By Village Missionary Movement
Monday, 07-Aug-2023ಧೈನಂದಿನ ಧ್ಯಾನ(Kannada) – 07.08.2023
ಬಂಗಾಳ
"…ನೀವು ಲೋಕದ ಎಲ್ಲಾ ಕಡೆಗೆ ಹೋಗಿ ಜಗತ್ತಿಗೆಲ್ಲಾ ಸುವಾರ್ತೆಯನ್ನು ಸಾರಿರಿ" – ಮಾರ್ಕನು 16:15
ಕ್ರಿಸ್ತನಿಗಾಗಿ ಬಿತ್ತಿದ ಗೋಧಿಯ ಕಾಳುಗಳಲ್ಲಿ ಒಂದಾದ ವಿಲಿಯಂ ಕೇರಿಯವರು ಬಂಗಾಳ ದೇಶದ ಉಜ್ಜೀವನಕ್ಕಾಗಿ ಮಾಡಿದ ಕೆಲಸ ಅಪಾರವಾಗಿದೆ. ಇಂಗ್ಲೆಂಡಿನಲ್ಲಿ ಹುಟ್ಟಿ ಹಲವು ಭಾಷೆಗಳನ್ನು ಕಲಿತು ಬೋಧಕರಾಗಿ ದೇವರ ಕರೆಯುವಿಕೆಗೆ ಕಿವಿಗೊಟ್ಟು ಡ್ಯಾನಿಶ್ ಹಡಗಿನಲ್ಲಿ ಹೆಂಡತಿ ಮಕ್ಕಳೊಂದಿಗೆ ಕಲ್ಕತ್ತಾಕ್ಕೆ ಬಂದು ಸೇರಿದರು. ಅವರು ತಮ್ಮ ದೇಹವನ್ನು, ವಸ್ತುಗಳನ್ನು ಮತ್ತು ಆತ್ಮವನ್ನು ನಮ್ಮ ಭಾರತ ಭೂಮಿಗೆ ಕಾಣಿಕೆಯಾಗಿ ಅರ್ಪಿಸಿದರು. ಅವರು ಪುನಃ ತಾಯ್ನಾಡಿಗೆ ಹಿಂತಿರುಗಲೇ ಇಲ್ಲ. ಹೊಸ ಮಣ್ಣು, ಹೊಸ ವಾತಾವರಣ, ಹೊಸ ಪದ್ಧತಿಗಳು, ಹೊಸ ಭಾಷೆ ಇಂಥಹ ಪರಿಸ್ಥಿತಿಯಲ್ಲಿ ಅವರು ಬಂಗಾಳಿ ಭಾಷೆಯನ್ನು ಕಲಿಯಲು ಮತ್ತು ಸುವಾರ್ತೆ ಸಾರುವ ಕೆಲಸವನ್ನು ಪ್ರಾರಂಭಿಸಲು ಬಯಸಿದರು. ಮಾಲ್ಟಾದ ಸೆಣಬಿನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಬಂಗಾಳಿ, ಮರಾಠಿ ಮತ್ತು ಸಂಸ್ಕೃತವನ್ನು ಕಲಿತರು.
1800 ರಲ್ಲಿ, ವಿಲಿಯಂ ಕೇರಿ, ವಿಲಿಯಂ ವಾರ್ಡ್ ಮತ್ತು ಜೋಶುವಾ ಮಾರ್ಸ್‌ಮನ್ ಇವರು ಡ್ಯಾನಿಶ್ ವಸಾಹತು ಪಟ್ಟಣವಾದ ಸೆರಾಂಪೋರ್‌ನಿಂದ ಸುವಾರ್ತಾಬೋಧಕ ಕೆಲಸವನ್ನು ಪ್ರಾರಂಭಿಸಿದರು. ನಂತರ, ಅನಾರೋಗ್ಯದ ಕಾರಣ ಅವರ ಹೆಂಡತಿ ಮತ್ತು ಅವರ ಮಗು ಮರಣ ಹೊಂದಿದ ನಂತರ, ಅವರು ತಮ್ಮ ಸುವಾರ್ತಾ ಸೇವೆಯನ್ನು ಮತ್ತು ಶೈಕ್ಷಣಿಕ ಕೆಲಸವನ್ನು ಮುಂದುವರೆಸಿದರು. ಅವರು 1801 ರಲ್ಲಿ ಹೊಸ ಒಡಂಬಡಿಕೆಯನ್ನು ಬಂಗಾಳಿ ಭಾಷೆಗೆ ಅನುವಾದಿಸಿದರು. ಇದನ್ನು ವಿಲಿಯಂ ವಾರ್ಡ್, ಜೋಶುವಾ ಮಾರ್ಸ್ಮನ್ ಮತ್ತು ಅವರ ಪತ್ನಿ ಹನ್ನಾ ಅವರು