Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 12.02.2024
Share:

By Village Missionary Movement

Monday, 12-Feb-2024

ಧೈನಂದಿನ ಧ್ಯಾನ(Kannada) – 12.02.2024

 

ಅತ್ಯುತ್ತಮ ಬೀಜ

 

"ಅಳುತ್ತಾ ಬಿತ್ತುವವರು ಹಾಡುತ್ತಾ ಕೊಯ್ಯುವರು" - ಕೀರ್ತನೆ 126:5

 

ಹಿರಿಯ ಸೇವಕರೊಬ್ಬರು ವಿಶ್ವಾಸಿಗಳ ಬಳಿ ಈ ರೀತಿಯಾಗಿ ಪ್ರಶ್ನೆ ಮಾಡಿದರು. ಪರಲೋಕ ತೋಟದಲ್ಲಿ ಬಿತ್ತಬೇಕಾದ ಬೀಜ ಯಾವುದು? ಎಂದು ಕೇಳಿದರು. ಪ್ರತಿಯೊಬ್ಬರೂ ತಮ್ಮ ತಮ್ಮ ಅಭಿಪ್ರಾಯವನ್ನು ಹೇಳಿದರು. ಆ ಉತ್ತಮ ಬೀಜ ಯಾವುದು ಎಂದು ಸೇವಕರು ಹೇಳುವಾಗ ನಾವು ಸಹ ಕೇಳೋಣ್ವಾ?

 

ಪ್ರೀತಿಯ ಬೀಜ: 

ದುಷ್ಟತನದ ಜೀವನ ನಡೆಸಲು ತನ್ನನ್ನು ಬಿಟ್ಟು ಹೋದ ಕಿರಿಯ ಮಗನಿಗಾಗಿ ಕಾದಿದ್ದ ತಂದೆ. ಎಲ್ಲವನ್ನೂ ಕಳೆದುಕೊಂಡು ಹೀನ ಸ್ಥಿತಿಯಲ್ಲಿ ಬಂದ ಅವನನ್ನು ಕಂಡು ಓಡಿಹೋಗಿ ಅಪ್ಪಿಕೊಂಡು ಮುತ್ತಿಟ್ಟು ಔತಣವನ್ನು ಸಿದ್ಧಮಾಡಿಸಿ ಸಂಭ್ರಮಿಸಿದರೇ! ತಂದೆಯ ಪ್ರೀತಿ ಎಷ್ಟು ದೊಡ್ಡದು! ತನ್ನನ್ನು ದ್ವೇಷಿಸಿ ಮಾರಿದ ತನ್ನ ಸಹೋದರರು, ಐಗುಪ್ತಕ್ಕೆ ಧಾನ್ಯವನ್ನು ಖರೀದಿಸಲು ಅವನ ಬಳಿಗೆ ಬಂದಾಗ, ಯೋಸೇಫನ ಹೃದಯವು ಪ್ರೀತಿಯಿಂದ ತುಂಬಿತ್ತೇ! ಪ್ರೀತಿಯನ್ನು ಬಿತ್ತಿರಿ; ಸಂತೋಷವಾಗಿ ಕೊಯ್ಯುತ್ತೀರ.

 

ಒಳ್ಳೆಯತನದ ಬೀಜ:  

ಸಿರಿಯಾ ದೇಶದ ಸೇನಾಪತಿಯಾದ ನಾಮಾನನ ಕುಷ್ಠರೋಗವು ವಾಸಿಯಾಗಲು ಒಂದು ಯುವ ಗುಲಾಮ ಹುಡುಗಿ ಸಲಹೆ ನೀಡಿದಳು. ತನ್ನನ್ನು ಗುಲಾಮಳನ್ನಾಗಿ ಮಾಡಿದ ನಾಮಾನನ ಕ್ರಿಯೆಗೆ ಕೆಡುಕಿಗೆ ಕೆಡುಕನ್ನು ಮಾಡದೆ ಒಳಿತಿನಿಂದ ಕೆಡುಕನ್ನು ಜಯಿಸಿದಳು. ಪುಟ್ಟ ಬಾಲಕಿಯ ಸಲಹೆಯಂತೆ ನಡೆದುಕೊಂಡ ನಾಮಾನನಿಗೆ ಗುಣವಾಯಿತು. ಒಳ್ಳೆಯತನವನ್ನು ಬಿತ್ತಿದಳು; ಇಂದಿಗೂ ಸತ್ಯವೇದವನ್ನು ಓದುವವರೆಲ್ಲರೂ ಚಿಕ್ಕ ಹುಡುಗಿಯ ಬಗ್ಗೆ ಮಾತನಾಡುತ್ತಿದ್ದಾರೆ. ಇನ್ನೂ ಫಲಗಳನ್ನು ಕೊಡುತ್ತಿದ್ದಾಳೆ.

