Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 19.01.2024
Share:

By Village Missionary Movement

Friday, 19-Jan-2024

ಧೈನಂದಿನ ಧ್ಯಾನ(Kannada) – 19.01.2024

 

ಆಶ್ರಮ

 

"…ಆತನು ಉಪಕಾರಗಳನ್ನು ಮಾಡುತ್ತಾ ಸೈತಾನನಿಂದ ಬಾಧಿಸಲ್ಪಡುತ್ತಿರುವವರೆಲ್ಲರನ್ನು ಗುಣಮಾಡುತ್ತಾ ಸಂಚರಿಸಿದನು" - ಅಪೊಸ್ತಲ. 10:38

 

ಪ್ರತಿಯಾಗಿ ಏನನ್ನೂ ನಿರೀಕ್ಷಿಸದೆ ಇತರರಿಗೆ ಸಹಾಯ ಮಾಡುವುದು ದಯೆಯ ಶ್ರೇಷ್ಠ ಕಾರ್ಯವಾಗಿದೆ. ಸತ್ಯವೇದದಲ್ಲಿ, ಪೌಲನು ಹೀಗೆ ಬರೆಯುತ್ತಾನೆ, "ಸತ್ಕಾರ್ಯಗಳನ್ನು ಮಾಡಲು ನಾವು ಕ್ರಿಸ್ತ ಯೇಸುವಿನಲ್ಲಿ ಸೃಷ್ಟಿಸಲ್ಪಟ್ಟ ದೇವರ ರಚನೆಯಾಗಿದ್ದೇವೆ" ಕಷ್ಟದಲ್ಲಿರುವವರನ್ನು ಹುಡುಕಿ ಹೋಗಿ ಸಹಾಯ ಮಾಡುವುದು ದೈವೀಕ ಸ್ವಭಾವವಾಗಿದೆ.

 

ಅಲ್ಬೇನಿಯಾದ ಸಣ್ಣ ಹಳ್ಳಿಯಲ್ಲಿ ಜನಿಸಿದ ಮದರ್ ತೆರೇಸಾ ಅವರು ಡಿಸೆಂಬರ್ 6, 1929 ರಂದು ಭಾರತಕ್ಕೆ ಬಂದರು. ಪಾಕಿಸ್ತಾನದ ವಿಭಜನೆಯಿಂದಾಗಿ ಕಣ್ಣೆದುರೇ ನಡೆಯುತ್ತಿರುವ ಕೊಲೆ, ಅತ್ಯಾಚಾರ, ಹಿಂಸಾಚಾರವನ್ನು ಕಂಡು ಅವರ ತಲೆ ಸಿಡಿಯುವಂತಾಯಿತು. ಕನ್ಯಾ ಸ್ತ್ರೀ ಮಠದಲ್ಲಿ ತಂಗಿದ್ದರು. ಮೊದಲಿಗೆ ಅವರು ಬಡತನ ಮತ್ತು ಕಾಯಿಲೆಯಿಂದ ಬಳಲುತ್ತಿರುವ ಜನರ ಅಗತ್ಯಗಳನ್ನು ಕಂಡುಹಿಡಿದು ಪರಿಹರಿಸಿದರು. ಕುಷ್ಠರೋಗಿಗಳನ್ನು ಹೊತ್ತೊಯ್ದು ಚಿಕಿತ್ಸೆ ಕೊಡಿಸಿದರು. ಅವರ ಮಠವು ಒಂದು ದೇವಸ್ಥಾನದ ಬಳಿಯ ಸ್ಲಂ ಬೀದಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಒಬ್ಬ ದೇವಸ್ಥಾನದ ಪೂಜಾರಿ ಆಕೆಯನ್ನು ಕೊಲ್ಲುವ ಧೈರ್ಯ ಮಾಡಿದರು. ನಂತರ ಅವರೇ ತೆರೇಸಾ ಅವರ ಶಿಷ್ಯನಾಗಿ ಮಾರ್ಪಟ್ಟರು. ಅವರು ಬಡ ಮಕ್ಕಳನ್ನು ದತ್ತು ಪಡೆದು ತನ್ನ ಸ್ವಂತ ಕೈಗಳಿಂದ ಸ್ವಚ್ಛಗೊಳಿಸಿದರು. ಅವರು ಜನರ ದಾನವನ್ನು ಪರಮ ತಂದೆಯ ದಾನವಾಗಿ ಕಂಡರು. ವಿಶ್ವದೆಲ್ಲೆಡೆಯಿಂದ ಪ್ರಶಸ್ತಿಗಳು ಹರಿದು ಬಂದವು. ಅವರು ಬಡ ಮಕ್ಕಳಿಗಾಗಿ ಎಲ್ಲವನ್ನೂ ಖರ್ಚು ಮಾಡಿದರು. 1979 ರಲ್ಲಿ, ಅವರು ವಿಶ್ವ ಶಾಂತಿಗಾಗಿ ನೊಬೆಲ್ ಪ್ರಶಸ್ತಿಯನ್ನು ಪಡೆದರು. ತೆರೇಸಾ ತನ್ನ ಜೀವನದುದ್ದಕ್ಕೂ ಜನರಿಗೆ ಮರಳಿ ನೀಡುವ ಗುರಿಯೊಂದಿಗೆ ತನ್ನ ಓಟವನ್ನು ಕೊನೆಗೊಳಿಸಿದರು.

