Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 30.07.2023 (Kids Special)
Share:

By Village Missionary Movement

Sunday, 30-Jul-2023

ಧೈನಂದಿನ ಧ್ಯಾನ(Kannada) – 30.07.2023 (Kids Special)

 

ಜೇನುನೊಣಗಳಂತೆ ...

 

". . . ಜೇನಿಗಿಂತಲೂ ಶೋಧಿಸಿದ ಜೇನು ತುಪ್ಪಕ್ಕಿಂತಲೂ ಸಿಹಿಯಾಗಿವೆ" - ಕೀರ್ತನೆ 19:10

 

ವಿಮಲ್-ಗೆ ಶುಕ್ರವಾರ ಸಂಜೆ ಬಂದರೇನೆ ತುಂಬಾ ಸಂತೋಷವಾಗಿರುತ್ತದೆ. ಯಾಕೆ ಗೊತ್ತಾ? ಶನಿವಾರ ಮತ್ತು ಭಾನುವಾರ ರಜಾ ದಿನಗಳಲ್ಲಿ ಪಕ್ಕದ ಹಳ್ಳಿಯಲ್ಲಿರುವ ತಾತನ ಮನೆಗೆ ಹೋಗುವುದೆಂದರೆ ತುಂಬಾ ಇಷ್ಟ ಅದಕ್ಕೇ. ನಿಮಗೂ ಅಜ್ಜಿ ತಾತ ಮನೆ ಅಂದ್ರೆ ಇಷ್ಟಾನಾ? ಸೂಪರ್. . . ತಾತನ ಮನೆಯಲ್ಲಿ ಸೀಸರ್ ನಾಯಿಮರಿಯೊಂದಿಗೆ ಆಟವಾಡುವುದರಿಂದ ಸಮಯ ಹೋಗೋದೇ ಗೊತ್ತಾಗುತ್ತಿರಲಿಲ್ಲ. ಸೀಸರ್ ತನ್ನ ಬಾಲವನ್ನು ಅಲ್ಲಾಡಿಸುತ್ತಾ ಲೊಳ್ . . . ಲೊಳ್ . . . ಎಂದು ಬೊಗಳುತ್ತಾ ತನ್ನ ಪ್ರೀತಿಯನ್ನು ತೋರಿಸುತ್ತಿತ್ತು. ತಾತ ಮುಂಜಾನೆ ಬೇಗ ಎದ್ದು ಪ್ರಾರ್ಥನೆ ಮಾಡಿ ಬೈಬಲ್ ಓದಿದ ನಂತರವೇ ಮನೆಯಲ್ಲಿದ್ದ ಎರಡು ಹಸುಗಳನ್ನು ಮೇಯಿಸಲು ಹೋಗುತ್ತಿದ್ದರು. ವಿಮಲ್ ನೀನು ಕೂಡ ಎದ್ದು ಪ್ರಾರ್ಥಿಸಿ ಬೈಬಲ್ ಓದು ತಮ್ಮಾ ಎಂದು ಹೇಳಿದರು. "ತಾತ . . . ಹೋಗಿ ತಾತ ಇವತ್ತು leave ತಾನೇ ನನ್ನನ್ನು ನಿದ್ದೆ ಮಾಡೋಕೆ ಬಿಡಿ." ಸ್ವಲ್ಪ ಹೊತ್ತಿನ ನಂತರ ಅಜ್ಜಿಯೂ ಎದ್ದು ದೇವರನ್ನು ಹುಡುಕಲು ಪ್ರಾರಂಭಿಸಿದಳು.

 

