Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 05.10.2023
Share:

By Village Missionary Movement

Thursday, 05-Oct-2023

ಧೈನಂದಿನ ಧ್ಯಾನ(Kannada) – 05.10.2023

 

ಕರ್ತನಲ್ಲಿ ಬಲಪಡಿಸಿಕೊಂಡು 

 

 "...ದಾವೀದನು ಕರ್ತನಾದ ದೇವರಲ್ಲಿ ತನ್ನನ್ನು ಬಲಪಡಿಸಿಕೊಂಡನು" - 1 ಸಮುವೇಲ 30:6

 

ವಿಲಿಯಂ ಆಲ್ಡ್ ಎಂಬ ಮಿಷನರಿ (1778-1815) ತನ್ನ 7 ವರ್ಷ ವಯಸ್ಸಿನೊಳಗೆ ಸಂಪೂರ್ಣ ಬೈಬಲ್ ಅನ್ನು 6 ಬಾರಿ ಓದಿದವರು. ಎರಡು ತಿಂಗಳಲ್ಲಿ ತಮಿಳನ್ನು ಕಲಿತು ತಮಿಳಿನಲ್ಲಿ ಉಪದೇಶ ಮಾಡಿದವರು. 1778 ನೇ ವರ್ಷದಲ್ಲಿ ಇಂಗ್ಲೆಂಡಿನಲ್ಲಿ ಜನಿಸಿದ ಅವರು ದೇವರ ಪ್ರೀತಿಯನ್ನು ಅರಿತುಕೊಂಡು 17 ನೇ ವಯಸ್ಸಿನಲ್ಲಿ ತಾನಿರುವ ಪ್ರಾಂತ್ಯದಲ್ಲಿ ಬೈಬಲ್ ಸ್ಕೂಲ್ ಒಂದನ್ನು ನಡೆಸುತ್ತಿದ್ದರು. ಸಮುದ್ರದ ಆಚೆ ಹೋಗಿ ಮಿಷನರಿ ಸೇವೆ ಮಾಡಬೇಕೆಂಬ ಆಸಕ್ತಿ ಇವರಲ್ಲಿ ಮೂಡಿದ್ದರಿಂದ ಆರು ಜನರನ್ನು ಒಳಗೊಂಡ ಗುಂಪಾಗಿ ಹಡಗು ಪ್ರಯಾಣ ಮಾಡಿ ಶ್ರೀಲಂಕಾಗೆ ಹೋಗಿ ಸೇವೆ ಮಾಡಲು ನಿರ್ಧರಿಸಿದರು. ವಿಲಿಯಂ ಆಲ್ಡ್ ಮತ್ತು ಅವರ ಪತ್ನಿ ಸಾರಾ ಗುಂಪಿನಲ್ಲಿದ್ದರು. ವಿಲಿಯಂ ಆಲ್ಡ್ ತನ್ನ ಮದುವೆಯಾದ ಐದೇ ದಿನಗಳಲ್ಲಿ ತನ್ನ ಹೆಂಡತಿಯೊಂದಿಗೆ ಮಿಷನರಿ ಪ್ರಯಾಣವನ್ನು ಪ್ರಾರಂಭಿಸಿದರು. ಅಲ್ಲದೆ, ಅವರ ಪತ್ನಿ ಹಡಗು ಪ್ರಯಾಣದಲ್ಲಿ ಅನಾರೋಗ್ಯಕ್ಕೆ ಒಳಗಾಗಿ ಮದುವೆಯಾದ ಐದೇ ವಾರಗಳಲ್ಲಿ ನಿಧನರಾದರು. ಸಮಾಧಿ ಮಾಡಲು ಸ್ಥಳವಿಲ್ಲದ ಕಾರಣ ಸಮುದ್ರವೇ ಅವರ ಸಮಾಧಿಯಾಯಿತು. ಈ ಗುಂಪಿನ ನೇತೃತ್ವ ವಹಿಸಿದ್ದ ನಾಯಕ ಕೂಡ ಸಮುದ್ರ ಪ್ರಯಾಣದಲ್ಲಿ ತೀರಿಕೊಂಡರು. ಅವರು ಆರು ತಿಂಗಳ ನಂತರ ಶ್ರೀಲಂಕಾಗೆ ತಲುಪಿ ಅವರ ಸೇವೆಯನ್ನು ಪ್ರಾರಂಭಿಸಿದಾಗ, ಅದು ಕ್ಷಾಮ ಪೀಡಿತ ಪ್ರದೇಶ, ಅಲ್ಲಿ ಇರಲು ಸ್ಥಳವಿಲ್ಲದಿದ್ದರೂ ಸುವಾರ್ತೆ ಸಾರಲು ಪ್ರಾರಂಭಿಸಿದರು. ಎಲ್ಲವನ್ನು ಕಳೆದುಕೊಂಡ ಸ್ಥಿತಿಯಲ್ಲಿದ್ದರೂ ಕರ್ತನಲ್ಲಿ ತನ್ನನ್ನು ಬಲಪಡಿಸಿಕೊಂಡು, 8 ತಿಂಗಳಲ್ಲಿ ಪಟ್ಟಿಕೋಳ ಪ್ರದೇಶದಲ್ಲಿ 6 ಶಾಲೆಗಳು, ಬೈಬಲ್ ಕಾಲೇಜು ಮತ್ತು ಒಂದು ಚರ್ಚ್ ಅನ್ನು ಸ್ಥಾಪಿಸಿದರು.

