Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 14.12.2023
Share:

By Village Missionary Movement

Thursday, 14-Dec-2023

ಧೈನಂದಿನ ಧ್ಯಾನ(Kannada) – 14.12.2023

 

ಮಾರ್ಗತೋರುವ ನಕ್ಷತ್ರ 

 

"…ನಕ್ಷತ್ರವು ಶಿಶುವು ಇದ್ದ ಸ್ಥಳದ ಮೇಲೆ ಬಂದು ನಿಲ್ಲುವ ತನಕ ಅವರ ಮುಂದೆ ಹೋಯಿತು" - ಮತ್ತಾಯ 2:9

 

ಕ್ರಿಸ್ಮಸ್ ಬಂದು ಬಿಟ್ಟಿತು. ಆಚರಣೆಗಳಿಗೆ ಕೊರತೆಯೇ ಇರುವುದಿಲ್ಲ. ಮನೆಯನ್ನು ಅಲಂಕರಿಸುವಾಗ ಮೊದಲ ಸ್ಥಾನ ಪಡೆಯುವುದು ಸ್ಟಾರ್. ಹೌದು, ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ನೆನಪಾಗುವುದು ನಕ್ಷತ್ರವೇ. ಸ್ಟಾರ್ ತಂದು ಮನೆಯಲ್ಲಿ ನೇತು ಹಾಕಿದ ನಂತರವೇ ಕ್ರಿಸ್ಮಸ್ ಹಬ್ಬದ ಉತ್ಸಾಹ ಬರುತ್ತದೆ. ಈ ಬಗ್ಗೆ ವಿವಿಧ ಅಭಿಪ್ರಾಯಗಳಿವೆ. ಆದರೆ ಇಂದು ನಾವು ಸತ್ಯವೇದದಿಂದ ಒಂದು ಪ್ರಮುಖ ವಿಷಯವನ್ನು ಧ್ಯಾನಿಸೋಣ.

 

ನಾವು ಮತ್ತಾಯ2 ನೇ ಅಧ್ಯಾಯದಲ್ಲಿ ನೋಡುವಾಗ, ಯೇಸು ಜನಿಸಿದ ಆ ದಿನಗಳಲ್ಲಿ ಮೂಡಲದಿಂದ ಜ್ಞಾನಿಗಳು ಯೆರೂಸಲೇಮಿಗೆ ಬಂದು ಯೆಹೂದ್ಯರ ಅರಸ ನಾಗಿ ಹುಟ್ಟಿದಾತನು ಎಲ್ಲಿದ್ದಾನೆ? ಎಂದು ಅರಸನಾದ ಹೆರೋದನ ಬಳಿ ಕೇಳುತ್ತಾರೆ. ಇದು ಅವರಿಗೆ ಇಷ್ಟವಾಗಲಿಲ್ಲ. ನಾನೊಬ್ಬ ಅರಸನಿದ್ದೇನೆ, ಮತ್ತೊಬ್ಬ ಅರಸನ ಬಗ್ಗೆ ಮಾತನಾಡುತ್ತಿದ್ದಾರಲ್ಲಾ ಎಂದು ಕಳವಳಪಟ್ಟನು. ಅವರೊಂದಿಗೆ ಯೆರೂಸಲೇಮಿನವರೆಲ್ಲರೂ ಕಳವಳಪಟ್ಟರು ಎಂದು ನೋಡುತ್ತೇವೆ. ತಕ್ಷಣ ಅರಸನಾದ ಹೆರೋದನು ಒಂದು ಯೋಜನೆ ರೂಪಿಸುತ್ತಾನೆ. ತನ್ನ ಹೃದಯದಲ್ಲಿ ಕೆಟ್ಟ ಆಲೋಚನೆಗಳನ್ನು ಇಟ್ಟುಕೊಂಡು ಶಾಸ್ತ್ರಿಗಳ ಬಳಿ ಸುಳ್ಳು ಮಾತನಾಡುತ್ತಾನೆ. ನೀವು ಹೋಗಿ ಆ ಶಿಶುವನ್ನು ಕಂಡುಕೊಂಡ ಮೇಲೆ ತಿರಿಗಿ ಬಂದು ನನಗೆ ತಿಳಿಸಿರಿ; ಆಗ ನಾನು ಸಹ ಬಂದು ಆತನನ್ನು ಆರಾಧಿಸುವೆನು ಅಂದನು. ಶಾಸ್ತ್ರಿಗಳು ಹೊರಟರು. ಆದರೆ ಎಲ್ಲಿಗೆ ಹೋಗಬೇಕು? ಯಾವ ದಿಕ್ಕಿಗೆ ಹೋಗಬೇಕು? ಯಾವೊಂದು ತಿಳುವಳಿಕೆಯೂ ಇಲ್ಲ. ಸತ್ಯವೇದದಲ್ಲಿ ಒಂದು ವಾಕ್ಯವು ಈ ರೀತಿಯಾಗಿ ಬರೆಯಲಾಗಿದೆ. ಮೂಡಲದಲ್ಲಿ ಅವರು ಕಂಡ ನಕ್ಷತ್ರವು ಅವರ ಮುಂದೆ ಹೋಯಿತು. ಆದ್ದರಿಂದ ಸರಿಯಾದ ಮಾರ್ಗದಲ್ಲಿ ಹೋದರು ಮತ್ತು ಸರಿಯಾದ ಸ್ಥಳಕ್ಕೆಹೋದರು. ಸಾಷ್ಟಾಂಗವೆರಗಿ ಯೇಸುವನ್ನು ಆರಾಧಿಸಿ, ತಮ್ಮ ಕಾಣಿಕೆಗಳನ್ನು ಅರ್ಪಿಸಿದ ನಂತರ, ದೇವರ ಮಾರ್ಗದರ್ಶನದಂತೆ ಬೇರೊಂದು ದಾರಿಯಿಂದ ತಮ್ಮ ಸ್ವದೇಶಕ್ಕೆ ಹೊರಟುಹೋದರು.

