Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 04.09.2023
Share:

By Village Missionary Movement

Monday, 04-Sep-2023

ಧೈನಂದಿನ ಧ್ಯಾನ(Kannada) – 04.09.2023

 

ನಿನ್ನನ್ನು ಕೀರ್ತಿಸ್ತೋತ್ರಗಳಿಗೆ ಗುರಿಮಾಡುವೆನು

 

"...ನಿಮ್ಮನ್ನು ಲೋಕದ ಸಕಲ ಜನಾಂಗಗಳಲ್ಲಿ ಕೀರ್ತಿಸ್ತೋತ್ರಗಳಿಗೆ ಗುರಿಮಾಡುವೆನು…" - ಜೆಫನ್ಯ 3:20

 

16 ನೇ ಶತಮಾನದಲ್ಲಿ, 2 ನೆಯ ಫಿಲಿಪ್ಪನೆಂಬ ಅರಸನು ಸತ್ಯವೇದವನ್ನು ಓದುವವರಿಗೆ ಕಠಿಣವಾದ ಶಿಕ್ಷೆಯನ್ನು ಕೊಡುವಂತೆ ಆಜ್ಞಾಪಿಸಿದನು. ಅಧಿಕಾರಿಗಳು ಒಂದು ನಗರದ ಮೇಯರ್‌ನ ಮನೆಯನ್ನು ಪರಿಶೀಲಿಸಿದಾಗ ಅವರ ಮನೆಯಲ್ಲಿ ಒಂದು ಸತ್ಯವೇದವು ಕಂಡಿತು. ಇದನ್ನು ಓದುತ್ತಿರುವವರು ಯಾರು ಎಂದು ಕೇಳಿದರು. ಒಬ್ಬರೂ ಒಪ್ಪಿಕೊಳ್ಳಲಿಲ್ಲ. ಒಂದು ಕೆಲಸದಾಕೆ ನಾನೇ ಆ ಸತ್ಯವೇದವನ್ನು ಓದುತ್ತಿರುವುದು. ಅದು ನನ್ನ ಸತ್ಯವೇದವೇ ಎಂದಳು. ಮೇಯರ್ ಅವಳನ್ನು ಕಾಪಾಡಬೇಕೆಂಬ ಉದ್ದೇಶದಿಂದ ಆಕೆ ಅನಕ್ಷರಸ್ಥೆ ಎಂದು ಹೇಳಿದರು. ಅದಕ್ಕೆ ಆ ಕೆಲಸದಾಕೆ, ನಾನು ಅದನ್ನು ಓದಬಲ್ಲೆ ಎಂದು ಹೇಳಿ ಓದಿದಳು. ಆಕೆಯನ್ನು ಇಟ್ಟಿಗೆಯ ಗೂಡಿನಲ್ಲಿ ಬಂಧಿಸಿ ಉಸಿರುಗಟ್ಟಿಸಿ ಸಾಯಿಸಿದರು. ಅವಳೋ ಸತ್ಯವೇದಕ್ಕಾಗಿ ತನ್ನ ಜೀವವನ್ನೇ ಮುಡಿಪಾಗಿಟ್ಟ ಮಹಿಳೆ ಎಂಬ ಕೀರ್ತಿಯನ್ನು ಗಳಿಸಿದಳು.

 

