Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 30.01.2024
Share:

By Village Missionary Movement

Tuesday, 30-Jan-2024

ಧೈನಂದಿನ ಧ್ಯಾನ(Kannada) – 30.01.2024

 

ಆಧ್ಯಾತ್ಮಿಕ ಬೆಳವಣಿಗೆ 

 

"...ಪ್ರಾಯಸ್ಥನಾದ ಮೇಲೆ ಬಾಲ್ಯದವುಗಳನ್ನು ಬಿಟ್ಟುಬಿಟ್ಟೆನು" - 1 ಕೊರಿಂಥ. 13:11

 

ಕ್ರಿಸ್ತನಲ್ಲಿ ಹುಟ್ಟಿದ ನಾವೆಲ್ಲರೂ ಬೆಳೆಯಬೇಕೆಂದು ದೇವರು ನಿರೀಕ್ಷಿಸುತ್ತಿದ್ದಾರೆ. ಯಾವುದರಲ್ಲಿ ಬೆಳೆಯಬೇಕು? ಆಧ್ಯಾತ್ಮಿಕ ಜೀವನದಲ್ಲಿ, ಸತ್ಯವೇದದಲ್ಲಿ, ಒಳ್ಳೆಯ ಕಾರ್ಯಗಳಲ್ಲಿ, ದೇವರೊಂದಿಗಿರುವ ಐಕ್ಯದಲ್ಲಿ, ಆಳವಾದ ಪ್ರಾರ್ಥನಾ ಜೀವನದಲ್ಲಿ... ಹೀಗೆ ಹೇಳಿಕೊಂಡೇ ಹೋಗಬಹುದು. ಹೀಗೆ ಹಂತಹಂತವಾಗಿ ಬೆಳೆದು ಆಧ್ಯಾತ್ಮಿಕವಾಗಿ ಬೆಳೆಯಬೇಕೆಂದು ದೇವರು ನಿರೀಕ್ಷಿಸುತ್ತಿದ್ದಾರೆ. ಬೆಳವಣಿಗೆಯ ಚಿಹ್ನೆಯಾದರೂ ಏನು? ಅದನ್ನು ಹೇಗೆ ಪತ್ತೆ ಹಚ್ಚಬಹುದು? ಎಂದು ಕೇಳುವುದಾದರೆ, "ಅರ್ಧ ತುಂಬಿರುವ ಕೊಡ ತುಳುಕುತ್ತದೆ; ತುಂಬಿದ ಕೊಡ ತುಳುಕುವುದಿಲ್ಲ" ಎಂಬ ಹಳೆಯ ಮಾತಿನಂತೆ, ಆಧ್ಯಾತ್ಮಿಕ ಜೀವನದಲ್ಲಿ ಬೆಳೆಯದವರು ತುಂಬದ ಕೊಡದ ಹಾಗೆ ಸಣ್ಣ ಸಣ್ಣ ವಿಷಯಗಳಲ್ಲಿಯೂ ನಿರಾಶೆಯಾಗುತ್ತಾರೆ. "ಕ್ರೈಸ್ತನಾದ ನನಗೆ ಮಾತ್ರ ಯಾಕೆ ಈ ಪಾಡು?" ಎಂದು ಶಬ್ಧಮಾಡುವ ಹಿತ್ತಾಳೆಯಂತೆಯೂ ಮತ್ತು ಪ್ರತಿಧ್ವನಿಸುವ ಕೈತಾಳದಂತೆಯೂ ಅಂಗಲಾಚುವ ಧ್ವನಿಯನ್ನು ನಾವು ಯಾವಾಗಲೂ ಅವರ ಬಳಿ ಕೇಳಲು ಸಾಧ್ಯ. ಆದರೆ ಆಧ್ಯಾತ್ಮಿಕ ಜೀವನದಲ್ಲಿ ಬೆಳೆದವರೋ ದೇವರ ಪ್ರೀತಿಯಿಂದ ತುಂಬಿಸಲ್ಪಟ್ಟವರಾಗಿ ನಿಧಾನವಾಗಿರುತ್ತಾರೆ. ಅವುಗಳಲ್ಲಿ ಕೆಲವನ್ನು ಯೋಚಿಸಿ, ಬೆಳವಣಿಗೆಯಲ್ಲಿ ನಮ್ಮ ಸ್ಥಿತಿ ಹೇಗಿದೆ ಎಂದು ನಮ್ಮನ್ನು ನಾವೇ ಪರೀಕ್ಷಿಸಿಕೊಳ್ಳೋಣವಾ?

