By Village Missionary Movement
Saturday, 06-Jan-2024ಧೈನಂದಿನ ಧ್ಯಾನ(Kannada) – 06.01.2024
ಮಾತೆಂಬ ಬೀಜ
"ಹೃದಯದಿಂದ ನಂಬುವದರ ಮೂಲಕ ನೀತಿಯು ದೊರಕುತ್ತದೆ. ಬಾಯಿಂದ ಅರಿಕೆಮಾಡುವದರ ಮೂಲಕ ರಕ್ಷಣೆಯಾಗುತ್ತದೆ." - ರೋಮಾ 10:10
ಒಂದು ಮರದಿಂದ ಸಾವಿರ ಬೆಂಕಿಕಡ್ಡಿಗಳನ್ನು ರೂಪಿಸಲು ಸಾಧ್ಯ. ಆದರೆ ಒಂದು ಬೆಂಕಿಕಡ್ಡಿ ಸಾವಿರ ಮರಗಳನ್ನು ಸುಟ್ಟುಹಾಕಬಹುದು. ಅದರಂತೆಯೇ, ನಮ್ಮ ಮಾತುಗಳಿಂದ ಅನೇಕ ಜನರನ್ನು ಕಟ್ಟಿ ಎಬ್ಬಿಸಲೂ ಸಾಧ್ಯ, ಅನೇಕ ಜನರ ಜೀವನವನ್ನು ಹಾಳು ಮಾಡಲು ಸಹ ಸಾಧ್ಯ.
ಒಂದು ಮನೆಯ ಮುಖ್ಯಸ್ಥನು ಪ್ರತಿದಿನ ಬೆಳಿಗ್ಗೆ ಎದ್ದು ತನ್ನ ಮೊಣಕಾಲುಗಳ ಮೇಲೆ ನಿಂತು ಪ್ರಾರ್ಥಿಸುತ್ತಿದ್ದರು. ತನ್ನ ಶರೀರದಲ್ಲಿ ಬಲಹೀನತೆಗಳು ಇದ್ದರೂ ತನ್ನ ಮನೆಯಲ್ಲಿ ಗೆಳೆಯನ ಜೊತೆ ಸೇರಿ ವಾರಕ್ಕೊಮ್ಮೆ ದೇಶದ ಜನರಿಗಾಗಿ ಪ್ರಾರ್ಥಿಸುತ್ತಿದ್ದರು. ರಕ್ಷಣೆ ಹೊಂದದ ಹೆಂಡತಿ ಕರ್ತನನ್ನು ತಿಳಿದುಕೊಳ್ಳುವ ವಿಷಯದಲ್ಲಿ ಎಂದಿಗೂ ಒತ್ತಾಯಿಸಲಿಲ್ಲ. ಸಿನಿಮಾ ನೋಡಲು ಥಿಯೇಟರ್ ಗೆ ಹೋಗದಿದ್ದರೂ ಹೆಂಡತಿ ಹೋಗುವುದನ್ನು ತಡೆಯದೆ ಆಕೆಯನ್ನು ತಾನೇ ಕರೆದುಕೊಂಡು ಹೋಗಿ ಬಿಟ್ಟು ಬರುತ್ತಿದ್ದರು. ಗಂಡ ನೀಡಿದ ಸ್ವಾತಂತ್ರ್ಯ, ಕರ್ತನ ಮೇಲೆ ಇಟ್ಟಿದ್ದ ನಂಬಿಕೆ, ಜೀವನ ವಿಧಾನ, ಇತರರಿಗಾಗಿ ಕರ್ತನ ಬಳಿ ಬೇಡಿಕೊಳ್ಳುತ್ತಿದ್ದದ್ದು ಇವೆಲ್ಲವನ್ನು ನೋಡಿದ ಹೆಂಡತಿಯೂ ಸಹ ಕರ್ತನನ್ನು ದೃಢವಾಗಿ ಹಿಡಿದುಕೊಂಡರು. ತನ್ನ ಮಕ್ಕಳನ್ನು ಕರ್ತನಲ್ಲಿ ಬೆಳೆಸಿ, ತನ್ನ ಜೀವನ ಮತ್ತು ಪ್ರೀತಿಯ ಮಾತುಗಳ ಮೂಲಕ ಅನೇಕರನ್ನು ಕ್ರಿಸ್ತನ ಬಳಿಗೆ ನಡೆಸಿದ್ದಾರೆ. ಅದು ಬೇರೆ ಯಾರೂ ಅಲ್ಲ ನನ್ನ ತಾಯಿಯೇ.
