By Village Missionary Movement
Tuesday, 15-Aug-2023ಧೈನಂದಿನ ಧ್ಯಾನ(Kannada) – 16.08.2023
ಕಣ್ಣೀರು ಒರೆಸೋಣ
"ದಿಕ್ಕಿಲ್ಲದವನ ಪ್ರಾರ್ಥನೆಗೆ ಕಿವಿಗೊಡುತ್ತಾನೆ; ಅವರ ಪ್ರಾರ್ಥನೆಯನ್ನು ತಿರಸ್ಕರಿ ಸುವದಿಲ್ಲ" - ಕೀರ್ತನೆ 102:16
ಹೃದಯ ಖಾಯಿಲೆಯಿಂದ ಇನ್ನು ಕೆಲವೇ ತಿಂಗಳುಗಳಲ್ಲಿ ಸಾಯುವ ಸ್ಥಿತಿಯಲ್ಲಿದ್ದ ನನ್ನನ್ನು ಯೇಸು ಗುಣಪಡಿಸಿದರು. ನನ್ನನ್ನು ಗುಣಪಡಿಸಿದವರು ಯೇಸುವೇನಾ ಎಂದು ನಾನು ಅನುಮಾನದಲ್ಲಿದ್ದಾಗ, ಯೇಸು ಕ್ರಿಸ್ತನು ಲೋಕದ ಜನರಿಗಾಗಿ ಅಳುತ್ತಾ ಪ್ರಲಾಪಿಸುತ್ತಿರುವವರಾಗಿ ನನಗೆ ತನ್ನನ್ನು ತೋರಿಸಿಕೊಂಡರು. ಜನರಿಗಾಗಿ ಕಣ್ಣೀರು ಸುರಿಸುತ್ತಿರುವ ಯೇಸುವಿನ ಕಣ್ಣೀರನ್ನು ನಾನು ಒರೆಸಬೇಕೆಂದು ಬಯಸಿದೆ. ಜನರು ಅವರನ್ನು ನಂಬಿದರೆ, ಅವರ ಅಳು ನಿಲ್ಲುತ್ತದೆ ಎಂದು ಯೋಚಿಸಿ ಮುಂದಿನ ವಾರವೇ ನಾನು ಯೇಸುವಿನ ಬಗ್ಗೆ ಹೇಳಲು ಹತ್ತಿರದ ಹಳ್ಳಿಗಳಿಗೆ ಸೈಕಲ್ ತೆಗೆದುಕೊಂಡು ಹೋದೆ.
ನಾನು ಮೊದಲು ಸೇವೆಗೆ ಹೋದಾಗ ನನ್ನ ಬಳಿ ಬೈಬಲ್ ಅಥವಾ ಹೊಸ ಒಡಂಬಡಿಕೆ, ಹಸ್ತಪ್ರತಿ ಯಾವುದೂ ಇರಲಿಲ್ಲ. ವಾಸ್ತವವಾಗಿ, ಜನರಿಗೆ ಏನು ಹೇಳಬೇಕೆಂದು ಸಹ ನನಗೆ ಗೊತ್ತಿರಲಿಲ್ಲ. ನಾನು ಒಂದು ಹಳ್ಳಿಗೆ ಹೋಗಿ ಪ್ರತಿ ಮನೆಯಿಂದ ಜನರನ್ನು ಕರೆದು, "ಅಯ್ಯಾ, ಅಮ್ಮಾ! ಯೇಸು ನಿಮಗಾಗಿ ಅಳುತ್ತಿದ್ದಾರೆ, ನಿಮ್ಮ ಬಗ್ಗೆ ನೀವು ಯೋಚಿಸುವುದಕ್ಕಿಂತ ಹೆಚ್ಚಾಗಿ ಯೇಸು ನಿಮ್ಮ ಬಗ್ಗೆ ಚಿಂತಿಸುತ್ತಿದ್ದಾರೆ. ಅವರನ್ನು ನಂಬಿರಿ" ಎಂದು ಹೇಳುತ್ತಾ ಬಂದೆ.
