Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 18.10.2023
Share:

By Village Missionary Movement

Wednesday, 18-Oct-2023

ಧೈನಂದಿನ ಧ್ಯಾನ(Kannada) – 18.10.2023

 

ಪ್ರಶ್ನೆ ಕೇಳದ ವಿಧೇಯತೆ

 

"…ದೇವರು ಅವನಿಗೆ ಅಪ್ಪಣೆಕೊಟ್ಟ ಪ್ರಕಾರವೇ ಅವನು ಮಾಡಿದನು" - ಆದಿಕಾಂಡ 6:22

 

ಶ್ರೀಮಂತ ವ್ಯಕ್ತಿಯೊಬ್ಬರು ಉದ್ಯೋಗಕ್ಕಾಗಿ ಜಾಹೀರಾತು ನೀಡಿದ್ದರು. ಜಾಹೀರಾತನ್ನು ನೋಡಿ ಸಾಕಷ್ಟು ಯುವಕರು ಬಂದಿದ್ದರು. ಅವರು ಹೇಳಿದ ಕೆಲಸವನ್ನು ಎರಡು ದಿನ ಮಾಡಿದರು. ನಂತರ ಒಬ್ಬೊಬ್ಬರಾಗಿ ಗೊಣಗತೊಡಗಿದರು. ನಾನು ಎಷ್ಟು ಓದಿದ್ದೇನೆ? ನನ್ನ ಕೌಶಲ್ಯಗಳೇನು? ಈ ಕೆಲಸ ನನಗೆ ಸೂಕ್ತವಲ್ಲ ಎಂದು ಹೇಳಿ ಹೊರಟು ಹೋದರು. ಆದರೆ ಒಬ್ಬ ಯುವಕ ಮಾತ್ರ ಕೆಲಸ ಮಾಡುತ್ತಲೇ ಇದ್ದ. ಆ ಶ್ರೀಮಂತ ವ್ಯಕ್ತಿ ಅಲ್ಲಿ ಬಿದ್ದಿದ್ದ ಜಲ್ಲಿಕಲ್ಲುಗಳನ್ನು ತೆಗೆದುಕೊಂಡು ಹೋಗಿ ಸ್ವಲ್ಪ ದೂರ ಹೋಗಿ ಬಿಸಾಡಲು ಹೇಳಿದರು. ಮರುದಿನ ಬಂದು ಅದು ಮೊದಲಿದ್ದ ಸ್ಥಳಕ್ಕೆ ಪುನಃ ತಂದು ಹಾಕಲು ಹೇಳಿದರು. ಹೀಗೆ ಒಂದು ವಾರ ಮಾಡಲು ಹೇಳಿದರು. ಆ ಯುವಕನಿಗೆ ಒಂದು ವಾರದ ಕೂಲಿಯನ್ನೂ ಸಹ ಕೊಟ್ಟರು. ಮರುದಿನ ಆ ಹುಡುಗ ಕೆಲಸಕ್ಕೆ ಬರುತ್ತಾನೆ ಎಂದು ಅವರು ನಿರೀಕ್ಷಿಸಿರಲಿಲ್ಲ. ಹುಡುಗ ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಬಂದನು. ಏಕೆ ಎಂದು ಪ್ರಶ್ನಿಸದೆ ತನ್ನ ಯಜಮಾನನ ಆಜ್ಞೆಗಳನ್ನು ನಿಷ್ಠೆಯಿಂದ ಪಾಲಿಸಿದ ಆ ಯುವಕನಿಗೆ ತನ್ನ ವಿಧ್ಯಾಭ್ಯಾಸಕ್ಕೆ ತಕ್ಕ ಮತ್ತು ಕೌಶಲ್ಯಕ್ಕೆ ತಕ್ಕ ಉನ್ನತ ಹುದ್ದೆಯನ್ನು ಕೊಟ್ಟರು.

 

