Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 10.09.2023
Share:

By Village Missionary Movement

Sunday, 10-Sep-2023

ಧೈನಂದಿನ ಧ್ಯಾನ(Kannada) – 10.09.2023

 

ಕೃತಜ್ಞತೆ ಇಲ್ಲದ ಮಗ

 

"ಹೆತ್ತ ತಂದೆಯ ಮಾತಿಗೆ ಕಿವಿಗೊಡು; ಮುಪ್ಪಿನಲ್ಲಿಯೂ ತಾಯಿಯನ್ನು ಅಸಡ್ಡೆಮಾಡಬೇಡ" - ಜ್ಞಾನೋಕ್ತಿ 23:22

 

ನಾಗರಿಕತೆ, ಶಿಕ್ಷಣ ಮತ್ತು ಉದ್ಯಮದಲ್ಲಿ ಯಾವುದೇ ಪ್ರಗತಿಯಿಲ್ಲದ ಒಂದು ಸಣ್ಣ ಹಳ್ಳಿಯಲ್ಲಿ ಜೂಡಿ ಮತ್ತು ಪೀಟರ್ ದಂಪತಿಗಳು ವಾಸಿಸುತ್ತಿದ್ದರು. ಬಡ ರೈತರು. 20 ವರ್ಷಗಳ ನಂತರ ಅವರಿಗೆ ಸುಂದರವಾದ ಒಂದು ಗಂಡು ಮಗು ಜನಿಸಿತು. ಅವನಿಗೆ ಸ್ಯಾಮ್ ಎಂದು ಹೆಸರಿಸಿಟ್ಟು ಅವನನ್ನು ತುಂಬಾ ಮುದ್ದಾಗಿ ಬೆಳೆಸಿದರು. ವಿದ್ಯಾಭ್ಯಾಸವೇ ಇಲ್ಲದ ಆ ಹಳ್ಳಿಯಲ್ಲಿ ತನ್ನ ಮಗ ಚೆನ್ನಾಗಿ ಓದಿ ದೊಡ್ಡ ಪದವೀಧರನಾಗಬೇಕು ಎಂದುಕೊಂಡು 5 ಮೈಲಿ ದೂರದ ಶಾಲೆಗೆ ಸೇರಿಸಿದರು. ಅವನ ತಂದೆ ತಾಯಿಗಳು ಅವನನ್ನು ನೋಡಿ ಸಂತೋಷಪಟ್ಟರು. ಶಾಲೆಯ ವಿದ್ಯಾಭ್ಯಾಸವೆಲ್ಲ ಮುಗಿಸಿ ಸ್ಯಾಮ್ ದೊಡ್ಡವನಾದನು. ಅವನನ್ನು ಕಾಲೇಜಿಗೆ ಸೇರಿಸಬೇಕಾದರೆ, ಅವನು ರೈಲಿನಲ್ಲಿ 20 ಮೈಲುಗಳಷ್ಟು ದೂರ ಪ್ರಯಾಣಿಸಬೇಕು.

 