ಸತ್ಯವೇದದಲ್ಲಿ ಅನೇಕರು ಕರ್ತನಿಂದ ಕೀರ್ತಿಸ್ತೋತ್ರಗಳಿಗೆ ಗುರಿಯಾದದ್ದನ್ನು ಓದುತ್ತೇವೆ. ಮೊರ್ದೆಕೈನ ಕೀರ್ತಿಯು ಎಲ್ಲಾ ಕಡೆಗಳಲ್ಲಿ ಹಬ್ಬಿತು. ಹೌದು, ಅವನು ಸತ್ಯವಂತನೂ ಯಥಾರ್ಥನೂ ಆಗಿದ್ದು, ತನ್ನ ಕಾರ್ಯವನ್ನು ನೀತಿ ಮತ್ತು ನ್ಯಾಯಯುತವಾಗಿ ಮಾಡಿದ್ದರಿಂದ ಹೆಚ್ಚಿಸಲ್ಪಟ್ಟನು (ಎಸ್ತೇರ್ 9:4) ಅವನ ಕೀರ್ತಿಯು 127 ದೇಶಗಳಲ್ಲಿ ಪ್ರಸಿದ್ಧವಾಯಿತು. ಅಂತೆಯೇ, ಮೋಶೆಗೆ ಕೆಲಸ ಮಾಡಿದ ಯೆಹೋಶುವನ ಕೀರ್ತಿಯನ್ನು ದೇವರು ಪ್ರಸ್ತಾಪಿಸಿದರು. ಮೋಶೆಯ ನಂತರ 20 ಲಕ್ಷ ಇಸ್ರಾಯೇಲ್ ಜನರನ್ನು ಮುನ್ನಡೆಸಲು ದೇವರು ಯೆಹೋಶುವನೊಂದಿಗಿದ್ದು ಅದ್ಭುತ, ಅತಿಶಯಗಳನ್ನು ಮಾಡಿ ಅವನ ಕೀರ್ತಿಯು ಹಬ್ಬುವಂತೆ ಮಾಡಿದರು. ದೇವರು ಸೊಲೊಮೋನನ ಕೀರ್ತಿಯನ್ನು ಸಹ ಹಬ್ಬುವಂತೆ ಮಾಡಿದರು. ಜ್ಞಾನವನ್ನು ಕೇಳಿದ ಸೊಲೊಮೋನನಿಗೆ ದೇವರು ಕೇಳದ ಐಶ್ವರ್ಯವನ್ನು ಮತ್ತು ಜ್ಞಾನವನ್ನು ಕೊಟ್ಟರು. ಬೇರೆ ದೇಶಗಳಿಂದ ರಾಜಾಸ್ತ್ರೀಯರು ಬಂದು ಅವನ ಜ್ಞಾನವನ್ನು ಕಂಡು ಬೆರಗಾದರು. ಅವರ ಕೀರ್ತಿ ದೂರದೂರಕ್ಕೂ ಹರಡಿತು.

 

ಹೌದು, ನನ್ನ ಪ್ರಿಯರೇ! 19 ನೇ ಶತಮಾನದಲ್ಲಿ, ವಿಶ್ವ ಪ್ರಸಿದ್ಧ ಚಕ್ರವರ್ತಿ ನೆಪೋಲಿಯನ್ ನ ಕೀರ್ತಿಯು ಪ್ರಪಂಚದಾದ್ಯಂತ ಹಬ್ಬಿತ್ತು. ಆದರೆ ಇಂದು ಆ ಕೀರ್ತಿ ಕಳೆಗುಂದಿದೆ. ಆದರೆ ದೇವರಾದ ಕರ್ತನು ತನ್ನ ಮಕ್ಕಳನ್ನು ಶಾಶ್ವತ ಕೀರ್ತಿಯನ್ನು ಪಡೆದವರಾಗಿಡುತ್ತಾರೆ. ಕೃಪೆಯುಳ್ಳ ತಂದೆಯೇ ನಿಮ್ಮ ಕೀರ್ತಿಯು ನಮ್ಮ ಮೂಲಕವಾಗಿ ಪ್ರಕಟವಾಗುವಂತೆ ಕೃಪೆ ತೋರಿಸಿ. ಆಮೆನ್!

- Mrs. ಫಾತಿಮಾ ಸೆಲ್ವರಾಜ್

 

ಪ್ರಾರ್ಥನಾ ಅಂಶ:

ಸಹಚರ ಸೇವಕರ ಮೂಲಕ ಸೇವಾ ಕ್ಷೇತ್ರಗಳಲ್ಲಿ ನಡೆಯುವಂತಹ ಸೇವೆಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş holiganbet matbet matbet giriş sahabet onwin betcio casibom giriş casibom realbahis realbahis giriş casibom casibom giriş casibom casibom giriş imajbet imajbet giriş imajbetapp grandpashabet grandpashabet giriş grandpashabet güncel casibom giriş casibom matbet matbet giriş jojobet superbetin superbetin giriş amgbahis amgbahis giriş betsmove betsmove giriş holiganbet holiganbet giriş jasminbet jasminbet giriş kargabet kargabet giriş matbet matbet giriş norabahis norabahis giriş piabellacasino piabellacasino giriş supertotobet supertotobet giriş marsbahis casibom casibom giriş holiganbet holiganbet giriş jojobet jojobet giriş holiganbet casibom çarkbet casinomilyon cratosroyalbet jojobet betbey holiganbet jojobet jojobet jojobet grandpashabet grandpashabet