Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 01.08.2023
Share:

By Village Missionary Movement

Monday, 31-Jul-2023

ಧೈನಂದಿನ ಧ್ಯಾನ(Kannada) – 01.08.2023

 

ಉತ್ತರ ಪ್ರದೇಶ

 

"ಅರಣ್ಯವೂ ಮರುಭೂಮಿಯೂ ಆನಂದಿಸುವವು; ಒಣನೆಲವು ಹರ್ಷಿಸಿ ತಾವರೆಯಂತೆ ಕಳಕಳಿಸುವದು" - ಯೆಶಾಯ 35:1

 

ಸುವಾರ್ತೆಯ ಹವಾಮಾನವನ್ನೇ ಹೊಂದಿರದ ಭಾರತದ ಅತ್ಯಂತ ಬರಿದಾದ ರಾಜ್ಯಗಳಲ್ಲಿ ಉತ್ತರ ಪ್ರದೇಶವೂ ಒಂದಾಗಿದೆ. ಪ್ರತಿ ಪಿನ್ ಕೋಡ್ ಗೆ ಒಬ್ಬ ಕ್ರೈಸ್ತನನ್ನು ನೋಡುವುದು ಅಪರೂಪವಾಗಿರುವ ರಾಜ್ಯ ಇದು. ನಮ್ಮ ದೇಶದ ಜನಸಂಖ್ಯೆಯ ಸುಮಾರು 20% ಜನರು ಇಲ್ಲಿ ವಾಸಿಸುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಭಾರತದ ಅತಿದೊಡ್ಡ ರಾಜ್ಯದಲ್ಲಿ ಸುವಾರ್ತೆ ಸಾರಲು ದೇವರು ಆರಿಸಿಕೊಂಡ ಪಾತ್ರೆಯೇ ಅಮೆರಿಕದ ಸ್ಟಾನ್ಲಿ ಜೋನ್ಸ್ ಎಂಬವರು.

 

ಸ್ಟಾನ್ಲಿ ಜೋನ್ಸ್ ಅಮೇರಿಕಾದ ಮೇರಿಲ್ಯಾಂಡ್ ನ ಬಾಲ್ಟಿಮೋರ್ ನವರು. ಅವರು ಅಮೇರಿಕನ್ ಮೆಥೋಡಿಸ್ಟ್ ಚರ್ಚ್ನ ಸದಸ್ಯರಾಗಿದ್ದರು ಮತ್ತು 1907 ರಲ್ಲಿ ಸುದೀರ್ಘ ಪ್ರಯಾಣದ ನಂತರ ಉತ್ತರ ಪ್ರದೇಶದ ಲಕ್ನೋಗೆ ಬಂದರು. ಸ್ಟಾನ್ಲಿ ಜೋನ್ಸ್ ಅವರನ್ನು ಅಮೆರಿಕನ್ ಮಿಷನರಿ ಸೊಸೈಟಿ ಬೆಂಬಲಿಸಿತು. ಅಕ್ಷರಸ್ಥರು ಮತ್ತು ಅತ್ಯಂತ ಕೆಳವರ್ಗದ ಜಾತಿಗಳು ಸೇರಿದಂತೆ ಉತ್ತರ ಪ್ರದೇಶದ ಎಲ್ಲಾ ಪ್ರದೇಶಗಳಲ್ಲಿ ಅವರು ತಮ್ಮ ಸೇವೆಯನ್ನು ಮಾಡುತ್ತಿದ್ದರು. ಸ್ಟಾನ್ಲಿ ಉತ್ತರ ಪ್ರದೇಶದಲ್ಲಿ ಮೊದಲ ಕ್ರಿಶ್ಚಿಯನ್ ಮಿಷನ್ ಆಸ್ಪತ್ರೆಯನ್ನು ಪ್ರಾರಂಭಿಸಿ ಜನರಿಗೆ ಸುವಾರ್ತೆ ಸಾರಿದರು. ಮತ್ತು ಅನೇಕ ಸ್ಥಳಗಳಲ್ಲಿ ಅವರು ಬೀದಿಗಳಲ್ಲಿ ನಿಂತು ಸುವಾರ್ತೆಯನ್ನು ಸಾರಿದರು. ಅವರ ಸತತ ಪ್ರಯತ್ನದಿಂದ ಅಲ್ಲಲ್ಲಿ ಅನೇಕ ವ್ಯಕ್ತಿಗಳು ರಕ್ಷಿಸಲ್ಪಟ್ಟರು. "ದಿ ಕ್ರೈಸ್ಟ್ ಆಫ್ ದಿ ಇಂಡಿಯನ್ ರೋಡ್ಸ್" ಎಂಬ ಇವರ ಪುಸ್ತಕ ಅನೇಕ ಅಕ್ಷರಸ್ಥ ಅನ್ಯಜನರಲ್ಲಿ ಯೇಸುವನ್ನು ತಿಳಿದುಕೊಳ್ಳಲು ಮತ್ತಷ್ಟು ಪ್ರೇರಣೆಯಾಗಿತ್ತು. ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರೂ ಅವರ ಸೇವೆಯಲ್ಲಿ ಆಕರ್ಷಿಸಲ್ಪಟ್ಟಿದ್ದರು. ಸ್ಟಾನ್ಲಿ ಜೋನ್ಸ್ ಗಾಂಧೀಜಿಯವರ ಉತ್ತಮ ಸ್ನೇಹಿತರಾಗಿ ಕಂಡರು.

