By Village Missionary Movement
Wednesday, 16-Aug-2023ಧೈನಂದಿನ ಧ್ಯಾನ(Kannada) – 17.08.2023
ಯಾವುದು ಮೌಲ್ಯ?
“…ಪ್ರಭಾವವನ್ನೂ ಮಾನವನ್ನೂ ಅವನಿಗೆ ಕಿರೀಟವಾಗಿ ಇಟ್ಟಿ” - ಕೀರ್ತನೆ 8:5
ಇಂದು ನಾವು ಮನುಷ್ಯನಿಗೆ ಮೌಲ್ಯ ಅಥವಾ ನಿಜವಾದ ಸ್ಥಾನಮಾನವನ್ನು ನೀಡುವುದು ಯಾವುದು ಎಂಬುದರ ಕುರಿತು ಯೋಚಿಸೋಣ. ನಾವು ಬದುಕುತ್ತಿರುವ ಈ ಸಮಾಜದಲ್ಲಿ ಒಬ್ಬನ ಗುಣಲಕ್ಷಣಗಳಿಗೆ ಕೊಡುವ ಮರ್ಯಾದೆಗಿಂತ ಅವನು ಉಡುವ ವಸ್ತ್ರಗಳಿಗೆ ಮತ್ತು ಬದುಕಲು ಕಟ್ಟಿಕೊಂಡಿರುವ ಮನೆಗೆ ಹೆಚ್ಚಿನ ಮೌಲ್ಯವನ್ನು ನೀಡಲಾಗುತ್ತಿದೆ. ಒಬ್ಬನು ಗಳಿಸುವ ಸಂಬಳದ ಮೊತ್ತ, ಇಟ್ಟುಕೊಂಡಿರುವ ಕಾರು ಇದೇ ಅವನ ಮೌಲ್ಯವನ್ನು ಹೆಚ್ಚಿಸುತ್ತದೆ ಎಂದು ಪರಿಗಣಿಸಲಾಗುತ್ತಿದೆ. ಆದರೆ ಸತ್ಯವೇನೆಂದರೆ ಮನುಷ್ಯನ ಒಳ್ಳೆಯ ಕಾರ್ಯಗಳು ಮತ್ತು ಆಂತರಿಕ ಸ್ವಭಾವವೇ ಅವನ ಮೌಲ್ಯವನ್ನು ಹೆಚ್ಚಿಸುತ್ತದೆ.
ಈ ಕುರಿತು ಕೌಟುಂಬಿಕ ಸಲಹೆಗಾರ ಮಿಲೋ ಅರ್ನಾಲ್ಡ್, ಹಿಂಬರಲು ಹೇಳುತ್ತಿದ್ದಾರೆ, "ಹಲವು ಪೋಷಕರು ತಮ್ಮ ಮಕ್ಕಳ ಭವಿಷ್ಯವನ್ನು ಅರಿಯದೇ ತಾವೇ ಹಾಳು ಮಾಡುತ್ತಿದ್ದಾರೆ. ಸಮಾಜದಲ್ಲಿ ತಮ್ಮ ಮಕ್ಕಳನ್ನು ಇತರ ಮಕ್ಕಳಿಗಿಂತ ಶ್ರೇಷ್ಟವಾದ ಬಟ್ಟೆ ತೊಡುವಂತೆ ಒತ್ತಾಯಿಸುತ್ತಿದ್ದಾರೆ. ಮಕ್ಕಳ ಸೌಕರ್ಯಕ್ಕಿಂತ ಪೋಷಕರ ತೃಪ್ತಿಯೇ ಮುಖ್ಯವಾಗಿಬಿಟ್ಟಿದೆ. ಈ ರೀತಿಯಾಗಿ ಬೆಳೆಸಲ್ಪಡುವ ಮಗು ಎರಡು ರೀತಿಯಲ್ಲಿ ಬಾಧಿಸಲ್ಪಡುತ್ತದೆ. ಒಂದು ಆ ಮಗು ಬಟ್ಟೆಯ ಬಗ್ಗೆ ಹೆಚ್ಚು ಯೋಚಿಸುತ್ತಲೇ ಇರುತ್ತದೆ. ಎರಡನೆಯದಾಗಿ ಇತರರನ್ನು ಮೆಚ್ಚಿಸಲು ಚೆನ್ನಾಗಿರುವ ಬಟ್ಟೆಗಳನ್ನು ಧರಿಸಬೇಕು ಎಂಬ ತಪ್ಪು ಕಲ್ಪನೆಗೆ ವ್ಯಸನಿಯಾಗಿಬಿಡುತ್ತದೆ. ತನ್ನನ್ನು ಯಾರೂ ಗಮನಿಸದಿದ್ದರೆ ಒಂದು ವಿಧವಾದ ತಗ್ಗಿಸಲ್ಪಡುವ ಮನೋಸ್ಥಿತಿಗೆ ಒಳಗಾಗುತ್ತದೆ. ಆ ಮಗು ಒಂದು ಹೆಣ್ಣಾಗಿದ್ದರೆ ತನ್ನ ಇಡೀ ಜೀವನವನ್ನು ಬಟ್ಟೆಯ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಹಣವನ್ನು ವ್ಯರ್ಥ ಮಾಡಿ ಶೀಘ್ರದಲ್ಲೇ ತನ್ನ ಗಂಡನಿಗೆ ಬಹಳ ನಷ್ಟವನ್ನುಂಟುಮಾಡುತ್ತಾಳೆ. ಹಾಗಾದರೆ ಪೋಷಕರು ಏನು ಮಾಡಬೇಕು? ತಮ್ಮ ಮಗು ಗುಂಪಿನಲ್ಲಿ ಬೇರೆ ಮಕ್ಕಳಿಗಿಂತ ಪ್ರತ್ಯೇಕವಾಗಿ ಕಾಣದಂತೆ ಸಾಧಾರಣ ಬಟ್ಟೆಗಳನ್ನು ಧರಿಸುವಂತೆ ಮಾಡಿ. ಶುಭ್ರವಾದ, ಆರಾಮದಾಯಕವಾದ ಬಟ್ಟೆಗಳನ್ನು ಧರಿಸಲು ಕೊಡಿ. ನಾವು ಧರಿಸಿರುವ ಬಟ್ಟೆಗಿಂತ ನಾವೇ ಮುಖ್ಯವಾದ ವ್ಯಕ್ತಿ ಎಂದು ಭಾವಿಸುವಂತೆ ಮಾಡಿ ಎಂದು ಹೇಳಿದ್ದಾರೆ.
ಇದನ್ನು ಓದುತ್ತಿರುವ ಪ್ರಿಯರೇ! ನಿಮ್ಮ ಮೌಲ್ಯವನ್ನು ನೀವು ಯಾವುದರಲ್ಲಿ ಹುಡುಕುತ್ತಿದ್ದೀರ? ನಿಮ್ಮ ಸದ್ಗುಣಗಳಿಂದಾಗಿ ನೀವು ಇತರರ ದೃಷ್ಟಿಯಲ್ಲಿ ಶ್ರೇಷ್ಠರಾಗಿದ್ದೀರಾ? ಅಥವಾ ನಿಮ್ಮ ಉಡುಗೆ ಮತ್ತು ಆಸ್ತಿಯ ಕಾರಣದಿಂದಾಗಿ ನೀವು ಶ್ರೇಷ್ಠರೆಂದು ಪರಿಗಣಿಸಲು ಬಯಸುತ್ತೀರಾ? ಒಳ್ಳೆಯ ಸ್ವಭಾವವು ನಿಮ್ಮ ಮೌಲ್ಯವನ್ನು ಎಂದಿಗೂ ಕಡಿಮೆ ಮಾಡುವುದಿಲ್ಲ. ಇಲ್ಲದಿದ್ದರೆ ನಿಮ್ಮ ಸ್ಥಿತಿ ಅಪಾಯಕಾರಿ. ತೋರಿಕೆಗಳು ಬದಲಾದಂತೆ ಮತ್ತು ಸೌಕರ್ಯಗಳು ಕಡಿಮೆಯಾಗುತ್ತಿದ್ದಂತೆ, ನೀವು ಅತಿಯಾದ ಮತ್ತು ಪ್ರತ್ಯೇಕತೆಯ ಭಾವನೆಯನ್ನು ಅನುಭವಿಸುವ ಅಪಾಯವಿದೆ. ನಿಮ್ಮ ಮೌಲ್ಯವನ್ನು ಎಲ್ಲಿ ಹುಡುಕುತ್ತಿದ್ದೀರ?
- Bro. J. ಸಂತೋಷ್
ಪ್ರಾರ್ಥನಾ ಅಂಶ:
ನಿರಂತರ 24-ಗಂಟೆಗಳ ಸರಣಿ ಪ್ರಾರ್ಥನೆ ನಮ್ಮ ಸೇವಾ ಕ್ಷೇತ್ರಗಳಲ್ಲೂ ತಡೆಯಿಲ್ಲದೆ ನಡೆಯುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482