 

ಪ್ರಿಯರೇ, ಶಾಸ್ತ್ರಿಗಳನ್ನು ಎಲ್ಲಾ ದುಷ್ಟ ಮಾರ್ಗಗಳಿಂದ ತಪ್ಪಿಸಿ ಸರಿಯಾದ ದಿಕ್ಕಿನಲ್ಲಿ ನಡೆಸಲು ದೇವರು ಆ ನಕ್ಷತ್ರವನ್ನು ತೋರಿಸಿದರು. ಇಂದು ನಾವು ಆ ಶಾಸ್ತ್ರಿಗಳಂತೆಯೇ ಜೀವನದಲ್ಲಿ ಓಡುತ್ತಿದ್ದೇವೆ. ನಮ್ಮನ್ನು ಕೆಟ್ಟ ದಾರಿಗೆ ಕರೆದೊಯ್ಯಲು ಮತ್ತು ಭ್ರಮೆಯ ಹಾದಿಗೆ ಕರೆದೊಯ್ಯಲು ಅನೇಕ ವಿಷಯಗಳಿವೆ. ಆದರೆ ನಾವು ಸನ್ಮಾರ್ಗದಲ್ಲಿ ನಡೆಯಲು ದೇವರು ನಮಗೆ ಕೊಟ್ಟಿರುವ ಅಮೂಲ್ಯ ನಿಧಿ "ಪವಿತ್ರ ಬೈಬಲ್"! ಕ್ರೈಸ್ತರಾದ ನಾವು ಪ್ರತಿನಿತ್ಯ ಸತ್ಯವೇದವನ್ನು ಓದಿ ಧ್ಯಾನಿಸಿದರೆ ಅದು ನಮಗೆ ಅನುಸರಿಸಬೇಕಾದ ಮಾರ್ಗವನ್ನು ತೋರಿಸುತ್ತದೆ. ನಮ್ಮ ಯುವ ಪೀಳಿಗೆಯು ಇದನ್ನು ಪಾಲಿಸಿದರೆ ತಪ್ಪು ದಾರಿ ಹಿಡಿಯದಿರುವುದು ಖಚಿತ.

- Bro. ಶಂಕರ್ ರಾಜ್

 

ಪ್ರಾರ್ಥನಾ ಅಂಶ:

ನಮ್ಮ ಕ್ಯಾಂಪಸ್‌ನಲ್ಲಿ ರೋಡ್ ಗಳು ಮತ್ತು ಸೇತುವೆಯನ್ನು ನಿರ್ಮಿಸಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al Elexbet matbet giriş matbet instagram unban x unban twitter unban palacebet setrabet