 

ಕಣ್ಣೀರಿನ ಬೀಜ: 

ಅಳುತ್ತಾ ಬಿತ್ತುವವರು ಹಾಡುತ್ತಾ ಕೊಯ್ಯುವರು ಎಂದು ಸತ್ಯವೇದವು ಹೇಳುತ್ತಿದೆ. ದೇವರ ಸಮ್ಮುಖದಲ್ಲಿ ಕಣ್ಣೀರು ಸುರಿಸಿದ ಹನ್ನಳಿಗೆ ಸಮುವೇಲನೆಂಬ ಮಗುವನ್ನು ನೀಡಿದರು. ರಾತ್ರಿ ಹಗಲು ಕಣ್ಣೀರೇ ಆಹಾರವಾಯಿತು ಎಂದ ದಾವೀದನನ್ನು ಅರಸನನ್ನಾಗಿ ಮಾಡಿ ಹರ್ಷಿಸಿದವರು ನಮ್ಮ ದೇವರು. ಸತ್ತ ಲಾಜರನನ್ನು ಕಂಡು ಕಣ್ಣೀರಿಟ್ಟ ಸಹೋದರಿಯರಿಗೆ ನಾಲ್ಕು ದಿನಗಳು ಕಳೆದು ಲಾಜರನನ್ನು ಜೀವಂತವಾಗಿ ಎಬ್ಬಿಸಿ ತನ್ನ ಶಕ್ತಿಯನ್ನು ತೋರಿಸಿದರಲ್ಲಾ! ನಮ್ಮ ಕಣ್ಣೀರೆಂಬ ಬೀಜವು ಆಶ್ಚರ್ಯವಾದ ಫಸಲನ್ನು ನೀಡುತ್ತದೆ.

 

ಸುವಾರ್ತೆಯ ಬೀಜ: 

ಅಪೊಸ್ತಲನಾದ ಪೌಲನು ಸುವಾರ್ತೆಯನ್ನು ಬಿತ್ತುವುದು ತನ್ನ ಕರ್ತವ್ಯ ಎಂದು ಹೇಳುತ್ತಾರೆ. ಹಾಗೆ ಸುವಾರ್ತೆಯನ್ನು ಬಿತ್ತಿ ಆತ್ಮ ಸುಗ್ಗಿಯನ್ನು ಕಾಣುವುದು ಎಂಥಾ ಜ್ಞಾನವಂತಿಕೆಯ ಕ್ರಿಯೆಯಾಗಿದೆ!

 

ಹೌದು, ಪ್ರಿಯರೇ! ಕರ್ತನನ್ನು ಪ್ರಸ್ತಾಪಿಸುವವರೇ! ನೀವು ಸೋಮಾರಿಗಳಾಗಿದ್ದರೆ ಆಗೋದಿಲ್ಲ ಎಂದು ಸತ್ಯವೇದವು ಹೇಳುತ್ತಿದೆ. ಏನಾದರು ಮಾಡಿರಿ; ಪ್ರೀತಿಯನ್ನು ಬಿತ್ತಿರಿ. ಯಾರಾದರೂ, ಎಲ್ಲಿ ಬೇಕಾದರೂ ಈ ಬೀಜವನ್ನು ಬಿತ್ತಲು ಸಾಧ್ಯ. ಬೆಳೆಯುವಂತೆ ಮಾಡುವವರು ದೇವರು! ಮೇಲಿನ ಅತ್ಯುತ್ತಮ ಬೀಜಗಳನ್ನು ಬಿತ್ತಿ ದೇವರ ತೋಟವನ್ನು ತುಂಬೋಣ.

- Mrs. ಮಂಜುಳಾ

 

ಪ್ರಾರ್ಥನಾ ಅಂಶ:

ನಮ್ಮೊಂದಿಗೆ ಸೇರಿರುವ ದೆಬೋರಾಗಳನ್ನು ಕರ್ತನು ಬಲವಾಗಿ ಎತ್ತಿ ಉಪಯೋಗಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş matbet giriş sahabet onwin bets10 bets10 giriş bets10 güncel giriş betcio atlasbet casibom meritking perabet casibom holiganbet galabet casibom padişahbet padişahbet giriş grandpashabet jojobet jojobet grandpashabet grandpashabet palacebet sonbahis jojobet grandpashabet betpuan betsalvador matbet meritking perabet perabet giriş instagram ban service betsilin betsilin giris pashagaming pashagaming giris gorabet gorabet giris kralbet holiganbet