Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 16.12.2023
Share:

By Village Missionary Movement

Saturday, 16-Dec-2023

ಧೈನಂದಿನ ಧ್ಯಾನ(Kannada) – 16.12.2023

 

ಕ್ರಿಸ್ಮಸ್ ದ್ವೀಪ

 

"…ಭೂಮಿಯು ಉಲ್ಲಾಸಪಡಲಿ; ದ್ವೀಪಗಳ ಸಮೂಹವು ಸಂತೋ ಷಿಸಲಿ" - ಕೀರ್ತನೆ 97:1

 

ಕಾಡಿನಲ್ಲಿ ವಾಸಿಸುವ ಅಪರೂಪದ ಜಾತಿಯ ಏಡಿ ಕೆಂಪು ಏಡಿ, ಇದು ಆಸ್ಟ್ರೇಲಿಯಾದ ಮೇಲ್ಭಾಗದ ದ್ವೀಪದಲ್ಲಿ ವಾಸಿಸುತ್ತದೆ. ಮಳೆಗಾಲದ ಆರಂಭದಲ್ಲಿ ಅವುಗಳು ಕರಾವಳಿಯ ಕಡೆಗೆ ಹಲವಾರು ಮೈಲುಗಳಷ್ಟು ದೂರ ಪ್ರಯಾಣಿಸುತ್ತವೆ. ಅದೊಂದು ಅಪಾಯಕಾರಿ ಪ್ರಯಾಣ. ಪಕ್ಷಿಗಳು, ಮನುಷ್ಯರು, ರಸ್ತೆಗಳಲ್ಲಿ ವಾಹನಗಳು ಮತ್ತು ಅಪಘಾತಗಳು ಅನೇಕ ಅಪಾಯಗಳ ಮೂಲಕ ತಮ್ಮ ಜಾತಿಗಳನ್ನು ಅಭಿವೃದ್ಧಿಪಡಿಸಲು ಮತ್ತು ಉಳಿಸಲು ಹೋರಾಡುತ್ತವೆ. ಕೆಂಪು ಏಡಿಗಳು ಕ್ರಿಸ್ಮಸ್ ದಿನದಂದು ಸಂತಾನೋತ್ಪತ್ತಿಯಾಗಿ ಇನ್ನೂ ಹೆಚ್ಚಾಗಿ ಕಾಣುತ್ತವೆ. 1643 ರಲ್ಲಿ, ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ "ರಾಯಲ್ ಮೇರಿ" ಹಡಗಿನ ಕ್ಯಾಪ್ಟನ್ ವಿಲಿಯಂ ಮಿನರ್ಸು ಎಂಬವರು ಈ ದ್ವೀಪವನ್ನು ದಾಟುವಾಗ ಇದಕ್ಕೆ ಕ್ರಿಸ್ಮಸ್ ದ್ವೀಪ ಎಂದು ಹೆಸರಿಸಿಟ್ಟರು. ಈ ಏಡಿಗಳು ಹೋರಾಡಿ ಈ ಸ್ಥಳವನ್ನು ತಲುಪಿ ತಮ್ಮ ಜಾತಿಗಳನ್ನು ಉಳಿಸುವುದು ಮಾತ್ರವಲ್ಲದೆ ಅಭಿವೃದ್ಧಿಯೂ ಆದವು.

 

ಸತ್ಯವೇದದಲ್ಲಿ, ಮೋಶೆ ಮತ್ತು ಆರೋನನು ಇಸ್ರಾಯೇಲ್ಯರನ್ನು ಐಗುಪ್ತದಿಂದ ಗುಲಾಮಗಿರಿಯ ಜೀವನದಿಂದ ಬಿಡಿಸಿ, ಕಾಪಾಡಿ ಕಾನಾನ್‌ಗೆ ಕೊಂಡೊಯ್ಯಲು ಅದನ್ನು ಸ್ವತಂತ್ರಿಸಿಕೊಳ್ಳಲು ಬಹಳ ಶ್ರಮಿಸಿದರು. ಅದೇ ರೀತಿ, ಎಸ್ತೇರ್ ರಾಣಿ ಮತ್ತು ಮೊರ್ದೆಕೈ ತಮ್ಮ ಸ್ವಂತ ಜನರನ್ನು ಕಾಪಾಡಿಕೊಳ್ಳಲು ಮತ್ತು ಹಾಮಾನನ ತಂತ್ರೋಪಾಯಗಳಿಂದ ಅವರನ್ನು ತಪ್ಪಿಸಲು ಅವರು ಪಟ್ಟ ಪ್ರಯಾಸ ಬಹಳ. ಉಪವಾಸದಿಂದಿದ್ದು ರಾಜನ ಸನ್ನಿಧಿಯಲ್ಲಿ ಮಧ್ಯಸ್ಥಿಕೆ ವಹಿಸಿ ಮಾತನಾಡಿ ತಮ್ಮ ಕುಲಕ್ಕೆ ಹಾನಿಯಾಗದಂತೆ ರಕ್ಷಿಸಿದರು. ಕನ್ನಿಕೆಯಾದ ಮರಿಯಳ ಗರ್ಭದಲ್ಲಿ ಜನಿಸಿದ ಕರ್ತನಾದ ಯೇಸು ಕ್ರಿಸ್ತನು ಪಾಪದಲ್ಲಿಯೂ, ಕತ್ತಲೆಯಲ್ಲಿಯೂ ಮತ್ತು ಗುಲಾಮಗಿರಿಯಲ್ಲಿಯೂ ವಾಸಿಸುತ್ತಿರುವ ಈ ಲೋಕದ ಜನರನ್ನು ರಕ್ಷಿಸಲು ಮತ್ತು ಕಾಪಾಡಲು ಪರಲೋಕವನ್ನು ತೊರೆದು ಭೂಮಿಗೆ ಬಂದರು. ಅವರು ನಮ್ಮೆಲ್ಲರಿಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದರು.