ನಿದ್ದೆಯಿಂದ ಎದ್ದ ವಿಮಲ್ ತನ್ನ ಅಜ್ಜಿ ಬೈಬಲ್ ಓದುತ್ತಿರುವುದನ್ನು ಕಂಡು ಆಶ್ಚರ್ಯಪಟ್ಟನು. ತಾತ ಮತ್ತು ಅಜ್ಜಿ ಈ ರೀತಿ ಬೈಬಲ್ ಓದಲು ಪೈಪೋಟಿ ನಡೆಸುತ್ತಿದ್ದಾರಲ್ಲಾ. ಅದರಲ್ಲಿ ಏನಿದೆ ಎಂದು ಆಶ್ಚರ್ಯಪಟ್ಟನು. ತಾತ ಕೂಡ ಹಸುಗಳನ್ನು ಮೇಯಿಸಿ ಮನೆಗೆ ಬಂದರು. ಹಸುವಿಗೆ ಬೇಕಾದ ಹುಲ್ಲು, ನೀರು ಎಲ್ಲವನ್ನೂ ಹಾಕಿ ಸ್ವಲ್ಪ ಹೊತ್ತು ವಿಶ್ರಮಿಸಿದರು. ಸೀಸರ್ ಜೊತೆ ಆಟವಾಡುತ್ತಿದ್ದ ವಿಮಲ್ ಮರವನ್ನು ಸುತ್ತಿ ಸುತ್ತಿ ಬರುತ್ತಿದ್ದ ಜೇನುನೊಣಗಳನ್ನು ನೋಡಿದನು. ಒಂದು ದೊಡ್ಡ ಜೇನುಗೂಡು ಇತ್ತು. ವಿಮಲ್ ಗೆ ಜೇನು ತಿನ್ನಬೇಕೆಂಬ ಆಸೆ ಬಂದುಬಿಟ್ಟಿತು. ತಾತ ಬನ್ನಿ ಇಲ್ಲಿ ನೋಡಿ ಎಷ್ಟು ದೊಡ್ಡ ಜೇನುಗೂಡು ಎಂದು ಕರೆದನು. ಏನು ಪುಟಾಣಿಗಳೇ ನೀವು ಜೇನು ತಿಂದಿದ್ದೀರಾ? ತಿನ್ನುತ್ತಾ ತಿನ್ನುತ್ತಾ ರುಚಿಯಾಗಿರುತ್ತೆ ಅಲ್ವಾ. ತಾತ ಕೂಡ ಎಚ್ಚರಿಕೆಯಿಂದ ಜೇನುತುಪ್ಪವನ್ನು ತೆಗೆದುಕೊಳ್ಳಬೇಕಾದ ರೀತಿಯಲ್ಲಿ ತೆಗೆದುಕೊಂಡರು. ಅಜ್ಜಿಯೂ ಬಂದರು ಜೇನನ್ನು ರುಚಿ ನೋಡಿಬಿಟ್ಟು ಹೇಳಿದರು. ವಿಮಲ್, ಈ ಜೇನಿಗಿಂತಲೂ ಬೈಬಲ್ ವಾಕ್ಯ ತುಂಬಾ ರುಚಿಯಾಗಿರುತ್ತೆ. ಅದಕ್ಕಾಗಿಯೇ ನಾನು ಮತ್ತು ತಾತ ಬೆಳಿಗ್ಗೆಯೇ ಬೈಬಲನ್ನು ಓದಿಬಿಡುತ್ತೇವೆ ...ಎಂದು ಹೇಳಿದ ಕೂಡಲೇ ... ವಿಮಲ್ ಓಕೆ ಅಜ್ಜಿ ನಾನು ಇನ್ನು ಮುಂದೆ ಬೈಬಲನ್ನು ಓದಲು ಪ್ರಯತ್ನಿಸುತ್ತೇನೆ. ನನಗೂ ಕಲಿಸಿಕೊಡಿ ಎಂದು ಹೇಳಿದಾಗ ತಾತ, ಅಜ್ಜಿಯ ಮುಖದಲ್ಲಿದ್ದ ಸಂತೋಷಕ್ಕೆ ಮಿತಿಯೇ ಇರಲಿಲ್ಲ.

 

ಮುದ್ದು ಪುಟಾಣಿಗಳೇ! ಜೇನಿಗಿಂತಲೂ ಸಿಹಿಯಾದ ಬೈಬಲ್ ನಮ್ಮ ಬಳಿ ಇರುವಾಗ ನಾವು ಅದನ್ನು ಓದದೇ ಇರಬಹುದೇ? ನೀವು ಕೂಡ ಪ್ರತಿದಿನ ಬೈಬಲ್ ಅನ್ನು ಓದಿ ಮತ್ತು ಯೇಸಪ್ಪನನ್ನು ರುಚಿ ನೋಡಿ. All the Best.

- Mrs. ಜೀವಾ ವಿಜಯ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al Elexbet matbet giriş matbet instagram unban x unban twitter unban palacebet setrabet