By Village Missionary Movement
Friday, 18-Aug-2023ಧೈನಂದಿನ ಧ್ಯಾನ(Kannada) – 18.08.2023
ಪರಿಪೂರ್ಣವಾದವನು
"…ಆದದರಿಂದ ನಮ್ಮಲ್ಲಿ ಪರಿ ಪೂರ್ಣರಾದವರು ಇದೇ ಅಭಿಪ್ರಾಯವುಳ್ಳವರಾಗಿ ರೋಣ..." - ಫಿಲಿಪ್ಪಿ 3:15
1. ನಿನ್ನ ಸುತ್ತಲಿರುವವರೆಲ್ಲರೂ ಹಿಂಜಾರಿಹೋಗಿ ಬಿದ್ದುಹೋಗುತ್ತಿರುವ ಪರಿಸ್ಥಿತಿಯಲ್ಲಿರುವಾಗ, ನೀನು ಬಿದ್ದುಹೋಗದಂತೆ ಕಾಯುತ್ತಿರುವ ದೇವರನ್ನು ಹಿಡಿದುಕೊಂಡು ಸ್ಥಿರವಾಗಿ ನಿಲ್ಲುವುದಾದರೆ ನೀನು
ಪರಿಪೂರ್ಣನು.
2. ಎಲ್ಲರೂ ನಿನ್ನನ್ನು ಅನುಮಾನಿಸುವಾಗ ನಿನ್ನನ್ನು ನೀನು ಅನುಮಾನಿಸದೆ ನಿನ್ನನ್ನು ನೀನು ನಂಬುವುದಾದರೆ, ನೀನು ಪರಿಪೂರ್ಣನು.
3. ತಾಳ್ಮೆಯಿಲ್ಲದ ಭೂಮಿಯಲ್ಲಿ
ತಾಳ್ಮೆಯಿಂದಿದ್ದರೆ ಅವರು ಭೂಮಿಯನ್ನು ಆಳುತ್ತಾರೆ ಎಂದು ಅರಿತುಕೊಂಡು ನೀನು ತಾಳ್ಮೆಯಿಂದಿದ್ದರೆ ನೀನು ಪರಿಪೂರ್ಣನು.
4. ನೀನು ನಿಜವಾದ ಬುದ್ಧಿವಂತಿಕೆಯಿಂದ ತುಂಬಿದವನಾಗಿದ್ದರೂ ಜ್ಞಾನಿಯೆಂದು ಇತರರಿಗೆ ತೋರಿಸಿಕೊಳ್ಳಲು ಪ್ರಯತ್ನಪಡದವನಾಗಿದ್ದರೆ, ನೀನು ಪರಿಪೂರ್ಣನು.
5. ಗೆಲುವಿನಲ್ಲಾದರೂ, ಸೋಲಿನಲ್ಲಾದರೂ ನಿನ್ನನ್ನು ನೀನು ಕಳೆದುಕೊಳ್ಳದೆ, ನಿಧಾನವಾಗಿ ಕಾಯ್ದುಕೊಳ್ಳಲು ಸಾಧ್ಯವಾದರೆ ನೀನು ಪರಿಪೂರ್ಣನು.
6. ಕಪಟಿಗಳು ನೀನು ಹೇಳುವ ಸತ್ಯವಾದ ಮಾತುಗಳನ್ನು ಬದಲಾಯಿಸಿ ಸುಳ್ಳು ಮಾತುಗಳಾಗಿ ಪರಿವರ್ತಿಸಿ ನಿನ್ನ ಮೇಲೆ ಆರೋಪ ಹೊರಿಸಿದಾಗ ಅದಕ್ಕೆಲ್ಲಾ ಜಗ್ಗದೆ ಸಹಿಸಿಕೊಳ್ಳಲು ನಿನ್ನಿಂದ ಸಾಧ್ಯವಾದರೆ ನೀನು ಪರಿಪೂರ್ಣನು.