 

ಉತ್ತರಪ್ರದೇಶದ ನಂತರ ಮಹಾರಾಷ್ಟ್ರ ಸೇರಿದಂತೆ ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಸುತ್ತಾಡಿ ಸೇವೆ ಮಾಡಿದರು. ಅವರು ಕ್ರೈಸ್ತ ಆಶ್ರಮವನ್ನು ಸ್ಥಾಪಿಸಿ ಅದರ ಮೂಲಕ ಸಾವಿರಾರು ಜನರಿಗೆ ಸುವಾರ್ತೆಯನ್ನು ಪ್ರಕಟಿಸಿದರು. ಸುವಾರ್ತೆಯಿಲ್ಲದೆ ಬರಿದಾಗಿದ್ದ ಉತ್ತರ ಪ್ರದೇಶದಲ್ಲಿ, ಸ್ಟಾನ್ಲಿ ಜೋನ್ಸ್ ಅವರು ಬಿತ್ತಿದ ದೇವರ ವಾಕ್ಯವೆಂಬ ಬೀಜವು ಚಿಗುರಿ ಇಂದು ಫಲಕೊಡಲು ಪ್ರಾರಂಭಿಸಿದೆ. ಸ್ಟಾನ್ಲಿ ಜೋನ್ಸ್ ರವರು ಬಿತ್ತಿದ ದೇವರ ವಾಕ್ಯಗಳು ಮೊಳಕೆಯೊಡೆದು ಫಲಪ್ರದವಾಗಿ ಕಾಣಲ್ಪಡುತ್ತಿದೆ. ಇಂದು ಉತ್ತರ ಪ್ರದೇಶದಲ್ಲಿ ಅನೇಕ ಮಿಷನರಿಗಳು ಕೆಲಸ ಮಾಡುತ್ತಿದ್ದರೂ, ಅವರೆಲ್ಲರಿಗೂ ಮೂಲಮಾದರಿಯಾಗಿದ್ದ ಸ್ಟಾನ್ಲಿ ಜೋನ್ಸ್ ಅವರ ಸೇವೆಯನ್ನು ನಾವು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ಈ ಅದ್ಭುತವಾದ ದೇವರ ಮನುಷ್ಯನಿಗಾಗಿ ನಾವು ದೇವರನ್ನು ಸ್ತುತಿಸೋಣ.

- Bro. ಜೇಕಬ್ ಶಂಕರ್

 

ಪ್ರಾರ್ಥನಾ ಅಂಶ:

ಈ ತಿಂಗಳು ಪೂರ್ತಿಯಾಗಿ ನಡೆಯುವಂತಹ ಸೇವೆಗಳಲ್ಲಿ ದೇವರ ಹಸ್ತವು ಜೊತೆಯಿದ್ದು ನಡೆಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al Elexbet matbet giriş matbet instagram unban x unban twitter unban palacebet setrabet