟಿಸಿದರು. ಸ್ವಯಂ ನಿರಾಕರಣೆ ಮತ್ತು ಕಠಿಣ ಪರಿಶ್ರಮ ಇದ್ದರೆ ಮಾತ್ರವೇ ನಾವು ನಮ್ಮ ಸೇವೆಯಲ್ಲಿ ಉತ್ತಮ ಫಲಿತಾಂಶವನ್ನು ನೋಡಲು ಸಾಧ್ಯ.

- Bro. ಜೇಕಬ್ ಶಂಕರ್ 

 

ಪ್ರಾರ್ಥನಾ ಅಂಶ:

ತಿರುಚ್ಚಿಯಲ್ಲಿ ನಡೆಯಲಿರುವ ಯೌವನಸ್ಥರ ಉಜ್ಜೀವನ ಕೇಂದ್ರ ನಿರ್ಮಾಣ ಕಾರ್ಯಕ್ಕಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş matbet giriş sahabet onwin bets10 bets10 giriş bets10 güncel giriş betcio atlasbet casibom meritking perabet casibom holiganbet galabet casibom padişahbet padişahbet giriş grandpashabet jojobet jojobet grandpashabet grandpashabet palacebet sonbahis jojobet grandpashabet betpuan betsalvador matbet meritking perabet perabet giriş instagram ban service betsilin betsilin giris pashagaming pashagaming giris gorabet gorabet giris kralbet holiganbet