Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 09.10.2023
Share:

By Village Missionary Movement

Monday, 09-Oct-2023

ಧೈನಂದಿನ ಧ್ಯಾನ(Kannada) – 09.10.2023

 

ವಿಧೇಯತೆ ತೋರಿದ ಅಬ್ರಹಾಮನು

 

"…ನಾನು ತೋರಿಸುವ ದೇಶಕ್ಕೆ ಹೊರಟುಹೋಗು" - ಆದಿಕಾಂಡ 12:1

 

ಏಮಿಕಾರ್ಮೈಕಲ್ ಅಮ್ಮನವರು ಚಿಕ್ಕ ವಯಸ್ಸಿನಲ್ಲಿದ್ದಾಗ ಅವರ ಕಣ್ಣುಗುಡ್ಡೆಗಳು ಆ ದೇಶದ ಜನರ ಕಣ್ಣುಗಳ ಹಾಗೆ ನೀಲಿ ಬಣ್ಣವಿರದೇ ಸ್ವಲ್ಪ ವ್ಯತ್ಯಾಸವಾಗಿ ಕಪ್ಪಾದ ಕಣ್ಣುಗುಡ್ಡೆಗಳಾಗಿದ್ದವು. ಇದರಿಂದಾಗಿ ಏಮಿ ತನ್ನ ತಾಯಿಯ ಬಳಿ ನನಗೆ ಮಾತ್ರ ಏಕೆ ಕಪ್ಪು ಕಣ್ಣುಗುಡ್ಡೆಗಳಿವೆ ಎಂದು ಆಗಾಗ್ಗೆ ಕೇಳುತ್ತಿದ್ದರಂತೆ. ಅದಕ್ಕೆ ಏಮಿಯವರ ತಾಯಿ ಹೇಳಿದ ಉತ್ತರ ನೀನು ಯೇಸಪ್ಪನ ಬಳಿ ಪ್ರಾರ್ಥಿಸು ಎಂದು. ಪ್ರಾರ್ಥಿಸಿದ ನಂತರ ಮರುದಿನ ಬೆಳಿಗ್ಗೆ ಕನ್ನಡಿಯಲ್ಲಿ ನೋಡಿದರೆ ಅವರ ಕಣ್ಣುಗಳು ಸ್ವಲ್ಪವೂ ಬದಲಾಗಿರಲಿಲ್ಲ. ಇದನ್ನು ತನ್ನ ತಾಯಿಗೆ ಹೇಳಿದಾಗ, ಆ ತಾಯಿಯವರ ಉತ್ತರ ತುಂಬಾ ಆಶ್ಚರ್ಯಕರವಾಗಿತ್ತು. ಏಮಿ ನಮ್ಮ ಜನರಿಂದ ನಿನ್ನನ್ನು ದೇವರು ವ್ಯತ್ಯಾಸವಾಗಿ ಸೃಷ್ಟಿಸಿರುವುದಕ್ಕೆ ಒಂದು ಉದ್ದೇಶವಿದೆ. ವ್ಯತ್ಯಾಸವಾಗಿ ಸೃಷ್ಟಿಸಿರುವ ದೇವರು ನಿನ್ನನ್ನು ವ್ಯತ್ಯಾಸವಾಗಿಯೇ ಉಪಯೋಗಿಸುತ್ತಾರೆ ಎಂದು. ದೇವರ ಮಾತಿಗೆ ವಿಧೇಯರಾದ ಏಮಿ ಭಾರತಕ್ಕೆ ಬಂದರು. ಅವರು ತಿರುನೆಲ್ವೇಲಿಯ ಡೋನಾವೂರ್ ಪ್ರದೇಶದಲ್ಲಿ ಬಾಲಕಿಯರನ್ನು ದತ್ತು ಪಡೆದು ಶಿಕ್ಷಣವನ್ನು ಕಲಿಸಿದರು. ಅವರು ಅನೇಕ ಸಾಮಾಜಿಕ ಸುಧಾರಣೆಗಳನ್ನು ಸಹ ನಡೆಸಿದರು. ಇವರು ಪ್ರಾರಂಭಿಸಿದ ಶಾಲೆಯು ಅನೇಕ ಮಿಷನರಿಗಳ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುತ್ತಿದೆ ಮತ್ತು ಸಮಾಜದಲ್ಲಿ ಇನ್ನೂ ಅನೇಕ ಒಳ್ಳೆಯ ಜನರನ್ನು ಉತ್ಪಾದಿಸುತ್ತಿದೆ.

