Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 23.01.2024
Share:

By Village Missionary Movement

Tuesday, 23-Jan-2024

ಧೈನಂದಿನ ಧ್ಯಾನ(Kannada) – 23.01.2024

 

ಒಳ್ಳೆಯ ನೆಲದಲ್ಲಿ ಬಿದ್ದ ಬೀಜ

 

"ಅವನು ಭಕ್ತನೂ... ದೇವರಿಗೆ ಭಯಪಡುವವನೂ ಆಗಿದ್ದು ಜನರಿಗೆ ಬಹಳವಾಗಿ ದಾನಧರ್ಮ ಮಾಡುತ್ತಾ ದೇವರಿಗೆ ನಿತ್ಯವೂ ಪ್ರಾರ್ಥನೆ ಮಾಡುತ್ತಾ ಇದ್ದನು" - ಅಪೊಸ್ತಲ. 10:2

 

ಬೀಜವು ಚಿಕ್ಕದಾಗಿದ್ದರೂ, ಅದನ್ನು ಹೊಲಗಳಲ್ಲಿ ಬಿತ್ತಿದಾಗ ಅದು ಮೊಳಕೆಯೊಡೆದು ಬೆಳೆಯಲು ಪ್ರಾರಂಭಿಸುತ್ತದೆ. ರೈತನು ತನ್ನ ಹೊಲಗಳಲ್ಲಿ ಬೀಜಗಳನ್ನು ಬಿತ್ತಿದಾಗ, ಉತ್ತಮ ಫಸಲಿನ ನಿರೀಕ್ಷೆಯಲ್ಲಿ ಸಂತೋಷದಿಂದ ಬಿತ್ತುತ್ತಾನೆ. ಬೆಳೆಗಳು ಬೆಳೆಯುವಾಗ, ಚೆನ್ನಾಗಿ ನೀರು ಹಾಕಿ, ಗೊಬ್ಬರ ಹಾಕಿ, ಎಲ್ಲಾ ಕಳೆಗಳನ್ನು ಕಿತ್ತುಹಾಕಿ, ಬೆಳೆಯ ಬೆಳವಣಿಗೆಯನ್ನು ನೋಡಿ ತುಂಬಾ ಆನಂದಿಸುತ್ತಾನೆ. ಬೀಜಗಳು ಬೆಳೆಯದೆ ಒಣಗಿಹೋದರೆ ಅಥವಾ ಅವು ಬೆಳೆದು ಸರಿಯಾದ ಫಸಲು ನೀಡಲು ವಿಫಲವಾದರೆ, ರೈತ ನಿರುತ್ಸಾಹಗೊಳ್ಳುತ್ತಾನೆ.

 

ಸತ್ಯವೇದದಲ್ಲಿ, ಯೇಸು ಕ್ರಿಸ್ತನು ಬಿತ್ತುವವನ ಸಾಮ್ಯವನ್ನು ಹೇಳುವ ಮೂಲಕ ಜನರಿಗೆ ಬೋಧಿಸಿದರು. ಮಾರ್ಕನು 4ನೇ ಅಧ್ಯಾಯ 3 ರಿಂದ 8 ರವರೆಗಿರುವ ವಾಕ್ಯಗಳಲ್ಲಿ ಬಿತ್ತುವವನ ಬಗ್ಗೆಯೂ, ಬೀಜ ಮತ್ತು ಹೊಲಗಳ ಬಗ್ಗೆಯೂ ನಾವುಕಾಣುತ್ತೇವೆ. ದಾರಿಯ ಮಗ್ಗುಲಲ್ಲಿ ಬಿದ್ದ ಬೀಜ, ಬಂಡೆಯ ಮೇಲೆ ಬಿದ್ದ ಬೀಜ, ಮುಳ್ಳು ಗಿಡಗಳ ನಡುವೆ ಬಿದ್ದ ಬೀಜ ಮತ್ತು ಒಳ್ಳೆಯ ನೆಲದಲ್ಲಿ ಬಿದ್ದ ಬೀಜ ಎಂದು ಲೂಕ 8:11 ಸೂಚಿಸುತ್ತಿದೆ. ಬಿತ್ತುವವನು ಉಳುವವನು ಅಥವಾ ರೈತ. ಇದು ಜನರಿಗೆ ವಾಕ್ಯಗಳನ್ನು ಬಿತ್ತುವ ಸೇವಕರನ್ನು ಸೂಚಿಸುತ್ತಿದೆ. ಕ್ರಿಸ್ತನ ಬೋಧನೆಯಿಂದಾಗಿ ಈ ನಾಲ್ಕು ರೀತಿಯ ನೆಲದಲ್ಲಿ ಫಲಪ್ರದವಾಗಿರುವ ಜನರನ್ನು ಸತ್ಯವೇದವು ಸ್ಪಷ್ಟವಾಗಿ ತೋರಿಸುತ್ತಿದೆ.

