By Village Missionary Movement
Tuesday, 12-Dec-2023ಧೈನಂದಿನ ಧ್ಯಾನ(Kannada) – 13.12.2023
ಅದ್ಭುತಸ್ವರೂಪನು
"ಒಂದು ಮಗು ನಮಗಾಗಿ ಹುಟ್ಟಿದೆಯಷ್ಟೆ, ವರದ ಮಗನು ನಮಗೆ ದೊರೆತನು;…ಅದ್ಭುತಸ್ವರೂಪನು, . .ಎಂಬವು ಅವನ ಹೆಸರು" - ಯೆಶಾಯ 9:6
ಅಪೊಸ್ತಲನಾದ ಪೌಲನು "ಕ್ರಿಸ್ತನು ನಮ್ಮಲ್ಲಿ ರೂಪುಗೊಳ್ಳಬೇಕು" ಎಂದು ಹೇಳುತ್ತಾರೆ. ಕ್ರಿಸ್ತನು ನಮ್ಮಲ್ಲಿ ರೂಪುಗೊಂಡ ಆ ದಿನ ಮೊದಲುಗೊಂಡು, ನಮ್ಮ ಹೃದಯವು ಕ್ರಿಸ್ತನ ಜನನದ ಸಂತೋಷವನ್ನು ಅನುಭವಿಸುತ್ತಿದೆ. ಹೀಗೆ ನಮ್ಮ ಜೀವನದಲ್ಲಿ ಪ್ರವೇಶಿಸಿದ ಆ ಅದ್ಭುತಸ್ವರೂಪನ ಅದ್ಭುತ ಕಾರ್ಯಗಳನ್ನು ಪ್ರತಿದಿನ ಅನುಭವಿಸಿ ಆನಂದಿಸುವುದೇ ಕ್ರೈಸ್ತ ಜೀವನ. ಹಾಗೆ ಅದ್ಭುತಸ್ವರೂಪನಾಗಿ ದೇವರು ಡಿ.ಎಲ್. ಮೂಡಿ ಎಂಬ ದೇವಮನುಷ್ಯನ ಜೀವನದಲ್ಲಿ ಪ್ರವೇಶಿಸಿದ ಒಂದು ಘಟನೆಯನ್ನು ನೋಡೋಣ.
ಒಮ್ಮೆ ಇವರಿಗೆ ಹಣದ ಅವಶ್ಯಕತೆ ಹೆಚ್ಚಾಗಿತ್ತು. ಸೇವೆಯ ಅಗತ್ಯತೆಗಳು ಮತ್ತು ಅವರ ಕುಟುಂಬದ ಅಗತ್ಯತೆಗಳ ನಡುವೆ, ಅವರು ಕಂತುಗಳಲ್ಲಿ ಖರೀದಿಸಿದ್ದ ಕಾರಿಗೆ 14 ಡಾಲರ್ ಗಳನ್ನು ಪಾವತಿಸಬೇಕಾಗಿತ್ತು. 14 ಡಾಲರ್ ಪಾವತಿಸದಿದ್ದರೆ, ಕಾರನ್ನು ತೆಗೆದುಕೊಂಡು ಹೋಗಲಾಗುತ್ತದೆ. ನಾಳೆಯೊಳಗೆ ನನಗೆ 14 ಡಾಲರ್ ಬೇಕು ಯಾರನ್ನು ಕೇಳಬೇಕೆಂದು ತಿಳಿಯುತ್ತಿಲ್ಲ. ಬಹಳ ಕಷ್ಟದ ಪರಿಸ್ಥಿತಿಯಲ್ಲಿ ಯೇಸುವಿನ ಬಳಿ ಹೀಗೆ ಪ್ರಾರ್ಥಿಸಿದರಂತೆ, “ಕರ್ತನೇ, ನೀವು ನನ್ನನ್ನು ಪರೀಕ್ಷಿಸಿ ನೋಡಿ ಎಂದು ಹೇಳಿದ್ದೀರಿ, ಆಕಾಶದ ಕಿಟಕಿ ಗಳನ್ನು ತೆರೆದು ನನ್ನ ಅಗತ್ಯತೆಯನ್ನು ಪೂರೈಸಿರಿ" ಎಂದು ಪ್ರಾರ್ಥಿಸಿಬಿಟ್ಟು ಕರ್ತನು ನೋಡಿಕೊಳ್ಳುತ್ತಾರೆ ಮತ್ತು ಅದ್ಭುತವನ್ನು ಮಾಡುತ್ತಾರೆ ಎಂಬ ನಂಬಿಕೆಯಿಂದ ಮಲಗಲು