Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 17.11.2023
Share:

By Village Missionary Movement

Friday, 17-Nov-2023

ಧೈನಂದಿನ ಧ್ಯಾನ(Kannada) – 17.11.2023

 

ಸಮರ್ಪಣೆ

 

"ನಾನು ಏನು ಮಾಡಬೇಕೆಂದು ನೀನು ಕೋರುತ್ತೀ ಅಂದನು” - ಅಪೊಸ್ತಲ. 9:6

 

ಮನುಷ್ಯರನ್ನು ಕೊಂದು ತಿನ್ನುತ್ತಿದ್ದ ಪಪುವಾ ದ್ವೀಪದ ನರಭಕ್ಷಕರನ್ನು ಕ್ರಿಸ್ತನ ಮಕ್ಕಳನ್ನಾಗಿ ಪರಿವರ್ತಿಸಿದವರೇ ಜಾನ್ ಹೆನ್ರಿ ಹೋಮ್ಸ್ ಎಂಬ ಮಿಷನರಿ. (1866-1934) ಅವರು ಆ ಜನರಿಗೆ ಕ್ರಿಸ್ತನ ಪ್ರೀತಿಯನ್ನು ತಿಳಿಸಲು ತೀವ್ರವಾಗಿದ್ದರು. ಒಂದು ಮಿಷನ್ ಸ್ಥಾಪನೆಯ ಮೂಲಕ ಪಾಪುವಾ ದ್ವೀಪಕ್ಕೆ ತೆರಳಿ ಅಲ್ಲಿನ ಜನರ ಸ್ಥಿತಿಯನ್ನು ಕಂಡು ಒಂದು ಕ್ಷಣ ವಿಚಲಿತರಾದರು. ಮೈಮೇಲೆ ಬಟ್ಟೆಯಿಲ್ಲದೆ ಅಸಹನೀಯ ದುರ್ವಾಸನೆಯಿಂದ ನಿಂತಿದ್ದರು. ಮೊದಲು ಜನರ ಭಾಷೆ ಕಲಿತು ಅವರೊಂದಿಗೆ ಸ್ನೇಹದಿಂದ ಇರಲು ಆರಂಭಿಸಿದರು. ಅವರಲ್ಲಿ ಚಾಲ್ತಿಯಲ್ಲಿದ್ದ ಮೂಢನಂಬಿಕೆಗಳನ್ನು ಸಂಪೂರ್ಣವಾಗಿ ಬದಲಾಯಿಸಿದರು. ಅವರು ಶಾಲೆಗಳು ಮತ್ತು ಮನೆಗಳನ್ನು ನಿರ್ಮಿಸಿದರು. ಅವರು ತಮ್ಮ ಭಾಷೆಯಲ್ಲಿ ಸತ್ಯವೇದವನ್ನು ಓದಲು ಸಹಾಯ ಮಾಡಿದರು. ಇದು ಪಪುವಾ ದ್ವೀಪದ ಜನರ ಜೀವನಮಟ್ಟವನ್ನೇ ಬದಲಿಸಿತು. ಜನರನ್ನು ಕೊಂದು ತಿನ್ನುತ್ತಿದ್ದ ಜನರು ಯೇಸುವಿನ ಪ್ರೀತಿಯಿಂದ ಜನರನ್ನು ಪ್ರೀತಿಸಲು ಪ್ರಾರಂಭಿಸಿದರು. ಇದಕ್ಕೆಲ್ಲಾ ಕಾರಣ ಜಾನ್ ಹೆನ್ರಿ ತನ್ನ ಜೀವನವನ್ನು ಪಪುವಾ ದ್ವೀಪದ ಜನರ ರಕ್ಷಣೆಗಾಗಿ ಸಮರ್ಪಿಸಿದ್ದೇ.

 

ಅಪೊಸ್ತಲ. 9ನೇ ಅಧ್ಯಾಯದಲ್ಲಿ, ಸೌಲನೆಂಬ ಪೌಲನನ್ನು ಕರ್ತನು ಭೇಟಿ ಮಾಡಿದ ವಿವರಗಳನ್ನು ನಾವು ತಿಳಿದಿದ್ದೇವೆ. ಈ ಸೌಲನು ಕ್ರೈಸ್ತರನ್ನು ಕಟ್ಟಿಹಾಕಿ ಯೆರೂಸಲೇಮಿಗೆ ಕರೆತರಲು ಪತ್ರಗಳನ್ನು ಕೇಳಿ ಪಡೆದನು. ಅದಕ್ಕಾಗಿ ಪಯಣಿಸುತ್ತಿರುವಾಗ ಬೆಳಕೊಂದು ಅವರನ್ನು ಭೇಟಿ ಮಾಡಿತು. ಆ ಸ್ಥಳದಲ್ಲಿ ಪೌಲನು ಕರ್ತನ ಧ್ವನಿಯನ್ನು ಕೇಳಿದನು ಮತ್ತು ದೇವರಿಗೆ ತನ್ನನ್ನು ಸಮರ್ಪಿಸಿಕೊಂಡನು, "ನಾನು ಏನು ಮಾಡಬೇಕೆಂದು ನೀನು ಕೋರುತ್ತೀ" ಎಂದು ತನ್ನನ್ನು ದೇವರ ಬಳಿ ಸಮರ್ಪಿಸಿದರು. ಹೀಗೆ ಸಮರ್ಪಿಸಿದ ಪೌಲನ ಮೂಲಕವೇ ಕರ್ತನು 13 ಕ್ಕೂ ಹೆಚ್ಚು ಪತ್ರಿಕೆಗಳನ್ನು ಬರೆಯುವಂತೆ ಮಾಡಿದರು. ತಿಮೊಥೆಯೆಂಬ ಯುವಕನು ಸಹ ದೇವರ ಸೇವೆ ಮಾಡಲು ಕಾರಣನಾಗಿದ್ದರು.

