Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 05.01.2024
Share:

By Village Missionary Movement

Friday, 05-Jan-2024

ಧೈನಂದಿನ ಧ್ಯಾನ(Kannada) – 05.01.2024

 

ಸುವಾರ್ತೆ ಬೀಜ

 

"ಕೂಸಿಗೆ ಏನಾಗುವದೆಂದು ತಿಳುಕೊಳ್ಳುವದಕ್ಕೆ ಅದರ ಅಕ್ಕನು ಸ್ವಲ್ಪದೂರದಲ್ಲಿ ನಿಂತುಕೊಂಡಳು" - ವಿಮೋಚನ 2:4

 

ನನ್ನ ಹುಟ್ಟೂರು ಸಾತ್ತೂರಿನಲ್ಲಿರುವ ಆಂಡಾಳ್ ಪುರಂ. ಅಲ್ಲಿ ಶಿವಕಾಶಿಯಿಂದ ಹೆಪ್ಸಿಬಾ ಎಂಬ ಅಕ್ಕ ನಮ್ಮ ಬೀದಿಗೆ ಬಂದರು. ಕೈಯಲ್ಲಿ ಬೈಬಲ್ ಹಿಡಿದು ಬಿಳಿ ಬಣ್ಣದ ಬಟ್ಟೆ ಧರಿಸಿ ನಗುಮುಖದೊಂದಿಗೆ ನಮ್ಮ ಬೀದಿಯಲ್ಲಿರುವ 15 ಯೌವನಸ್ಥರನ್ನು ಒಂದೆಡೆ ಸೇರಿಸಿ, ಯೇಸುವಿನ ಪ್ರೀತಿಯನ್ನು ತಿಳಿಸಿ, ಹೊಸ ಒಡಂಬಡಿಕೆಯನ್ನು ನಮ್ಮ ಕೈಗೆ ಕೊಟ್ಟು ಓದುವಂತೆ ಹೇಳಿ ಹೋದರು. ಮುಂದಿನ ವಾರ ಬಂದಾಗ ಅಲ್ಲಿ ನಾನಲ್ಲದೆ ಬೇರೆ ಯಾರೂ ಇರಲಿಲ್ಲ. ಅವರು ಯೇಸುಕ್ರಿಸ್ತನ ಪ್ರೀತಿಯ ಬಗ್ಗೆ ಹೆಚ್ಚು ಹೇಳಲು ಪ್ರಾರಂಭಿಸಿದರು. ಅವರು ನನ್ನ ಕುಟುಂಬಕ್ಕಾಗಿ ಪ್ರಾರ್ಥಿಸಿದರು. ಪ್ರತಿವಾರವೂ ಅಲ್ಲಿಗೆ ಬಂದು ದೇವರ ಬಗ್ಗೆ ನನ್ನೊಂದಿಗೆ ಮಾತನಾಡಿ ನನ್ನೊಳಗೆ ಏರ್ಪಟ್ಟ ಬದಲಾವಣೆಗಳನ್ನು ಗಮನಿಸತೊಡಗಿದರು. ಕೆಟ್ಟ ಮಾತುಗಳನ್ನಾಡುವ ನನ್ನ ಅಭ್ಯಾಸ ಬದಲಾಯಿತು. ನಾನು ನನ್ನ ಕುಟುಂಬದಲ್ಲಿ ಒಳ್ಳೆಯ ಮಗನಾಗಿ ಬದುಕಲು ಪ್ರಾರಂಭಿಸಿದೆ. ನಾನು ಪ್ರತಿ ವಾರ ಹತ್ತಿರದ ಚರ್ಚ್‌ಗೆ ಹೋಗಿ ದೀಕ್ಷಾಸ್ನಾನ ಪಡೆದುಕೊಂಡೆ ಮತ್ತು ನಂತರ ನನ್ನ ಬೀದಿಯಲ್ಲಿರುವ ಮಕ್ಕಳಿಗೆ ಯೇಸುವಿನ ಪ್ರೀತಿಯನ್ನು ಬೋಧಿಸಲು ಪ್ರಾರಂಭಿಸಿದೆ.. ನಾನು ಸಣ್ಣ ಸೇವೆಯನ್ನು ಮಾಡಲು ಪ್ರಾರಂಭಿಸಿದೆ. ಅದನ್ನು ನೋಡಿದ ಹೆಪ್ಸಿಬಾ ಅಕ್ಕ ತುಂಬಾ ಸಂತೋಷಪಟ್ಟರು. ನಂತರ ನಾನು ಪೂರ್ಣ ಸಮಯದ ಸೇವೆಗೆ ನನ್ನನ್ನು ಅರ್ಪಿಸಿಕೊಂಡೆ ಮತ್ತು ಕಳೆದ 16 ವರ್ಷಗಳಿಂದ ದೇವರ ಸೇವೆ ಮಾಡುತ್ತಿದ್ದೇನೆ. ಉತ್ತರ ಭಾರತದ ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶ ಪ್ರದೇಶಗಳಲ್ಲಿ ಸೇವಕರನ್ನು ರೂಪಿಸುವ ಉನ್ನತವಾದ ಕೆಲಸದಲ್ಲಿ ನಾನು ಗ್ರಾಮ ಮಿಷನರಿ ಚಳುವಳಿಯಲ್ಲಿ ಪೂರ್ಣ ಸಮಯದ ಸೇವಕನಾಗಿದ್ದೇನೆ.