ಸೇರಿ ಮುದ್ರಿಸಿದ್ದಾರೆ. ಅವರು ದಿನಾಜ್‌ಪುರದಲ್ಲಿ 40 ವಿದ್ಯಾರ್ಥಿಗಳೊಂದಿಗೆ ಶಿಕ್ಷಣದ ಹಾದಿಯನ್ನು ಪ್ರಾರಂಭಿಸಿದರು. ಅವರು ಆರಂಭಿಸಿದ ಸೆರಾಂಪೋರ್ ಶಿಕ್ಷಣ ಸಂಸ್ಥೆ ವಿಶ್ವವಿದ್ಯಾನಿಲಯವಾಯಿತು. ಅವರು ಅಖಿಲ ವಿಶ್ವ ಸಭೆಗಳ ಸ್ಥಾಪಕರು. ಅವರು ಭಾರತದಲ್ಲಿ ಸಾಮಾಜಿಕ ಸುಧಾರಣೆಯಲ್ಲಿ ತೊಡಗಿಸಿಕೊಂಡಿದ್ದರು ಮತ್ತು "ಜೊತೆಕಟ್ಟಿಗೆಗಳೊಂದಿಗೆ ಸುಡುವುದು" (ಸತಿ) ಎಂಬ ಮಾರಣಾಂತಿಕ ದುಷ್ಟತನವನ್ನು ನಿಲ್ಲಿಸಲು ಕಾರಣಕರ್ತರಾಗಿದ್ದರು. "ಯೇಸುಕ್ರಿಸ್ತನು ಕೇವಲ ಮೇಲ್ನಾಡಿನ ಜನರಿಗೆ ಮಾತ್ರವಲ್ಲದೆ ಎಲ್ಲಾ ದೇಶಗಳವರಿಗೂ ಸ್ವಂತ" ಎಂಬ ಅಂಶಕ್ಕೆ ಅನುಗುಣವಾಗಿ ಬಂಗಾಳಿ ಭಾಷೆಯಲ್ಲಿ ನುಡಿದ ಅವರ ಮಾತುಗಳು ಅನ್ಯಧರ್ಮೀಯರನ್ನು ಅವರ ಕಡೆಗೆ ಆಕರ್ಷಿಸಿದವು. ಅನೇಕ ಭಾಷೆಗಳನ್ನು ಕಲಿಯುವುದು ಮತ್ತು ಸತ್ಯವೇದವನ್ನು ಆಯಾ ಭಾಷೆಗಳಿಗೆ ಅನುವಾದಿಸುವುದು ಅವರ ಉದ್ದೇಶವಾಗಿತ್ತು. ಬಹುಪ್ರಯಾಸಪಟ್ಟು ಭಾಷಾಂತರಿಸಿದ ಪ್ರತಿಗಳು ಮತ್ತು ಮುದ್ರಣಾಲಯವು ಬೆಂಕಿ ಹೊತ್ತಿಕೊಂಡು ಉರಿಯಿತು. ಮನಸ್ಸೋತುಹೋಗದೆ ಅವರು ಅನುವಾದ ಕಾರ್ಯವನ್ನು ಪುನರಾರಂಭಿಸಿದರು. ಸತ್ಯವೇದದ ಕಲಿಕೆಗೆ ಶೈಕ್ಷಣಿಕ ಜ್ಞಾನ ಬೇಕು ಎಂಬುದನ್ನು ಅರಿತು ಪ್ರಾಥಮಿಕ ಶಿಕ್ಷಣದಲ್ಲಿ ಆರಂಭವಾದ ಪಯಣ ವಿಶ್ವವಿದ್ಯಾಲಯವಾಗಿ ಬೆಳೆಯಿತು. ಹೀಗೆ ಅವರು ಬಿತ್ತಿದ ಬೀಜಗಳು ಬಂಗಾಳದ ಭೂಮಿಯಲ್ಲಿ ದೇವರ ಮೇಲಿನ ಪ್ರೀತಿಯನ್ನು ಸಾರುತ್ತಿದೆ. "ದೇವರಿಂದ ಮಹತ್ತರವಾದುದನ್ನು ನಿರೀಕ್ಷಿಸು, ದೇವರಿಗಾಗಿ ಮಹತ್ತರವಾದುದನ್ನು ಸಾಧಿಸು" ಎಂಬುದೇ ಅವರ ಘೋಷಣೆಯಾಗಿತ್ತು. ಆಮೆನ್!
- Mrs. ಭುವನಾ ಧನಪಾಲನ್
ಪ್ರಾರ್ಥನಾ ಅಂಶ:
ತಿರುನಲ್ವೇಲಿಯಲ್ಲಿ ಯೌವನಸ್ಥರ ಉಜ್ಜೀವನ ಕೂಟ ನಡೆಯುವ ಮೈದಾನದಲ್ಲಿ ದೇವರ ಕಾರ್ಯವು ಬಲವಾಗಿ ಪ್ರಕಟವಾಗುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482