Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 12.09.2023
Share:

By Village Missionary Movement

Tuesday, 12-Sep-2023

ಧೈನಂದಿನ ಧ್ಯಾನ(Kannada) – 12.09.2023

 

ಅಂಜಬೇಡ 

 

"…ಅಂಜಬೇಡ, ಕಳವಳಗೊಳ್ಳಬೇಡ. ನೀನು ಹೋಗುವಲ್ಲೆಲ್ಲಾ ನಿನ್ನ ದೇವರಾದ ಯೆಹೋವನು ನಿನ್ನ ಸಂಗಡ ಇರುತ್ತಾನೆ ಎಂದು ಹೇಳಿದನು" - ಯೆಹೋಶುವ 1:9

 

ಕ್ಲೈವ್ ಲಾಯ್ಡ್ ನಾಯಕರಾಗಿದ್ದಾಗ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಅತ್ಯಂತ ಯಶಸ್ವಿಯಾಗಿತ್ತು. ಎಂಥಾ ಮೋಸವಾದ ಪರಿಸ್ಥಿತಿ ಏರ್ಪಟ್ಟರೂ ಆ ತಂಡದ ಆಟಗಾರರನ್ನು ಕ್ಲೈವ್ ಹುರಿದುಂಬಿಸಿ ಆಟವಾಡಿಸುತ್ತಿದ್ದರು. ಅವರ ಸಮರ್ಥ ನಿರ್ವಹಣೆಯಿಂದಾಗಿ ತಂಡ ಹೆಚ್ಚು ಗೆಲುವು ಸಾಧಿಸಿತು.

 

 ಕರ್ತನು ಯೆಹೋಶುವನೊಂದಿಗೆ ಇದೇ ರೀತಿಯಲ್ಲಿ ವ್ಯವಹರಿಸಿದರು. ಎಷ್ಟೇ ಅದ್ಭುತಗಳನ್ನು ಕಂಡರೂ ಸಣ್ಣದೊಂದು ಕೊರತೆ ಎದುರಾದಾಗ ಗೊಣಗುತ್ತಾ ತನಗೆ ವಿರುದ್ಧವಾಗಿ ಜಮಾಯಿಸುತ್ತಿದ್ದ ಇಸ್ರಾಯೇಲ್ ಜನರನ್ನು ಹೇಗೆ ಮುನ್ನಡೆಸುವುದು ಎಂದು ಅಂಜುತ್ತಿದ್ದ ಯೆಹೋಶುವನಿಗೆ ಅಂಜಬೇಡ, ನಾನು ನಿನ್ನ ಸಂಗಡ ಇದ್ದೇನೆ ಎಂದು ಹೇಳಿದ ದೇವರು ಜೊತೆ ಇದ್ದು ಅದ್ಬುತವಾಗಿ ನಡೆಸಿ, ದೇಶವನ್ನು ಹಂಚುವಂತೆ ಮಾಡಿದರು.

