Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 20.08.2023 (Kids Special)
Share:

By Village Missionary Movement

Sunday, 20-Aug-2023

ಧೈನಂದಿನ ಧ್ಯಾನ(Kannada) – 20.08.2023 (Kids Special)

 

BE CAREFUL 

 

"ಆದದರಿಂದ ಮಗನು ನಿಮ್ಮನ್ನು ಬಿಡುಗಡೆಮಾಡಿದರೆ ನಿಜವಾಗಿ ನಿಮಗೆ ಬಿಡುಗಡೆಯಾಗುವದು" - ಯೋಹಾನ 8:36

 

ಮುದ್ದಾದ ಪುಟ್ಟ ಮಂಗವೊಂದು ಕುಣಿದು ಕುಪ್ಪಳಿಸಿ ತುಂಬಾ ಖುಷಿಯಿಂದ ಆಟವಾಡುತ್ತಿತ್ತು. ಎಲ್ಲಾ ಮಾನವರು ಪರಲೋಕಕ್ಕೆ ಹೋಗಬೇಕೆಂದು ಬಯಸುತ್ತಾರಲ್ಲಾ, ಅದು ಹೇಗಿರುತ್ತದೆ ಎಂದು ಪುಟ್ಟಕೋತಿ ತಾಯಿ ಕೋತಿಯನ್ನು ಕೇಳಿತು. ಅಮ್ಮಾ ಸಾಧುವನ್ನು ಕೇಳಿದರೆ ಗೊತ್ತಾಗುತ್ತದೆ ಎಂದರು. ಪುಟ್ಟ ಕೋತಿಯೂ ಆ ಸಾಧು ಇದ್ದ ಜಾಗವನ್ನು ಹುಡುಕಿ ಕಂಡುಹಿಡಿಯಿತು. ಅದೇ ಪ್ರಶ್ನೆಯನ್ನು ಸಾಧುವಿನ ಬಳಿ ಕೇಳಿತು. ಅವರು ಸ್ವಲ್ಪ ಹೊತ್ತು ಯೋಚಿಸಿ ಬಿಟ್ಟು ಪುಟ್ಟ ಕೋತಿಗೆ ಬಾಳೆಹಣ್ಣು ತಂದುಕೊಟ್ಟು ಇದನ್ನು ಭದ್ರವಾಗಿಟ್ಟುಕೋ. ನಾಳೆ ಬರುವಾಗ ತಗೊಂಡು ಬಾ ಎಂದು ಹೇಳಿ ಕಳುಹಿಸಿಕೊಟ್ಟರು.

 