 

ದಾವೀದನೂ ಅವನ ಜನರೂ ಚಿಕ್ಲಗಿಗೆ ಬಂದಾಗ ಆ ಪಟ್ಟಣವು ಬೆಂಕಿಯಿಂದ ಸುಟ್ಟು ಹಾಕಲ್ಪಟ್ಟಿದೆ ಎಂದು, ತಮ್ಮ ಹೆಂಡತಿಯರೂ ಕುಮಾರರೂ ಕುಮಾರ್ತೆಯರೂ ಸೆರೆಯಾಗಿ ಒಯ್ಯಲ್ಪಟ್ಟಿದ್ದಾರೆ ಎಂದು ಕಂಡರು. ಈ ಪರಿಸ್ಥಿತಿಯಲ್ಲಿ ದಾವೀದನು ತುಂಬಾ ಇಕ್ಕಟ್ಟಿನಲ್ಲಿ ಬಿದ್ದರು. ಆಗ ಎಲ್ಲಾ ಜನರು ಮನೋವ್ಯಥೆಪಟ್ಟು ದಾವೀದನನ್ನು ಕಲ್ಲೆಸೆಯಬೇಕೆಂದು ಹೇಳಿಕೊಂಡರು. ನಂತರ ದಾವೀದನು ಕರ್ತನಾದ ದೇವರಲ್ಲಿ ತನ್ನನ್ನು ಬಲಪಡಿಸಿಕೊಂಡನು. ನಂತರ ದಾವೀದನು ಕರ್ತನ ಬಳಿ ವಿಚಾರಿಸಿ ಎಲ್ಲವನ್ನೂ ಬಿಡಿಸಿಕೊಂಡನು.

 

ಪ್ರಿಯರೇ! ಮಿಷನರಿ ವಿಲಿಯಂ ಆಲ್ಡ್ ಅವರ ಜೀವನದಲ್ಲಿ ಮತ್ತು ದಾವೀದನು ಎಲ್ಲವನ್ನೂ ಕಳೆದುಕೊಂಡ ಪರಿಸ್ಥಿತಿಯಲ್ಲಿ ಅವರು ಕರ್ತನಲ್ಲಿ ತಮ್ಮನ್ನು ಬಲಪಡಿಸಿಕೊಂಡ ಪರಿಣಾಮವೇ ಮುಂದೆ ಮಾಡಬೇಕಾದದ್ದೆಲ್ಲವನ್ನು ಮಾಡಲು ಸಾಧ್ಯವಾಯಿತು. ನಮ್ಮ ಬಳಿ ಆಶೀರ್ವಾದವಿರುವಾಗ ನಮ್ಮ ಹೃದಯವನ್ನು ಬಲಪಡಿಸಿಕೊಳ್ಳುವುದು ಸುಲಭ. ಆದರೆ ಎಲ್ಲವನ್ನೂ ಕಳೆದುಕೊಂಡ ಪರಿಸ್ಥಿತಿ ಸಂಭವಿಸಿದಾಗ ಆ ಸ್ಥಿತಿಯಲ್ಲೂ ನಮ್ಮನ್ನು ಕರ್ತನಲ್ಲಿ ಬಲಪಡಿಸಿಕೊಳ್ಳಲು ಪ್ರಯತ್ನಿಸೋಣ. ಖಂಡಿತವಾಗಿಯೂ ಕರ್ತನು ನಮಗೆ ಸಹಾಯ ಮಾಡುತ್ತಾರೆ.

- Mrs. ಶಕ್ತಿ ಶಂಕರ್ ರಾಜ್ 

 

ಪ್ರಾರ್ಥನಾ ಅಂಶ:

ನಮ್ಮ ಕ್ಯಾಂಪಸ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಸ್ಪತ್ರೆಗೆ ಸಮರ್ಪಣೆಯುಳ್ಳ ವೈದ್ಯರು ಮತ್ತು ನರ್ಸ್ ಗಳು ಸಿಗುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al Elexbet matbet vaycasino giriş vaycasino marsbahis giriş marsbahis holiganbet setrabet marsbahis giriş vaycasino giriş