ಒಬ್ಬ ಮನುಷ್ಯನ ಜೀವನದಲ್ಲಿ ವಿಧೇಯತೆಯ ಕೊರತೆ ಅಪಾಯಕಾರಿ. ಭೂಮಿಯ ಮೇಲೆ ಪಾಪದ ಹೆಚ್ಚಳದಿಂದಾಗಿ, ದೇವರು ಲೋಕವನ್ನು ನಾಶಮಾಡಲು ತೀರ್ಮಾನಿಸಿ ನೋಹ ಎಂಬ ದೇವರ ಮನುಷ್ಯನೊಂದಿಗೆ ಮಾತನಾಡಿದರು. ಸತತವಾಗಿ ಮಳೆ ಸುರಿಯಲಿದೆ. ಆ ವಿನಾಶದಿಂದ ನಿನ್ನನ್ನು ಮತ್ತು ನಿನ್ನ ಕುಟುಂಬವನ್ನು ಕಾಪಾಡಿಕೊಳ್ಳಲು ಒಂದು ನಾವೆಯನ್ನು ಮಾಡು ಎಂದು ಹೇಳಿದರು. ಏಕೆ, ಏನು ಎಂದು ಯಾವುದೇ ಪ್ರಶ್ನೆಗಳನ್ನು ಕೇಳದೆ, ನೋಹನು ದೇವರು ಹೇಳಿದ ಅಳತೆಯಂತೆಯೇ ಒಂದು ಇಂಚು ಕೂಡಿಸಿಯೋ ಅಥವಾ ಕಳೆದೋ ಕಟ್ಟದೆ ಅವರು ಹೇಳಿದಂತೆಯೇ ವಿಧೇಯನಾಗಿ ಮಾಡಿ ಮುಗಿಸಿದರು. ಅವನ ಕುಟುಂಬವೂ ವಿನಾಶದಿಂದ ರಕ್ಷಿಸಲ್ಪಟ್ಟಿತು. ನಂತರ ಅಬ್ರಹಾಮನಿಗೆ 100 ನೇ ವಯಸ್ಸಿನಲ್ಲಿ ಜನಿಸಿದ ತನ್ನ ಮಗನನ್ನು ಮೊರೀಯ ಎಂಬ ಪರ್ವತಕ್ಕೆ ಕರೆದೊಯ್ದು ದಹನಬಲಿಯಾಗಿ ಅರ್ಪಿಸು ಎಂದು ದೇವರು ಹೇಳಿದರು. ಅಬ್ರಹಾಮನು ದೇವರ ಮಾತಿಗೆ ವಿಧೇಯನಾಗಿ ತನ್ನ ಹೆಂಡತಿಗೂ ಹೇಳದೆ ಮಗನನ್ನು ಕರೆದುಕೊಂಡು ಹೋದನು. ಪ್ರಶ್ನೆ ಕೇಳದ ವಿಧೇಯತೆಯನ್ನು ನೋಡಿದ ದೇವರು ಅವರನ್ನು ಇಡೀ ಜಗತ್ತಿಗೆ ಆಶೀರ್ವಾದವಾಗಿ ಮಾರ್ಪಡಿಸಿದರು.

 

ಪ್ರಿಯರೇ! ನಮ್ಮ ವೈಯಕ್ತಿಕ ಜೀವನದಲ್ಲಿ ನಾವು ದೇವರಿಗೆ ವಿಧೇಯರಾಗುತ್ತಿದ್ದೇವೆಯೇ? ದೇವರು ತನ್ನ ಚಿತ್ತವನ್ನು ಪ್ರಶ್ನಿಸದೆ ಮಾಡಲು ಬಯಸುವ ಮನುಷ್ಯನನ್ನು ಹುಡುಕುತ್ತಿದ್ದಾರೆ. ಹಾಗೆ ವಿಧೇಯರಾಗುವಾಗ ಹಲವರಿಗೆ ಉಪಯುಕ್ತವಾಗುವ ಪಾತ್ರೆಯಾಗಿ ಮಾರ್ಪಡಿಸಲು ಆತನು ಶಕ್ತನಾಗಿದ್ದಾನೆ. ವಿಧೇಯತೆಯೇ ಜೀವನದ ಉನ್ನತಿಗೆ ಮೊದಲಹೆಜ್ಜೆ ಎಂಬುದನ್ನು ಮರೆಯಬೇಡಿರಿ. ಹೌದು, ನೋಹ ಮತ್ತು ಅಬ್ರಹಾಮರಂತೆ ನಾವು ಕೂಡ ಪ್ರಶ್ನಿಸದ ವಿಧೇಯತೆಯೊಂದಿಗೆ ಇರೋಣ. ಆಶೀರ್ವದಿಸಲ್ಪಡೋಣ.

- Mrs. ಶಶಿಕಲಾ ಪರಮಶಿವಂ

 

ಪ್ರಾರ್ಥನಾ ಅಂಶ:

ಮಾಧ್ಯಮದಲ್ಲಿ ಕೆಲಸ ಮಾಡುವವರಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş matbet giriş holiganbet giriş matbet sahabet onwin bets10 bets10 giriş bets10 güncel giriş betcio atlasbet casibom meritking casibom giriş perabet padişahbet padişahbet giriş holiganbet matbet perabet perabet giriş instagram ban service pashagaming pashagaming giris gorabet gorabet giris grandpashabet çarkbet çarkbet giriş deneme bonusu casibom giriş casibom vaycasino vaycasino giriş casibom meritking casibom casibom giriş meritking meritking giriş holiganbet jojobet jojobet jojobet jojobet jojobet holiganbet holiganbet grandpashabet grandpashabet grandpashabet cratosroyalbet