ಪುಟ್ಟ ಕೋತಿಯೂ ಸಹ ನಾಳೆ ನಮಗೆ ಉತ್ತರ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ಬಹಳ ಖುಷಿಯಿಂದ ಹೋಗಿತ್ತು. ಕೈಯಲ್ಲಿದ್ದ ಬಾಳೆಹಣ್ಣನ್ನು ತಿರುಗಿಸಿ ತಿರುಗಿಸಿ ನೋಡಿತು. ಇದನ್ನು ನಾಳೆ ತೆಗೆದುಕೊಂಡು ಹೋಗಬೇಕೆಂದು ಭದ್ರವಾಗಿ ಇಟ್ಟುಕೊಂಡಿತು. ಸ್ವಲ್ಪ ಹೊತ್ತಿನ ನಂತರ ಮೂಸಿ ನೋಡಿತು. ವಾಸನೆ ಚೆನ್ನಾಗಿದೆಯಲ್ಲಾ ಎಂದು ನೆಕ್ಕಿ ನೋಡಿತು. ತಿಂದರೆ ತಾನೇ ತಪ್ಪು ಸಿಪ್ಪೆ ತೆಗೆದು ನೋಡಿದರೆ ಏನು ತಪ್ಪು ಅಂದುಕೊಂಡಿತು. ಅಯ್ಯೋ ಭದ್ರವಾಗಿ ತರಲು ಸಾಧು ಹೇಳಿದ್ದಾರಲ್ಲಾ ಎಂದು ನೆನೆಸಿಕೊಂಡು ಬಾಳೆಹಣ್ಣನ್ನು ಹಾಗೆ ಇಟ್ಟು ಬಿಟ್ಟು, ಮರದ ಮೇಲೆ ಆಕಡೆ ಈಕಡೆ ಜಿಗಿಯುತ್ತಿದ್ದರೂ ಬಾಳೆಹಣ್ಣಿನ ಬಗ್ಗೆ ತಲೆ ಕೆಡಿಸಿಕೊಳ್ಳದೆ ಇರಲಾಗಲಿಲ್ಲ. ಸರಿ, ಸಿಪ್ಪೆ ತೆಗೆದು ಮಾತ್ರ ನೋಡೋಣ ಎಂದುಕೊಂಡು ಸಿಪ್ಪೆ ಸುಲಿಯಲು ಪ್ರಾರಂಭಿಸಿತು. ನಾಲಿಗೆಯಲ್ಲಿ ಜೊಲ್ಲು ಸೋರಿದ ಕೂಡಲೇ ಪರಲೋಕವಾ? ಬಾಳೆಹಣ್ಣಾ? ಎಂದು ಚಿಕ್ಕ ಕೋತಿ ಯೋಚಿಸಿ ಕೊನೆಗೆ ಬಾಳೆಹಣ್ಣು ತಿಂದು ಮುಗಿಸಿತು. ಮರುದಿನ ಹೋಗಿ ಸಾಧುವನ್ನು ಹೇಗೆ ನೋಡಲು ಸಾಧ್ಯ? ಸಾಧ್ಯವಿಲ್ಲ ಅಲ್ವಾ?

 

ಪುಟಾಣಿಗಳೇ, ಪರಲೋಕದ ಬಗ್ಗೆ ತಿಳಿದುಕೊಳ್ಳಲು ಬಯಸಿದ ಚಿಕ್ಕ ಕೋತಿಯು ಬಾಳೆಹಣ್ಣಿನಿಂದ ಸೋಲಿಸಲ್ಪಟ್ಟಂತೆ, ನೀವು ಕೂಡ ಇಂದ್ರಿಯ ಪಾಪಗಳಿಂದ ಸೋತುಹೋಗಬಾರದು. ಸೈತಾನನು ಚಿಕ್ಕ ಸುಳ್ಳು ತಾನೇ, ಕಳ್ಳತನ ಮಾಡು, ಕೆಟ್ಟ ಮಾತು ಮಾತಾಡು ಯಾರೂ ನಿನ್ನನ್ನು ನೋಡಲಿಲ್ಲ ನೀನು ಸಿಕ್ಕಾಕಿಕೊಳ್ಳುವುದಿಲ್ಲ ಎಂದು ಆಸೆ ಆಸೆಯಾಗಿ ನಿನಗೆ ಸಂತೋಷ ಕೊಡುವಂತೆ ಬರುತ್ತಾನೆ. ನೀನು ಅವನ ಮಾತನ್ನು ಕೇಳಿ ಅವನ ಮಾತುಗಳಿಗೆ ಕಿವಿ ಕೊಡಬೇಡ! ತಪ್ಪು ಮಾಡಿದರೂ ಅದನ್ನು ಯೇಸಪ್ಪನಿಗೆ ತಿಳಿಸಿ ಕ್ಷಮೆ ಯಾಚಿಸಿ ಮತ್ತೆ ಆ ತಪ್ಪು ಮಾಡದೆ ಮುಕ್ತಿ ಪಡೆದುಕೋ. ಓಕೆನಾ ಮುದ್ದು ಪುಟಾಣಿಗಳೇ!

- Mrs. ಅಂಜಲಿ

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al Elexbet matbet giriş matbet instagram unban x unban twitter unban palacebet setrabet