Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 28.01.2024 (Kids Special)
Share:

By Village Missionary Movement

Sunday, 28-Jan-2024

ಧೈನಂದಿನ ಧ್ಯಾನ(Kannada) – 28.01.2024 (Kids Special)

 

ಬೇಕಾದದ್ದನ್ನು ಕೊಡುತ್ತಾರೆ 

 

"...ನೀವು ನಿಮ್ಮ ತಂದೆಯನ್ನು ಬೇಡಿಕೊಳ್ಳುವದಕ್ಕಿಂತ ಮುಂಚೆಯೇ ನಿಮಗೆ ಏನೇನು ಅಗತ್ಯವೆಂಬದು ಆತನಿಗೆ ತಿಳಿದದೆ" - ಮತ್ತಾಯ 6:8

 

ಹಲೋ ಪುಟಾಣಿಗಳೇ! ಎಲ್ಲರೂ ಹೇಗಿದ್ದೀರಾ ಚೆನ್ನಾಗಿದ್ದೀರಾ ಇಂದು ಒಂದು ಕಥೆಯನ್ನು ಕೇಳೋಣ್ವಾ? ಒಂದು ಹಳ್ಳಿಯಲ್ಲಿ ನೀಲಾ ಎಂಬ ಪುಟ್ಟ ಹುಡುಗಿ ಇದ್ದಳು. ಅವಳು ತನ್ನ ಹೆತ್ತವರ ನೆಚ್ಚಿನ ಮಗು! ಅವರು ಏನು ಕೇಳಿದರೂ ತೆಗೆದುಕೊಡುತ್ತಿದ್ದರು. ಇಲ್ಲದಿದ್ದರೆ ಯಾರೊಂದಿಗೂ ಮಾತನಾಡದೆ ಮುಖ ತಿರುಗಿಸಿಕೊಂಡು ಅಳಲು ಶುರುಮಾಡುತ್ತಿದ್ದಳು. ತಾನು ತೆಗೆದುಕೊಂಡ ಅನೇಕ ವಸ್ತುಗಳ ಬಗ್ಗೆ ಸಂತೋಷಪಡುವ ಬದಲು, ತೆಗೆದುಕೊಡದ ಒಂದು ವಸ್ತುವನ್ನು ಕೇಳಿ ಕೇಳಿ ದುಃಖಿಸುತ್ತಿದ್ದಳು. ತಂದೆ-ತಾಯಿ ಎಷ್ಟೇ ಹೇಳಿದರೂ ಅವಳ ಮನಸ್ಸು ಬದಲಾಗಲೇ ಇಲ್ಲ.

 

ಒಂದು ದಿನ ನೀಲಾ ತನ್ನ ಹೆತ್ತವರೊಂದಿಗೆ ಸೂಪರ್ ಮಾರ್ಕೆಟ್‌ಗೆ ಹೋದಳು. ದುಬಾರಿ ಬೆಲೆಯ ಚಾಕೊಲೇಟ್ ತುಂಡನ್ನು ತೋರಿಸಿ ತನಗೆ ಅದು ಬೇಕು ಎಂದು ಹಠ ಮಾಡಲು ಪ್ರಾರಂಭಿಸಿದಳು. ಅವಳ ತಂದೆ ಹೇಳಿದರು, "ಇದು ತುಂಬಾ ಚಿಕ್ಕ ಚಾಕೊಲೇಟ್ ಮತ್ತು ತುಂಬಾ ದುಬಾರಿಯಾಗಿದೆ, ಆದ್ದರಿಂದ ನೀನು ಬೇರೆ ಏನಾದರೂ ಕೇಳು, ನಾನು ಅದನ್ನು ತೆಗೆದುಕೊಡುತ್ತೇನೆ." ನೀಲಾ ಮಾತ್ರ, ಇಲ್ಲ, ಇಲ್ಲ, ನನಗೆ ಈ ಚಾಕಲೇಟೇ ಬೇಕು ಎಂದು ಅಳಲು ಪ್ರಾರಂಭಿಸಿದಳು. ಅಂದು ತುಂಬಾ ಟೆನ್ಷನ್‌ನಲ್ಲಿದ್ದ ತಂದೆ, ಅದನ್ನು ತೆಗೆದುಕೊಡದೆ ಎಲ್ಲರೂ ಮನೆಗೆ ಮರಳಿದರು. ನೀಲಾ ದುಃಖದಿಂದ ನಿದ್ದೆ ಮಾಡಲು ಹೋದಳು.