ಸ್ಯಾಮ್ ಅನ್ನು ಕಾಲೇಜಿಗೆ ಕಳುಹಿಸಲು ಅವರ ಬಳಿ ಸಾಕಷ್ಟು ಹಣವಿಲ್ಲದ ಕಾರಣ, ಅವರು ತಮ್ಮ ಬೆಳಗಿನ ಉಪಹಾರವನ್ನು ನಿಲ್ಲಿಸಿಬಿಟ್ಟು ಅದಕ್ಕೆ ಬೇಕಾದ ಹಣವನ್ನು ಕೂಡಿಸಿ ಮಗನನ್ನು ಕಾಲೇಜಿಗೆ ಸೇರಿಸಿದರು. ಸೇರಿಸಿ ಬಂದ ಒಂದು ತಿಂಗಳ ನಂತರ, ಪೋಷಕರು ತಮ್ಮ ಪ್ರೀತಿಯ ಮಗನನ್ನು ನೋಡಲು ಬಯಸಿದ್ದರು. ಪ್ರಯಾಣಕ್ಕೆ ಬೇಕಾದ ಸಾಕಷ್ಟು ಹಣವಿಲ್ಲದ ಕಾರಣ, ಪೀಟರ್ ತನ್ನ ಹಳೆಯ ಟೊಳ್ಳಾದ ಕುದುರೆ ಗಾಡಿಯನ್ನು ತೆಗೆದುಕೊಂಡು ತನ್ನ ಮಗನನ್ನು ನೋಡಲು ಒಬ್ಬನೇ ಹೋದನು. ದಾರಿಯಲ್ಲಿ ಛತ್ರದಲ್ಲಿ ಉಳಿಯಲು ಜಾಗವಿಲ್ಲದ್ದರಿಂದ ರಸ್ತೆ ಬದಿಯಲ್ಲಿ ತನ್ನ ಟೊಳ್ಳಾದ ಕುದುರೆ ಗಾಡಿಯಲ್ಲಿ ಮಲಗಿ ಹೇಗೋ ಕಾಲೇಜಿಗೆ ಹೋಗಿ ಸೇರಿದರು. ಅಲ್ಲಿಗೆ ಹೋಗಿ ನೋಡಿದರೆ ಯುವಕ-ಯುವತಿಯರೆಲ್ಲಾ ನಾಗರೀಕವಾದ ಬಟ್ಟೆಗಳನ್ನು ಧರಿಸಿ ಕಾಲೇಜಿಗೆ ಸಂತೋಷದಿಂದ ಹೋಗುತ್ತಿದ್ದರು. ಟೊಳ್ಳಾದ ಕುದುರೆಯ ಗಾಡಿಯೊಂದಿಗೆ ಕೊಳಕು ಬಟ್ಟೆಯಲ್ಲಿ ನಿಂತಿರುವ ಈ ಪೀಟರ್ ನನ್ನು ಅವರೆಲ್ಲರೂ ಅಣಕಿಸಿದರು. ಈ ವ್ಯಕ್ತಿ ಅದನ್ನೆಲ್ಲಾ ಲೆಕ್ಕಿಸದೆ ಅವರ ಬಳಿಗೆ ಹೋಗಿ ನನ್ನ ಸ್ಯಾಮ್ ಅನ್ನು ನೋಡುದ್ರಾ? ಎಂದು ಕೇಳುತ್ತಿದ್ದರು. ಆ ವೇಳೆಗೆ ಸ್ಯಾಮ್ ಕೂಡ ಬಂದನು. ಈತನು ಓಡಿ ಹೋಗಿ ತನ್ನ ಪ್ರೀತಿಯ ಮಗನನ್ನು ತಬ್ಬಿ ಮುದ್ದಾಡಿದರು. ಆದರೆ ಅವನು ಅವರನ್ನು ಹಾಗೆಯೇ ತಳ್ಳಿಬಿಟ್ಟು, "ಮುದುಕ, ನೀನು ಯಾರು?" ಎಂದು ಹೇಳಿ ಎಲ್ಲಾ ವಿದ್ಯಾರ್ಥಿಗಳ ಮುಂದೆ ತಂದೆಗೆ ಅವಮಾನ ಮಾಡಿದನು. ಇದನ್ನು ಕೇಳಿ ತಂದೆ ತುಂಬಾ ಆಶ್ಚರ್ಯಪಟ್ಟರು. ಅವರ ಹೃದಯ ಒಡೆದು ಹೋಯಿತು. ಅವರು ಬಹಳ ಸಂಕಟದಿಂದ ಮನೆಗೆ ಬಂದು ತನ್ನ ಕುರ್ಚಿಯ ಮೇಲೆ ತಲೆ ಒರಗಿಸಿ ಮಲಗಿದರು. ಅಷ್ಟೇ, ಕೃತಜ್ಞತೆ ಇಲ್ಲದ ಮಗನ ಕಠೋರ ಮಾತುಗಳನ್ನು ಕೇಳಿ ನುಚ್ಚು ನೂರಾದ ಅವರ ಹೃದಯ ಹಾಗೇ ನಿಂತು ಹೋಯಿತು.

 

ಪ್ರೀತಿಯ ತಮ್ಮ, ತಂಗಿ! ನಿನಗೂ ಸ್ಯಾಮ್ ನನ್ನು ನೆನೆಸಿ ಕೋಪ ಬರುತ್ತಿದೆ ಅಲ್ವಾ! ನೀನು ಕೂಡ ಎಷ್ಟು ಸಲ ನಿನ್ನ ತಂದೆ ತಾಯಿಯ ಮಾತುಗಳಿಗೆ ವಿಧೇಯನಾಗದೆ ಅವರನ್ನು ನೋಯಿಸಿದ್ದೀಯ ಎಂಬುದನ್ನು ಯೋಚಿಸಿ ನೋಡಿ ನಿನ್ನ ಹೆತ್ತವರನ್ನು ಸಂತೋಷಪಡಿಸು. ಅದೇ ನಿನಗೆ ಆಶೀರ್ವಾದ.

- Mrs. ಜೀವಾ ವಿಜಯ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet holiganbet sahabet onwin bets10 bets10 giriş bets10 güncel giriş betcio atlasbet casibom meritking perabet casibom holiganbet galabet casibom padişahbet padişahbet giriş grandpashabet jojobet tambet grandpashabet jojobet nesinecasino betbey betgit grandpashabet betpuan cashwin matbet meritking perabet perabet giriş instagram ban service betsilin betsilin giris pashagaming pashagaming giris gorabet gorabet giris kralbet holiganbet grandpashabet grandpashabet giriş holiganbet giriş çarkbet çarkbet giriş