ಅಂತೆಯೇ ಪೌಲನು ಕೊರಿಂಥ ಪಟ್ಟಣಕ್ಕೆ ಬಂದಾಗ ಸರ್ಕಾರದ ಆಜ್ಞೆ ಒಂದು ಕಡೆ, ವಿರೋಧವಾಗಿದ್ದ ಜನರು ಇನ್ನೊಂದು ಕಡೆ. ಈ ಸಂದರ್ಭದಲ್ಲಿ ಕರ್ತನು ಪೌಲನಿಗೆ, “ನೀನು ಭಯಪಡದೆ ಮಾತಾಡು, ಮೌನವಾಗಿರಬೇಡ, ನಾನು ನಿನ್ನೊಂದಿಗಿದ್ದೇನೆ" ಎಂದರು. ಅಂತೆಯೇ, ಪೌಲನು ಆ ಪಟ್ಟಣದಲ್ಲಿ ಒಂದೂವರೆ ವರ್ಷಗಳ ಕಾಲ ಇದ್ದು ಸುವಾರ್ತಾ ಸೇವೆಯನ್ನು ಮಾಡಿದರು. ಅಷ್ಟೇ ಅಲ್ಲ, ಅನೇಕ ಸಂಕಟಗಳಲ್ಲಿಯೂ ಇಕ್ಕಟ್ಟುಗಳಲ್ಲಿಯೂ ಪೆಟ್ಟುಗಳಲ್ಲಿಯೂ ಸೆರೆಮನೆಗಳಲ್ಲಿಯೂ ಕೂಡ ಅವರು ಧೈರ್ಯವಾಗಿ ಸುವಾರ್ತೆಯನ್ನು ಸಾರಿದರು. ನಾನು ನಿನ್ನೊಂದಿಗಿದ್ದೇನೆ ಎಂದು ವಾಗ್ದಾನ ಮಾಡಿದ ದೇವರು ಎಲ್ಲದರಲ್ಲೂ ಧೈರ್ಯ, ಬಲ ಮತ್ತು ಕೃಪೆಯನ್ನು ನೀಡಿ ನಡೆಸಿದರು. ಏಕೆಂದರೆ ನಮ್ಮ ದೇವರು ಮಾತುತಪ್ಪದವರು. “ಶ್ರೇಷ್ಠ ಹೋರಾಟವನ್ನು ಮಾಡಿದ್ದೇನೆ, ನನ್ನ ಓಟವನ್ನು ಕಡೆಗಾಣಿಸಿದ್ದೇನೆ" ಎಂದು (2 ತಿಮೊಥೆ. 4:7) ಮರಣವನ್ನೂ ಸಹ ಧೈರ್ಯದಿಂದ ಎದುರುಗೊಳ್ಳಲು ದೇವರು ಕೃಪೆ ತೋರಿದರು. ಅದಕ್ಕಾಗಿಯೇ ಧೈರ್ಯವಾಗಿ "ನಾನು ಕ್ರಿಸ್ತನನ್ನು ಅನುಸರಿಸುವಂತೆಯೇ ನೀವು ನನ್ನನ್ನು ಅನುಸರಿಸುವವರಾಗಿರಿ" (1 ಕೊರಿಂಥ. 11:1) ಎಂದರು.

 

ಪ್ರಿಯರೇ, ನೀವು ಸಹ ಪರಿಸ್ಥಿತಿಗಳನ್ನು ನೋಡಿ, ವಿರೋಧವಾಗಿರುವ ಜನರನ್ನು ನೋಡಿ, ಭಯಪಡುತ್ತಾ, ಕಳವಳಗೊಳ್ಳುತ್ತಾ ಏನು ಮಾಡಬೇಕೆಂದು ಅರಿಯದೇ ಅಂಜುತ್ತಿದ್ದೀರಾ? ಇಂದು ಕರ್ತನು ನಿಮ್ಮನ್ನು ನೋಡಿ ಹೇಳುತ್ತಿದ್ದಾರೆ ಅಂಜಬೇಡ ನಾನು ನಿನ್ನ ಸಂಗಡ ಇದ್ದೇನೆ. ಆದುದರಿಂದ ನಮ್ಮ ದೇವರು ಸರ್ವಶಕ್ತನು ಆತನನ್ನು ಗಟ್ಟಿಯಾಗಿ ಹಿಡಿದುಕೊಂಡರೆ, ಅಂಜುತ್ತಿದ್ದ ಯೆಹೋಶುವನನ್ನು ಉಪಯೋಗಿಸಿದ ಕರ್ತನು ನಿಮ್ಮನ್ನೂ ಉಪಯೋಗಿಸುತ್ತಾರೆ. ಪರಿಸ್ಥಿತಿಗಳನ್ನು ಜಯಿಸಲು ಅವರು ನಿಮಗೆ ಸಹಾಯ ಮಾಡುತ್ತಾರೆ. ಪೌಲನಂತೆ ನನ್ನನ್ನು ಅನುಸರಿಸಿರಿ" ಎಂದು ಹೇಳುವಷ್ಟರ ಮಟ್ಟಿಗೆ ನಿಮ್ಮನ್ನು ಮೂಲಮಾದರಿಯಾಗಿ ಬದುಕುವಂತೆ ಮಾಡುತ್ತಾರೆ. "ನಿನ್ನ ಸಂಗಡ ಇರುತ್ತೇನೆ" ಎಂದು ಹೇಳಿದ ಕರ್ತನನ್ನು ಹಿಡಿದು ಮುನ್ನಡೆಯಿರಿ. ಉನ್ನತಿ ಹೊಂದುವಿರಿ.

- Bro. ಸಾಮುವೇಲ್ ಮೋರಿಸ್

 

ಪ್ರಾರ್ಥನಾ ಅಂಶ:

ಕಾರ್ಯಸ್ಥಳಗಳಲ್ಲಿ ನಡೆಯುವ ಮನೆ ಪ್ರಾರ್ಥನಾ ಗುಂಪುಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al matbet matbet bahiscasino betsat betsat pashagaming pashagaming betpas betpas giriş ngsbahis perabet perabet giriş