Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 24.12.2023 (Kids Special)
Share:

By Village Missionary Movement

Sunday, 24-Dec-2023

ಧೈನಂದಿನ ಧ್ಯಾನ(Kannada) – 24.12.2023 (Kids Special)

 

X-MAS ಬಂದುಬಿಡ್ತು

 

"…ಕೇವಲ ಅಲ್ಪನಾದವನೊಬ್ಬನಿಗೆ ಏನೇನು ಮಾಡಿದಿರೋ ಅದನ್ನು ನನಗೂ ಮಾಡಿದ ಹಾಗಾಯಿತು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ ಅನ್ನುವನು" - ಮತ್ತಾಯ 25:40

 

Hai ಪುಟಾಣಿಗಳೇ, ಡಿಸೆಂಬರ್ ಎಂದಾಕ್ಷಣ ನಮ್ಮ ಮನಸ್ಸಿನಲ್ಲಿ Store ಆಗಿರೋದು ಕ್ರಿಸ್ಮಸ್ ಒಂದೇ. ಅರ್ಧ ವರ್ಷದ ಪರೀಕ್ಷೆ ಎಲ್ಲಾ ಆಮೇಲೆನೆ. ಕಾರಣ, ಹೊಸ Dress, sweets, cake ಎಲ್ಲಾ ಸಿಗುತ್ತದೆ. ನಂತರ church program, Dance. Drama ಈ ರೀತಿ ಜಾಲಿಯಾಗಿರುತ್ತದೆ. ಹೌದಲ್ವಾ! Ok, ಈಗ ಒಂದು X-mas story ಕೇಳೋಣ್ವಾ?

 

ಜಾಯ್ ಎಂಬ ಪುಟ್ಟ ಹುಡುಗಿ ಅವರ ಮನೆಗೆ ಒಬ್ಬಳೇ ಮಗಳು. ಹಾಗಾಗಿ ಮುದ್ದಾಗಿ ಬೆಳೆಯುತ್ತಿದ್ದಳು. ಅಪ್ಪಾ ಸಹ ಏನು ಕೇಳಿದ್ರೂ ತೆಗೆದುಕೊಡುತ್ತಿದ್ದರು. ನಮಗೆ ಬೇಕಾಗಿದ್ದೆಲ್ಲಾ ಸಿಗ್ತಾ ಇದೆ ಅಲ್ವಾ ಅಷ್ಟೇ ಸಾಕು ಮತ್ತೊಬ್ಬರು ಹೇಗಿದ್ರೆ ನಮಗೇನು? ಎಂದು ಅಂದುಕೊಳ್ಳದೆ, ಅವರ ಬೀದಿಯಲ್ಲಿರುವ ಎಲ್ಲಾ ವೃದ್ಧರಿಗೂ ಸಹಾಯ ಮಾಡುತ್ತಿದ್ದಳು. ಕಷ್ಟದಲ್ಲಿರುವವರನ್ನು ಕಂಡರೆ ಕೂಡಲೇ ಕರುಣೆ ತೋರಿ ತಂದೆಗೆ ಹೇಳಿ ಅವರಿಗೆ ಸಹಾಯ ಮಾಡುತ್ತಿದ್ದಳು. ಸೂಪರ್ - ಅಲ್ವಾ, ನೀವು ಸಹ ಅಗತ್ಯವಿರುವವರಿಗೆ ಸಹಾಯ ಮಾಡುತ್ತೀರಾ, ಪುಟಾಣಿಗಳೇ? ಖಂಡಿತವಾಗಿಯೂ ಮಾಡಬೇಕು. "ಜಾಯ್ ಪುಟ್ಟಿ, ನಾವು ಇವತ್ತು ಅಂಗಡಿಗೆ ಹೋಗೋಣ್ವಾ? X-Mas ಗೆ ಅಗತ್ಯವಾದ ವಸ್ತುಗಳನ್ನು ತೆಗೆದುಕೊಂಡು ಬರೋಣ ಎಂದು ಅಪ್ಪ ಹೇಳಿದ ಕೂಡಲೇ . . . ತುಂಬಾ ಸಂತೋಷದಿಂದ ಹೊರಟಳು. ಎಲ್ಲಾ ವಸ್ತುಗಳನ್ನು ತೆಗೆದುಕೊಂಡು ಆದಮೇಲೆ, ಒಂದು ಅಂಗಡಿಯಲ್ಲಿ ಜ್ಯೂಸ್ ಕುಡಿಯುತ್ತಿದ್ದರು. ಒಬ್ಬ ಹುಡುಗ ಆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು. ಅವನನ್ನು ಚೆನ್ನಾಗಿ ಗಮನಿಸಿ ನೋಡಿದ ಜಾಯ್ "ಏಯ್ ರಾಜ್ ಎಂದು ಕೂಗಿದಳು. ಅಪ್ಪ ಯಾರಮ್ಮ ಇವನು ಎಂದು ಕೇಳಿದಾಗ, ಅಪ್ಪಾ ಇವನು ನನ್ನ ಜೊತೆ ಓದುವ ರಾಜು ಅಪ್ಪ. ಹೌದು, ನಿನಗೇನಾಯ್ತು? ನೀನು ಈಗ ಸ್ಕೂಲಿಗೇ ಬರ್ತಿಲ್ಲ ಎಂದು ಜಾಯ್ ಕೇಳಿದ ಕೂಡಲೇ, ರಾಜುವಿನ ಕಣ್ಣುಗಳಲ್ಲಿ ಕಣ್ಣೀರು ಸುರಿಯಿತು. ನನ್ನ ಅಪ್ಪನಿಗೆ ಸಂಭವಿಸಿದ ಅಪಘಾತದಲ್ಲಿ ಕಾಲು ಕಳೆದುಕೊಂಡರು. ಮನೆಯಲ್ಲಿ ಆದಾಯವಿಲ್ಲ. ನಾನು ದುಡಿದರೇನೆ ನಮಗೆ ಊಟ ಎಂದು ಹೇಳಿದ ಕೂಡಲೇ ಜಾಯ್ ಗೆ ತುಂಬಾ ಬೇಸರವಾಯಿತು. ಅಪ್ಪಾ ನನಗೆ x-mas ಗೆ ಡ್ರೆಸ್ ಬೇಡ. ರಾಜು ಮತ್ತು ಅವನ ತಂದೆ, ತಾಯಿಗೆ ತೆಗೆದುಕೊಡೋಣ ಎಂದ ಕೂಡಲೇ, ಜಾಯ್ ಗೆ ಇರುವಂತಹ ಕರುಣೆಯ ಗುಣವನ್ನು ಕಂಡು ತಂದೆ ತುಂಬಾ ಸಂತೋಷಪಟ್ಟರು.