ಸ್ವಲ್ಪ ಜನರು ಹೆಚ್ಚಾಗಿ ಸೇರಿದ್ದ ಒಂದು ಮನೆಯ ಮುಂದೆ ಬಂದಾಗ ಅವರು ನನ್ನನ್ನು ಕರೆದು ಸಾವಿನ ಅಂಚಿನಲ್ಲಿದ್ದ ಮುದುಕಿಯೊಬ್ಬಳ ಬಳಿಗೆ ಕರೆದುಕೊಂಡು ಹೋಗಿ, "ತಮ್ಮಾ ನೀನು ಯೇಸುವಿನವನು ತಾನೇ! ಈ ಅಜ್ಜಿಗೆ ಪ್ರಾರ್ಥಿಸು" ಎಂದರು. ನಾನೋ ಅಮಾಯಕವಾಗಿ ಅವರನ್ನೆಲ್ಲಾ ನೋಡುತ್ತಾ "ಅಯ್ಯಾ, ನನಗೆ ಪ್ರಾರ್ಥಿಸಲೆಲ್ಲಾ ಗೊತ್ತಿಲ್ಲ" ಎಂದು ಹೇಳಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದೆ. ಅಕ್ಕಪಕ್ಕದಲ್ಲಿದ್ದವರೆಲ್ಲ ಗುಂಪಾಗಿ ಬಂದು, “ಯೇಸು ಒಳ್ಳೇದು ಮಾಡುತ್ತಾರೆ ಎಂದು ಹೇಳಿದೆ ಅಲ್ವಾ ಈ ಅಜ್ಜಿಗೆ ಪ್ರಾರ್ಥಿಸು, ಪ್ರಾರ್ಥಿಸದೇ ಈ ಊರು ಬಿಟ್ಟು ಹೋಗೋಹಾಗಿಲ್ಲ” ಎಂದು ಬೆದರಿಸಿದರು. ನಾನು ಬೇರೆ ದಾರಿಯಿಲ್ಲದೆ ಕಣ್ಣು ತೆರೆದುಕೊಂಡೇ "ಯೇಸುವೇ ಇವರಿಗೇನೋ ಸಮಸ್ಯೆ ಇದೆ, ದಯವಿಟ್ಟು ನೀವು ಏನಾದರೂ ಮಾಡಿ" ಎಂದೆ. ನಾನು ಹೀಗೆ ಹೇಳಿ ಮುಗಿಸಿದ ತಕ್ಷಣವೇ ಆ ತಾಯಿಯವರು ಜೋರಾಗಿ ಒದ್ದಾಡಿಬಿಟ್ಟರು. ದೆವ್ವಗಳು ಕಿರುಚುತ್ತಾ ಒದ್ದಾಡಿಸಿ ಹೊರಹೋದವು. ಆ ತಾಯಿ ಇನ್ನು ಸತ್ತೇಹೋದರು ಎಂದುಕೊಂಡು ಓಡಲು ದಾರಿ ಹುಡುಕುತ್ತಿದ್ದೆ. ಇದ್ದಕ್ಕಿದ್ದಂತೆ ಅವರು ಎದ್ದು ಕುಳಿತು ಮಾತನಾಡಿದರು. ಅವರು ಸಂಪೂರ್ಣವಾಗಿ ಚೇತರಿಸಿಕೊಂಡರು.
ಇದನ್ನು ಓದುತ್ತಿರುವ ನೀವು ಸಹ ಯೇಸು ಕ್ರಿಸ್ತನ ಕಣ್ಣೀರನ್ನು ಒರೆಸಲು ಏನಾದರೂ ಮಾಡಿ. ನೀವು ರೋಗಿಗಳನ್ನು ನೋಡಿದಾಗ, "ಯೇಸುವಿನ ಬಲವುಳ್ಳ ಹೆಸರಿನಲ್ಲಿ" ಅವರಿಗಾಗಿ ಪ್ರಾರ್ಥಿಸಿರಿ. ಕರ್ತನು ಅದ್ಭುತಗಳನ್ನು ಮಾಡುತ್ತಾರೆ. ನನ್ನ ಪ್ರಾರ್ಥನೆಯನ್ನು ಕೇಳುತ್ತಾರೋ ಇಲ್ಲವೋ? ಎಂದು ಸಂದೇಹಪಡದೆ ನಿಸ್ಸಂದೇಹವಾಗಿ ನಂಬಿಕೆಯಿಂದ ಪ್ರಾರ್ಥಿಸಿರಿ. ಏಕೆ ಗೊತ್ತಾ ಸೇವೆ ಅವರದು. ಹಾಗಾಗಿ ಅವರೇ ಕಾರ್ಯ ಮಾಡುತ್ತಾರೆ. ಅದ್ಭುತಗಳನ್ನು ಮಾಡುತ್ತಾರೆ.
- Bro. K. ಡೇವಿಡ್ ಗಣೇಶನ್
ಪ್ರಾರ್ಥನಾ ಅಂಶ:
ನಮ್ಮ ಕ್ಯಾಂಪಸ್‌ನಲ್ಲಿ ನಡೆಯುವಂತಹ ವೈದ್ಯಕೀಯ ಸೇವೆಗಳ ಮೂಲಕ ಅನೇಕರು ರಕ್ಷಣೆ ಹೊಂದುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482