Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 28.09.2023
Share:

By Village Missionary Movement

Thursday, 28-Sep-2023

ಧೈನಂದಿನ ಧ್ಯಾನ(Kannada) – 28.09.2023

 

ಅವಶ್ಯವಾದದ್ದು 

 

"ಆದರೆ ಅವಶ್ಯವಾದದ್ದು ಒಂದೇ; ಮರಿಯಳು ಆ ಒಳ್ಳೇಭಾಗವನ್ನೇ ಆರಿಸಿ ಕೊಂಡಿದ್ದಾಳೆ. ಅದು ಆಕೆಯಿಂದ ತೆಗೆಯಲ್ಪಡುವದಿಲ್ಲ…" – ಲೂಕ 10:42

 

ಕ್ಸೇವಿಯರ್ ಎಂಬ ಫ್ರೆಂಚ್ ಮಿಷನರಿ 1542 ರಲ್ಲಿ ಗೋವಾಕ್ಕೆ ಬಂದರು. ಬಂದ ಮೇಲೆ ಮೊದಲು ಮಾಡಿದ ಕೆಲಸವೆಂದರೆ ಅಲ್ಲಿ ಮಾತನಾಡುವ ಭಾಷೆಯನ್ನು ಕಲಿಯುವುದು. ಜೈಲುಗಳಿಗೆ ಮತ್ತು ಆಸ್ಪತ್ರೆಗಳಿಗೆ ಹೋಗಿ ಅಲ್ಲಿರುವ ಜನರಿಗೆ ಯೇಸುವಿನ ಪ್ರೀತಿ ಅವಶ್ಯ ಎಂದು ಭಾವಿಸಿ ಅವರ ಮಧ್ಯದಲ್ಲಿ ಸತ್ಯವೇದ ವಾಕ್ಯ ಬೀಜಗಳನ್ನು ಬಿತ್ತಲು ಪ್ರಾರಂಭಿಸಿದರು. ಅವರ ಹೃದಯದಲ್ಲಿ ನೆಟ್ಟ ಬೀಜಗಳು ಫಲ ಕೊಟ್ಟವು. ಅನೇಕರು ಯೇಸುವನ್ನು ತಮ್ಮ ಸ್ವಂತ ರಕ್ಷಕನನ್ನಾಗಿ ಸ್ವೀಕರಿಸಿದರು. ಅದಲ್ಲದೇ ಬೀದಿಗಳ ಮಾರ್ಗವಾಗಿ ಒಂದು ಗಂಟೆಯನ್ನು ಬಾರಿಸುತ್ತಾ ಮಕ್ಕಳನ್ನು ತರಗತಿಗಳಿಗೆ ಬರುವಂತೆ ಕರೆ ನೀಡುತ್ತಿದ್ದರು. ಆ ತರಗತಿಗಳಲ್ಲಿ ಭಾಗವಹಿಸುವ ಮಕ್ಕಳಿಗೂ ಯೇಸುವಿನ ಪ್ರೀತಿ ಅವಶ್ಯ ಎಂದು ಅಭಿಪ್ರಾಯಪಟ್ಟರು. ಇವರಿಗೂ ಸಹ ಯೇಸುವಿನ ಪ್ರೀತಿಯನ್ನು ಕಲಿಸಿಕೊಟ್ಟರು. ಅವರು ಸಮಾಜದ ಅನೇಕ ನಿರ್ಗತಿಕರಿಗೆ ಸಹಾಯ ಮಾಡಿದರು. ಅವರು ಸಂಪೂರ್ಣವಾಗಿ ನಿರ್ಗತಿಕರಿಗೆ ಮೀಸಲಾಗಿದ್ದರಿಂದ, ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವುದು ಮತ್ತು ತೊಂದರೆಗೊಳಗಾದ ಸ್ಥಳಗಳಿಗೆ ಶಾಂತಿಯನ್ನು ತರುವುದು ಇದೇ ಇವರ ಧ್ಯೇಯವಾಗಿತ್ತು.

