Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 31.10.2023
Share:

By Village Missionary Movement

Tuesday, 31-Oct-2023

ಧೈನಂದಿನ ಧ್ಯಾನ(Kannada) – 31.10.2023

 

ಉತ್ತಮವಾದ ಓಟ

 

"ಶ್ರೇಷ್ಠ ಹೋರಾಟವನ್ನು ಮಾಡಿದ್ದೇನೆ, ನನ್ನ ಓಟವನ್ನು ಕಡೆಗಾಣಿಸಿದ್ದೇನೆ, ಕ್ರಿಸ್ತನಂಬಿಕೆಯನ್ನು ಕಾಪಾಡಿಕೊಂಡಿದ್ದೇನೆ." - 2 ತಿಮೊಥೆ 4:7

 

ಭಾರತದಲ್ಲಿ ಮೊಟ್ಟ ಮೊದಲು ಓಟ ಪಂದ್ಯದಲ್ಲಿ ಹೆಸರು ಸಂಪಾದಿಸಿದ ಮನ್ ಕವೂರ್ ಎಂಬ ಮಹಿಳೆ ತನ್ನ 103 ನೇ ವಯಸ್ಸಿನಲ್ಲಿ, ಪೋಲೆಂಡ್‌ನಲ್ಲಿ 2019 ನೇ ವರ್ಷದಲ್ಲಿ ನಡೆದ ವಿಶ್ವ ಮಾಸ್ಟರ್ಸ್ ಓಟ ಪಂದ್ಯದಲ್ಲಿ ಸ್ಪರ್ಧಿಸಿದರು. ಆಶ್ಚರ್ಯಕರವಾಗಿ, ಈಟಿ ಎಸೆತ, ಕಬ್ಬಿಣದ ಗುಂಡು ಎಸೆತ, 60 ಮೀಟರ್ ಗಳ ಓಟ ಪಂದ್ಯ, 200 ಮೀಟರ್ ಗಳ ಓಟ ಪಂದ್ಯ ಹೀಗೆ ನಾಲ್ಕು ಸ್ಪರ್ಧೆಗಳಲ್ಲೂ ಮನ್ ಕವೂರ್ ಚಿನ್ನದ ಪದಕವನ್ನು ಗೆದ್ದರು. ಇನ್ನೂ ಆಶ್ಚರ್ಯಕರವಾಗಿ, ಅವರು 2017 ನೇ ವರ್ಷದಲ್ಲಿ ಓಡಿದ್ದಕ್ಕಿಂತ ವೇಗವಾಗಿ ಓಡಿದ್ದರು. ಮನ್ ಕವೂರ್ ಒಂದು ಮುತ್ತಜ್ಜಿಯಾಗಿ ತನ್ನ ಎರಡನೇ ಶತಮಾನವನ್ನು ಯಶಸ್ವಿಯಾಗಿ ಪೂರೈಸಿದರು.

 

ಅಪೊಸ್ತಲನಾದ ಪೌಲನು ತನ್ನ ಕಿರಿಯ ಶಿಷ್ಯನಾದ ತಿಮೊಥೆಯನಿಗೆ ತನ್ನ ಜೀವನದ ಅಂತ್ಯವು ಸಮೀಪಿಸುತ್ತಿರುವುದನ್ನು ಸಹ ಬರೆದರು. ನಾನು ಹೊರಟು ಹೋಗಬೇಕಾದ ಸಮಯವು ಸಮೀಪಕ್ಕೆ ಬಂದದೆ. (2 ತಿಮೊ. 4:6,7) “ಶ್ರೇಷ್ಠ ಹೋರಾಟವನ್ನು ಮಾಡಿದ್ದೇನೆ, ನನ್ನ ಓಟವನ್ನು ಕಡೆಗಾಣಿಸಿದ್ದೇನೆ, ಕ್ರಿಸ್ತನಂಬಿಕೆಯನ್ನು ಕಾಪಾಡಿಕೊಂಡಿದ್ದೇನೆ; ನೀತಿವಂತರಿಗೆ ದೊರಕುವ ಜಯಮಾಲೆಯು ಮುಂದೆ ನನಗೆ ಸಿದ್ಧವಾಗಿದೆ" ಎಂದು ಪೌಲನು ತನ್ನ ಆಶ್ಚರ್ಯಕರ ಸಾಧನೆಗಳನ್ನು ಕಿರಿಯ ಶಿಷ್ಯನಾದ ತಿಮೊಥೆಯನಿಗೆ ವಿವರಿಸಿ ಹೇಳಿದರು.

 

ಪ್ರಿಯರೇ! ನಾವು ಸಹ ನಮ್ಮ ಜೀವನದಲ್ಲಿ ದೇವರಿಗಾಗಿ ಮಾಡಿದ ಕೆಲಸಗಳೆಷ್ಟು? ನನಗೆ ವಯಸ್ಸಾಗಿದೆ, ನನ್ನಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದು ಪಕ್ಕಕ್ಕೆ ಹೋಗುತ್ತಿದ್ದೇವಾ? ನಾವಿರುವ ಸ್ಥಳದಲ್ಲಿ ಉತ್ತಮ ಸಾಕ್ಷಿಯಾಗಿ ಮತ್ತು ದೀಪವಾಗಿ ದೇವರಿಗಾಗಿ ಎದ್ದು ಪ್ರಕಾಶಿಸಲು ಬಯಸುತ್ತಿದ್ದೇವಾ? ಪೌಲನ ಬಲಹೀನ ಸಮಯದಲ್ಲೂ "ನನ್ನ ಕೃಪೆಯೇ ನಿನಗೆ ಸಾಕು; ಬಲಹೀನತೆಯಲ್ಲಿಯೇ ಬಲವು ಪೂರ್ಣಸಾಧಕವಾಗುತ್ತದೆ. ಎಂದು ಪ್ರೋತ್ಸಾಹಿಸಿದ ಯೇಸು ಕ್ರಿಸ್ತನು ಸಹ ಇಂದು ನಮ್ಮೊಂದಿಗಿದ್ದಾರೆ. ಆದ್ದರಿಂದ, ನಮ್ಮ ಓಟವನ್ನು ಶ್ರೇಷ್ಠವಾಗಿ ಪೂರ್ಣಗೊಳಿಸಲು ವಯಸ್ಸು ಎಂದಿಗೂ ಅಡ್ಡಿಯಾಗುವುದಿಲ್ಲ. ಆದ್ದರಿಂದ ನೆಪಗಳನ್ನು ದೂರ‌ ಬಿಸಾಡೋಣ. ಬಲಹೀನತೆ, ಹೋರಾಟ, ವಯಸ್ಸು ಇದ್ಯಾವುದೂ ಸಹ ನಾವು ದೇವರಿಗಾಗಿ ಜೀವಿಸುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಅರಿತುಕೊಂಡು, ಸತತವಾಗಿ ನಮ್ಮ ಓಟವನ್ನು ದೇವರ ಸಹಾಯದೊಂದಿಗೆ ಉತ್ತಮವಾಗಿ ಓಡಿ ಮುಗಿಸೋಣ. ದೇವರು ನಮಗೆ ಸಹಾಯ ಮಾಡಲಿ.

- Mrs. ಜ್ಞಾನಸೆಲ್ವಂ ಸೆಲ್ವರಾಜ್

 

ಪ್ರಾರ್ಥನಾ ಅಂಶ:

ತಮಿಳುನಾಡಿನ ಎಲ್ಲಾ ಕಾರ್ಯ ಸ್ಥಳಗಳಲ್ಲಿ ಉಜ್ಜೀವನ ಪ್ರಾರ್ಥನಾ ಕೇಂದ್ರಗಳನ್ನು ನಿರ್ಮಿಸಲು ಅಗತ್ಯವಿರುವ ಭೂಮಿಯನ್ನು ಖರೀದಿಸಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet perabet perabet giriş padişahbet padişahbet giriş meritking meritking giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş jojobet jojobet betplay jojobet esbet sonbahis tambet grandpashabet betgit mercurecasino