Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 11.12.2023
Share:

By Village Missionary Movement

Monday, 11-Dec-2023

ಧೈನಂದಿನ ಧ್ಯಾನ(Kannada) – 11.12.2023

 

ಕಳವಳವಾ? ಕುತೂಹಲವಾ ?

 

"…ಆ ನಕ್ಷತ್ರವನ್ನು ಕಂಡು ಅತ್ಯಧಿಕವಾದ ಆನಂದದಿಂದ ಸಂತೋಷಪಟ್ಟರು" - ಮತ್ತಾಯ 2:10

 

ಜಾನ್ ಮತ್ತು ಪೀಟರ್ ಒಂದೇ ಕಾಲೇಜಿನಲ್ಲಿ ಒಂದೇ ವಿಭಾಗದ ವಿದ್ಯಾರ್ಥಿಗಳು. ಆದರೆ ಇಬ್ಬರೂ ಪಾಠ ಕಲಿಯುವ ವಿಧಾನದಲ್ಲಿ ವ್ಯತ್ಯಾಸವಿದೆ. ಜಾನ್ ಅಂದಿನ ಪಾಠಗಳನ್ನು ಅಂದೇ ಓದಿ ಅದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾನೆ. ಆದರೆ ಪೀಟರ್ ಯಾವಾಗಲೂ ಪರೀಕ್ಷೆಯ ಕೊನೆಯ ನಿಮಿಷದಲ್ಲಿ ಪ್ರಯತ್ನಿಸುವ ಪ್ರತಿಸ್ಪರ್ಧಿಯಾಗಿಯೇ ಇದ್ದನು. ಅವರ ಸೆಮಿಸ್ಟರ್ ಪರೀಕ್ಷೆಗೆ ಒಂದು ತಿಂಗಳ ಅಂತರವಿದ್ದಾಗ ಕೆಲವು ಅನಿವಾರ್ಯ ಕಾರಣಗಳಿಂದ ಪರೀಕ್ಷಾ ವೇಳಾಪಟ್ಟಿಯನ್ನು ಇದ್ದಕ್ಕಿದ್ದಂತೆ ಬದಲಾಯಿಸಲಾಯಿತು. ಅದಕ್ಕೆ ಕೇವಲ ಒಂದು ವಾರ ಮಾತ್ರವೇ ಇತ್ತು. ಜಾನ್ ಗೆ ಉತ್ತಮ ಅಂಕಗಳನ್ನು ಗಳಿಸಿ ಬಿಡುತ್ತೇನೆ ಎಂಬ ಕುತೂಹಲ, ಏನನ್ನೂ ಓದದ ಪೀಟರ್ ಗೆ ಒಂದು ವಾರದಲ್ಲಿ ಇಷ್ಟು ದೊಡ್ಡ ಪುಸ್ತಕವನ್ನು ಓದಲು ಸಾಧ್ಯವಾ ಎಂಬ ಕಳವಳ!

 

ಇದರಂತೆಯೇ ಅರಸನಾದ ಹೆರೋದನ ದಿನಗಳಲ್ಲಿ ಯೇಸುಕ್ರಿಸ್ತನ ಜನನವು ಶಾಸ್ತ್ರಿಗಳ ಮೂಲಕ ಪ್ರಕಟಿಸಲಾಯಿತು. (ಮತ್ತಾಯ 2:3) ಅರಸನಾದ ಹೆರೋದನು ಇವುಗಳನ್ನು ಕೇಳಿ ಅವನು ಯೆರೂಸ ಲೇಮಿನವರೆಲ್ಲರೊಂದಿಗೆ ಕಳವಳಪಟ್ಟನು. ಅವನ ಕಳವಳವು ಅವನನ್ನು ದೇವರ ಯೋಜನೆಗೆ ವಿರುದ್ಧವಾಗಿ ವರ್ತಿಸುವಂತೆ ಮಾಡಿತು. ಯೆಹೂದ್ಯರ ಅರಸನಾಗಿ ಜನಿಸಿದ ಯೇಸುವನ್ನು ನೋಡಲು ಅವನು ಬಯಸಲಿಲ್ಲ. ಬದಲಿಗೆ ಆತನನ್ನು ಕೊಲ್ಲಲು ಯೋಜನೆ ರೂಪಿಸಿದ್ದನು.

