Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 13.02.2024
Share:

By Village Missionary Movement

Tuesday, 13-Feb-2024

ಧೈನಂದಿನ ಧ್ಯಾನ(Kannada) – 13.02.2024

 

ಮನಃಪೂರ್ವಕವಾಗಿ ಮಾಡಿರಿ!

 

"ನೀವು ಯಾವ ಕೆಲಸವನ್ನು ಮಾಡಿದರೂ ಅದನ್ನು ಮನುಷ್ಯರಿಗೋಸ್ಕರವೆಂದು ಮಾಡದೆ ಕರ್ತನಿಗೋಸ್ಕರವೇ ಎಂದು ಮನಃಪೂರ್ವಕವಾಗಿ ಮಾಡಿರಿ" - ಕೊಲೊ. 3:23

 

ಡಿಸೆಂಬರ್ 2, 1984 ರ ರಾತ್ರಿ. ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ರಾಸಾಯನಿಕ ಕಾರ್ಖಾನೆಯೊಂದು ಎಂದಿನಂತೆ ಕಾರ್ಯನಿರ್ವಹಿಸುತ್ತಿತ್ತು. ಅಲ್ಲಿ ಇರಿಸಲಾಗಿದ್ದ ಮೂರು ಕಂಟೈನರ್‌ಗಳನ್ನು ಕರ್ತವ್ಯದಲ್ಲಿದ್ದ ಕಾರ್ಮಿಕರೊಬ್ಬರು ನಿರ್ವಹಿಸುತ್ತಿದ್ದರು. ಮೂರನೇ ಪಾತ್ರೆಯಲ್ಲಿ ಅಪಾಯಕಾರಿ ಅನಿಲ ಮೀಥೈಲ್ ಐಸೊಸೈನೈಡ್ (MIC) ಇದೆ ಎಂದು ಅವರು ನಂತರ ಅಸಾಮಾನ್ಯವಾಗಿ ಅರಿತುಕೊಂಡರು. ಕೂಡಲೇ ಮೇಲಧಿಕಾರಿಗಳ ಬಳಿ ತೆರಳಿ ಮಾಹಿತಿ ನೀಡಿದರು. ಆದರೆ ಮೇಲಧಿಕಾರಿ ಅದನ್ನು ಕಂಡುಕೊಳ್ಳಲಿಲ್ಲ. ಆ ಕೆಲಸಗಾರನೂ ಸಹ ತನ್ನ ಕೆಲಸದ ಸಮಯವನ್ನು ಮುಗಿಸಿದ ನಂತರ ಹೊರಟುಹೋದರು. ಸಮಯ12 ಗಂಟೆ ದಾಟಿ ಡಿಸೆಂಬರ್ 3 ಆಗಿತ್ತು. ಅಪಾಯಕಾರಿ ಅನಿಲ ಒತ್ತಡವನ್ನು ತಡೆದುಕೊಳ್ಳಲಾಗದೆ ಹೊರಬಂದು ಗಾಳಿಯಲ್ಲಿ ಬೆರೆತು ಹೋಯಿತು. ಆಗ ಭೋಪಾಲ್ ನಗರದಲ್ಲಿ ಮಲಗಿದ್ದ ಅನೇಕ ಜನರು ಉಸಿರಾಟದ ತೊಂದರೆಯಿಂದ ಬಳಲಿದರು. ಕ್ಷಣಾರ್ಧದಲ್ಲಿ ಗ್ಯಾಸ್ ಎಲ್ಲೆಂದರಲ್ಲಿ ಹರಡಿ ಜನರು ಗುಂಪು ಗುಂಪಾಗಿ ಸಾವನ್ನಪ್ಪಿದರು. ಪ್ರಾಣಿಗಳು ಸತ್ತವು. ಅಂದಾಜಿನ ಪ್ರಕಾರ 20,000 ಜನರು ಸಾವನ್ನಪ್ಪಿದ್ದಾರೆ. ಸುಮಾರು 5 ಲಕ್ಷದ 50 ಸಾವಿರ ಜನರು ಉಸಿರಾಟದ ತೊಂದರೆಯನ್ನು ಅನುಭವಿಸಿದರು. ಅತಿ ದೊಡ್ಡ ದುರಂತವಾಗಿ "ಭೋಪಾಲ್ ವಿಷಾನಿಲ ಘಟನೆ" ಮಾರ್ಪಟ್ಟಿತು. ಕೆಲವು ವರ್ಷಗಳಿಂದ ಅಧಿಕಾರಿಯೊಬ್ಬನ ನಿರ್ಲಕ್ಷ್ಯವು ಭಾರತ ದೇಶಕ್ಕೇ ಒಂದು ಶೋಕದ ದಿನವನ್ನು ತಂದೊಡ್ಡಿದೆ.