 

ಇಂದಿನ ಸತ್ಯವೇದದ ಭಾಗದಲ್ಲಿ, ಚಿಕ್ಕ ಹುಡುಗಿ ಮಿರ್ಯಾಮಳ ಜ್ಞಾನವಾದ ಪ್ರಯತ್ನದ ಕುರಿತು ಬರೆಯಲಾಗಿದೆ. ಹುಟ್ಟಿದ ಎಲ್ಲಾ ಗಂಡು ಮಕ್ಕಳನ್ನು ಕೊಲ್ಲುವ ಆದೇಶವನ್ನು ಐಗುಪ್ತದ ರಾಜನು ಐಗುಪ್ತ ದೇಶದಲ್ಲಿ ಘೋಷಿಸಿದನು. ಆದರೆ ಒಂದು ತಾಯಿ ತನ್ನ ಮಗನನ್ನು ಉಳಿಸಿಕೊಳ್ಳಲು ತನ್ನ ಚಿಕ್ಕ ಮಗಳ ಜೊತೆಗೂಡಿ ನಿರ್ಧರಿಸುತ್ತಾಳೆ. ನಂತರ ಮಗುವನ್ನು ಜೊಂಡು ಪೆಟ್ಟಿಗೆಯಲ್ಲಿ ಹಾಕಿ ನದಿಗೆ ಬಿಟ್ಟುಬಿಟ್ಟರು. ಐಗುಪ್ತದ ರಾಜನ ಮಗಳು ಅಲ್ಲಿ ಸ್ನಾನ ಮಾಡಲು ಬಂದಾಗ, ಮಿರ್ಯಾಮಳು ಅವಳೊಂದಿಗೆ ಬುದ್ಧಿವಂತಿಕೆಯಿಂದ ಮಾತನಾಡಿ ಮಗುವನ್ನು ಉಳಿಸಲು ಏನೆಲ್ಲಾ ಮಾಡಬೇಕೋ ಅವೆಲ್ಲವನ್ನೂ ಮಾಡುತ್ತಾಳೆ. ಕೊನೆಗೆ ಮಗುವನ್ನು ರಕ್ಷಿಸಲಾಯಿತು. ಮೋಶೆ ಎಂದು ಹೆಸರಿಡಲಾಯಿತು. ಮುಂದಿನ ದಿನಗಳಲ್ಲಿ ಆ ಮೋಶೆ ಬಹು ದೊಡ್ಡ ನಾಯಕನಾದನು.

 

ಇದನ್ನು ಓದುತ್ತಿರುವ ಸ್ನೇಹಿತರೇ! ಹೆಪ್ಸಿಬಾ ಎಂಬ ಒಂದು ಅಕ್ಕ ನನ್ನಲ್ಲಿ ಸುವಾರ್ತೆಯ ಬೀಜವನ್ನು ಬಿತ್ತಿದರು. ಅದು ನನ್ನ ಜೀವನದಲ್ಲಿ ಬಹು ದೊಡ್ಡ ಫಲವನ್ನು ನೀಡಿತು. ನನ್ನನ್ನು ಉತ್ತರ ಭಾರತದಲ್ಲಿ ಸೇವಕರನ್ನು ರೂಪಿಸುವ ಸೇವಕನಾಗಿ ನನ್ನನ್ನು ಮಾರ್ಪಡಿಸಿತು. ಮಿರ್ಯಾಮಳು ಮಾಡಿದ ಒಂದು ಪ್ರಯತ್ನ ಒಬ್ಬ ಶ್ರೇಷ್ಠ ನಾಯಕನನ್ನು ನಿರ್ಮಿಸಿತು. ಸ್ನೇಹಿತರೇ, ನೀವು ಸುವಾರ್ತೆ ಬೀಜವನ್ನು ಬಿತ್ತಲು ಸಿದ್ಧರಿದ್ದೀರಾ? ಅದು ಒಬ್ಬ ಮನುಷ್ಯನ ರಕ್ಷಣೆಗಾಗಿ ನೀವು ಇಡುವ ಮೊದಲ ಹೆಜ್ಜೆಯಾಗಿರಬಹುದು, ಒಂದು ಸಣ್ಣ ಪ್ರಯತ್ನವಾಗಿಯೂ ಇರಬಹುದು. ಆದರೆ ಅದು ಮುಂದೆ ದೊಡ್ಡ ಪ್ರತಿಫಲವನ್ನು ನೀಡುತ್ತದೆ ಎಂಬುದನ್ನು ಮರೆಯಬೇಡಿ. ಆದ್ದರಿಂದ ಯೇಸು ಕ್ರಿಸ್ತನ ಬಗ್ಗೆ ನಿಮಗೆ ಸಾಧ್ಯವಾದಷ್ಟು ಜನರಿಗೆ ತಿಳಿಸಿ. ನೀವು ಬೀಜವನ್ನು ಬಿತ್ತಿರಿ; ದೇವರು ಬೆಳೆಸುತ್ತಾರೆ.

- Bro. ಶಂಕರ್ ರಾಜ್ 

 

ಪ್ರಾರ್ಥನಾ ಅಂಶ:

ದೆಬೋರಾಳ್ ಪ್ರಾರ್ಥನಾ ಗುಂಪುಗಳಿಗೆ ಸೇರಿರುವ ಸಹೋದರಿಯರ ಕುಟುಂಬಗಳನ್ನು ದೇವರು ಆಶೀರ್ವದಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş matbet giriş holiganbet giriş matbet sahabet onwin bets10 bets10 giriş bets10 güncel giriş betcio atlasbet casibom meritking casibom giriş perabet padişahbet padişahbet giriş holiganbet matbet perabet perabet giriş instagram ban service pashagaming pashagaming giris gorabet gorabet giris grandpashabet çarkbet çarkbet giriş deneme bonusu casibom giriş casibom vaycasino vaycasino giriş casibom meritking casibom casibom giriş meritking meritking giriş holiganbet jojobet jojobet jojobet jojobet jojobet holiganbet holiganbet grandpashabet grandpashabet grandpashabet cratosroyalbet