Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 15.08.2023
Share:

By Village Missionary Movement

Tuesday, 15-Aug-2023

ಧೈನಂದಿನ ಧ್ಯಾನ(Kannada) – 15.08.2023

 

ನಿಜವಾದ ಸ್ವಾತಂತ್ರ್ಯ 

 

"…ಪಾಪಮಾಡುವವರೆಲ್ಲರು ಪಾಪಕ್ಕೆ ದಾಸರಾಗಿದ್ದಾರೆ" - ಯೋಹಾನ 8:34

 

ನಾವು ನಮ್ಮ ಭಾರತದ 76 ನೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ನಿಜವಾದ ಸ್ವಾತಂತ್ರ್ಯ ಯಾವುದು ಎಂದು ನಾವು ಯೋಚಿಸೋಣ. ನಮ್ಮ ದೇಶದ ಜನರು ಪ್ರಪಂಚದ ಅಧಿಪತಿಯಾದ ಸೈತಾನನಿಗೆ ಗುಲಾಮರಾಗಿದ್ದೇವೆ ಎಂದು ಅರಿತುಕೊಳ್ಳದೆ ತಮ್ಮ ಮನಸ್ಸು ಮತ್ತು ಶರೀರ ಬಯಸುವುದನ್ನೆಲ್ಲಾ ಮಾಡಲು ಸಂಪೂರ್ಣವಾದ ಹಕ್ಕು ತಮಗಿದೆ ಎಂದು ಭಾವಿಸಿ ಅನೇಕ ಮಾರಣಾಂತಿಕ ಪಾಪಗಳಿಗೆ ಮತ್ತು ಪಾಪದ ಅಭ್ಯಾಸಗಳಿಗೆ ಗುಲಾಮರಾಗಿದ್ದಾರೆ, ಸಲಿಂಗಕಾಮದಂತಹ ಪಾಪಗಳನ್ನು ಮಾಡುವುದಾಗಿ ಹೇಳಿಕೊಂಡು ಪ್ರತಿಭಟನೆಗಳಲ್ಲಿ ತೊಡಗುತ್ತಿದ್ದಾರೆ.

 

ಒಬ್ಬ ವ್ಯಕ್ತಿ ಕರಡಿಗೆ ಆಕರ್ಷಕವಾಗಿ ನೃತ್ಯ ಮಾಡಲು ಕಲಿಸಿಕೊಟ್ಟು ಅದರ ಮೂಲಕ ಹಣವನ್ನು ಗಳಿಸುತ್ತಿದ್ದನಂತೆ. ನೃತ್ಯ ಕಲಿಯಲು ಕರಡಿ ತಿಂದ ಏಟುಗಳು ಬಹಳ. ಅವನಿಂದ ತಪ್ಪಿಸಿಕೊಂಡು ಕಾಡಿಗೆ ಓಡಿಹೋದ ಆ ಕರಡಿ ಇತರ ಪ್ರಾಣಿಗಳಿಗಿಂತ ತನ್ನನ್ನು ತಾನು ಶ್ರೇಷ್ಠ ಎಂದು ತೋರಿಸಿಕೊಳ್ಳಲು ಆಗಾಗ್ಗೆ ನೃತ್ಯ ತಂತ್ರಗಳನ್ನು ಪ್ರದರ್ಶಿಸುತ್ತಿತ್ತು. ಒಂದು ದಿನ ಮುದುಕ ಕರಡಿ ಹೇಳಿತು, "ನೀನು ಗುಲಾಮನಾಗಿದ್ದು ಘೋರವಾದ ಏಟುಗಳನ್ನು ತಿಂದು ಕಲಿತ ನೃತ್ಯವನ್ನು ನಮಗೆ ತೋರಿಸಿ ಹೆಮ್ಮೆಪಡುತ್ತಿದ್ದೀಯಾ" ಎಂದು ಹೇಳಿತಂತೆ. ಆ ದಿನದಿಂದ ಕರಡಿ ನೃತ್ಯವನ್ನು ನಿಲ್ಲಿಸಿಬಿಟ್ಟಿತು. ಆ ಕರಡಿಗೂ ತಾನು ಗುಲಾಮ ಎಂಬ ಭಾವನೆ ಇತ್ತು. ಆದರೆ ಸೈತಾನನ ಸೆರೆಯಾಳುಗಳು ಮತ್ತು ಅವನ ಆಜ್ಞೆಯ ಮೇರೆಗೆ ಪಾಪದ ದಾಸರಾಗಿರುವ ಜನರು ಅರಿವಿಲ್ಲದೆ ಬದುಕುತ್ತಿದ್ದಾರೆ, ತಮ್ಮನ್ನು ತಾವು ಸ್ವತಂತ್ರರು ಎಂದು ಕಲ್ಪಿಸಿಕೊಳ್ಳುತ್ತಾರೆ. ಸೈತಾನನ ಪಾಪದ ಗುಲಾಮಗಿರಿಯಿಂದ ನಮ್ಮನ್ನು ಬಿಡುಗಡೆ ಮಾಡುವ ಏಕೈಕ ದೇವರು ಯೇಸು ಕ್ರಿಸ್ತನು ಮಾತ್ರವೇ!

