Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 10.08.2023
Share:

By Village Missionary Movement

Wednesday, 09-Aug-2023

ಧೈನಂದಿನ ಧ್ಯಾನ(Kannada) – 10.08.2023

 

ಜಾರ್ಖಂಡ್ 

 

"ನಾನು ನಿಮಗೆ ನಿಜನಿಜವಾಗಿ ಹೇಳು ತ್ತೇನೆ--ಗೋದಿಯ ಕಾಳು ಭೂಮಿಯಲ್ಲಿ ಬಿದ್ದು ಸಾಯ ದಿದ್ದರೆ ಅದು ಒಂದೇ ಆಗಿ ಉಳಿಯುವದು; ಅದು ಸತ್ತಮೇಲೆ ಬಹಳ ಫಲಕೊಡುವದು" - ಯೋಹಾನ 12:24

 

ಜಾರ್ಖಂಡ್ ಬಿಹಾರದಿಂದ ಬೇರ್ಪಡಿಸಿ ಹೊಸದಾಗಿ ರೂಪುಗೊಂಡ ರಾಜ್ಯವಾಗಿದೆ. "ಮಿಷನರಿಗಳ ಸ್ಮಶಾನ" ಎಂದು ಕರೆಯಲ್ಪಡುವ ಬಿಹಾರದಂತೆ, ಜಾರ್ಖಂಡ್ ಸಹ ಸುವಾರ್ತೆಗೆ ಗಂಭೀರ ಸವಾಲಾಗಿ ಕಂಡುಬಂದಿತು. ಜಾರ್ಖಂಡ್‌ನ ಜನರ ನಡುವೆ ವಿರೋಧಗಳು ಎಂಬುದಕ್ಕಿಂತ, ಅಲ್ಲಿರುವ ಅನಾರೋಗ್ಯದ ಪರಿಸ್ಥಿತಿಗಳಿಂದಾಗಿ ಅಲ್ಲಿಗೆ ಸುವಾರ್ತೆಗಾಗಿ ಹೋಗುವ ಪ್ರತಿಯೊಬ್ಬ ಮಿಷನರಿಯು ಅನಾರೋಗ್ಯಕ್ಕೆ ಒಳಗಾಗಿ ಸಾಯುತ್ತಿದ್ದದ್ದು ದೊಡ್ಡ ಸವಾಲಾಗಿತ್ತು. ಒಂದು ಹಂತದಲ್ಲಿ ಜಾರ್ಖಂಡ್ ಸೇವೆ ಎಂದರೇನೆ ಸೇವೆಗೆ ಹೋಗಲು ಯಾರೂ ಮುಂದೆ ಬರದೆ ತಪ್ಪಿಸಿಕೊಳ್ಳಲು ಪ್ರಾರಂಭಿಸಿದರು. ಈ ರಾಜ್ಯದಲ್ಲಿ ಮಾಲ್ಟೊ ಎಂಬ 3 ಲಕ್ಷಕ್ಕೂ ಹೆಚ್ಚು ಬುಡಕಟ್ಟು ಜನರು ಕಂಡುಬಂದಿದ್ದಾರೆ.

 

ತಮಿಳುನಾಡಿನ ಕಡೆಕೋಡಿ ಜಿಲ್ಲೆಯಲ್ಲಿ ನಡೆದ ಸಂಜೆಯ ಕೂಟದಲ್ಲಿ ಒಬ್ಬ ವ್ಯಕ್ತಿ ಯೇಸುವನ್ನು ಸ್ವೀಕರಿಸಿದನು. ಯೇಸುವನ್ನು ಸ್ವೀಕರಿಸಿದ ಆ ವ್ಯಕ್ತಿ ತನ್ನನ್ನು ಮಿಷನರಿ ಕೆಲಸಕ್ಕೆ ಅರ್ಪಿಸಿಕೊಂಡನು. ಮೊದಲು ಧರ್ಮಪುರಿ ಜಿಲ್ಲೆಯಲ್ಲಿ ಕೆಲವು ವರ್ಷಗಳ ಕಾಲ ಸೇವೆ ಮಾಡಿದರು. ನಂತರ ಅವರು ಜಾರ್ಖಂಡ್‌ನ ಮಾಲ್ಟೊ ಜನರ ಬಗ್ಗೆ ತಿಳಿದುಕೊಂಡು, ಆತ್ಮಭಾರವುಳ್ಳವರಾಗಿ ಅಲ್ಲಿಗೆ ಹೋಗಲು ತನ್ನ ಬಯಕೆಯನ್ನು ಅವರ ಸೇವಾ ಸಂಸ್ಥೆಯಲ್ಲಿ ತಿಳಿಸಿದರು. ಅನೇಕ ಹೋರಾಟಗಳ ನಡುವೆ, ಅವರು ತಮ್ಮ ಹೆಂಡತಿ ಮತ್ತು ಮಕ್ಕಳೊಂದಿಗೆ ಕುಟುಂಬವಾಗಿ ಜಾರ್ಖಂಡ್ ರಾಜ್ಯದಲ್ಲಿ ಸೇವೆ ಮಾಡಲು ಪ್ರಾರಂಭಿಸಿದರು. ಯಾವ ಜನರನ್ನು ಪ್ರೀತಿಸಿ ಸೇವೆ ಮಾಡಲು ಹೋದರೋ ಅಲ್ಲಿ ತಮ್ಮ ನಿರೀಕ್ಷೆಯಂತೆ ಮಿಷನರಿ ಸೇವೆಯಲ್ಲಿ ಯಾವ ಬೆಳವಣಿಗೆಯೂ ಕಾಣಲ್ಪಡಲಿಲ್ಲ. ಅಲ್ಲದೆ, ಅವರ ಮಿಷನರಿ ಕಾರ್ಯದ ವಿರುದ್ಧ ಪ್ರತಿಭಟನೆಗಳು ನಡೆದವು ಮತ್ತು ವಿರೋಧಿಗಳು ಅವರನ್ನು ದೂಷಿಸಿದರು. ಆದರೆ ಹಿಂಜರಿಯದೆ ಅವರು ಮಿಷನರಿ ಕೆಲಸವನ್ನು ಮುಂದುವರೆಸಿದರು. ಒಂದು ಹಂತದಲ್ಲಿ ಮಲೇರಿಯಾ ಜ್ವರದಿಂದ ಬಳಲುತ್ತಾ ಅದರಿಂದ ಯಾವ ಸ್ವಸ್ಥತೆಯೂ ಲಭಿಸದೆ ಅವರು ಮತ್ತು ಅವರ ಮಗ ಅದೇ ಮಾಲ್ಟೊ ಜನರ ನಡುವೆ ಗೋಧಿಯ ಕಾಳುಗಳಂತೆ ಸತ್ತು ಹೋದರು.