 

ಸತ್ಯವೇದದಲ್ಲಿ, ಅಪೊ.ಪೌಲನು ತಾನು ಉಂಟುಮಾಡಿದ ಸಭೆಯ ಜನರಿಗೆ ಹೇಳುವಾಗ, "ನೀವು ಯಾವ ಕೆಲಸವನ್ನು ಮಾಡಿದರೂ ಅದನ್ನು ಮನುಷ್ಯರಿಗೋಸ್ಕರವೆಂದು ಮಾಡದೆ ಕರ್ತನಿಗೋಸ್ಕರವೇ ಎಂದು ಮನಃಪೂರ್ವಕವಾಗಿ ಮಾಡಿರಿ" ಎಂದು ಹೇಳುತ್ತಾರೆ. ಏಕೆಂದರೆ ಅವರು ಅದನ್ನು ಅನುಸರಿಸಿದರು. ಅವರು ಮನುಷ್ಯರಿಗಾಗಿಯೋ ಕರ್ತವ್ಯಕ್ಕಾಗಿಯೋ, ಅಥವಾ ನೋಟಕ್ಕಾಗಿಯೋ ಏನನ್ನೂ ಮಾಡಲಿಲ್ಲ. ಅವರು ಈ ಭೂಮಿಯಲ್ಲಿ ದೇವರ ಸೇವೆಯನ್ನು ಮನಃಪೂರ್ವಕವಾಗಿ ಪೂರೈಸಿದರು.

 

ಸ್ನೇಹಿತರೇ! ಇಂದು ನಾವು ಏನನ್ನು ಮಾಡುತ್ತಿದ್ದೇವೆ ಎನ್ನುವುದಕ್ಕಿಂತ ಎಂಥಾ ಮನಸ್ಥಿತಿಯೊಂದಿಗೆ ಮಾಡುತ್ತಿದ್ದೇವೆ ಎಂಬುದೇ ಮುಖ್ಯ. ದೇವರು ನಿಮ್ಮನ್ನು ಯಾವ ಸ್ಥಳದಲ್ಲಿಟ್ಟಿದ್ದಾರೋ ಅಲ್ಲಿ ಮನಃಪೂರ್ವಕವಾಗಿ ಇರಿ. ಆಸಕ್ತಿಯಿಂದ ಪ್ರಾರ್ಥಿಸಿ. ಸತ್ಯವೇದವನ್ನು ಓದಿ ಧ್ಯಾನ ಮಾಡಿರಿ. ನಿಮ್ಮ ಬಿಡುವಿನ ವೇಳೆಯಲ್ಲಿ ನಿಮ್ಮಿಂದ ಮಾಡಲು ಸಾಧ್ಯವಿರುವ ಸೇವೆಯನ್ನು ಮನಃಪೂರ್ವಕವಾಗಿ ಮಾಡಿರಿ. ದೇವರು ನಮಗೆ ಕೊಟ್ಟಿರುವ ಈ ಭೂಮಿಯಲ್ಲಿ ಅಸಡ್ಡೆಯಾಗಿ ಇರಬೇಡಿರಿ. ನಿಮಗೆ ಒಂದು ಗಂಟೆ ಸಮಯವಿದೆಯೇ? ಆ ಸಮಯದಲ್ಲಿ ನೀವು ನಮ್ಮೊಂದಿಗೆ ಸೇರಿ ಹಸ್ತಪ್ರತಿ ಸೇವೆ, ಆಸ್ಪತ್ರೆ ಸೇವೆ ಮತ್ತು ಮಕ್ಕಳ ಸೇವೆ ಮಾಡಲು ನಿಮ್ಮನ್ನು ಸ್ವಾಗತಿಸುತ್ತೇವೆ. ನೀವು ಅದನ್ನು ಮನಃಪೂರ್ವಕವಾಗಿ ಮಾಡಬಹುದು. "ಚಿಕ್ಕ ಕೆಲಸವೋ ದೊಡ್ಡ ಕೆಲಸವೋ ಮನಃಪೂರ್ವಕವಾಗಿ ಮಾಡಿರಿ"

- T. ಶಂಕರ್ ರಾಜ್ 

 

ಪ್ರಾರ್ಥನಾ ಅಂಶ:

ತಮ್ಮ ಮಕ್ಕಳ ಪರವಾಗಿ 500 ರೂಪಾಯಿಗಳನ್ನು ನೀಡುವ 1ಲಕ್ಷ ಜನರು ಎದ್ದೇಳುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al grandpashabet grandpashabet grandpashabet grandpashabet giriş grandpashabet grandpashabet güncel giriş grandpashabet grandpashabet güncel grandpashabet grandpashabet giriş grandpashabet giriş grandpashabet grandpashabet grandpashabet grandpashabet jojobet giriş matbet giriş sahabet onwin bets10 bets10 giriş bets10 güncel giriş betcio atlasbet casibom meritking perabet casibom holiganbet galabet casibom padişahbet padişahbet giriş grandpashabet jojobet jojobet grandpashabet grandpashabet palacebet sonbahis jojobet grandpashabet betpuan betsalvador matbet meritking perabet perabet giriş instagram ban service betsilin betsilin giris pashagaming pashagaming giris gorabet gorabet giris kralbet holiganbet