 

X-mas ದಿನದಂದು, ರಾಜು ಅವರ ಮನೆಗೆ ಹೋಗಿ ಊಟ ಕೊಟ್ಟು, ಅವರಿಗೆ ಹೊಸ ಬಟ್ಟೆಗಳನ್ನು ಉಡುಗೊರೆಯಾಗಿ ನೀಡಿದ ಕೂಡಲೇ ಅವರ ಸಂತೋಷವು ಮಿತಿ ಮೀರಿತ್ತು. ಅಷ್ಟೇನಾ? ಯೇಸುಕ್ರಿಸ್ತನ ಜನನದ ಸುದ್ದಿಯನ್ನು ಮತ್ತು ಆತನ ಪ್ರೀತಿಯನ್ನು ಕುರಿತು ಹೇಳುವಾಗ, ಅವರ ಹೃದಯದಲ್ಲಿ ಯೇಸು ಜನಿಸಿಬಿಟ್ಟರು ಎನ್ನುವ ಮಟ್ಟಿಗೆ ಅವರ ಮುಖದಲ್ಲಿ ಸಂತೋಷ! ರಾಜುವಿನ ತಂದೆಗೆ ಪ್ಲಾಸ್ಟಿಕ್ ಕಾಲು ಕಟ್ಟಲು ನನಗೆ ಪರಿಚಯವಿರುವವರ ಬಳಿ ನಾನು ಮಾತನಾಡುತ್ತೇನೆ ಎಂದು ತಂದೆ ಹೇಳಿದಾಗ ಜಾಯ್ ಗೆ ತುಂಬಾ ಸಂತೋಷ. ಅವಳು ಈ ಕ್ರಿಸ್‌ಮಸ್ ಅನ್ನು ಅರ್ಥವುಳ್ಳ ಕ್ರಿಸ್‌ಮಸ್ ಆಗಿ ಆಚರಿಸಿದಳು. ಮುದ್ದು ಪುಟಾಣಿಗಳೇ! ಕ್ರಿಸ್ತನು ನಮ್ಮ ಹೃದಯದಲ್ಲಿ ಜನಿಸಿದನೆಂದು ಪ್ರಕಟಿಸುವುದು ಮಾತ್ರವಲ್ಲದೆ ಒಳ್ಳೆಯ ಕಾರ್ಯಗಳ ಮೂಲಕ ಅದನ್ನು ಸಾಬೀತುಪಡಿಸಬೇಕು. Ok ನಾ?

- Mrs. ಬ್ಯೂಲ

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al Elexbet matbet giriş matbet instagram unban x unban twitter unban palacebet setrabet