 

ಪ್ರಿಯರೇ, ಸಮರ್ಪಣೆ ಎಂಬುದು ನಮ್ಮನ್ನು, ನಮ್ಮದನ್ನು ಮತ್ತು ದೇವರು ನಮಗೆ ಕೊಡಬೇಕೆಂದು ಇರುವುದನ್ನೂ ಅವರ ಕೈಗೆ ಒಪ್ಪಿಸುವುದೇ ಆಗಿದೆ. ಕ್ರೈಸ್ತರಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದ ಪೌಲನ ಸಮರ್ಪಣೆಯಿಂದಾಗಿ ಅನೇಕ ಸೇವಕರು ರೂಪಿಸಲ್ಪಟ್ಟರು ಮತ್ತು ಅನೇಕ ಪತ್ರಿಕೆಗಳನ್ನು ಬರೆಯಲಾಯಿತು. ಈ ಪೌಲನ ಮೂಲಕ ಇಂದಿಗೂ ಸಭೆಗಳಿಂದಲೂ, ಸೇವಕರಿಂದಲೂ ಮತ್ತು ವಿಶ್ವಾಸಿಗಳಿಂದಲೂ ಮಾತನಾಡಲ್ಪಟ್ಟು ಬೋಧಿಸಲ್ಪಡುತ್ತಾ ಇದ್ದಾರೆ. ಇಂದು ನೀವು ನಿಮ್ಮನ್ನು ದೇವರಿಗೆ ಸಮರ್ಪಿಸಿಕೊಂಡಾಗ, ನೀವು ಸಾವಿರಾರು ಜನರ ರಕ್ಷಣೆಗೆ ಕಾರಣಕರ್ತರಾಗಿ ಮಾರ್ಪಡಲು ಸಾಧ್ಯ. ಭೂಮಿಯ ಮೇಲೆ ನಮಗೆ ನೀಡಲಾದ ಜೀವಿತಾವಧಿಯು ಚಿಕ್ಕದಾಗಿದೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ಆತನ ಧ್ವನಿಯನ್ನು ಕೇಳಿ ಆತನ ಚಿತ್ತವನ್ನು ಮಾಡಲು ನಮ್ಮನ್ನು ಸಮರ್ಪಿಸಿಕೊಳ್ಳೋಣ!

- Mrs. ಶಕ್ತಿ ಶಂಕರ್ ರಾಜ್ 

 

ಪ್ರಾರ್ಥನಾ ಅಂಶ:

ನಮ್ಮ ಕ್ಯಾಂಪಸ್‌ನಲ್ಲಿ ಉಳಿದು ತರಬೇತಿ ಪಡೆಯುತ್ತಿರುವ ಯುವ ಮಿಷನರಿಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al deneme bonusu deneme bonusu veren siteler online casino online casino perabet perabet giriş perabet güncel giriş jojobet jojobet giriş jojobet güncel giriş Holiganbet Holiganbet Giriş Holiganbet Güncel Giriş Superbetin Superbetin Giriş Superbetin Güncel Giriş pashagaming pashagaming giriş pashagaming güncel giriş betcio Betcio Giriş betcio güncel giriş atlasbet atlasbet giriş atlasbet güncel giriş Piabet Piabet Giriş Ngsbahis Ngsbahis Giriş İnterbahis İnterbahis Giriş Klasbahis Klasbahis Giriş Coinbar Coinbar Giriş Limanbet Limanbet Giriş İmajbet İmajbet Giriş Restbet Restbet Giriş Matbet Matbet Giriş Jasminbet Jasminbet Giriş Belugabahis Belugabahis Giriş Online casino nz Best payout online casino nz jojobet jojobet giriş jojobet güncel giriş meritking meritking giriş meritking güncel giriş perabet perabet giriş perabet güncel giriş holiganbet holiganbet giriş holiganbet güncel giriş Meritking Perabet Holiganbet jojobet jojobet giriş jojobet güncel giriş bahsegel bahsegel bahsegel bahsegel bahsegel perabet perabet giriş perabet perabet giriş holiganbet holiganbet giriş holiganbet holiganbet giriş belugabahis matbet romabet https://tr.jojobet-13eylul.art/