 

ಸತ್ಯವೇದದಲ್ಲಿ 1 ಸಮುವೇಲ 1 ನೇ ಅಧ್ಯಾಯದಲ್ಲಿ ಹನ್ನಳು ನಮಗೆ ಗೊತ್ತು. ಈ ಹನ್ನಳ ಸ್ಥಿತಿ ಮತ್ತು ಅಗತ್ಯವನ್ನು ನಾವು ಓದುತ್ತೇವೆ. ಅದೇ ಸಮಯದಲ್ಲಿ ಕರ್ತನಿಗೂ ಒಂದು ಅವಶ್ಯಕತೆ ಏರ್ಪಟ್ಟಿತು. ಈ ಹನ್ನಳು ತನ್ನ ಅಗತ್ಯಕ್ಕಾಗಿ ದೇವರ ಸನ್ನಿಧಾನದಲ್ಲಿ ಅತ್ತು ಗೋಳಾಡಿ, ಕಣ್ಣೀರು ಸುರಿಸಿ ತನ್ನ ಹೃದಯವನ್ನು ಸುರಿಯುವುದನ್ನು 1 ಸಮುವೇಲ 1:15 ರಲ್ಲಿ ನೋಡುತ್ತೇವೆ. ಈ ಹನ್ನಳ ಅವಶ್ಯಕತೆಯ ಪ್ರಾರ್ಥನೆ ದೇವರ ಸಮ್ಮುಖಕ್ಕೆ ತಲುಪಿತು. ಹನ್ನಳು ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆತ್ತು "ನಾನು ಅವನನ್ನು ಕರ್ತನ ಬಳಿಯಲ್ಲಿ ಕೇಳಿಕೊಂಡೆನು ಎಂದು ಹೇಳಿ ಅವನಿಗೆ ಸಮುವೇಲನೆಂದು ಹೆಸರಿಟ್ಟಳು. (1 ಸಮುವೇಲ 1:20) ಈ ಸಮುವೇಲನೇ ನಂತರದ ಕಾಲದಲ್ಲಿ ಪ್ರವಾದಿಯಾಗಿದ್ದರು.

 

ಪ್ರಿಯರೇ, ಹನ್ನಳ ಕಣ್ಣೀರಿನ ಪ್ರಾರ್ಥನೆಯಿಂದ ಹನ್ನಳ ಅವಶ್ಯಕತೆ ಮತ್ತು ದೇವರ ಅವಶ್ಯಕತೆ ಎರಡೂ ಪೂರೈಸಲ್ಪಟ್ಟಿತು. ಯೇಸುವಿನ ಮಕ್ಕಳಾಗಿರುವ ನಾವು, ಪ್ರತಿದಿನವೂ ನಮಗೆ ಅಗತ್ಯವಿರುವ ಕೃಪೆಗಳಿಗಾಗಿ ಒಳ್ಳೇಭಾಗವಾಗಿರುವ ಅವರನ್ನೇ ಆರಿಸಿಕೊಳ್ಳೋಣ. ಅಷ್ಟೇ ಅಲ್ಲದೆ ಈ ಲೋಕದಲ್ಲಿ ಹಲವು ವಿಧವಾದ ಸಮಸ್ಯೆ, ಕಣ್ಣೀರು, ಹೋರಾಟ, ದುಃಖ ಇವುಗಳಿಂದ ಬಿಡುಗಡೆ ಮಾಡಲು ನನಗೆ ಯಾರೂ ಇಲ್ಲ ಎಂದು ಅಂಗಲಾಚುತ್ತಾ ನಿಟ್ಟುಸಿರು ಬಿಡುತ್ತಾ ಜೀವಿಸುತ್ತಿರುವ ಅನೇಕರಿಗೆ ಇಂದು ಯೇಸು ಅಗತ್ಯ. ಯಾರನ್ನು ಕಳುಹಿಸಲಿ; ಯಾವನು ನಮ ಗೋಸ್ಕರ ಹೋಗುವನು ಎಂದು ಅವಶ್ಯಕತೆಯೊಂದಿಗೆ ಕರೆಯುವ ದೇವರ ಶಬ್ಧಕ್ಕೆ ಉತ್ತರ ನೀವು ಮತ್ತು ನಾನಾಗಿರೋಣ! ಯೋಚಿಸೋಣ! ಕಾರ್ಯ ನಿರ್ವಹಿಸೋಣ!!

- Mrs. ಶಕ್ತಿ ಶಂಕರ್ ರಾಜ್ 

 

ಪ್ರಾರ್ಥನಾ ಅಂಶ:

ಗುಜರಾತ್ ರಾಜ್ಯದ ಸೇವೆಯ ಗಡಿ ವಿಸ್ತರಣೆಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet perabet perabet giriş padişahbet padişahbet giriş meritking meritking giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş jojobet jojobet jojobet jojobet jojobet holiganbet holiganbet holiganbet grandpashabet grandpashabet