Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 27.07.2023
Share:

By Village Missionary Movement

Thursday, 27-Jul-2023

ಧೈನಂದಿನ ಧ್ಯಾನ(Kannada) – 27.07.2023

 

ಕೊಡಿರಿ 

 

"...ಸಂತೋಷವಾಗಿ ಕೊಡುವವನ ಮೇಲೆ ದೇವರಿಗೆ ಪ್ರೀತಿಯುಂಟು" - 2 ಕೊರಿಂಥ 9:7

 

ಒಬ್ಬ ವಯಸ್ಸಾದ ಮುದುಕ ತುಂಬಾ ಹಸಿವಿನಿಂದ ಒಂದು ಹೋಟೆಲ್‌ನೊಳಗೆ ಊಟ ಮಾಡಲು ಹೋದರು. ಆಗ ಅಲ್ಲಿಗೆ ಬಂದ ಸಪ್ಲೈರ್ ಬಳಿ ಒಂದು ಊಟ ಎಷ್ಟು ಎಂದು ಕೇಳಿದರು? 50 ರೂಪಾಯಿ ಎಂದು ಹೇಳಿದರು. ತಕ್ಷಣ ಆ ತಾತ ತನ್ನ ಪರ್ಸ್‌ನಲ್ಲಿದ್ದ ಹಣವನ್ನು ಎಣಿಸಿ ಕಡಿಮೆ ಬೆಲೆಗೆ ಊಟ ಇಲ್ಲವೇ? ಎಂದರು. ತಕ್ಷಣ ಸಪ್ಲೈಯರ್ ಮೊಸರು ಇಲ್ಲದೆ ತಿಂದರೆ 45 ರೂಪಾಯಿ ಎಂದರು. ತಾತ 45 ರೂಪಾಯಿಗೆ ಮೊಸರು ಇಲ್ಲದೇ ಊಟ ಮಾಡಿಬಿಟ್ಟು ಸಪ್ಲೈರ್ ಬಳಿ 50 ರೂಪಾಯಿ ಕೊಟ್ಟರು. ಅದಕ್ಕೆ ಸಪ್ಲೈರ್ ನೀವು ಮೊಸರಿನ ಜೊತೆ ಊಟ ಮಾಡಿರಬಹುದೆ ನಿಮ್ಮ ಬಳಿ 50 ರೂಪಾಯಿ ಇದೆಯಲ್ಲಾ ಎಂದನು. ಆತನನ್ನು ಗಮನಿಸಿದ ತಾತ, ನಿನಗೆ ಕೊಡಲು ನನ್ನ ಬಳಿ ಹಣ ಇಲ್ಲ, ಅದಕ್ಕೇ ಎಂದು ನಗುತ್ತಾ ಹೇಳಿ ಹೊರಟುಹೋದರು. ಸಪ್ಲೈಯರ್ ಈ 5 ರೂಪಾಯಿ ಬಹಳ ವಿಶೇಷವಾದದ್ದು ಎಂದು ಹೇಳಿ ತನ್ನ ಒಳ ಜೇಬಿಗೆ ಹಾಕಿಕೊಂಡರು.

 

ಯೇಸುಕ್ರಿಸ್ತನು ಈ ಭೂಮಿಯ ಮೇಲೆ ಜೀವಿಸುತ್ತಿದ್ದ ದಿನಗಳಲ್ಲಿ ಸಭೆಯಲ್ಲಿ ಕಾಣಿಕೆ ಡಬ್ಬದ ಮುಂದೆ ಕುಳಿತು ಜನರು ಕಾಣಿಕೆ ನೀಡುವುದನ್ನು ನೋಡುತ್ತಿದ್ದರು. ನಂತರ ಶಿಷ್ಯರನ್ನು ಕರೆದು ಒಬ್ಬರ ಕಾಣಿಕೆಯನ್ನು ಮಾತ್ರ ಹೊಗಳಿದರು. ಅದು ಆ ಬಡ ವಿಧವೆ ಹಾಕಿದ ಎರಡು ನಾಣ್ಯಗಳು! ಮನುಷ್ಯರು ಅದನ್ನು ಅಲ್ಪವಾಗಿ ನೆನೆಸಿರಬಹುದು. ಹಲವರು ಹೆಚ್ಚಾಗಿ ಹಾಕಿದರು. ಹಾಗಾಗಿ ಎರಡು ಕಾಸಿನ ಮೌಲ್ಯ ಕಡಿಮೆ ಇದ್ದಿರಬಹುದು. ಆದರೆ ದೇವರ ದೃಷ್ಟಿಯಲ್ಲಿ ಈ ಎರಡು ನಾಣ್ಯಗಳು ಹೆಚ್ಚು ಮೆಚ್ಚುಗೆ ಪಡೆದವು! ಕಾರಣವೇನೆಂದರೆ, "ಆ ಕಾಣಿಕೆ ತನ್ನನ್ನೇ ಜಜ್ಜಿ ಕೊಡುವಂತದ್ದಾಗಿದೆ" ಜಗತ್ತಿನಲ್ಲಿ "ತನ್ನನ್ನು ಮೀರಿದ ದಾನ" ಎಂದು ಹೇಳುತ್ತಾರೆ. ಆದರೆ ಯೇಸು ಕ್ರಿಸ್ತನು ನಿನ್ನನ್ನೇ ಜಜ್ಜಿ ಕೊಡುವುದು ನಿನಗಿರುವುದರಲ್ಲಿ ಕೊಡುವುದಕ್ಕಿಂತ ಉತ್ತಮ ಎಂದು ಹೇಳುತ್ತಾರೆ. ಏಕೆಂದರೆ ಕೊಡುವುದು ಪ್ರೀತಿಯ ಅಭಿವ್ಯಕ್ತಿಯಾಗಿ ಇರಬೇಕು. ಬಲವಂತಕ್ಕಾಗಿಯೋ ಅಥವಾ ಹೆಸರು ಮತ್ತು ಖ್ಯಾತಿಗಾಗಿಯೋ ಇರಬಾರದು.