 

ನಮ್ಮ ಕರ್ತನಾದ ಯೇಸು ಕ್ರಿಸ್ತನು ತನ್ನ ಸೇವೆಯ ದಿನಗಳಲ್ಲಿ ಸುವಾರ್ತೆಯನ್ನು ಬೋಧಿಸಿದರು ಮಾತ್ರವಲ್ಲದೆ ಅಗತ್ಯವಿರುವ ಎಲ್ಲಾ ಜನರಿಗೆ ಸಹಾಯ ಮಾಡಿದರೆಂದು ನಾವು ಸತ್ಯವೇದದಲ್ಲಿ ಓದುತ್ತೇವೆ. ಈ ಚಿಕ್ಕವರಲ್ಲಿ ಒಬ್ಬನಿಗೆ ನೀವು ಏನು ಮಾಡುತ್ತೀರೋ ಅದನ್ನು ನನಗೇ ಮಾಡಿದ ಹಾಗಾಯಿತು ಎಂದು ಹೇಳಿದ ಯೇಸುಕ್ರಿಸ್ತನು, ತನ್ನ ಸೇವೆಯ ದಿನಗಳಲ್ಲಿ ಅದನ್ನು ಹಾಗೆಯೇ ಮಾಡಿ ತೋರಿಸಿದರು. ಪರಿಶುದ್ಧ ಲೂಕನು ಇದನ್ನು ಪ್ರಸ್ತಾಪಿಸುವಾಗ "ಉಪಕಾರಗಳನ್ನು ಮಾಡುತ್ತಾ ಸಂಚರಿಸಿದನು" ಎಂದು ಯೇಸುವಿನ ಬಗ್ಗೆ ಬರೆದಿದ್ದಾರೆ.

 

ಕ್ರಿಸ್ತನಲ್ಲಿ ಪ್ರಿಯರೇ! ಇತರರಿಗೆ ಒಳ್ಳೆಯದನ್ನು ಮಾಡುವುದು ಬೀಜವಿದ್ದಂತೆ. ಒಳ್ಳೆಯದನ್ನು ಮಾಡಲು ನಾವು ದೇವರಿಂದ ರಚಿಸಲ್ಪಟ್ಟಿದ್ದೇವೆ. "ಒಳ್ಳೆಯದನ್ನು ಮಾಡಲು ಮತ್ತು ದಾನಧರ್ಮ ಮಾಡಲು ಮರೆಯಬೇಡಿರಿ, ಏಕೆಂದರೆ ಇಂತಹ ಯಜ್ಞಗಳನ್ನು ದೇವರು ಇಷ್ಟಪಡುತ್ತಾರೆ" ಎಂದು ಇಬ್ರಿಯ ಪತ್ರಿಕೆಯ ಬರಹಗಾರನು ನಮಗೆ ಸುಂದರವಾಗಿ ಬರೆದಿದ್ದಾರೆ. ಒಳ್ಳೆಯದನ್ನು ಮಾಡುವುದರಲ್ಲಿ ನಾವು ಆಯಾಸಗೊಳ್ಳದೆ ಇರೋಣ, ನಾವು ದಣಿಯದೇ ಇದ್ದರೆ ತಕ್ಕ ಕಾಲದಲ್ಲಿ ಕೊಯ್ಯುತ್ತೇವೆ. ಒಳ್ಳೆಯದನ್ನು ಬಿತ್ತಿರಿ, ಒಳ್ಳೆಯದನ್ನು ಕೊಯ್ಯಿರಿ.

- Bro. ಜೇಕಬ್ ಶಂಕರ್

 

ಪ್ರಾರ್ಥನಾ ಅಂಶ:

ಸಹ ಸೇವಕರ ಸೇವಾಕ್ಷೇತ್ರದ ಸೇವೆಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş holiganbet giriş sahabet onwin bets10 bets10 giriş bets10 güncel giriş betcio atlasbet casibom Royalbet Royalbet giriş Royalbet güncel Royalbet meritking meritking giriş perabet perabet giriş casibom casibom giriş holiganbet holiganbet giriş galabet casibom casibom giriş grandpashabet perabet perabet giriş padişahbet padişahbet giriş meritking meritking giriş grandpashabet grandpashabet giriş kalitebet kalitebet giris betsmove betsmove giris gonebet gonebet giris betnano betnano giriş jojobet jojobet betplay jojobet esbet sonbahis tambet grandpashabet betgit mercurecasino