ಇದೇ ರೀತಿಯಲ್ಲಿ, ನೊವೊವಿು ಮೋವಾಬ್ ದೇಶದಲ್ಲಿ ಹೆಣ್ಣು ತೆಗೆದುಕೊಂಡರೂ ಕುಟುಂಬದಲ್ಲಿ ಕರ್ತನ ಬಗ್ಗೆ ಮಾತನಾಡಿದ್ದರ ಮೂಲಕವಾಗಿಯೂ, ತಾನು ನಡೆದುಕೊಂಡ ಸಾಕ್ಷಿ ಜೀವನದ ಮೂಲಕವಾಗಿಯೂ ತನ್ನ ಸೊಸೆಯಾದ ರೂತಳನ್ನು ಕರ್ತನಲ್ಲಿ ನಡೆಸಿದಳು. ಹೌದು, ನೊವೊಮಿ ತನ್ನ ಕರ್ತನ ಬಗ್ಗೆ ಮಾತನಾಡಿದ ಮಾತುಗಳು ಬೀಜವಾಗಿ ರೂತಳೊಳಗೆ ಹೋದವು. ಆದ್ದರಿಂದಲೇ ರೂತಳು ನೊವೊಮಿಯನ್ನು ಮತ್ತು ದೇವರನ್ನು ದೃಢವಾಗಿ ಹಿಡಿದುಕೊಂಡಳು. ನೊವೊಮಿಯ ಮಾತೆಂಬ ಬೀಜದ ಫಲವು ಸತ್ಯವೇದದಲ್ಲಿ ಒಂದು ಪುಸ್ತಕವಾಗಿ ಸ್ಥಾನ ಪಡೆದಿದೆ. ಇಷ್ಟೇ ಅಲ್ಲ, ಯೇಸು ಕ್ರಿಸ್ತನಿಗೆ ಜನ್ಮ ನೀಡಲು ರೂತ್‌ಳ ಸಂತತಿಯನ್ನು ದೇವರು ಆರಿಸಿಕೊಂಡರು.
ಇದನ್ನು ಓದುತ್ತಿರುವ ಪ್ರಿಯರೇ! ನೀವು ರಕ್ಷಣೆಹೊಂದಿದವರಾಗಿದ್ದರೆ ನಿಮ್ಮ ಮಾತುಗಳು ಕ್ರಿಸ್ತನ ಬಗ್ಗೆ ಇರಲಿ. ಜೀವಮರಣಗಳು ನಾಲಿಗೆಯ ವಶ ಎಂದು ಸತ್ಯವೇದವು ಹೇಳುತ್ತಿದೆ. ಅದರಂತೆಯೇ ನಿನ್ನ ಬಾಯಿಯ ಮಾತುಗಳು ಅನೇಕರ ಬದುಕನ್ನು ಉಜ್ಜೀವಿಸುತ್ತದೆ, ಅನೇಕರನ್ನು ತಟ್ಟಿ ಎಬ್ಬಿಸುತ್ತದೆ. ನನ್ನ ತಾಯಿ ತನ್ನ ಮೂವರು ಮಕ್ಕಳನ್ನು ಕ್ರಿಸ್ತನಲ್ಲಿ ಬೆಳೆಸಿದರು ಮತ್ತು ಕರ್ತನ ಸೇವೆ ಮಾಡಲು ಮೂವರಿಗೂ ಪ್ರೋತ್ಸಾಹ ನೀಡಿ ದೇವರಿಗಾಗಿ ನಮ್ಮನ್ನು ಕೊಟ್ಟರು. ಹೌದು, ನಾವು ನಮ್ಮ ಸ್ವಂತ ಕಥೆ ಅಥವಾ ಇತರರ ವಿಷಯದ ಬಗ್ಗೆ ಮಾತನಾಡದೆ ಕರ್ತನ ಬಗ್ಗೆಯೇ ಇತರರೊಂದಿಗೆ ಮಾತನಾಡೋಣ. ಮಾತೆಂಬ ಬೀಜವನ್ನು ಬಿತ್ತಿ ಆತ್ಮಗಳನ್ನು ಕೊಯ್ಯೋಣ.
- Mrs. ಅನ್ಬುಜ್ಯೋತಿ ಸ್ಟಾಲಿನ್
ಪ್ರಾರ್ಥನಾ ಅಂಶ:
ನಮ್ಮ ಕ್ಯಾಂಪಸ್‌ನಲ್ಲಿ ರಸ್ತೆಗಳು ಮತ್ತು ಸೇತುವೆಗಳ ನಿರ್ಮಾಣಕ್ಕಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482