 

ಅಮೆರಿಕದ ಮಾಜಿ ಅಧ್ಯಕ್ಷ ಕೆನಡಿ, “ದೇಶ ನಮಗೆ ಏನು ಮಾಡುತ್ತಿದೆ ಎಂದು ಕೇಳದೇ, ದೇಶಕ್ಕಾಗಿ ನಾವು ಏನು ಮಾಡಬೇಕು? ಎಂದು ಕೇಳಿರಿ" ಎಂದರು. ನಾವು ಮತ್ತು ನಮ್ಮ ದೇಶವಾಸಿಗಳು ಸೈತಾನನ ದಾಸ್ಯದಿಂದ ಬಿಡುಗಡೆ ಹೊಂದಿ, ಕ್ರಿಸ್ತನ ಗುಲಾಮರಾಗಬೇಕೆಂದು ಪ್ರಾರ್ಥಿಸಿ ಗೆಲ್ಲುವುದೇ ದೇಶಕ್ಕೆ ನಾವು ಮಾಡುವ ದೊಡ್ಡ ಕರ್ತವ್ಯ. ಕೋಟ್ಯಂತರ ಜನರಿಂದ ತುಂಬಿರುವ ಈ ದೇಶದಲ್ಲಿ ನಮ್ಮನ್ನು ಒಂದು ಸಣ್ಣ ಗುಂಪಾಗಿ ಆರಿಸಿಕೊಂಡ ನಮ್ಮ ದೇವರು ಈ ಕರ್ತವ್ಯವನ್ನು ನಾವು ನಮ್ಮ ದೇಶಕ್ಕಾಗಿ ಮಾಡುವುದಿಲ್ಲವೇ ಎಂದು ಕಾತುರದಿಂದ ಹಂಬಲಿಸುತ್ತಿದ್ದಾರೆ. ವಿಧೇಯರಾಗೋಣವಾ? ಈ ಪ್ರಾರ್ಥನಾ ಸೇವೆಯನ್ನು ಯಾರಾದರೂ ಎಲ್ಲಿಯಾದರೂ, ಯಾವಾಗ ಬೇಕಾದರೂ, ಪ್ರತಿದಿನ ಮಾಡಬಹುದು!

- Mrs. ಗೀತಾ ರಿಚರ್ಡ್

 

ಪ್ರಾರ್ಥನಾ ಅಂಶ:

ಇಂದು ಪಾಲಯಂಕೋಟ್ಟೈನಲ್ಲಿ ನಡೆಯುವ ಯೌವನಸ್ಥರ ಉಜ್ಜೀವನ ಕೂಟದಲ್ಲಿ ಅನೇಕ ಯೌವನಸ್ಥರು ಭಾಗವಹಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet güncel holiganbet giriş holiganbet sahabet onwin bets10 bets10 giriş bets10 güncel giriş betcio atlasbet casibom meritking casibom giriş perabet padişahbet padişahbet giriş holiganbet cashwin tambet grandpashabet bahiscasino amgbahis betbey amgbahis radissonbet betpuan cashwin matbet perabet perabet giriş instagram ban service pashagaming pashagaming giris gorabet gorabet giris grandpashabet çarkbet çarkbet giriş deneme bonusu casibom giriş casibom vaycasino vaycasino giriş casibom meritking casibom casibom giriş meritking meritking giriş holiganbet