 

ಆದರೆ ಕ್ರಿಸ್ತನ ಜನನವನ್ನು ನಕ್ಷತ್ರಗಳ ಮೂಲಕ ತಿಳಿದುಕೊಂಡ ಶಾಸ್ತ್ರಿಗಳಿಗೆ ಇದು ಸಂತೋಷವನ್ನು ನೀಡಿತು. ಕೂಡಲೇ ಅವರನ್ನು ಭೇಟಿಯಾಗಬೇಕೆಂಬ ಕುತೂಹಲವನ್ನು ಉಂಟುಮಾಡಿತು. ಅದು ಅವರನ್ನು ನೇರವಾಗಿ ದೇವರ ಯೋಜನೆಯ ಬಳಿಗೆ ಕರೆದೊಯ್ಯಿತು. ಆ ನಕ್ಷತ್ರವನ್ನು ಕಳೆದುಕೊಂಡದ್ದರಿಂದ, ಮನುಷ್ಯರ ಸಹಾಯವನ್ನು ಹುಡುಕಿ ಹೋಗಿ ಅದರಲ್ಲಿ ಸೋತು ಹೋದರೂ, ಪ್ರಯತ್ನವನ್ನು ಬಿಡಲಿಲ್ಲ. ಅದೇ ನಕ್ಷತ್ರವು ಅವರಿಗೆ ಮತ್ತೆ ಕಾಣಿಸಿಕೊಂಡು ಚಲಿಸಲು ಪ್ರಾರಂಭಿಸಿತು. ಮಗು ಇದ್ದ ಸ್ಥಳಕ್ಕೆ ಹೋಗಿ ಸೇರಿತು. ಅವರು ಅತ್ಯಧಿಕವಾದ ಆನಂದದಿಂದ ಸಂತೋಷಪಟ್ಟರು.

 

ಪ್ರಿಯರೇ! ನಮಗೆ ಕ್ರಿಸ್ತನ ಎರಡನೇ ಬರೋಣದ ಕುರಿತು ತಿಳಿಸಲ್ಪಡುತ್ತಲೇ ಇದೆ. ನಮಗೆ ನ್ಯಾಯತೀರಿಸುವ ನ್ಯಾಯಾಧಿಪತಿಯಾಗಿ ಕ್ರಿಸ್ತನು ಬರಲಿದ್ದಾರೆ ಎಂಬುದನ್ನು ನಾವು ತಿಳಿದೂ ನಿರ್ಲಕ್ಷ್ಯವಾಗಿ ಯಾವುದೇ ಪ್ರಯತ್ನವನ್ನೂ ಮಾಡದೆ ಪ್ರಾಪಂಚಿಕ ವ್ಯವಹಾರಗಳಲ್ಲಿ ಮುನ್ನಡೆಯುತ್ತಿದ್ದರೆ, ಅವರ ಆಗಮನವು ನಮ್ಮ ಮನಸ್ಸಿನಲ್ಲಿ ಒಂದು ಕಳವಳವನ್ನು ಉಂಟುಮಾಡುತ್ತದೆ! ಕ್ರಿಸ್ತನನ್ನು ರಕ್ಷಕನಾಗಿ ಅಂಗೀಕರಿಸಿರುವ ನಾವು ಕಳವಳದಿಂದಲಾ ಅಥವಾ ಸಂತೋಷದಿಂದಲಾ ಹೇಗೆ ಭೇಟಿಯಾಗಲು ನಿರ್ಧರಿಸಲಿದ್ದೇವೆ?

- Mrs. ಸಿನಿಲ್ಟಾ ಸೆಲ್ವರಾಜ್

 

ಪ್ರಾರ್ಥನಾ ಅಂಶ:

ನಮ್ಮ ಕ್ಯಾಂಪಸ್‌ನಲ್ಲಿರುವ ವೈದ್ಯಕೀಯ ಸೇವೆಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al deneme bonusu deneme bonusu veren siteler online casino online casino perabet perabet giriş perabet perabet giriş perabet perabet giriş perabet güncel giriş jojobet jojobet giriş jojobet güncel giriş Holiganbet Holiganbet Giriş Holiganbet Güncel Giriş Superbetin Superbetin Giriş Superbetin Güncel Giriş pashagaming pashagaming giriş pashagaming güncel giriş betcio Betcio Giriş betcio güncel giriş atlasbet atlasbet giriş atlasbet güncel giriş Piabet Piabet Giriş Ngsbahis Ngsbahis Giriş İnterbahis İnterbahis Giriş Klasbahis Klasbahis Giriş Coinbar Coinbar Giriş Limanbet Limanbet Giriş İmajbet İmajbet Giriş Restbet Restbet Giriş Matbet Matbet Giriş Jasminbet Jasminbet Giriş Belugabahis Belugabahis Giriş Online casino nz Best payout online casino nz matbet jojobet jojobet giriş jojobet güncel giriş bahsegel bahsegel bahsegel matbet romabet lunabet