 

ಅವರ ಅಂತ್ಯಕ್ರಿಯೆಯ ಆರಾಧನೆಯಲ್ಲಿ, ಇವರು ಅಲೆದಾಡಿದ ಮತ್ತು ಸೇವೆ ಸಲ್ಲಿಸಿದ ಅನೇಕ ಪರ್ವತ ಹಳ್ಳಿಗರು ಪಾಲ್ಗೊಂಡಿದ್ದರು ಮತ್ತು ಅವರು ಅಲ್ಲಿ ಯೇಸು ನಿಂತು ಕಣ್ಣೀರು ಸುರಿಸುತ್ತಿರುವ ದೃಶ್ಯವನ್ನು ನೋಡಿದ್ದಾರೆ. ಈ ಮಿಷನರಿಯ ಹೆಸರು ಜಯರಾಜ್. ಇವರ ಮೂಲಕ ಮಾಲ್ಟೊ ಜನರ ನಡುವೆ 116 ಆಲಯಗಳನ್ನು ನಿರ್ಮಿಸಲಾಯಿತು. ಜಯರಾಜ್ ಎಂಬ ಮಿಷನರಿಯು ಮಾಲ್ಟೊ ಜನರ ನಡುವೆ ಒಂದು ದೊಡ್ಡ ಮಟ್ಟದಲ್ಲಿ ಸುಗ್ಗಿಯನ್ನು ನೋಡಲು ಗೋಧಿಯ ಕಾಳಾಗಿ ನೆಲದಲ್ಲಿ ಬಿತ್ತಲ್ಪಟ್ಟಿದ್ದಾರೆ. ಅವರ ನಂತರ, ಸ್ಟಾನ್ ಅವೆಲರಿ ಎಂಬ ಮಿಷನರಿ ಈ ಜನರ ನಡುವೆ ತಂಡವಾಗಿ ಸೇವೆ ಮಾಡಿ ಅನೇಕ ಸಭೆಗಳನ್ನು ನಿರ್ಮಿಸಿದರು. ಕ್ರೈಸ್ತರೇ ಇಲ್ಲದ ಒಂದು ರಾಜ್ಯದಲ್ಲಿ ಇಂದು ಶೇಕಡಾ ಎಂಟರಷ್ಟು ಕ್ರೈಸ್ತರು ಕಂಡುಬರುವುದಕ್ಕೆ ಕಾರಣ ತಮ್ಮನ್ನೇ ತ್ಯಾಗವಾಗಿ ಒಪ್ಪಿಸಿಕೊಟ್ಟ ಮಿಷನರಿಗಳು ಇವರಿಗಾಗಿ ದೇವರನ್ನು ಸ್ತುತಿಸೋಣ. ಅಜ್ಞಾತ ಸ್ಥಳಗಳಲ್ಲಿ ಯೇಸುವನ್ನು ಪ್ರಕಟಿಸಲು ಮುಂದಿನ ಪೀಳಿಗೆಯನ್ನು ಪ್ರೋತ್ಸಾಹಿಸೋಣ.

- Mrs. ಜೇಕಬ್ ಶಂಕರ್

 

ಪ್ರಾರ್ಥನಾ ಅಂಶ:

ತಿರುನಲ್ವೇಲಿ ಯೌವನಸ್ಥರ ಉಜ್ಜೀವನ ಕೂಟದಲ್ಲಿ ಮೈದಾನದಲ್ಲಿನ ವೇದಿಕೆ ಮತ್ತು ಬೆಳಕು, ಧ್ವನಿವರ್ಧಕ ವ್ಯವಸ್ಥೆಗಳು ಕ್ರಮವಾಗಿ ಕಂಡುಬರುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet perabet perabet giriş padişahbet padişahbet giriş meritking meritking giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş jojobet jojobet betplay jojobet esbet sonbahis tambet grandpashabet betgit mercurecasino