ಹೋಗಿಬಿಟ್ಟರು. ಎಂಥಾ ಆಶ್ಚರ್ಯ ಮುಂಜಾನೆ ಎದ್ದು ನೋಡಿದಾಗ ಅವರ ಮನೆಯ ಅಂಗಳದಲ್ಲಿ ಎಲ್ಲೆಂದರಲ್ಲಿ ಹಣ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ಕಂಡರು. ಏನು ಆಶ್ಚರ್ಯ! ಕಾರಿಗೆ ಕಟ್ಟಲು ಬೇಕಾಗಿದ್ದ ಮೊತ್ತ 14 ಡಾಲರ್ ಸರಿಯಾಗಿತ್ತು. ಹೌದು, ದೇವರು ಅದ್ಭುತಸ್ವರೂಪನು! ನಮ್ಮ ನಂಬಿಕೆಯ ಪ್ರಕಾರ ಆತನನ್ನು ಸ್ವೀಕರಿಸುವ ಎಲ್ಲರಿಗೂ ಅವರು ಸರಿಯಾದ ಸಮಯದಲ್ಲಿ ಅದ್ಭುತಗಳನ್ನು ಮಾಡುತ್ತಾರೆ. ಯೇಸು ಕ್ರಿಸ್ತನು ನಿನ್ನೆ, ಇಂದು ಮತ್ತು ಎಂದೆಂದಿಗೂ ಮಾರ್ಪಡದವರಾಗಿದ್ದಾರೆ.
ಸತ್ಯವೇದದಲ್ಲಿ ದೇವರು ಮಾಡಿರುವ ಅದ್ಭುತಗಳನ್ನು ಹೇಳಲು ಸಾಧ್ಯವೇ ಇಲ್ಲ. ಚಾರೆಪ್ತಾ ವಿಧವೆಯ ಜೀವನದಲ್ಲಿ ಬರಗಾಲದ ಉದ್ದಕ್ಕೂ, ಎಣ್ಣೆ ಮತ್ತು ಹಿಟ್ಟು ಕಡಿಮೆಯಾಗದ ಅದ್ಭುತ. ಕಾನಾವೂರಿನ ಮದುವೆಯಲ್ಲಿ ನೀರು ದ್ರಾಕ್ಷಾರಸವಾಗಿ ಮಾರ್ಪಟ್ಟ ಅದ್ಭುತ! 5000 ಜನರಿಗೆ 5 ರೊಟ್ಟಿ ಮತ್ತು 2 ಮೀನು ತಿನ್ನಿಸಿದ ಅದ್ಬುತ! ಒಮ್ಮೆ ಬಡ ವಿಧವೆಯ ಸತ್ತುಹೋದ ಯೌವನಸ್ಥ ಮಗನ ಚಟ್ಟವನ್ನು ಮುಟ್ಟಿ ಜೀವಂತಗೊಳಿಸಿದ ಅದ್ಭುತ!
ಪ್ರಿಯರೇ! ನಮ್ಮ ದೇವರು ಅದ್ಭುತಗಳನ್ನು ಮತ್ತು ಅತಿಶಯಗಳನ್ನು ಮಾಡುವಾತನು! ಆತನ ಹೆಸರು ಅದ್ಭುತಸ್ವರೂಪನು! ಇಂದು ನೀವು ಯಾವುದೋ ಒಂದು ಅದ್ಭುತಕ್ಕಾಗಿ ಕಾಯುತ್ತಿದ್ದೀರಾ? ಆತನು ಅದ್ಭುತಸ್ವರೂಪನೆಂದು ನಂಬಿರಿ. ಖಂಡಿತವಾಗಿಯೂ ಅವರು ನಿಮ್ಮ ಜೀವನದಲ್ಲಿ ಮಾಡುವ ಅದ್ಭುತವನ್ನೂ ನೋಡುತ್ತೀರಿ.
- Bro. ಸ್ಯಾಮ್ ಮೋರಿಸ್
ಪ್ರಾರ್ಥನಾ ಅಂಶ:
ನಮ್ಮ ಕ್ಯಾಂಪಸ್ ನಲ್ಲಿ ಹಸಿದವರಿಗೆ ಆಹಾರ ನೀಡುವ ಯೋಜನೆಯ ಮೂಲಕ ಪ್ರಯೋಜನ ಪಡೆಯುತ್ತಿರುವ ವ್ಯಕ್ತಿಗಳಿಗಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482