 

ಇತರರಿಗೆ ಬಿಟ್ಟುಕೊಡುವ ಮನೋಭಾವವನ್ನು ಹೊಂದಿರುತ್ತಾರೆ. ಅವರು ಈಗ ಹೊಂದಿರುವ ಜವಾಬ್ದಾರಿ, ಸ್ಥಾನ ಮತ್ತು ಪ್ರಧಾನ ಸ್ಥಾನವನ್ನು ಬಿಟ್ಟುಕೊಟ್ಟು ಕೆಳಮಟ್ಟದಲ್ಲಿ ಸೇವೆ ಸಲ್ಲಿಸಲು ಮುಂದೆ ಬರುತ್ತಾರೆ. ಅಂದರೆ, ಎಲ್ಲರಿಗೂ ಕಡೆಯವನಾಗಿ, ಎಲ್ಲರ ಪಾದಗಳನ್ನು ತೊಳೆಯುವ ಮಟ್ಟಿಗೆ "ಕೆಲಸ ಮಾಡುವ ಮನಸ್ಸು" ಹೊಂದಿರುತ್ತಾರೆ (ಲೂಕ 14:11). ಸತ್ಯವೇದದಲ್ಲಿ, ಯೋನಾತಾನನು ಅರಸನಾದ ಸೌಲನ ಸ್ವಂತ ಮಗನಾಗಿದ್ದರೂ, ಅವನು ಪ್ರೀತಿಸಿದ ದಾವೀದನ ಬಳಿ, "ನೀನು ಇಸ್ರಾಯೇಲ್ಯರ ಅರಸನಾಗುವಿ; ನಾನು ನಿನಗೆ ಎರಡನೆಯವನಾಗಿರುವೆನು" (1 ಸಮುವೇಲ 23:17) ಎಂದು ಹೇಳಿದರಲ್ಲಾ! ಇವರು ನಮಗೆ ಮಾದರಿಯಲ್ಲವೇ?

 

ಮತ್ತೊಬ್ಬರು ಎಲ್ಲರನ್ನೂ ತನಗಿಂತ ಶ್ರೇಷ್ಠರೆಂದು ಪರಿಗಣಿಸುತ್ತಾರೆ. ಅವಿದ್ಯಾವಂತರು, ಬಡವರು, ರಕ್ಷಣೆಹೊಂದದವರು ಹೀಗೆ ಯಾರಾಗಿದ್ದರೂ ತನಗಿಂತ ಶ್ರೇಷ್ಠರೆಂದು ಪರಿಗಣಿಸಿ, ಪೂರ್ಣ ಗೌರವವನ್ನು ನೀಡಿ ಅವರೊಂದಿಗೆ ಸ್ನೇಹದಿಂದ ಕಾಣುತ್ತಾರೆ. (ಫಿಲಿ. 2:3).

 

ಗೌರವಿಸುವುದರಲ್ಲಿ ಮುಂದೆ ಇರುತ್ತಾರೆ. ಇವನು ನನಗಿಂತ ವಯಸ್ಸಿನಲ್ಲಿ, ವಿದ್ಯಾಭ್ಯಾಸದಲ್ಲಿ, ಸ್ಥಾನಮಾನದಲ್ಲಿ ಮತ್ತು ಪ್ರಭಾವದಲ್ಲಿ ಕಡಿಮೆಯೇ! ಹಾಗಾಗಿ ಮೊದಲು ಅವನೇ ಮಾತನಾಡಲಿ, ನಂತರ ನಾನು ಮಾತನಾಡುತ್ತೇನೆ ಎಂಬ ಕಲ್ಪನೆ ಸಾಸಿವೆಯಷ್ಟೂ ಅವರಿಗಿರುವುದಿಲ್ಲ. ಯಾಕೆಂದರೆ ಅವರಿಗೆ ತಮ್ಮ ಬಗ್ಗೆ ಯಾವ ರೀತಿಯ ಹೆಮ್ಮೆಯ ಭಾವನೆಯೂ ಇಲ್ಲದಿರುವುದರಿಂದ, ಯಾವುದೇ ಅಡ್ಡಿಯಿಲ್ಲದೆ ಇತರರನ್ನು ಗೌರವಿಸಲು ಮುಂದಾಗುತ್ತಾರೆ. (ರೋಮಾ. 12:10)

 

ನಾವು ಹೇಗೆ? ನಮಗೆ ಬೆಳವಣಿಗೆ ಇದೆಯೇ? ಅಥವಾ ಎಲ್ಲಾದಕ್ಕೂ ಅಳುತ್ತಾ ಆರ್ಭಟಿಸುತ್ತಾ, ತನ್ನೊಂದಿಗಿರುವವರ ಮೇಲೆಲ್ಲಾ ದೂರು ಹೇಳುವ ಮಕ್ಕಳ ಹಾಗೆ ಇದ್ದೇವಾ? ಅಥವಾ ಆಧ್ಯಾತ್ಮಿಕ ಪುರುಷರಾಗಿದ್ದೇವಾ?

- S. ಜಯಕುಮಾರಿ

 

ಪ್ರಾರ್ಥನಾ ಅಂಶ:

ಡ್ರಗ್ ಅಡಿಕ್ಷನ್ ಸೆಂಟರ್ ಸೇವೆಯ ಯೋಜನೆಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al Elexbet matbet giriş matbet instagram unban x unban twitter unban holiganbet setrabet marsbahis giriş vaycasino giriş