 

ಮಕೆದೋನ್ಯ ಸಭೆಯವರು ಉಪದ್ರವ ಮತ್ತು ಬಡತನದ ಮಧ್ಯದಲ್ಲೂ ಪರಿಪೂರ್ಣ ಸಂತೋಷವಾಗಿ "ತುಂಬಾ" ಧಾರಾಳವಾಗಿ ಕೊಟ್ಟರು. ಈಗೆಲ್ಲಾ ನಾವು ಉಳಿತಾಯದ ಬಗ್ಗೆ ಮಾತ್ರವೇ ಯೋಚಿಸುತ್ತೇವೆ. ಇತರ ಜನರ ಪರಿಸ್ಥಿತಿಯನ್ನು ನೋಡುವುದು ಅವರಿಗೆ ಸಹಾಯ ಮಾಡುವುದು ಕಡಿಮೆಯಾಗಿ ಬಿಟ್ಟಿದೆ. ಪ್ರೀತಿಯ ಅಭಿವ್ಯಕ್ತಿಯಾಗಿ ಎಲ್ಲೆಲ್ಲಿ ಕೊಡಲ್ಪಟ್ಟಿತೋ, ಅಲ್ಲೆಲ್ಲಾ ದೇವರ ಗಮನವನ್ನು ಸೆಳೆಯಲಾಯಿತು ಮತ್ತು ಪ್ರಶಂಸಿಸಲಾಯಿತು. ಪರಿಮಳ ತೈಲವನ್ನು ಹಚ್ಚಿದ ಮರಿಯಳನ್ನು ನೋಡಿ ತನ್ನಿಂದ ಸಾಧ್ಯವಾದದ್ದನ್ನು ಮಾಡಿದಳು ಎಂದರು. ಪಾಪಿಯಾದ ಸ್ತ್ರೀ ಪಾದಗಳನ್ನು ಕಣ್ಣೀರಿನಿಂದ ನೆನೆಸಿ, ಕೂದಲಿನಿಂದ ಒರೆಸಿ ಸುಗಂಧ ದ್ರವ್ಯದಿಂದ ಅಭಿಷೇಕಿಸಿದಾಗ, "ಇವಳು ತುಂಬಾ ಪ್ರೀತಿಯನ್ನು ತೋರಿದಳು" ಎಂದು ಹೊಗಳಿದರು.

 

ಇದನ್ನು ಓದುತ್ತಿರುವ ಪ್ರಿಯರೇ! ದೇವರ ಗಮನವನ್ನು ಸೆಳೆಯಲು ಮತ್ತು ಪ್ರಶಂಸೆಯನ್ನು ಪಡೆಯಲು ಪ್ರೀತಿಯಿಂದ ತುಂಬಿ ಧಾರಾಳವಾಗಿ ಕೊಡಿರಿ. ನಿಮ್ಮನ್ನು ಜಜ್ಜಿ ಕೊಡಿರಿ ಅದನ್ನು ನೋಡಿ ದೇವರು ನಿಮ್ಮನ್ನು ಉಕ್ಕಿ ಹರಿಯುವಂತೆ ಮಾಡುತ್ತಾರೆ. ನಿಮ್ಮಿಂದ ಸ್ವೀಕರಿಸುವವರು ಸಹ ಆಶೀರ್ವದಿಸಲ್ಪಡುತ್ತಾರೆ.

- Mrs. ಅನ್ಬು ಜ್ಯೋತಿ ಸ್ಟಾಲಿನ್

 

ಪ್ರಾರ್ಥನಾ ಅಂಶ:

ಮಧ್ಯಸ್ಥಿಕೆ ವಹಿಸಿ ಪ್ರಾರ್ಥಿಸುವ ಎಸ್ತೇರ್ ನಂತಹ ಸ್ತ್ರೀ ಯರು ಕಾರ್ಯಸ್ಥಳಗಳಲ್ಲಿ ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al Elexbet matbet giriş matbet instagram unban x unban twitter unban palacebet setrabet