 

ಸತ್ಯವೇದದಲ್ಲಿ ನಾವು ನಂಬಿಕೆಯ ತಂದೆಯಾದ ಅಬ್ರಹಾಮನನ್ನು ನೋಡಿದ್ದೇವೆ. ಕರ್ತನು ಅಬ್ರಹಾಮನನ್ನು ಕರೆದಾಗ, ನಿನ್ನ ಸ್ವದೇಶವನ್ನೂ ಬಂಧು ಬಳಗವನ್ನೂ ತಂದೆಯ ಮನೆಯನ್ನೂ ಬಿಟ್ಟು ನಾನು ತೋರಿಸುವ ದೇಶಕ್ಕೆ ಹೋಗು (ಆದಿಕಾಂಡ 12:1) ಎಂದು ಹೇಳುತ್ತಾರೆ. ಅಬ್ರಹಾಮನು ವಿಧೇಯನಾದ ಕಾರಣ, ದೇವರು ಅವರನ್ನು ದೊಡ್ಡ ಶ್ರೀಮಂತನನ್ನಾಗಿ ಮಾಡಿ ಅವರ ಸಂತತಿಯನ್ನು ಆಶೀರ್ವದಿಸಿದರು.

 

ದೇವರ ಮಕ್ಕಳೇ, ಇಂದು ನಾವು ನಮ್ಮನ್ನು ದೇವರಿಗೆ ವಿಧೇಯರಾಗಲು ಒಪ್ಪಿಸಿಕೊಡುವಾಗ ಕರ್ತನು ನಮ್ಮನ್ನೂ ಉಪಯೋಗಿಸುತ್ತಾರೆ. ಅಬ್ರಹಾಮನನ್ನು ಕರೆದಾಗ, ಅಬ್ರಹಾಮನಿಗೂ ಕೇವಲ From adress ಮಾತ್ರವೇ ಇತ್ತು. To adress ಅಂದರೆ ಎಲ್ಲಿಗೆ ಹೋಗುತ್ತಿದ್ದೇವೆ ಎಂದು ಸಹ ಗೊತ್ತಿರಲಿಲ್ಲ. ಆದರೆ ಅಬ್ರಹಾಮನು ವಿಧೇಯನಾದ ಕಾರಣ ನಂಬಿಕೆಯ ತಂದೆಯಾದನು. ಇದನ್ನು ಓದುತ್ತಿರುವ ನಿಮ್ಮನ್ನು ದೇವರು ಸೇವೆಗೆ ಕರೆದಿದ್ದರೆ, ಅವರ ಶಬ್ದಕ್ಕೆ ವಿಧೇಯರಾಗಿದ್ದೀರಾ? ಕೂಡಲೇ ಅವರ ಮಾತಿಗೆ ವಿಧೇಯರಾಗಿ ಇಡೀ ಜಗತ್ತಿಗಾಗಿ ಅಳುತ್ತಿರುವ ದೇವರ ಕಣ್ಣೀರನ್ನು ಒರೆಸಲು ಇಂದೇ ಮುಂದೆ ಬರುತ್ತೀರಾ?

- Mrs. ರೂಬಿ ಅರುಣ್

 

ಪ್ರಾರ್ಥನಾ ಅಂಶ:

ಹಸಿದವರಿಗೆ ಆಹಾರ ನೀಡುವ ಯೋಜನೆಯ ಮೂಲಕ ಭೇಟಿಯಾಗುವ ಪ್ರತಿಯೊಂದು ವ್ಯಕ್ತಿಗಳೂ ಯೇಸುವಿನ ಪ್ರೀತಿಯನ್ನು ಸವಿಯುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al Elexbet matbet giriş matbet instagram unban x unban twitter unban palacebet setrabet