7. ನಿನ್ನ ಇಡೀ ಜೀವನದ ಸಂಪೂರ್ಣ ಬಲವನ್ನು ಉಪಯೋಗಿಸಿ ನೀನು ಕಟ್ಟಿದವುಗಳನ್ನು
ಅನ್ಯಾಯವಾಗಿ ಮುರಿದುಹಾಕುವಾಗ ಅದನ್ನು ಪುನಃ ತಾಳ್ಮೆಯಿಂದ ಮರುನಿರ್ಮಾಣ ಮಾಡುವ ಯೋಚನೆ ನಿನಗಿರುವುದಾದರೆ ನೀನು ಪರಿಪೂರ್ಣನು.
8. ರಾಜರು ಮತ್ತು ಮಂತ್ರಿಗಳು ನಿನಗೆ ಸ್ನೇಹಿತರಾಗಿ ಲಭಿಸುವ ಸಮಯದಲ್ಲೂ ಸಾಮಾನ್ಯ ಸ್ನೇಹಿತರನ್ನು ಕೀಳಾಗಿ ಕಾಣದಿದ್ದರೆ ಮತ್ತು ಅವರನ್ನೂ ಗೌರವಿಸುವುದಾದರೆ, ನೀನು ಪರಿಪೂರ್ಣನು.
9. ನೀನು ಮಾಡುವ ಒಳ್ಳೆಯ ಕಾರ್ಯಗಳನ್ನು ಇತರರು ನೋಡಬೇಕು ಮತ್ತು ಮೆಚ್ಚಬೇಕು ಎಂಬ ಹಂಬಲವನ್ನು ನೀನು ದೂರ ತೊಲಗಿಸಿ ಬಲಗೈ ಮಾಡುವುದು ಎಡಗೈಗೂ ಗೊತ್ತಾಗಬೇಕಿಲ್ಲ ಎಂಬ ಆಲೋಚನೆ ನಿನಗುಂಟಾಗುವಾಗ ನೀನು ಪರಿಪೂರ್ಣನು.
10. ನಿಮ್ಮ ಹೃದಯವು ಲೋಕವನ್ನು ಮತ್ತು ಲೋಕದಲ್ಲಿರುವವುಗಳನ್ನು ಪ್ರೀತಿಸದೆ ದೇವರನ್ನು ಪ್ರೀತಿಸಿ ದೇವರ ಮೇಲಿರುವ ಪ್ರೀತಿಯ ನಿಮಿತ್ತವಾಗಿ ಲೋಕದಲ್ಲಿರುವವರನ್ನು ಪ್ರೀತಿಸಲು ಸಾಧ್ಯವಾದರೆ, ಆಗ ನೀನು ಪರಿಪೂರ್ಣನು.
11. ನೀನು ಭೇಟಿಯಾಗುವ ಪ್ರತಿಯೊಂದು ವ್ಯಕ್ತಿ ಮತ್ತು ಲೋಕದಲ್ಲಿರುವ ಪ್ರತಿಯೊಬ್ಬ ವ್ಯಕ್ತಿ ದೇವರ ಸ್ವಾರೂಪ್ಯದಲ್ಲಿ ಸೃಷ್ಟಿಸಲ್ಪಟ್ಟವನು ಎಂದು ಗ್ರಹಿಸಿ ಯಾರನ್ನೂ ಕೀಳಾಗಿ ನೋಡದಿದ್ದರೆ ನೀನು ಪರಿಪೂರ್ಣನು.
- ಕಿಪ್ಲಿಂಗ್ ಬರೆದಿರುವ "ದಿ ಹ್ಯಾಂಡ್" ಎಂಬ ಕವಿತೆಯಿಂದ ಆರಿಸಿ ಬರೆಯಲಾಗಿದೆ.
ಪ್ರಾರ್ಥನಾ ಅಂಶ:
ಮುಂದಿನ ಐದು ವರ್ಷಗಳಲ್ಲಿ ಪ್ರತಿ ರಾಜ್ಯದಲ್ಲಿಯೂ 500 ಮಿಷನರಿಗಳು ಎದ್ದೇಳುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482