 

ಮರುದಿನ ಸಂಜೆ ನೀಲಾ ಆಟವಾಡುತ್ತಿದ್ದಾಗ ಅವಳ ತಂದೆ ಅವಳಿಗೆ ಹೊಸ ಸೈಕಲ್ ತೆಗೆದುಕೊಟ್ಟರು. ಅದನ್ನು ನೋಡಿ ನೀಲಾ ತುಂಬಾ ಖುಷಿಯಾದಳು. ಸೈಕಲ್ ಮೇಲೆ ಕೂತು ಮನೆಯೆಲ್ಲ ಸುತ್ತುತ್ತಾ ಬಂದಳು ಆಗ ನಿನ್ನೆ ಒಂದು ಚಾಕಲೇಟ್ ಗಾಗಿ ಹಠ ಹಿಡಿದದ್ದು ಅವಳಿಗೆ ನೆನಪಾಯಿತು. ಆ ಚಾಕೊಲೇಟ್ ಅನ್ನು ಕೊಂಡುಕೊಂಡಿದ್ದರೆ ಅದನ್ನು ತಿನ್ನುವ ತನಕ ಮಾತ್ರ ಖುಷಿಯಾಗುತ್ತಿತ್ತು, ಆದರೆ ಈಗ ನಾನು ಈ ಸೈಕಲ್ ನಲ್ಲಿ ಸುತ್ತಾಡಿಕೊಂಡು ದಿನವೂ ಸಂತೋಷಪಡಬಹುದು ಎಂಬುದು ಅರಿವಾಯಿತು. ತನ್ನ ತಪ್ಪನ್ನು ತಂದೆ-ತಾಯಿಯ ಮುಂದೆ ಒಪ್ಪಿಕೊಂಡು ಇನ್ನು ಮುಂದೆ ಹಠ ಮಾಡೋದಿಲ್ಲ ಒಳ್ಳೆಯ ಮಗುವಾಗಿರುತ್ತೇನೆ, ಎಂದು ಭರವಸೆ ನೀಡಿದಳು.

 

ಏನು ಪುಟಾಣಿಗಳೇ, ನಿಮಗೆ ಏನು ಬೇಕು ಎಂದು ನಮ್ಮ ಯೇಸಪ್ಪನಿಗೆ, ನಿಮ್ಮ ಹೆತ್ತವರಿಗೆ ಚೆನ್ನಾಗಿ ಗೊತ್ತು. So ಇದೇ ಬೇಕು ಎಂದು ಎಂದಿಗೂ ಹಠ ಮಾಡಬೇಡಿ. ನಿಮಗೆ ಬೇಕಾದುದನ್ನು ಸರಿಯಾದ ಸಮಯದಲ್ಲಿ ಯೇಸಪ್ಪ ನಿಮ್ಮ ತಂದೆ ತಾಯಿಯ ಮೂಲಕ ನೀಡುತ್ತಾರೆ Ok ನಾ!

- Mrs. ಐಡಾ ಕಿಂಗ್ ಡೇವಿಡ್

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet holiganbet holiganbet sahabet onwin bets10 bets10 giriş bets10 güncel giriş betcio atlasbet casibom meritking perabet casibom holiganbet galabet casibom padişahbet padişahbet giriş grandpashabet ibizabet tambet grandpashabet jojobet nesinecasino betbey betgit grandpashabet betpuan cashwin matbet meritking perabet perabet giriş instagram ban service betsilin betsilin giris pashagaming pashagaming giris gorabet gorabet giris kralbet holiganbet grandpashabet grandpashabet giriş holiganbet giriş çarkbet çarkbet giriş