 

ಒಳ್ಳೆಯ ನೆಲವಾಗಿರುವ ಅನೇಕರು ಫಲ ಕೊಡುತ್ತಿದ್ದಾರೆ. ಅಂತವರೇ ಕೊರ್ನೇಲ್ಯನು! ಜಾತಿಯನ್ನು ಲೆಕ್ಕಿಸದೆ ತೆರೆದ ಹೃದಯದೊಂದಿಗೆ ಮತ್ತು ನಿಜವಾದ ದೈವಭಕ್ತಿಯೊಂದಿಗೆ ತನ್ನನ್ನು ಹುಡುಕುವ ಯಾರನ್ನಾದರೂ ದೇವರು ನೋಡುತ್ತಾರೆ ಎಂಬುದಕ್ಕೆ ಕೋರ್ನೇಲ್ಯನು ಒಂದು ಉದಾಹರಣೆಯಾಗಿದ್ದಾನೆ. ದೈವಭಕ್ತಿಯುಳ್ಳವನು, ದೇವರಿಗೆ ಭಯಪಟ್ಟು, ಅಗತ್ಯವಿರುವ ಜನರಿಗೆ ಸಹಾಯ ಮಾಡುತ್ತಿದ್ದನು. ಅವರು ಯಾವಾಗಲೂ ದೇವರನ್ನು ನೋಡಿ ಪ್ರಾರ್ಥಿಸುತ್ತಿದ್ದರು. ದೇವರಿಗೆ ವಿಧೇಯನಾದ ಕೊರ್ನೇಲ್ಯನು ತನ್ನ ಕುಟುಂಬದವರೆಲ್ಲರು ದೇವರ ಸಂದೇಶವನ್ನು ಕೇಳಬೇಕೆಂದು ಎಲ್ಲರನ್ನು ಒಟ್ಟುಗೂಡಿಸಿ ದೇವರಿಗೆ ಭಯಪಡುವ ಭಯದಲ್ಲಿ ಮುನ್ನಡೆಸಿದವರು. ಅಧಿಕಾರಿಯಾಗಿದ್ದರೂ ದೇವಮನುಷ್ಯನಿಗೆ ಗೌರವ ಸಲ್ಲಿಸಿ ವಿಧೇಯನಾಗಿ ಕಾಣಲ್ಪಟ್ಟರು. ಯೆಹೂದ್ಯನಲ್ಲದ ರೋಮನಾದ ಇವರು ಮತ್ತು ಇವರ ಮನೆಯವರು ಪವಿತ್ರಾತ್ಮವನ್ನು ಪಡೆದು ತಕ್ಷಣವೇ ದೀಕ್ಷಾಸ್ನಾನ ಪಡೆದರು. ಇವರು ಒಳ್ಳೆಯ ನೆಲದಲ್ಲಿ ಬಿದ್ದ ಬೀಜವಾಗಿದ್ದದರಿಂದ ಕರ್ತನಿಗೆ ಸಾಕ್ಷಿಯಾಗಿದ್ದರು.

 

ನನಗೆ ಪ್ರಿಯರಾದವರೇ, ನಾವು ಯಾವ ನೆಲದಲ್ಲಿ ಬಿದ್ದ ಬೀಜಗಳಾಗಿ ಬದುಕುತ್ತಿದ್ದೇವೆ ಎಂಬುದನ್ನು ಸ್ವಲ್ಪ ಶೋಧಿಸಿ ನೋಡೋಣ. ನಮ್ಮಿಂದ ನಮಗಿರುವವುಗಳಿಂದ ಇತರರಿಗೆ ಪ್ರಯೋಜನವಿದೆಯಾ? ನಮ್ಮಿಂದ ಇತರರಿಗೆ ಪ್ರಯೋಜನವನ್ನು ನೀಡುವ ನಿಟ್ಟಿನಲ್ಲಿ ದೇವರಿಗಾಗಿ ಉತ್ತಮ ಫಸಲನ್ನು ಈ ಹೊಸ ವರ್ಷದಲ್ಲಿ ನೀಡಲು ಪ್ರಯತ್ನಿಸೋಣ. ದೇವರ ಕೃಪೆಯು ನಮ್ಮೊಂದಿಗಿರಲಿ! ಆಮೆನ್!

- Mrs. ಸರೋಜಾ ಮೋಹನ್ ದಾಸ್ 

 

ಪ್ರಾರ್ಥನಾ ಅಂಶ:

ತಿಂಗಳಿಗೆ 30 ದಿನಗಳು 30 ಮನೆಗಳಲ್ಲಿ ಕುಟುಂಬ ಪ್ರಾರ್ಥನಾ ಗುಂಪುಗಳು ನಮ್ಮ ಸೇವಾಕ್ಷೇತ್ರಗಳಲ್ಲಿ ತಡೆಯಿಲ್ಲದೆ ನಡೆಯುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al deneme bonusu deneme bonusu veren siteler online casino online casino perabet perabet giriş perabet perabet giriş perabet perabet giriş perabet güncel giriş jojobet jojobet giriş jojobet güncel giriş Holiganbet Holiganbet Giriş Holiganbet Güncel Giriş Superbetin Superbetin Giriş Superbetin Güncel Giriş pashagaming pashagaming giriş pashagaming güncel giriş betcio Betcio Giriş betcio güncel giriş atlasbet atlasbet giriş atlasbet güncel giriş Piabet Piabet Giriş Ngsbahis Ngsbahis Giriş İnterbahis İnterbahis Giriş Klasbahis Klasbahis Giriş Coinbar Coinbar Giriş Limanbet Limanbet Giriş İmajbet İmajbet Giriş Restbet Restbet Giriş Matbet Matbet Giriş Jasminbet Jasminbet Giriş Belugabahis Belugabahis Giriş Online casino nz Best payout online casino nz matbet jojobet jojobet giriş jojobet güncel giriş bahsegel bahsegel bahsegel matbet romabet lunabet