By Village Missionary Movement
Monday, 21-Aug-2023ಧೈನಂದಿನ ಧ್ಯಾನ(Kannada) – 21.08.2023
ದೇವರ ಕೃಪೆ
"ನಾವು ಉಳಿದಿರುವದು ಯೆಹೋವನ ಕರುಣೆಯೇ; ಆತನ ಕೃಪಾವರಗಳು ನಿಂತುಹೋಗವು" - ಪ್ರಲಾಪಗಳು 3:22
ಅರ್ಹತೆಯೇ ಇಲ್ಲದ ನಮಗೆ ದಯೆ ತೋರಿಸುವುದೆ ದೇವರ ಕೃಪೆ! ಈ ದೇವರ ಕೃಪೆಯಿಲ್ಲದೆ ನಾವು ಬದುಕಲು ಸಾಧ್ಯವೇ ಇಲ್ಲ. ಈ ದಿನದವರೆಗೂ ನಾವು ಆಶೀರ್ವಾದವಾಗಿರುವುದಕ್ಕೆ ಕಾರಣ, ನಾವು ಮಾಡಿದಂತಹ ಪುಣ್ಯಕಾರ್ಯಗಳಾ? ಅಥವಾ ದೇವರ ಕೃಪೆಯೋ? ಎಂದು ನಮ್ಮ ಬಳಿ ಕೇಳಿದರೆ 100% ದೇವರ ಕೃಪೆ ಎಂದೇ ಹೇಳಬಹುದು! ಈ ಕೃಪೆಯ ಬಗ್ಗೆ ದೇವರ ಸೇವಕರಾದ ಜೋಯ್ಸ್ ಮೇಯರ್ ರವರು ಏನು ಹೇಳುತ್ತಾರೆಂದು ನೋಡೋಣವಾ?.
ದೇವರ ಕೃಪೆ ಎಂಬುದು ಹೊಂದಿಕೊಳ್ಳತಕ್ಕದ್ದು. ಆದರೆ ಬೆಲೆಗೆ ಖರೀದಿಸುವಂತದ್ದಲ್ಲ.
ಸಭೆಯ ಆರಾಧನೆಗೆ ಹೋಗುವುದು, ಸತ್ಕಾರ್ಯಗಳನ್ನು ಮಾಡುವುದು, ಸತ್ಯವೇದವನ್ನು ಧ್ಯಾನಿಸುವುದು ಮತ್ತು ದೇವರೊಂದಿಗೆ ಸಮಯ ಕಳೆಯುವುದು ಇವುಗಳಲ್ಲಿ ಯಾವುದನ್ನೂ ಬೆಲೆಗೆ ಖರೀದಿಸಲಾಗುವುದಿಲ್ಲ. ಆತನ ಕೃಪೆ ಎಂಬುದು ಸಂಪೂರ್ಣವಾಗಿ ಉಚಿತವಾಗಿದೆ.
ನಮ್ಮ ಎಲ್ಲಾ ಅಗತ್ಯಗಳನ್ನು ಪೂರೈಸುವ ಮತ್ತು ನಮ್ಮ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ದೇವರ ಶಕ್ತಿಯೇ ಕೃಪೆ.
ನಾಳೆಗೆ ನಮಗೆ ಬೇಕಾದ ಪರಿಹಾರಗಳನ್ನು ಮತ್ತು ಉತ್ತರಗಳನ್ನು ದೇವರು ಇಂದೇ ನಮಗೆ ಕೊಟ್ಟು ಬಿಡುವುದಿಲ್ಲ. ಪ್ರತಿ ಹೊಸ ದಿನದ ಮುಂಜಾನೆಯೇ ಆ ದಿನ ನಾವು ಎದುರಿಸಲಿರುವ ಸವಾಲುಗಳು ಮತ್ತು ಸಮಸ್ಯೆಗಳನ್ನು ಜಯಿಸಲು ಬೇಕಾದ ಕೃಪೆಯನ್ನು ನಮಗೆ ನೀಡುತ್ತಾರೆ.
ಎಷ್ಟೋ ಸಲ ನಾವು, "ಇಂದು ನಾನು ಸಾಕಷ್ಟು ಸಮಯ ಸತ್ಯವೇದವನ್ನು ಓದಲಿಲ್ಲವೇ, ಸಾಕಷ್ಟು ಸಮಯ ಪ್ರಾರ್ಥಿಸಲಿಲ್ಲವೇ, ಆತ್ಮದ ಫಲವನ್ನು ತೋರಿಸಲಿಲ್ಲವೇ, ಮಗುವಿನ ಮೇಲೆ ಕೋಪಮಾಡಿಕೊಂಡೆನೇ" ಎಂದೆಲ್ಲಾ ಅಂದುಕೊಂಡು, ದೇವರ ಆಶೀರ್ವಾದವನ್ನು ಪಡೆಯಲು ಬೇಕಾದ ಅರ್ಹತೆಯನ್ನು ಕಳೆದುಕೊಂಡುಬಿಟ್ಟೆ ಎಂದು ಅಂದುಕೊಳ್ಳುತ್ತೇವೆ. ಪರಿಪೂರ್ಣನಾಗಿರುವ ಮನುಷ್ಯನನ್ನು ಮಾತ್ರವೇ ದೇವರು ಆಶೀರ್ವಾದಿಸುತ್ತಾರೆ ಎಂಬುದಾದರೆ, ಅವರ ಬಳಿ ಆಶೀರ್ವಾದ ಪಡೆಯಲು ಅರ್ಹರು ಒಬ್ಬರೂ ಇರುವುದಿಲ್ಲ. ಏಕೆಂದರೆ ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಕಳೆದುಕೊಂಡಿದ್ದೇವೆ. ದೇವರಿಂದ ಯಾವುದೇ ರೀತಿಯ ಉಪಕಾರವನ್ನು ಪಡೆದುಕೊಳ್ಳಲು ನಮಗೆ ಅರ್ಹತೆಯೇ ಇಲ್ಲ. ಇಂತಹ ನಮಗೆ ದೇವರು ಉಚಿತವಾಗಿ ನೀಡುವ ಆಶೀರ್ವಾದಗಳೇ ಕೃಪೆ. ಆದ್ದರಿಂದ ಕಾರ್ಯಗಳನ್ನು ದೇವರಿಗೆ ನೆನಪಿಸಿ ಅದರ ಮೂಲಕ ದೇವರು ನಿಮ್ಮನ್ನು ಆಶೀರ್ವದಿಸುವಂತೆ ಪ್ರಾರ್ಥಿಸದೇ "ಕೃಪೆಯಿಂದ ನನ್ನನ್ನು ಕರುಣಿಸಿ" ಎಂದು ಪ್ರಾರ್ಥಿಸೋಣ. ಆಶೀರ್ವಾದವನ್ನು ಪಡೆದುಕೊಳ್ಳೋಣ.
- Mrs. ತವಮಣಿ ವೈರವೇಲ್
ಪ್ರಾರ್ಥನಾ ಅಂಶ:
ಮಿಷನರಿ ಕೊಠಡಿಗಳ ನಿರ್ಮಾಣ ಕಾರ್ಯದ ಅಗತ್ಯತೆಗಳು ಪೂರೈಸಲ್ಪಡುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482