 

ಹೌದು, ಪ್ರಿಯರೇ, ಪಾಪದ ಜಗತ್ತಿನಲ್ಲಿ ವಾಸಿಸುವ ನಮ್ಮನ್ನು ರಕ್ಷಿಸಲು ಕ್ರಿಸ್ತನು ಈ ಭೂಮಿಗೆ ಬಂದನು. ಅವರ ಪ್ರೀತಿಯ ತ್ಯಾಗವನ್ನು ಅರಿತುಕೊಳ್ಳುವ ದಿನವೇ ಕ್ರಿಸ್ಮಸ್ ಆಗಿದೆ. ಈ ದಿನದಂದು ಬಟ್ಟೆ ಖರೀದಿಸಿ, ವಿಶೇಷ ತಿನಿಸುಗಳನ್ನು ಮಾಡಿ ನಮ್ಮ ಕುಟುಂಬವನ್ನು ಸಂತೋಷಪಡಿಸುವ ನಾವು ದೇವರ ಹೃದಯವನ್ನು ಮೆಚ್ಚಿಸಲು ಏನಾದರೂ ಮಾಡಿದ್ದೇವೆಯೇ? ಉಡುಗೊರೆಗಳನ್ನು ಮತ್ತು ಸಿಹಿತಿಂಡಿಗಳನ್ನು ಹಂಚಿಕೊಳ್ಳುವ ನಾವು ಯೇಸುವಿನ ಪ್ರೀತಿಯನ್ನು ಹಂಚಿಕೊಳ್ಳಲು ಸಿದ್ಧರಿದ್ದೇವೆಯೇ? ಯೇಸುವಿನ ಸುವಾರ್ತೆಯಾಗಿರುವ ಅವರ ಸತ್ಯವೇದಕ್ಕಾಗಿ ಎಷ್ಟೋ ದ್ವೀಪಗಳು ಕಾಯುತ್ತಿವೆ ಎಂಬುದು ಎಷ್ಟು ನಿಜವಾದ ಮಾತು. ಮೂರು ಅರಿವಿನ ಏಡಿಗಳು ತಮ್ಮ ಜಾತಿಗಳನ್ನು ಉಳಿಸಲು ಮೈಲುಗಟ್ಟಲೆ ಪ್ರಯಾಣಿಸಿದರೆ, ಕ್ರಿಸ್ತನ ಹೆಸರನ್ನು ಇನ್ನೂ ಪ್ರಕಟಿಸದ ಎಷ್ಟೋ ದ್ವೀಪಗಳಿಗೆ ನಾವು ಪ್ರಯಾಣಿಸಬೇಕಾಗಿರುವುದು ಇನ್ನೂಅವಶ್ಯವಲ್ಲವೇ! ಅವರನ್ನು ನಿತ್ಯ ನಾಶದಿಂದ ರಕ್ಷಿಸಲು ನಾವು ಏನು ಮಾಡಲಿದ್ದೇವೆ? ಕ್ರಿಸ್ತನ ಸುವಾರ್ತೆ ಎಲ್ಲೆಡೆ ಹರಡಲಿ. ಇಡೀ ಭೂಮಿಯು ಆತನ ಮಹಿಮೆಯಿಂದ ತುಂಬಿರಲಿ. ರಕ್ಷಣೆಯ ಸಂತೋಷವು ನಮ್ಮ ಹೃದಯ ಮತ್ತು ಮನೆಗಳನ್ನು ತುಂಬಲಿ !! ಹಲ್ಲೇಲೂಯಾ!!!

- Mrs. ಮಂಜುಳಾ

 

ಪ್ರಾರ್ಥನಾ ಅಂಶ:

ದೆಬೋರಾಳ್ ಸೇವಕರ ಮೂಲಕ ನಡೆಯುವ ಸೇವಾಕ್ಷೇತ್ರದ ಸೇವೆಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet matbet giriş holiganbet holiganbet güncel holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet grandpashabet holiganbet grandpashabet grandpashabet grandpashabet perabet perabet giriş padişahbet padişahbet giriş grandpashabet grandpashabet grandpashabet casinolevant grandpashabet meritking meritking giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş